ವಿಜಯಪುರ: ಕೃಷಿ ಇಲಾಖೆ ವತಿಯಿಂದ ಹೈಟೆಕ್ ಹಾರ್ವೆಸ್ಟರ್ ಹಬ್ ಕಾರ್ಯಕ್ರಮದಡಿ ಕಾಂಬೋ ಹಾರ್ವೆಸ್ಟರ್ ಹಬ್ ಹಾಗೂ ಕಂಬೈನ್ಡ್ ಹಾರ್ವೆಸ್ಟರ್ ಹಬ್ಗಳನ್ನು ಸಹಾಯಧನದಡಿ ವಿತರಿಸಲು ಕೃಷಿ ಯಂತ್ರಧಾರೆ ಕೇಂದ್ರಗಳೊಂದಿಗೆ ಇತರೆ ಸಂಘ ಸಂಸ್ಥೆಗಳು (ಎಫ್‌ಪಿಓ ಗಳನ್ನೊಳಗೊಂಡಂತೆ) ಹಾಗೂ ವೈಯಕ್ತಿಕ ಫಲಾನುಭವಿಗಳಿಗೆ ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪಿಸಲು ಅವಕಾಶ ನೀಡುವ ನಿಟ್ಟಿನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಕೃಷಿ ಯಂತ್ರಧಾರೆ ಕೇಂದ್ರಗಳೊಂದಿಗೆ ಇತರೆ ಸಂಘ ಸಂಸ್ಥೆಗಳಿಗೆ (ಎಫ್‌ಪಿಓ ಗಳನ್ನೊಳಗೊಂಡಂತೆ) ಒಂದು ಕಾಂಬೋ ಹಾರ್ವೆಸ್ಟರ್ ಹಬ್ ಹಾಗೂ ಒಂದು ಕಂಬೈನ್ಡ್ ಹಾರ್ವೆಸ್ಟರ್ ಹಬ್ಗಳನ್ನು ಸಹಾಯಧನದಡಿ ವಿತರಿಸಲು ಅರ್ಜಿ ಆಹ್ವಾನಿಸಲಾಗಿದ್ದು, ಯಂತ್ರೋಪಕರಣಗಳನ್ನು ಖರೀದಿಸಲು ಸಹಾಯಧನವನ್ನು ಆದ್ಯತೆ ಹಾಗೂ ಅನುದಾನ ಲಭ್ಯತೆ ಮೇರೆಗೆ ವಿತರಿಸಲಾಗುವುದು.
ಆಸಕ್ತರು ಅರ್ಜಿಗಳನ್ನು ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
