ಚಡಚಣ: ಪಟ್ಟಣದ ಸಾಧಕ, ಸ್ನಾತಕೋತ್ತರ ಪತ್ರಿಕೋದ್ಯಮ ಪದವಿ ವಿಭಾಗದಲ್ಲಿ ಇತ್ತೀಚೆಗೆ ರಾಜಪಾಲರಿಂದ ‘ಚಿನ್ನದ ಪದಕ’ವನ್ನು ಸ್ವೀಕರಿಸಿದ ವಿದ್ಯಾರ್ಥಿ ಸಂತೋಷ ಮಲ್ಲಿಕಾರ್ಜುನ ಬಗಲಿ ಅವರಿಗೆ ಪಟ್ಟಣದ ಮಹಾ ಶಿವಶರಣ ಹರಳಯ್ಯನವರ ಸಮುದಾಯದ ಶಿಕ್ಷಕರ ಬಳಗ ವತಿಯಿಂದ ಸನ್ಮಾನ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಮುಖ್ಯಶಿಕ್ಷಕ ಮಲ್ಲಪ್ಪ ವಾಘಮೊರೆ ಮಾತನಾಡಿ, ವಿವಿಧ ಕ್ಷೇತ್ರದ ಸಾಧಕರು ನಮ್ಮ ಸಮುದಾಯದಲ್ಲಿದ್ದು, ಅಂತಹ ಪ್ರತಿಭಾನ್ವಿತರು ಹಾಗೂ ಸಾಧಕರನ್ನು ಗುರುತಿಸಿ ಗೌರವಿಸುವದು ನಮ್ಮೆಲ್ಲರ ಜವಾಬ್ದಾರಿ. ವಿದ್ಯಾರ್ಥಿ ಸಂತೋಷ ಬಡತನದಲ್ಲಿ ವಿದ್ಯಾಭ್ಯಾಸ ಮಾಡಿ ಸಾಧನೆ ಮಾಡಿರುವುದು ಇಡಿ ಸಮಾಜಕ್ಕೆ ಸಂದ ಗೌರವ. ಇವರ ಚಿನ್ನದ ಸಾಧನೆ ನಮ್ಮ ಯುವ ಪೀಳಿಗೆಗೆ ಮಾದರಿಯಾಗಲಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿ.ಆರ್.ಸಿ ಎಸ್.ಎಲ್ ಅಹಿರಸಂಗ ಅವರು, ಚಿನ್ನದ ಹುಡುಗ ಸಂತೋಷನಿಗೆ ಚಿನ್ನದ ಪದಕ ಬಂದಿರುವುದು ಕೇವಲ ಚಡಚಣಕ್ಕೆ ಅಷ್ಟೇ ಅಲ್ಲ, ಇಡಿ ಜಿಲ್ಲೆ ಹೆಮ್ಮೆ ಪಡುವ ವಿಷಯ. ಇವರ ಸಾಧನೆಯನ್ನು ಆದರ್ಶವಾಗಿಟ್ಟುಕೊಂಡು ವಿದ್ಯಾರ್ಥಿಗಳು ಛಲದಿಂದ ಓದಿ, ಉನ್ನತ ಸಾಧಕರಾಗಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂತೋಷ ಅವರು, ಛಲದಿಂದ ಓದಿದ ಪರಿಣಾಮವಾಗಿ ನನಗೆ ಸಾಧನೆ ಮಾಡಲು ಸಾಧ್ಯವಾಯಿತು. ಹಿರಿಯ ವಿದ್ಯಾರ್ಥಿಗಳಿಂದ ಪ್ರೇರಣೆ ಹಾಗೂ ಗುರು-ಹಿರಿಯರ ಆಶೀರ್ವಾದ ಫಲವಾಗಿ ಇಂದು ಚಿನ್ನದ ಪದಕ ಬಂದಿದೆ. ನನ್ನನ್ನು ಗುರುತಿಸಿ ಹಿರಿಯರು ಸತ್ಕರಿಸಿದ್ದು, ಅತೀವ ಸಂತಸದ ಜತೆಗೆ ಇನ್ನಷ್ಟು ಸಾಧನೆಗೆ ಪ್ರೇರಣೆಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶ್ರೀಶೈಲ್ ವಾಘಮೊರೆ, ಲಕ್ಷ್ಮಣ್ ವಾಘಮೊರೆ, ಬಸವಂತ ವಾಘಮೊರೆ, ವಿರೂಪಾಕ್ಷ ವಾಲೀಕಾರ, ಪತ್ರಕರ್ತ ರೇವಣಸಿದ್ದ ಬಗಲಿ ಸೇರಿ ಅನೇಕರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

