Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಈ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇದೇ ಸೆಪ್ಟಂಬರ್ ೧೫ ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ ಹಮ್ಮಿಕೊಳ್ಳುವ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣ ಹಾಗೂ ಅಚ್ಚುಕಟ್ಟಾಗಿ ಆಯೋಜನೆ ಮಾಡಿ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೇಸ್ವಾನ್ ಸಭಾಂಗಣದಲ್ಲಿ ನಡೆದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಶಾಲಾ-ಕಾಲೇಜ್ ವಿದ್ಯಾರ್ಥಿಗಳು, ಯುವಜನರು, ಸಾರ್ವಜನಿಕರು, ಸರ್ಕಾರೇತರ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಅವರು ಸೂಚನೆ ನೀಡಿದರು.ಸೆ.೧೫ರಂದು ಬೆಳಿಗ್ಗೆ ೮-೩೦ಕ್ಕೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ವಿರೇಶನಗರದಿಂದ ಆಲಮಟ್ಟಿಯವರೆಗೆ ಏಕಕಾಲಕ್ಕೆ ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಳ್ಳುವುದು. ಈಗಾಗಲೇ ಮಾನವ ಸರಪಳಿ ನಿರ್ವಹಣೆಗೆ ೯ ಜನ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ೧೪ ಜನ ಸೆಕ್ಟರ್ ಅಧಿಕಾರಿಗಳು…
ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಭರವಸೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಬಲೇಶ್ವರ ಮತಕ್ಷೇತ್ರದಲ್ಲಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಇದರ ಜೊತೆಗೆ ಅಭಿವೃದ್ಧಿ ಕಾಮಗಾರಿಗಳಿಗೂ ಆದ್ಯತೆ ನೀಡಲಾಗಿದೆ ಎಂದು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ತಿಳಿಸಿದ್ದಾರೆ.ಬುಧವಾರ ಬರಟಗಿ ಎಲ್. ಟಿ- 1 ಮತ್ತು 3 ರಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ತಲಾ ರೂ. 100 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸಿಸಿ ರಸ್ತೆ ಕಾಮಗಾರಿಗಳಿಗೆ ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು, ಸಿ.ಎಸ್.