ಕಲಕೇರಿ: ಇತ್ತೀಚಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜಲಪೂರಿನಲ್ಲಿ ಕೆ ಎ ಮಹಾಜನ್
ಗುರುಮಾತೆಯರ ವರ್ಗಾವಣೆ ನಿಮಿತ್ಯ ಬೀಳ್ಕೋಡುಗೆ ಸಮಾರಂಭ
ಅದ್ಧೂರಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಿಕ್ಷಣಸಂಯೋಜಕ ಐ ಎಫ್ ಬಾಲ್ಕಿ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರ ಪಾತ್ರ ಪವಿತ್ರವಾಗಿದ್ದು ಮಕ್ಕಳ ಭವಿಷ್ಯವನ್ನು ಬೆಳಗುವ ಜ್ಯೋತಿಗಳಾಗಿದ್ದಾರೆ ಎಂದರು.
ಕೆ ಎ ಮಹಾಜನ್
ಗುರುಮಾತೆಯರು ಜಲಪೂರ ಶಾಲೆಯಲ್ಲಿ ಸುಮಾರು ಹದಿನೈದು ವರ್ಷಗಳ ಕಾಲ ಸಾರ್ಥಕ ಸೇವೆಯನ್ನು ಸಲ್ಲಿಸಿ ಬೇರೆ ಶಾಲೆಗೆ ವರ್ಗಾವಣೆ ಆಗಿದ್ದಾರೆ. ಅವರು ಈ
ಶಾಲೆಯಲ್ಲಿ ಒಳ್ಳೆಯ ಶಿಕ್ಷಣವನ್ನು ನೀಡುವದರ ಜೊತೆಗೆ ಮಕ್ಕಳಲ್ಲಿ ಉತ್ತಮ ಸಂಸ್ಕಾರವನ್ನು ಬಿತ್ತಿದ್ದಾರೆ ಎಂದರು.
ಶಾಲೆಯ ಮುಖ್ಯಗುರು ಮಹ್ಮದಶಫೀಕ ಮುಜಾವರ ಮಾತನಾಡಿ, ಕೆ ಎ ಮಹಾಜನ್ ಗುರುಮಾತೆಯರು ಶಾಲಾಮಕ್ಕಳ ಜೊತೆಗೆ ಜಲಪೂರ ಗ್ರಾಮದ
ಎಲ್ಲರೊಂದಿಗೂ ಒಳ್ಳೆಯ ಸಂಬಂದ ಹೊಂದಿದ್ದರು ಎಂದರು.
ಅಸ್ಕಿ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿಗ ರಾಮಣ್ಣ ನಾಯ್ಕೋಡಿ ಮಾತನಾಡಿದರು.
ಕೆ ಎ ಮಹಾಜನ್ ಗುರುಮಾತೆಯರು ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ,
ಜಲಪೂರ ಗ್ರಾಮ ನನಗೆ ತುಂಬಾ ಪ್ರೀತಿ ಮತ್ತು ವಿಶ್ವಾಸವನ್ನು ನೀಡಿದೆ. ಶಾಲೆಯ ಮಕ್ಕಳು, ಎಲ್ಲ ಶಿಕ್ಷಕ ಸಿಬ್ಬಂದಿ, ಅಡುಗೆ ಸಿಬ್ಬಂದಿ ಮತ್ತು ಎಲ್ಲ ಪಾಲಕರನ್ನು ಎಂದೂ
ಮರೆಯಲಾಗದು ಎಂದರು.
ಈ ವೇಳೆ ಶಾಲಾ ಮಕ್ಕಳು, ವಿವಿಧ ಶಾಲೆಗಳಿಂದ ಆಗಮಿಸಿದ ಶಿಕ್ಷಕರು,
ಜಲಪೂರ ಗ್ರಾಮಸ್ಥರು ಕೆ ಎ ಮಹಾಜನ್ ಗುರುಮಾತೆಯರನ್ನು
ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಶಾಲೆಗೆ ಹೊಸದಾಗಿ ವರ್ಗವಾಗಿ ಬಂದು ಹಾಜರಾದ
ರೇಣುಕಾ ಅಗಸರ ಗುರುಮಾತೆಯವರನ್ನು ಎಲ್ಲರ ಸಮ್ಮುಖದಲ್ಲಿ ಸನ್ಮಾನಿಸಿ
ಸ್ವಾಗತಿಸಲಾಯಿತು.
ಕಾರ್ಯಕ್ರಮದ ಸಾನಿಧ್ಯವನ್ನು ವೇದಮೂರ್ತಿ ಮಲ್ಲಯ್ಯ
ಹಿರೇಮಠ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಮಪಂಚಾಯತಿ ಬೆಕಿನಾಳದ ಅಧ್ಯಕ್ಷ ರವೀಂದ್ರ ಸುಧಾಕರ, ಗ್ರಾಪಂ ಸದಸ್ಯರಾದ
ವೀರಗಂಟೆಪ್ಪ ಬ್ಯಾಕೋಡ, ಸಿದ್ದನಗೌಡ ಬಿರಾದಾರ, ಬಲವಂತ್ರಾಯ ಕುಂಬಾರ, ಮಾಜಿ
ಎಸ್ ಡಿ ಎಮ್ ಸಿ ಅಧ್ಯಕ್ಷ ರಾಮನಗೌಡ ಚೌದ್ರಿ, ಹಿರಿಯರಾದ ಶ್ರೀಶೈಲ
ಬಿಜ್ಜರಗಿ, ಶರಣಗೌಡ ಕರಿಗೌಡರ, ರಮೇಶ ಸಾಸನೂರ,ಶೇಕಪ್ಪ ಅಗಸರ, ಕಲಕೇರಿ
ಸಿ ಆರ್ ಪಿ ಗಳಾದ ಶ್ರೀಶೈಲ ನಾಯ್ಕೋಡಿ, ಶಿಕ್ಷಕರಾದ ಸುರೇಶ ಹೊಸಟ್ಟಿ, ನಬಿಲಾಲ
ಹಕೀಮ, ಬಾನು ಹಕೀಮ, ನಾಗಮ್ಮ ಕುಂಬಾರ, ಗುರುಗಳಾದ ಜವಾಹರ ಕುಲಕರ್ಣಿ, ದುಂಡಯ್ಯ ಚಿಕ್ಕಮಠ, ಎಸ್ ಬಿ ಪಡಶೆಟ್ಟಿ, ಶಾಹೀನ ಧರಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

