Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹುಬ್ಬಳ್ಳಿಯ ಶ್ರೀ ಗಜಾನನ ಮಹಾಮಂಡಳ ವತಿಯಿಂದ ಕೊಡ ಮಾಡುವ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಪ್ರಶಸ್ತಿಗೆ ಭಾಜನರಾದ ಕೇಂದ್ರದ ಮಾಜಿ ಸಚಿವರು ಹಾಗೂ ಶಾಸಕರಾದ ಬಸನಗೌಡ ರಾ.ಪಾಟೀಲ ಯತ್ನಾಳರ ಪರವಾಗಿ ಅವರ ಪುತ್ರ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕ ರಾಮನಗೌಡ ಪಾಟೀಲ ಯತ್ನಾಳ ಅವರು, ಗುರುವಾರ ಹುಬ್ಬಳ್ಳಿಯ ಜೆ.ಸಿ.ನಗರದ ಅಕ್ಕನ ಬಳಗ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರೊಂದಿಗೆ ಪ್ರಶಸ್ತಿ ಸ್ವೀಕರಿಸಿದರು.
ರಾಜ್ಯ ಮಟ್ಟಕ್ಕೆ ಎಕ್ಸಲೆಂಟ್ ವಿಜ್ಞಾನ ಪಪೂ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಓದು ಮಕ್ಕಳಲ್ಲಿ ಜ್ಞಾನ ವೃದ್ಧಿಸಿದರೆ; ಕ್ರೀಡೆ ಮಕ್ಕಳನ್ನು ದೈಹಿಕವಾಗಿ ಬಲಗೊಳಿಸುವುದರ ಜೊತೆಗೆ ಮಾನಸಿಕವಾಗಿಯೂ ಗಟ್ಟಿಯಾಗುವುದಕ್ಕೆ ನೆರವಾಗುತ್ತದೆ. ಆ ಕಾರಣದಿಂದಾಗಿಯೇ ಸ್ವಾಮೀ ವಿವೇಕಾನಂದರು ಮನೋಬಲದಷ್ಟೆ ಶಾರೀರಿಕ ಬಲಕ್ಕೂ ಮಾನ್ಯತೆ ನೀಡುತ್ತ ಕ್ರೀಡೆಯ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುತ್ತಿದ್ದರು ಎಂದು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಹೇಳಿದರು.ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗದ ವತಿಯಿಂದ ಆಯೋಸಲಾಗಿದ್ದ ಜಿಲ್ಲಾ ಮಟ್ಟದ ಗುಂಪು ಕ್ರೀಡಾ ಕೂಟದಲ್ಲಿ ವಿಜೇತರಾದ ಎಕ್ಸಲೆಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಶುಭಾಷಯಕೋರಿ ಮಾತನಾಡಿದ ಅವರು, ಇಂದು ವಿದ್ಯಾರ್ಥಿಗಳಲ್ಲಿ ಬಹಳಷ್ಟು ಜನ ಕಲಿಕೆಯಲ್ಲಿ ಮುಂದಿದ್ದರೂ ಕೂಡ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅಂಥವರಿಗೆ ಕ್ರೀಡೆ ಎಂಬುದು ದಿವ್ಯ ಔಷಧವಾಗಿದೆ ಎಂದು ಹೇಳಿದರು.ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರೊಂದಿಗೆ ಕಲಿಕೆಯಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಇಂದು ಸವಾಲಿನ ವಿಷಯವಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರಕ್ಕೆ ಕಾಲಿಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.…
