ಅಧಿಕಾರಿಗಳ ತಪ್ಪಿನಿಂದಾಗಿ ಜಿಲ್ಲೆಯಲ್ಲಿ ಅನೇಕ ರೈತರ ಪರದಾಟ
ವಿಜಯಪುರ: ವಿಜಯಪುರ ಜಿಲ್ಲೆಯ ನಾಗಠಾಣ ಸಮೀಪದ ಗುಗದಡ್ಡಿ ಗ್ರಾಮದ ರೈತರಾದ ಕಲ್ಲವ್ವ ಬಸಪ್ಪ ವಾಘೆ ಸರ್ವೇ ನಂಬರ -೩೩ ರಲ್ಲಿ ಜಮೀನನಲ್ಲಿ ಕಳೆದ ೧೦-೧೨ ವರ್ಷಗಳಿಂದ ವಾಸವಿದ್ದು, ಜಮೀನಿನ ಉಳುಮೆ ಮಾಡಿಕೊಂಡು ಬಂದಿರುತ್ತಾರೆ, ಇತ್ತಿಚಿಗೆ ತಿಪ್ಪಣ್ಣ ಸೋಮಪ್ಪ ರೋಣಿಹಾಳ ಎಂಭ ರೈತರ ಹೆಸರು ಅಧಿಕಾರಿಗಳ ನೆದರ ಚೂಕಿನಿಂದ ಆಗಿರುವ ತಪ್ಪಿನಿಂದಾಗಿ ಇವರ ಉತ್ತಾರೆಯಲ್ಲಿ ಡಮ್ಮಿ(ಪೋಕಳಾ ಪಾಣಿ) ಬಂದು ಸೇರಿರುವುದರಿಂದ ಸಮಸ್ಯೆಯಾಗುತ್ತಿದೆ, ಕಾರಣ ಅದನ್ನು ರದ್ದುಪಡಿಸಿ ನಿಜವಾದ ರೈತರ ಜಮೀನಿನ ಕಾಗದ ಪತ್ರವನ್ನು ಮೊದಲಿನಂತೆ ಸರಿ ಮಾಡಿಕೊಡಬೇಕೆಂದು ವಿಜಯಪುರ ತಾಲುಕಾ ತಹಶಿಲ್ದಾರರಾದ ಪ್ರಶಾಂತ ಚನ್ನಗೊಂಡ ಅವರಲ್ಲಿ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು, ಅಧಿಕಾರಿಗಳ ನೆದರ ಚೂಕಿನಿಂದ ಆಗಿರುವ ತಪ್ಪಿನಿಂದಾಗಿ ಈ ಘಟನೆ ನಡೆದಿರುತ್ತದೆ, ಕಾಗದ ಪತ್ರಗಳನ್ನು ಪರಿಶೀಲಿಸಿ ನೈಜ ಹಕ್ಕುದಾರರಿಗೆ ನ್ಯಾಯ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೆವೆ. ಇದೇ ರೀತಿ ಇನ್ನು ಅನೇಕ ಪ್ರಕರಣಗಳು ರೈತ ಸಂಘದ ಗಮನಕ್ಕೆ ಬಂದಿರುತ್ತದೆ, ಇದನ್ನು ಪರಿಹರಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತವೆ ಎಂದರು.
ಈ ವೇಳೆ ಗುಗದಡ್ಡಿ ಗ್ರಾಮದ ಪ್ರಗತಿಪರ ರೈತರಾದ ಲಾಯಪ್ಪ ವಾಘೆ, ಶಂಕರ ಬಸಪ್ಪ ವಾಘೆ, ರೈತ ಸಂಘದ ಜಿಲ್ಲಾ ಸಂಚಾಲಕರಾದ ರಾಮನಗೌಡ ಪಾಟೀಲ, ನಗರ ಘಟಕದ ಅಧ್ಯಕ್ಷರಾದ ಸಂಗಪ್ಪ ಚಲವಾದಿ, ಆಹೇರಿ ಗ್ರಾಮಘಟಕದ ಆಧ್ಯಕ್ಷರಾದ ಆತ್ಮಾನಂದ ಭೈರೋಡಗಿ, ಪರಶುರಾಮ ದೇವೂರ ಇದ್ದರು.

