ಮುದ್ದೇಬಿಹಾಳ: ಪಾದಚಾರಿ ಯುವಕರ ಮೇಲೆ ದ್ವಿಚಕ್ರ ವಾಹನ ಹರಿದು ಸ್ಥಳದಲ್ಲೇ ಮೂವರು ಆಸ್ಪತ್ರೆಯಲ್ಲೊಬ್ಬ ದುರ್ಮರಣ ಹೊಂದಿದ ಮತ್ತು ಇನ್ನೂ ನಾಲ್ವರು ಯುವಕರಿಗೆ ಗಂಬೀರ ಗಾಯಗಳಾದ ಘಟನೆ ತಾಲೂಕಿನ ಕುಂಟೋಜಿಯ ಬಳಿ ಗುರುವಾರ ಮಧ್ಯರಾತ್ರಿ ಸಂಭವಿಸಿದೆ.
ಮೃತ ದುರ್ದೈವಿಗಳಾದ ಉದಯಕುಮಾರ ಪ್ಯಾಟಿ, ಅನೀಲ ಕೈನೂರ, ನಿಂಗರಾಜ ಚೌಧರಿ ಸ್ಥಳದಲ್ಲೇ ಸಾವನ್ನಪ್ಪಿದರೆ, ರಾಯಪ್ಪ ಬಾಗೇವಾಡಿ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಹಣಮಂತ ಕುರುಬಗೌಡರ, ಪ್ರಶಾಂತ ಕುರುಬಗೌಡರ, ಶಾಹೀದ ಹುನಗುಂದ, ಶಂಕರಪ್ಪ ಕೊಂಡಗೂಳಿ ಇವರುಗಳಿಗೆ ಗಂಬೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಲೂಕಿನ ಕುಂಟೋಜಿ ಗ್ರಾಮದ ಬಸವೇಶ್ವರ ಜಾತ್ರೆಯ ಪ್ರಯುಕ್ತ ವಿವಿಧ ಕ್ರೀಡೆಗಳನ್ನು ವೀಕ್ಷಿಸಲು ಟಂ ಟಂ ಮೂಲಕ ಆಗಮಿಸಿದ್ದ ಯುವಕರು ರಸ್ತೆ ದಾಟುವಾಗ ಜೋರಾಗಿ ಬಂದ ದ್ವಿಚಕ್ರ ವಾಹನ ಸವಾರ ಯುವಕರ ಮೇಲೆ ಹರಿಸಿದ್ದಾನೆ. ವಾಹನ ಸವಾರ, ಹಿಂಬದಿ ಕುಳಿತ ಯುವಕ ಮತ್ತು ಪಾದಾಚಾರಿ ಇಬ್ಬರು ಯುವಕರು ಈ ಘಟನೆಯಲ್ಲಿ ದುರ್ಮರಣ ಹೊಂದಿರುವ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ವರದಿಯಾಗಿದೆ.
ಘಟನಾ ಸ್ಥಳಕ್ಕೆ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜಯ ತಿಪರೆಡ್ಡಿ, ಕ್ರೈಂ ಪಿಎಸ್‌ಐ ಆರ್‌ಎಲ್‌ಮನ್ನಬಾಯಿ ಭೇಟಿ ನೀಡಿ ಪರಿಶೀಲಿಸಿದ್ದು ಕಾನೂನು ಕ್ರಮ ಕೈಗೊಂಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

