ಮುದ್ದೇಬಿಹಾಳ: ಪಟ್ಟಣದ ತಾಳಿಕೋಟೆ ರಸ್ತೆಯಲ್ಲಿರುವ ವಿನಾಯಕ ನಗರದ ಶ್ರೀ ವಿನಾಯಕ ಹಾಗೂ ಭದ್ರಕಾಳಿ ಸಮೇತ ಸಮೇತ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವವು ಅದ್ಧೂರಿಯಾಗಿ ಜರುಗಿತು.
ಜಾತ್ರಾ ಮಹೋತ್ಸವದ ೫ದಿನಗಳ ಕಾಲ ಪ್ರತಿ ದಿನ ಬೆಳಿಗ್ಗೆ ೫ಗಂಟೆಗೆ ಮೂಲಮೂರ್ತಿಗಳಿಗೆ ಅಭಿಷೇಕ ಮಾಡಲಾಯಿತು. ಭದ್ರಕಾಳಿ ಅಮ್ಮನವರಿಗೆ ಗೌರಿ ಹಬ್ಬದ ನಿಮಿತ್ತ ಉಡಿ ತುಂಬಲಾಯಿತು. ಸಕಲ ವಾದ್ಯ-ವೈಭವಗಳೊಂದಿಗೆ ಶ್ರೀ ಗಜಾನನ ಮೂರ್ತಿಯ ಅದ್ಧೂರಿ ಮೆರವಣಿಗೆಯ ಸಮೇತ ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪನೆ ಮಾಡಲಾಗಿತ್ತು.
ರವಿವಾರ ಕಿಲ್ಲಾ ಗಲ್ಲಿಯಲ್ಲಿರುವ ಶ್ರೀ ಗುಗ್ಗಳ ಬಸವೇಶ್ವರ ಹಾಗೂ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಸಕಲ ವಾದ್ಯ ವೈಭವಗಳೊಂದಿಗೆ ಹಾಗೂ ಪುರವಂತರ ಸೇವೆಯೊಂದಿಗೆ ನಗರದ ಗುರು ಹಿರಿಯರು ಹಾಗೂ ಸುಮಂಗಲೆಯರ ಕಳಸ-ಕನ್ನಡಿ ಸೇವೆಯೊಂದಿಗೆ ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರರ ಪಲ್ಲಕ್ಕಿ ಮಹಾ ಉತ್ಸವವು ಪ್ರಮುಖ ಬೀದಿಗಳ ಮೂಲಕ ವಿನಾಯಕ ನಗರದಲ್ಲಿರುವ ದೇವಸ್ಥಾನದ ಆವರಣದ ಅಗ್ನಿ ಕುಂಡದಲ್ಲಿ ಪ್ರವೇಶಿಸಿತು.
ಸೋಮುವಾರ ಶ್ರೀ ವೀರಭದ್ರೇಶ್ವರರ ಜಯಂತಿ ನಿಮಿತ್ಯ ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರ ಉತ್ಸವ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕಲಾಯಿತು. ಬುಧವಾರ ಭದ್ರಕಾಳಿ ಹಾಗೂ ವೀರಭದ್ರೇಶ್ವರರ ಕಲ್ಯಾಣೋತ್ಸವ ಜರುಗಿತು. ರಾತ್ರಿ ಸಕಲ ವಾದ್ಯ ವೈಭವಗಳೊಂದಿಗೆ ಶ್ರೀ ವಿನಾಯಕ ಮೂರ್ತಿ ವಿಸರ್ಜನೆ ಮಾಡಲಾಯಿತು. ಪ್ರತಿ ದಿನ ಸಂಜೆ ೭ಕ್ಕೆ ಜೀವನ ದರ್ಶನ ಪ್ರವಚನ ಕಾರ್ಯಕ್ರಮ ಹೀಗೆ ಜಾತ್ರಾ ಮಹೋತ್ಸವವನ್ನು ಅದ್ಧೂರಿಯಾಗಿ, ಶೃದ್ಧಾ-ಭಕ್ತಿಯಿಂದ ನಡೆಸಲಾಯಿತು. ಪುರವಂತರಾದ ಗುರಯ್ಯ ಮುದ್ನೂರಮಠ, ಚಂದ್ರಕಾಂತ ಹೆಬ್ಬಾಳ, ಆನಂದ ಪತ್ತಾರ, ಚಂದ್ರಶೇಖರ ಪ್ಯಾಟಿಗೌಡರ, ಅಪ್ಪಣ್ಣ ಸಿದ್ದಾಪೂರ, ಶ್ರೀಶೈಲ ಅಮರಣ್ಣವರ, ಗುರುರಾಜ ಹೆಬ್ಬಾಳ ಪ್ರಮುಖರಾದ ದಾನಪ್ಪ ನಾಗಠಾಣ, ಪ್ರಭು ಹೊಕ್ರಾಣಿ, ಮಹೇಶ ನಾಗಠಾಣ, ಉಮೇಶ, ವಿನೋದ, ಸಾಹಿಲ, ಚೇತನ ಕಲ್ಲುಂಡಿ ಅರುಣ ಹಿರೇಮಠ, ಅನೀಲ ಲಕಗಷಟ್ಟಿ, ಶ್ರೀಶೈಲ ಘನಕುಮಾರಮಠ, ಮಂಜು ಅಬ್ಬಿಹಾಳಮಠ, ಪರಸಪ್ಪ ತಟ್ಟಿ, ಗಂಗಪ್ಪ ಹೆಬ್ಬಾಳ, ವಾಗೇಶ ಹಿರೇಮಠ, ವಿರೇಶ ಅಗಸಬಾಳ, ಈರಪ್ಪ ಬಡಿಗೇರ ಭಾಗಿಯಾಗಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