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಇಲಾಖಾಧಿಕಾರಿಗಳ ಆರೋಗ್ಯ ತಪಾಸಣಾ ಶಿಬಿರದಲ್ಲಿ ಜಿಪಂ ಸಿಇಓ ರಿಷಿ ಆನಂದ ಸಲಹೆ ವಿಜಯಪುರ: ಜಿಲ್ಲಾ ಪಂಚಾಯಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಘಟಕ ಇವರ ಸಹಯೋಗದಲ್ಲಿ ಗುರುವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲಾ ಅಧಿಕಾರಿ, ಸಿಬ್ಬಂದಿ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರು ಆರೋಗ್ಯ ತಪಾಸಣಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಅಧಿಕಾರಿ, ಸಿಬ್ಬಂದಿ ಗ್ರಾಮೀಣರಿಗೆ ಸೇವೆ ಸಲ್ಲಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದು, ಕರ್ತವ್ಯದೊಂದಿಗೆ ವೈಯಕ್ತಿಕ ಆರೋಗ್ಯದ ಕಡೆಗೂ ಸಹ ಗಮನ ಹರಿಸಬೇಕು. ಆರೋಗ್ಯ ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ನಂತರ, ಸಿಇಓ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ…
ಪಿಎಂಶ್ರೀ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿ ಮುಖ್ಯಸ್ಥರ ಪದಗ್ರಹಣ ವಿಜಯಪುರ: ವಿದ್ಯಾರ್ಥಿ ಜೀವನದಲ್ಲಿ ಗುರಿ ಹೊಂದಿ ಅದರ ಸಾಧನೆಗಾಗಿ ಅಧ್ಯಯನಶೀಲತೆಯನ್ನು ರೂಢಿಸಿಕೊಳ್ಳಬೇಕು ಎಂದು ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರೂ ಆದ, ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.ಅವರು ನಗರದ ಟಕ್ಕೆಯಲ್ಲಿರುವ ಪಿಎಂಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ ಗುರುವಾರ ನಡೆದ ವಿದ್ಯಾರ್ಥಿ ಮುಖ್ಯಸ್ಥರ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ವಿದ್ಯಾರ್ಥಿ ಜೀವನದಲ್ಲಿ ಅಧ್ಯಯನಕ್ಕೆ ಒತ್ತು ನೀಡುವ ಮೂಲಕ ಎಲ್ಲಾ ವಿಷಯಗಳನ್ನು ಕರಗತ ಮಾಡಿಕೊಂಡು ಗುರಿಯೆಡೆಗೆ ಸಾಗಬೇಕು. ಅಭ್ಯಾಸದ ಮೂಲಕ ಸಾಣೆ ಹಿಡಿದು ಜೀವನದಲ್ಲಿ ಯಶಸ್ಸು ಹೊಂದಿ ತಾವು ಕಲಿತ ಶಾಲೆಯ ಹೆಸರು ಬೆಳೆಸಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಶಾಲಾ ಪರಿಷತ್‌ನ ವಿದ್ಯಾರ್ಥಿ ಮುಖ್ಯಸ್ಥರಿಗೆ ಬ್ಯಾಡ್ಜ್ ವಿತರಿಸಲಾಯಿತು. ಪಿಎಂಶ್ರೀ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಜುನ್ನಾ ರಾಮ್ ಸ್ವಾಗತಿಸಿದರು.ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರ ಸಿ.ಬಿ.ಚಿಕ್ಕಲಗಿ,ಮನಗೂಳಿ ಗ್ರೇಡ್-೧ ಶಿಕ್ಷಣ ಕಾಲೇಜು ಪ್ರಾಂಶುಪಾಲರಾದ ಪ್ರೊ ಐ.ಎಸ್.ಮಠಪತಿ, ಉಪನೋಂದಣಾಧಿಕಾರಿ (ಪರೀಕ್ಷಾ) ದೈಹಿಕ ಶಿಕ್ಷಣ ಮತ್ತು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ…
