ಮುದ್ದೇಬಿಹಾಳ: ಪಟ್ಟಣದ ಪುರಸಭೆ ಉಪಾಧ್ಯಕ್ಷರ ಆಯ್ಕೆಯಲ್ಲಿ ಚುನಾವಣೆ ನಡೆಸದ ಆರೋಪವನ್ನು ಕೆಲ ಪುರಸಭೆಯ ಬಿಜೆಪಿ ಸದಸ್ಯರು ಮಾಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಮ್ಮ ಪಕ್ಷದ ಮುಖಂಡರೊಂದಿಗೆ ಪತ್ರಿಕಾಗೋಷ್ಟಿ ನಡೆಸಿ ಆರೋಪಿಸಿದ ಸಹನಾ ಬಡಿಗೇರ, ಸಂಗಮ್ಮ ದೇವರಳ್ಳಿ, ಸದಾಶಿವ ಮಾಗಿ ಇವರು ನಾವೆಲ್ಲರೂ ಈ ಮೊದಲೇ ರಿಯಾಜ ಅವರಿಗೆ ಬೆಂಬಲಿಸಲು ನಿರ್ಧರಿಸಿದ್ದೆವು. ಆದರೆ ಕಾಂಗ್ರೇಸ್ ನ ಮುಖಂಡರು ರಿಯಾಜ ಅವರಿಗೆ ದಾರಿ ತಪ್ಪಿಸಿ ತಮ್ಮ ಬಳಿ ಸೆಳೆದುಕೊಂಡರು. ಆದರೆ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಿಲ್ಲ. ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಮಧ್ಯ ಪ್ರವೇಶಿಸಿ ಚುನಾವಣೆ ನಡೆಸಲು ಬಿಟ್ಟಿಲ್ಲ. ಈ ಚುನಾವಣೆಯನ್ನು ನಾವು ಒಪ್ಪುವದಿಲ್ಲ, ಖಂಡಿಸುತ್ತೇವೆ ಎಂದರು.
ಈ ವೇಳೆ ಭಾಜಪಾ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ ಮಾತನಾಡಿ, ನಮ್ಮಲ್ಲಿ ಎಲ್ಲ ಬೆಂಬಲ ಇದ್ದರೂ ಸ್ಥಳೀಯ ಶಾಸಕ ಹಾಗೂ ಸರಕಾರದ ಹಸ್ತಕ್ಷೇಪದಿಂದ ಅವಕಾಶ ತಪ್ಪಿದೆ ಎಂದರು.
ಮುಖಂಡ ಹರೀಶ ನಾಟೇಕಾರ ಮಾತನಾಡಿ, ಉಪಾಧ್ಯಕ್ಷರ ಹುದ್ದೆಗೆ ಚುನಾವಣೆ ನಡೆಸದೇ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ. ಉಪಾಧ್ಯಕ್ಷರ ಸ್ಥಾನಕ್ಕೆ ಸ್ಪರ್ದಿಸಿದವರು ನಾಮಪತ್ರವನ್ನು ಹಿಂಪಡೆದುಕೊಳ್ಳದಿದ್ದಾಗ ಚುನಾವಣೆ ನಡೆಯಬೇಕಾಗಿತ್ತು. ಆದರೆ ಚುನಾವಣೆ ನಡೆಸದೇ ದಬ್ಬಾಳಿಕೆ, ದೌರ್ಜನ್ಯ ನಡೆಸಲಾಗಿದೆ. ಚುನಾವಣಾಧಿಯನ್ನು ಕೂಡಲೇ ಸಸ್ಪೆಂಡ್ ಮಾಡಬೇಕು. ಮತ್ತು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯನ್ನು ನಿಷ್ಕ್ರೀಯಗೊಳಿಸಬೇಕು ಎಂದರು.
ಈ ವೇಳೆ ಸದಸ್ಯರಾದ ಚನ್ನಪ್ಪಣ್ಣ ಕಂಠಿ, ಬಸಪ್ಪ ತಟ್ಟಿ, ಅಶೋಕ ವನಹಳ್ಳಿ, ಪ್ರಮುಖರಾದ ಸೋಮನಗೌಡ ಬಿರಾದಾರ, ವಿಜಯ ಬಡಿಗೇರ, ಸಂಜು ಬಾಗೇವಾಡಿ ಇದ್ದರು.
Subscribe to Updates
Get the latest creative news from FooBar about art, design and business.
ಪುರಸಭೆ ಉಪಾಧ್ಯಕ್ಷ ಹುದ್ದೆಗೆ ಚುನಾವಣೆ ನಡೆಸದ್ದಕ್ಕೆ ಬಿಜೆಪಿ ಖಂಡನೆ
Related Posts
Add A Comment

