ವಿಜಯಪುರ: ಮೊನ್ನೆಯಷ್ಟೇ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಯನ್ನು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಜಪ್ತು ಮಾಡುವಲ್ಲಿ ಯಶಸ್ವಿಯಾಗಿದ್ದ ವಿಜಯಪುರ ಪೊಲೀಸರು ಈಗ
ಬಂಗಾರ ಆಭರಣಗಳನ್ನು ಕಳವು ಮಾಡುವ ಅಂತರ ರಾಜ್ಯ ಆರೋಪಿತರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು
ಮಹಾರಾಷ್ಟ್ರದ ಸೊಲ್ಲಾಪೂರ ನಿವಾಸಿ ನಂದಾಬಾಯಿ ನಂದಾ ನಂದಿಯ ಚಾಯಾ ವಿಠಲ ಗಾಯಕವಾಡ (55), ಗಣೇಶ ನಾಗೇಶ ವಿಲಾಸ ಜಾಧವ (35) ಮಹಾದೇವ
ಪಿಂಟು ಹಣಮಂತ ಗಾಯಕವಾಡ (35), ಸುಂದರಾಬಾಯಿ ಮಾಣಿಕ ಜಾಧವ (38) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ೧೫ ಲಕ್ಷ ರೂ. ಮೌಲ್ಯದ ೨೦೮ ಗ್ರಾಂ ಚಿನ್ನಾಭರಣ ಜಪ್ತು ಮಾಡಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ ಸೋನಾವಣೆ ಮಾತನಾಡಿ, ಈ ಆರೋಪಿಗಳು ಸಂಶಯಾಸ್ಪದವಾಗಿ ತಿರುಗಾಡುವ ವೇಳೆ ಬರಗಟಗಿ ಎಲ್ ಟಿ ಹತ್ತಿರ ಪೊಲೀಸ ತಂಡ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದೆ ಎಂದರು. ಆರೋಪಿತರಿಗೆ ವಿಚಾರಣೆಗೆ ಒಳಪಡಿಸಿ ಆರೋಪಿತರು ಸುಮಾರು 2 ವರ್ಷದಿಂದ ಮಹಾರಾಷ್ಟ್ರದಿಂದ ಬಂದು ವಿಜಯಪೂರದ ಡೋಮನಾಳ ಗ್ರಾಮದಲ್ಲಿ, ವಿಜಯಪೂರ ಶಿವಗಿರಿ ಹತ್ತಿರ, ದೇವರಹಿಪ್ಪರಗಿ ಹಾಗೂ ತಿಕೋಟಾ ಬಸ್ ನಿಲ್ದಾಣಗಳಲ್ಲಿ ಮಾಡಿದ ಒಟ್ಟು ಐದು ಕಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆ.
ವಿಜಯಪೂರ ಗ್ರಾಮೀಣ ಪೊಲೀಸ್ ಠಾಣೆ, ದೇವರಹಿಪ್ಪರಗಿ ಪೊಲೀಸ್ ಠಾಣೆ, ತಿಕೋಟಾ ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ಪ್ರಕರಣಗಳು ದಾಖಲಾಗಿದ್ದವು, ಆರೋಪಿಗಳಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಜಪ್ತು ಮಾಡಿಕೊಳ್ಳಲಾಗಿದೆ ಎಂದರು.
ತಂಡದ ಸಾಧನೆ
ಎ.ಎಸ್.ಪಿಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ ಮಾರ್ಗದರ್ಶನದಲ್ಲಿ ರಚಿಸಲಾದ ಅಧಿಕಾರಿಗಳಾದ ಜಿ.ಹೆಚ್.ತಳಕಟ್ಟಿ, ಆರ್.ಎಸ್ ಜಾನಾರ, ಆನಂದರಾವ, ರವಿ ಯಡವನ್ನವರ, ಎನ್.ಎ. ಉಪ್ಪಾರ, ಐ ವೈ ದಳವಾಯಿ, ಸಂತೋಷ ನಾಯಕ, ಎ ಎಸ್ ಬಿರಾದಾರ. ಎಲ್ ಎಸ್ ಹಿರೇಗೌಡರ, ಸುನೀಲ ರಾಠೋಡ, ಬಿ. ವಿ ಪವಾರ. ಬಾವೂರ. ಎಸ್ ಬಿ ಬಿರಾದಾರ. ಶರಣಗೌಡ ಬಗಲಿ, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬಿ.ಪಿ. ನಾಟಕಾರ ಅವರನ್ನೊಳಗೊಂಡ ವಿಜಯಪೂರ ಗ್ರಾಮೀಣ ಉಪವಿಭಾಗದ ಕ್ರೈಂ ತಂಡದ ಸದಸ್ಯರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದರು.
Subscribe to Updates
Get the latest creative news from FooBar about art, design and business.
Related Posts
Add A Comment