ವಿಜಯಪುರ: ನಗರದ ಶಹಾಪೇಟಿಯಲ್ಲಿ ಗಜಾನನ ಉತ್ಸಾಹಿ ತರಣ ಮಂಡಳಿ ಪ್ರತಿಷ್ಟಾಪಿಸಿದ ೭೭ ಕೆಜಿ ಹಳೆಯ ನಾಣ್ಯಗಳಿಂದ ನಿರ್ಮಿಸಲಾದ ಗಣಪತಿಯು ಜಿಲ್ಲೆಯ ಭಕ್ತರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿದೆ.ನಿತ್ಯ ಈ ನಾಣ್ಯ ಗಣಪತಿಯ ದರ್ಶನಕ್ಕಾಗಿ ಸಾರ್ವಜನಿಕರುಅಧಿಕ ಸಂಖ್ಯೆಯಲ್ಲಿ ಆಗಮಿಸಿ, ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ. ದರ್ಶನಕ್ಕೆ ನೂಕು ನುಗ್ಗಲಾಗದಂತೆ ತಡೆಯಲು ಮಂಡಳಿಯ ಪದಾಧಿಕಾರಿಗಳು ಸಕಲ ವ್ಯವಸ್ತೆ ಕೈಗೊಂಡಿದ್ದಾರೆ. ದರ್ಶನ ಬಳಿಕ ಸಕಲ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆಯನ್ನೂ ಸಹ ಮಾಡಿದ್ದಾರೆ.ಈ ಮಂಡಳಿಯ ಅಧ್ಯಕ್ಷರಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿರುವ ಶ್ರೀಕಾಂತ ಕುಬಸದ ಅವರೊಂದಿಗೆ ಮಂಡಳಿಯ ಸಂಚಾಲಕ ಮಿಲಿಂದ ಚಂಚಲಕರ್, ಉಪಾಧ್ಯಕ್ಷ ಹಣಮಂತ ನಂದವಾಡಗಿ, ಖಜಾಂಚಿ ವಿರೇಶ ಗೊಬ್ಬೂರ ಸೇರಿದಂತೆ ಪದಾಧಿಕಾರಿಗಳು ಒಂದಾಗಿ ಕಾರ್ಯನಿರ್ವಹಿಸುವುದರಿಂದಾಗಿ ಇಂತಹ ವಿಶೇಷತೆಗಳನ್ನು ಮಾಡಲು ಸಾಧ್ಯವಾಗಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.ಇವರ ಪ್ರಯತ್ನಕ್ಕೆ ಸುಧೀರ ಪಾಟೀಲ, ಮಹಾದೇವ ಕೊಪ್ಪದ, ರಾಜು ಗುಜರಿ, ರಾಹುಲ ಅಂಬಾಸೆ, ಮಣಿಕಂಠ ನಂದವಾಡಗಿ, ಚಿನ್ನು ಲಳಗಿ, ಶ್ರೀಶೈಲ ಗೊಬ್ಬೂರ ಸೇರಿದಂತೆ ಮೊದಲಾದವರು ಬಲ ತುಂಬಿದ್ದಾರೆ.ಕಳೆದ ವರ್ಷ ಈ ಶಹಾಪೇಟಿ ತರುಣ ಮಂಡಳಿಯು ಖ್ಯಾತ…
ಮುದ್ದೇಬಿಹಾಳ: ಪಟ್ಟಣದ ತಾಳಿಕೋಟೆ ರಸ್ತೆಯಲ್ಲಿರುವ ವಿನಾಯಕ ನಗರದ ಶ್ರೀ ವಿನಾಯಕ ಹಾಗೂ ಭದ್ರಕಾಳಿ ಸಮೇತ ಸಮೇತ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವವು ಅದ್ಧೂರಿಯಾಗಿ ಜರುಗಿತು.ಜಾತ್ರಾ ಮಹೋತ್ಸವದ ೫ದಿನಗಳ ಕಾಲ ಪ್ರತಿ ದಿನ ಬೆಳಿಗ್ಗೆ ೫ಗಂಟೆಗೆ ಮೂಲಮೂರ್ತಿಗಳಿಗೆ ಅಭಿಷೇಕ ಮಾಡಲಾಯಿತು. ಭದ್ರಕಾಳಿ ಅಮ್ಮನವರಿಗೆ ಗೌರಿ ಹಬ್ಬದ ನಿಮಿತ್ತ ಉಡಿ ತುಂಬಲಾಯಿತು. ಸಕಲ ವಾದ್ಯ-ವೈಭವಗಳೊಂದಿಗೆ ಶ್ರೀ ಗಜಾನನ ಮೂರ್ತಿಯ ಅದ್ಧೂರಿ ಮೆರವಣಿಗೆಯ ಸಮೇತ ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪನೆ ಮಾಡಲಾಗಿತ್ತು.