ಆರ್ ಅನುದಾನವನ್ನು ಹೆಚ್ಚಿನ ಪ್ರಮಾಣದಲ್ಲಿ ಶಾಲೆಗಳ ಅಭಿವೃದ್ಧಿಗೆ ಬಳಸಲು ಕ್ರಮ ಕೈಗೊಂಡಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಬಡಜನರ ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್ ಸೇರಿದಂತೆ ಕಾನ್ವೆಂಟ್ ಶಾಲೆಗಳ ಮಾದರಿಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆಗತ್ಯವಾಗಿರುವ ಪರಿಕರಗಳನ್ನು ಒದಗಿಸಲಾಗುತ್ತಿದೆ. ಅಲ್ಲದೇ, ಮತಕ್ಷೇತ್ರದಲ್ಲಿ ರಸ್ತೆಗಳ ನಿರ್ಮಾಣ, ದುರಸ್ಥಿ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನುಳಿದಿರುವ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರಲ್ಲಿರುವ ಕಲೆಯನ್ನು ಪ್ರೋತ್ಸಾಹಿಸಿ ಬೆಳೆಸಲು ಬಿ. ಎಂ. ಪಾಟೀಲ ಫೌಂಡೇಶನ್ ವತಿಯಿಂದ ತರಬೇತಿ ನೀಡಲಾಗುವುದು ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ತಿಳಿಸಿದ್ದಾರೆ.ಬುಧವಾರ ನಗರದ ಬಿ.ಎಲ್.ಡಿ.ಇ ಸಂಸ್ಷೆಯ ಸಮನ್ವಯ ಇಂಗ್ಲಿಷ್ ಮಾಧ್ಯಮ ಶಾಲೆ ಮತ್ತು ಎಸ್. ಎಸ್. ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸಮನ್ವಯ ಹಬ್ಬ, ಶ್ರೀ ಕೃಷ್ಣ ಜನ್ಮಾಷ್ಢಮಿ, ಫುಡ್ ಫೆಸ್ಟಿವಲ್, ಹೊಸ ಬೋದನಾ ಕೊಠಡಿಗಳು, ಗಣಿತ, ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಇಲ್ಲಿನ ಮಕ್ಕಳು ತಯಾರಿಸಿರುವ ವಿಜ್ಞಾನ ಮಾದರಿಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಶಾಲೆಗಳ ಮಕ್ಕಳಿಗಿಂತಲೂ ಹೆಚ್ಚು ಕೌಶಲ್ಯದಿಂದ ಕೂಡಿವೆ. ವಿದ್ಯಾರ್ಥಿಗಳು ಪ್ರದರ್ಶಿಸಿದ ಶ್ರೀಕೃಷ್ಣ ಜನ್ಮಾಷ್ಠಮಿ ನೃತ್ಯ ಕಂಡು ಮೂಕವಿಸ್ಮಿತನಾಗಿದ್ದೇನೆ. ಅಲ್ಲದೇ, ಈ ಚಿಣ್ಣರು ಫುಡ್ ಫೆಸ್ಟಿವಲ್ ನಲ್ಲಿ ತಯಾರಿಸಿರುವ ತರಹೇವಾರಿ ತಿಂಡಿ ತಿನಿಸುಗಳು ಬಹಳ ರುಚಿಕರವಾಗಿದ್ದವು. ಇಂಥ ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸಲು ಶ್ರೀ ಬಿ. ಎಂ. ಪಾಟೀಲ ಫೌಂಡೇಶನ್ ಮೂಲಕ ತರಬೇತಿ ನೀಡಲಾಗುವುದು. ಈ ಮೂಲಕ…
Udayarashmi kannada daily newspaper
ಚಡಚಣ: ಪಟ್ಟಣದ ಸಾಧಕ, ಸ್ನಾತಕೋತ್ತರ ಪತ್ರಿಕೋದ್ಯಮ ಪದವಿ ವಿಭಾಗದಲ್ಲಿ ಇತ್ತೀಚೆಗೆ ರಾಜಪಾಲರಿಂದ ‘ಚಿನ್ನದ ಪದಕ’ವನ್ನು ಸ್ವೀಕರಿಸಿದ ವಿದ್ಯಾರ್ಥಿ ಸಂತೋಷ ಮಲ್ಲಿಕಾರ್ಜುನ ಬಗಲಿ ಅವರಿಗೆ ಪಟ್ಟಣದ ಮಹಾ ಶಿವಶರಣ ಹರಳಯ್ಯನವರ ಸಮುದಾಯದ ಶಿಕ್ಷಕರ ಬಳಗ ವತಿಯಿಂದ ಸನ್ಮಾನ ಕಾರ್ಯಕ್ರಮ ಜರುಗಿತು.ಈ ಸಂದರ್ಭದಲ್ಲಿ ಮುಖ್ಯಶಿಕ್ಷಕ ಮಲ್ಲಪ್ಪ ವಾಘಮೊರೆ ಮಾತನಾಡಿ, ವಿವಿಧ ಕ್ಷೇತ್ರದ ಸಾಧಕರು ನಮ್ಮ ಸಮುದಾಯದಲ್ಲಿದ್ದು, ಅಂತಹ ಪ್ರತಿಭಾನ್ವಿತರು ಹಾಗೂ ಸಾಧಕರನ್ನು ಗುರುತಿಸಿ ಗೌರವಿಸುವದು ನಮ್ಮೆಲ್ಲರ ಜವಾಬ್ದಾರಿ. ವಿದ್ಯಾರ್ಥಿ ಸಂತೋಷ ಬಡತನದಲ್ಲಿ ವಿದ್ಯಾಭ್ಯಾಸ ಮಾಡಿ ಸಾಧನೆ ಮಾಡಿರುವುದು ಇಡಿ ಸಮಾಜಕ್ಕೆ ಸಂದ ಗೌರವ. ಇವರ ಚಿನ್ನದ ಸಾಧನೆ ನಮ್ಮ ಯುವ ಪೀಳಿಗೆಗೆ ಮಾದರಿಯಾಗಲಿದೆ ಎಂದು ಹೇಳಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಸಿ.ಆರ್.ಸಿ ಎಸ್.ಎಲ್ ಅಹಿರಸಂಗ ಅವರು, ಚಿನ್ನದ ಹುಡುಗ ಸಂತೋಷನಿಗೆ ಚಿನ್ನದ ಪದಕ ಬಂದಿರುವುದು ಕೇವಲ ಚಡಚಣಕ್ಕೆ ಅಷ್ಟೇ ಅಲ್ಲ, ಇಡಿ ಜಿಲ್ಲೆ ಹೆಮ್ಮೆ ಪಡುವ ವಿಷಯ. ಇವರ ಸಾಧನೆಯನ್ನು ಆದರ್ಶವಾಗಿಟ್ಟುಕೊಂಡು ವಿದ್ಯಾರ್ಥಿಗಳು ಛಲದಿಂದ ಓದಿ, ಉನ್ನತ ಸಾಧಕರಾಗಬೇಕು ಎಂದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂತೋಷ ಅವರು, ಛಲದಿಂದ…

ಬಸವನ ಬಾಗೇವಾಡಿ: ಇಂದು ಶಿಕ್ಷಣ ತನ್ನ ಹಿಡಿತ ಕಳೆದುಕೊಳ್ಳುತ್ತಿರುವ ಕಾಲಘಟ್ಟದಲ್ಲಿ ಮಕ್ಕಳ ಶಿಕ್ಷಣಕ್ಕೆ ಪಾಲಕರು ದಿನದ ಒಂದಿಷ್ಟು ಸಮಯವನ್ನು ಕೊಡಬೇಕು. ಮಕ್ಕಳಲ್ಲಿ ಮೌಲ್ಯಗಳನ್ನು ತುಂಬುವಲ್ಲಿ ಪಾಲಕರು ಸಹ ಶಿಕ್ಷಕರ ಜೊತೆ ಕೈ ಜೋಡಿಸಬೇಕೆಂದು ಶಿಕ್ಷಕ ಬಾಬು ನಾಯಕ ಹೇಳಿದರು.ಪಟ್ಟಣದ ಬಿ. ಎಲ್. ಡಿ. ಇ. ಸಂಸ್ಥೆಯ ಪಿ. ಯು. ಕಾಲೇಜಿನಲ್ಲಿ ಜರುಗಿದ ಪಾಲಕರ ಸಭೆಯಲ್ಲಿ ಪಾಲಕರ ಪ್ರತಿನಿಧಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪಾಲಕರು ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಮಕ್ಕಳಿಗಾಗಿ ಸಮಯ ಮತ್ತು ಬದುಕನ್ನು ಮಿಸಲಿಡಬೇಕು. ಪ್ರತಿಯೊಬ್ಬ ಮಗುವಿಗೂ ಕುಟುಂಬದ ಕಷ್ಟವನ್ನು ಮನವರಿಕೆ ಮಾಡಿಕೊಡಬೇಕೆಂದು ಅಭಿಪ್ರಾಯಪಟ್ಟರು.ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎ. ವಿ. ಸೂರ್ಯವಂಶಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ಮಕ್ಕಳನ್ನು ಕಲಿಕೆಯ ಜೊತೆಗೆ ಕ್ರೀಡಾ ಮನೋಭಾವವನ್ನು ಬೆಳೆಸಿದಾಗ ಮಾತ್ರ ಮಕ್ಕಳು ಸಾರ್ವತ್ರಿಕವಾಗಿ ಬೆಳವಣಿಗೆ ಹೊಂದಲು ಸಾಧ್ಯವೆಂದು ಅಭಿಪ್ರಾಯಪಟ್ಟರು.ಪ್ರೊ. ಎಂ. ಕೆ. ಯಾದವ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಆರ್. ಎ. ಪವಾರ ಅಧ್ಯಕ್ಷತೆ ವಹಿಸಿದ್ದರು.ವಾಣಿಜ್ಯ ಮತ್ತು ವಿಜ್ಞಾನ…

ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯಾ ಶ್ರೀಗಳ ಅಭಿಮತ ಬಸವನಬಾಗೇವಾಡಿ: ಅಣ್ಣ ಬಸವಣ್ಣನವರು ಜಾತಿಯ ವಿಷಬೀಜವನ್ನು ಕಿತ್ತೆಸೆಯಲು ಹೋರಾಟ ಮಾಡಿದರು. ಅವರ ತತ್ವಗಳನ್ನು ಬೋದನೆ ಹಾಗೂ ಪೋಟೋ ಪೂಜೆ ಮಾಡುವಂತಹ ಭಕ್ತಿಯ ಜೊತೆಗೆ ಅವರ ಅವರ ತತ್ವ ಜೀವನದಲ್ಲಿ ಅಳವಡಿಸಿಕೊಂಡು ಬದುಕಿದಾಗ ಮಾತ್ರ ಬಸವಣ್ಣನವರ ನಿಜವಾದ ಭಕ್ತನಾಗಲು ಸಾಧ್ಯ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯಾ ಶಿವಾಚಾರ್ಯರು ಹೇಳಿದರು.ತಾಲೂಕಿನ ಕಣಕಾಲ ಗ್ರಾಮದ ಶ್ರೀ ಮಡಿವಾಳೇಶ್ವರಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ಬಸವ ಪುರಾಣ ಮುಕ್ತಾಯ, ಶ್ರೀಶೈಲ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮ ಸಭೆ ಸಮಾರಂಭದ ದಿವ್ಯಸಾನಿದ್ಯತೆ ವಹಿಸಿ ಮಾತನಾಡಿದರು.ಅಣ್ಣ ಬಸವಣ್ಣನವರು ೧೨ ನೇ ಶತಮಾತನದಲ್ಲಿ ಎಲ್ಲ ಶರಣರೊಂದಿಗೆ ವಚನ ಸಾಹಿತ್ಯ ಮೂಲಕ ಸಾಮಾಜಿಕ ಕ್ರಾಂತಿಗೈದು ಮೇಲು ಕೀಳು ಎಂಬ ಜಾತಿಯನ್ನು ಹೊಗಲಾಡಿಸಲು ಪ್ರಯತ್ನಿಸಿದರು. ಅವರಂತೆ ನಾವು ಕೂಡಾ ಜಾತಿಯತೆ ಎಂಬ ವಿಷ ಬೀಜವನ್ನು ಹೊಗಲಾಡಿಸಲು ಪ್ರಯತ್ನಿಸಿ ಎಲ್ಲರು ಒಂದೆ ಎಂಬ ಮನೋಭಾವನೆಯನ್ನು ಹೊಂದಿದಾಗ ಮಾತ್ರ ಬಸವಣ್ಣನವರ ನಿಜವಾದ ಆದರ್ಶವನ್ನು ಅಳವಡಿಕೆ…
ಕಲಕೇರಿ: ಇತ್ತೀಚಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜಲಪೂರಿನಲ್ಲಿ ಕೆ ಎ ಮಹಾಜನ್ಗುರುಮಾತೆಯರ ವರ್ಗಾವಣೆ ನಿಮಿತ್ಯ ಬೀಳ್ಕೋಡುಗೆ ಸಮಾರಂಭಅದ್ಧೂರಿಯಾಗಿ ನಡೆಯಿತು.ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಿಕ್ಷಣಸಂಯೋಜಕ ಐ ಎಫ್ ಬಾಲ್ಕಿ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರ ಪಾತ್ರ ಪವಿತ್ರವಾಗಿದ್ದು ಮಕ್ಕಳ ಭವಿಷ್ಯವನ್ನು ಬೆಳಗುವ ಜ್ಯೋತಿಗಳಾಗಿದ್ದಾರೆ ಎಂದರು.ಕೆ ಎ ಮಹಾಜನ್ಗುರುಮಾತೆಯರು ಜಲಪೂರ ಶಾಲೆಯಲ್ಲಿ ಸುಮಾರು ಹದಿನೈದು ವರ್ಷಗಳ ಕಾಲ ಸಾರ್ಥಕ ಸೇವೆಯನ್ನು ಸಲ್ಲಿಸಿ ಬೇರೆ ಶಾಲೆಗೆ ವರ್ಗಾವಣೆ ಆಗಿದ್ದಾರೆ. ಅವರು ಈಶಾಲೆಯಲ್ಲಿ ಒಳ್ಳೆಯ ಶಿಕ್ಷಣವನ್ನು ನೀಡುವದರ ಜೊತೆಗೆ ಮಕ್ಕಳಲ್ಲಿ ಉತ್ತಮ ಸಂಸ್ಕಾರವನ್ನು ಬಿತ್ತಿದ್ದಾರೆ ಎಂದರು.ಶಾಲೆಯ ಮುಖ್ಯಗುರು ಮಹ್ಮದಶಫೀಕ ಮುಜಾವರ ಮಾತನಾಡಿ, ಕೆ ಎ ಮಹಾಜನ್ ಗುರುಮಾತೆಯರು ಶಾಲಾಮಕ್ಕಳ ಜೊತೆಗೆ ಜಲಪೂರ ಗ್ರಾಮದಎಲ್ಲರೊಂದಿಗೂ ಒಳ್ಳೆಯ ಸಂಬಂದ ಹೊಂದಿದ್ದರು ಎಂದರು.ಅಸ್ಕಿ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿಗ ರಾಮಣ್ಣ ನಾಯ್ಕೋಡಿ ಮಾತನಾಡಿದರು.ಕೆ ಎ ಮಹಾಜನ್ ಗುರುಮಾತೆಯರು ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ,ಜಲಪೂರ ಗ್ರಾಮ ನನಗೆ ತುಂಬಾ ಪ್ರೀತಿ ಮತ್ತು ವಿಶ್ವಾಸವನ್ನು ನೀಡಿದೆ. ಶಾಲೆಯ ಮಕ್ಕಳು, ಎಲ್ಲ ಶಿಕ್ಷಕ ಸಿಬ್ಬಂದಿ, ಅಡುಗೆ ಸಿಬ್ಬಂದಿ…