ರವಿವಾರ ಕಿಲ್ಲಾ ಗಲ್ಲಿಯಲ್ಲಿರುವ ಶ್ರೀ ಗುಗ್ಗಳ ಬಸವೇಶ್ವರ ಹಾಗೂ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಸಕಲ ವಾದ್ಯ ವೈಭವಗಳೊಂದಿಗೆ ಹಾಗೂ ಪುರವಂತರ ಸೇವೆಯೊಂದಿಗೆ ನಗರದ ಗುರು ಹಿರಿಯರು ಹಾಗೂ ಸುಮಂಗಲೆಯರ ಕಳಸ-ಕನ್ನಡಿ ಸೇವೆಯೊಂದಿಗೆ ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರರ ಪಲ್ಲಕ್ಕಿ ಮಹಾ ಉತ್ಸವವು ಪ್ರಮುಖ ಬೀದಿಗಳ ಮೂಲಕ ವಿನಾಯಕ ನಗರದಲ್ಲಿರುವ ದೇವಸ್ಥಾನದ ಆವರಣದ ಅಗ್ನಿ ಕುಂಡದಲ್ಲಿ ಪ್ರವೇಶಿಸಿತು.ಸೋಮುವಾರ ಶ್ರೀ ವೀರಭದ್ರೇಶ್ವರರ ಜಯಂತಿ ನಿಮಿತ್ಯ ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರ ಉತ್ಸವ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕಲಾಯಿತು. ಬುಧವಾರ ಭದ್ರಕಾಳಿ…
ಮುದ್ದೇಬಿಹಾಳ: ಪಟ್ಟಣದ ಪುರಸಭೆ ಉಪಾಧ್ಯಕ್ಷರ ಆಯ್ಕೆಯಲ್ಲಿ ಚುನಾವಣೆ ನಡೆಸದ ಆರೋಪವನ್ನು ಕೆಲ ಪುರಸಭೆಯ ಬಿಜೆಪಿ ಸದಸ್ಯರು ಮಾಡಿದ್ದಾರೆ.ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಮ್ಮ ಪಕ್ಷದ ಮುಖಂಡರೊಂದಿಗೆ ಪತ್ರಿಕಾಗೋಷ್ಟಿ ನಡೆಸಿ ಆರೋಪಿಸಿದ ಸಹನಾ ಬಡಿಗೇರ, ಸಂಗಮ್ಮ ದೇವರಳ್ಳಿ, ಸದಾಶಿವ ಮಾಗಿ ಇವರು ನಾವೆಲ್ಲರೂ ಈ ಮೊದಲೇ ರಿಯಾಜ ಅವರಿಗೆ ಬೆಂಬಲಿಸಲು ನಿರ್ಧರಿಸಿದ್ದೆವು. ಆದರೆ ಕಾಂಗ್ರೇಸ್ ನ ಮುಖಂಡರು ರಿಯಾಜ ಅವರಿಗೆ ದಾರಿ ತಪ್ಪಿಸಿ ತಮ್ಮ ಬಳಿ ಸೆಳೆದುಕೊಂಡರು. ಆದರೆ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಿಲ್ಲ. ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಮಧ್ಯ ಪ್ರವೇಶಿಸಿ ಚುನಾವಣೆ ನಡೆಸಲು ಬಿಟ್ಟಿಲ್ಲ. ಈ ಚುನಾವಣೆಯನ್ನು ನಾವು ಒಪ್ಪುವದಿಲ್ಲ, ಖಂಡಿಸುತ್ತೇವೆ ಎಂದರು.ಈ ವೇಳೆ ಭಾಜಪಾ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ ಮಾತನಾಡಿ, ನಮ್ಮಲ್ಲಿ ಎಲ್ಲ ಬೆಂಬಲ ಇದ್ದರೂ ಸ್ಥಳೀಯ ಶಾಸಕ ಹಾಗೂ ಸರಕಾರದ ಹಸ್ತಕ್ಷೇಪದಿಂದ ಅವಕಾಶ ತಪ್ಪಿದೆ ಎಂದರು.ಮುಖಂಡ ಹರೀಶ ನಾಟೇಕಾರ ಮಾತನಾಡಿ, ಉಪಾಧ್ಯಕ್ಷರ ಹುದ್ದೆಗೆ ಚುನಾವಣೆ ನಡೆಸದೇ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ. ಉಪಾಧ್ಯಕ್ಷರ ಸ್ಥಾನಕ್ಕೆ ಸ್ಪರ್ದಿಸಿದವರು ನಾಮಪತ್ರವನ್ನು ಹಿಂಪಡೆದುಕೊಳ್ಳದಿದ್ದಾಗ…
ಲೇಖಕರು- ಜಯಶ್ರೀ ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ ಮೊ: ೯೪೪೯೨೩೪೧೪೨ ಇನ್ನು ಮುಂದೆ ಒಂದು ಹೆಜ್ಜೆ ಇಡಲು ಆಗುವುದಿಲ್ಲ. ಸೋತು ಸುಣ್ಣವಾಗಿದಿನಿ. ಸೋಲುಗಳ ಸಾಲು ನನ್ನನ್ನು ಅಕ್ಷರಶಃ ಹಿಂಡಿ ಹಿಪ್ಪಿ ಮಾಡಿದೆ. ಸೋಲಿನ ಕಹಿ ಅನುಭವಗಳ ಮೂಟೆಯನ್ನು ಹೊತ್ತು ನಡೆಯುವುದು ಅಷ್ಟು ಸುಲಭದ ಕೆಲಸವೇನಲ್ಲ. ಯಾವುದನ್ನು ಗೆಲುವು ಅಂತ ಕರಿತಾರೋ ಅದನ್ನು ಪಡೆಯಲು ಇಷ್ಟೊಂದು ಒದ್ದಾಡಬೇಕಾ? ಅಂತ ಮನಸ್ಸು ಚೀರಿ ಚೀರಿ ಹೇಳುತ್ತದೆ. ಬಿಟ್ಟು ಬಿಡು ಗೆಲುವಿನ ಕನಸು. ಕಣ್ಣುಗಳಿರುವುದೇ ಕನಸು ಕಾಣೋದಕ್ಕೆ. ಲೆಕ್ಕವಿಲ್ಲದಷ್ಟು ಕನಸುಗಳನ್ನು ಉತ್ಪಾದಿಸುವ ಮನಸ್ಸು ದಡ ಸೇರುವವರೆಗೂ ನನ್ನೊಂದಿಗೆ ಇರುವುದೇ ಇಲ್ಲ. ಇಂಥ ಮಂಗನಂಥ ಮನಸ್ಸನ್ನು ತಿದ್ದುವುದು ಯಾವನಿಗೆ ಬೇಕಾಗಿದೆ? ಮಾಡಿದ ತಪ್ಪುಗಳನ್ನು ಗುರುತಿಸಿ ಮುಂದೆ ಸಾಗಬೇಕು ಎನ್ನುವಷ್ಟರಲ್ಲಿ ಚಂಚಲ ಮನಸ್ಸು ಮತ್ತೆ ನಾಯಿ ಬಾಲ ಆಗಿರುತ್ತದೆ. ಮತ್ತೆ ಅ ಆ ಇ ಈ ಮೊದಲಿನಿಂದ ಶುರು. ಇದು ಗೆಲ್ಲಲು ಹಂಬಲಿಸುವವರ ಮನದಳಲು.ಒತ್ತಡವನ್ನು ಹದಗೊಳಿಸಿವಾಸ್ತವದಲ್ಲಿ ಒತ್ತಡ ಗೆಲುವಿಗೆ ಬೇಕಿರುವ ಮೂಲ ಅಂಶ ಎನ್ನುವುದು ಸ್ಪಷ್ಟ. ಒತ್ತಡವಿಲ್ಲದದಿದ್ದರೆ ಗೆಲುವಿಲ್ಲ…
Udayarashmi kannada daily newspaper Udayarashmi kannada daily newspaper
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕನ್ನಡ ಪ್ರತಿಕೋದ್ಯಮದಲ್ಲಿ ವಿಶಿಷ್ಟ ಛಾಪು ಮೂಡಿಸಿ, ಅನಾರೋಗ್ಯದಿಂದ ನಿಧನರಾದ ಹಿರಿಯ ಪತ್ರಕರ್ತ ವಸಂತ ನಾಡಿಗೇರ ಅವರಿಗೆ ಬುಧವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಇಲ್ಲಿನ ಪತ್ರಿಕಾ ಭವನದಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು.ಸಭೆ ಆರಂಭಕ್ಕೆ ಮುನ್ನ ಅಗಲಿದ ಪತ್ರಕರ್ತರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನ ಆಚರಿಸಲಾಯಿತು.ಬಳಿಕ ಪತ್ರಕರ್ತ ಅಶೋಕ ಯಡಳ್ಳಿ ಮಾತನಾಡಿ, ಕನ್ನಡ ಪ್ರತಿಕೋದ್ಯಮದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದ ವಸಂತ್ ನಾಡಿಗೇರ್ ಅವರ ಅಗಲಿಕೆ ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟ ಎಂದರು. ವಸಂತ ನಾಡಿಗೇರ ಅವರ ಬರವಣಿಗೆ, ಸರಳತೆ ಹಾಗೂ ಸಮಸ್ಯೆಗಳನ್ನು ಬಗೆಹರಿಸುವ ತಂತ್ರಗಾರಿಕೆ ನಿಜಕ್ಕೂ ಮಾದರಿಯಾಗಿದ್ದು, ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಾವೆಲ್ಲ ನಡೆಯೋಣ ಎಂದರು.ಪತ್ರಕರ್ತ ನವೀದ್‌ಅಂಜುಮ ಮಮದಾಪೂರ ಮಾತನಾಡಿ, ವಸಂತ ನಾಡಿಗೇರ್ ಅವರು ಸಂಯುಕ್ತ ಕರ್ನಾಟಕಕ್ಕೆ ಆಗಮಿಸಿದಾಗ ಸಂಸ್ಥೆಗೆ ಮತ್ತೆ ವಸಂತ ಕಾಲ ಎಂದು ಸಂಭ್ರಮಿಸಿದ್ದೆವು. ಅವರ ಮಾರ್ಗದರ್ಶನದಲ್ಲಿ ಸಂ.ಕ ಇನ್ನಷ್ಟು ಬೆಳವಣಿಗೆಯಾಗುವ ನಿರೀಕ್ಷೆ ಇತ್ತು. ಅವರ ಅಕಾಲಿಕ ಅಗಲಿಕೆ ನೋವುಂಟು ಮಾಡಿದೆ.…
