Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಚಡಚಣ ತಾಲೂಕಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಶುಕ್ರವಾರ ಭೇಟಿ ನೀಡಿ, ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು.ತಾಲೂಕ ಕ್ರೀಡಾಂಗಣಕ್ಕೆ ನಿಗದಿಪಡಿಸಿದ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.ಸ್ಥಳ ಪರಿಶೀಲನಾ ನಂತರ ಚಡಚಣ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ ಕಟ್ಟಡ ಕಾಮಗಾರಿ, ಗುಂಪು ಶೌಚಾಲಯ ಕಾಮಗಾರಿ, ಗ್ರಂಥಾಲಯ ಕಟ್ಟಡ ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದ ಅವರು, ಶೀಘ್ರವಾಗಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಚಡಚಣದ ತಾಲೂಕಾ ಕಚೇರಿಯಲ್ಲಿ ಅಧಿಕಾರಿ, ಸಿಬ್ಬಂದಿಗಳ ಸಭೆ ನಡೆಸಿ, ದೀರ್ಘಕಾಲ ವಿಲೇವಾರಿಗೊಳ್ಳದೇ ಬಾಕಿ ಇರುವ ಕಡತಗಳನ್ನು ಆದ್ಯತೆ ಮೇರೆಗೆ ವಿಲೇವಾರಿಗೊಳಿಸಲು, ಆಧಾರ ನೋಂದಣಿ, ಕಂದಾಯ ಗ್ರಾಮಗಳ ಮಾಹಿತಿ, ಭೂಮಿ ಪ್ರಗತಿ, ಮೋಜಣಿ ಕಡತ, ದಾಖಲೆಗಳನ್ನು ಆಧಾರದೊಂದಿಗೆ ಜೋಡಣೆಯ ಪ್ರಗತಿ ಮಾಹಿತಿ, ಜಾತಿ-ಆದಾಯ ಪ್ರಮಾಣ ಪತ್ರಗಳ ವಿತರಣೆ ಹಾಗೂ ಕಡತಗಳ ವಿಲೇವಾರಿ ಪ್ರಕ್ರಿಯೆಗಳನ್ನು ಪರಿಶೀಲಿಸಿದರು. ಕಡತಗಳ ವಿಳಂಬಕ್ಕೆ ಅವಕಾಶ ನೀಡದೇ ಶೀಘ್ರವಾಗಿ ವಿಲೇವಾರಿಗೆ ಕ್ರಮವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಇಂಡಿ…

Read More

ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಪಟ್ಟಣದ ಹಿಂದು ಮುಸ್ಲಿಂ ಭಾವೈಕ್ಯದ ದೇವತೆ ಹಜರತ್ ಜಚ್ಚಾ ಮಾಸಾಬಿ ಜಾತ್ರಾ ನಿಮಿತ್ಯ ಶುಕ್ರವಾರ ಹಜರತ್ ಜಚ್ಚಾ ಮಾಸಾಬಿ ದರ್ಗಾದ ಸಜ್ಜಾದಾ ನಶೀನ್ ಹಜರತ್ ಷಾ ಮಹಿಬೂಬ ಪಾಶಾ ಖಾಜಿ ಫಾರೂಖಿ ರವರ ನೇತೃತ್ವದಲ್ಲಿ ಭಕ್ತಾದಿಗಳೊಂದಿಗೆ ದರ್ಗಾಕ್ಕೆ ಭೇಟಿ ನೀಡಿ ಮಹಾ ಸತಿ, ಮಹಾ ಸತ್ಯಮ್ಮ, ಮಾಸಾಬಿಯ ದರ್ಶನ ಪಡೆದರು.ಈ ಸಂದರ್ಭದಲ್ಲಿ ಸಜ್ಜಾದಾ ನಶೀನ್ ರೊಂದಿಗೆ ಅನೇಕ ಭಕ್ತರು ಭಾಗವಹಿಸಿ ತಾಯಿಯ ಆರ್ಶಿವಾದ ಪಡೆದು, ಸರ್ವ ಜನರ ಒಳಿತಿಗಾಗಿ ಹಾಗೂ ಗ್ರಾಮದಲ್ಲಿ ಶಾಂತಿ ಸೌಹಾರ್ದತೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.ನಂತರ ಪ್ರಸಾದ ವಿತರಿಸಲಾಯಿತು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸುರಸಿಂಗಾರ ಕಲೆ‌ ಮತ್ತು ಸಾಂಸ್ಕೃತಿಕ ಸಂಸ್ಥೆಯು ಕನ್ನಡ ಮತ್ರು ಸಂಸ್ಕೃತಿ ಇಲಾಖೆಯ ಧನಸಹಾಯದಲ್ಲಿ”ಅನಂತ ನಮನ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ”ವನ್ನು ಶನಿವಾರ ದಿನಾಂಕ ಸೆ.21 ರಂದು ಸಂಜೆ 6-30ಕ್ಕೆ ನಗರದ ಕಂದಗಲ್ಲ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.ಕಾರ್ಯಕ್ರಮದಲ್ಲಿ ಶಾಸ್ತ್ರೀಯ ಸಂಗೀತ ವನ್ನು ಧಾರವಾಡದ ಪಂ. ಕುಮಾರ ಮರಡೂರ ಪ್ರಸ್ತುತ ಪಡಿಸಲಿದ್ದಾರೆ ಇವರ, ಗಾಯನಕ್ಕೆ ಸತೀಶ್ ಭಟ್ ಹೆಗ್ಗಾರ್ ಹಾರ್ಮೋನಿಯಂ ಮತ್ತು ಗಣೇಶ್ ಗುಂಡಕಲ್ ಅವರು ತಬಲಾಸಾಥ್ ನೀಡಲಿದ್ದಾರೆ. ಕಾರ್ಯಕ್ರಮ ಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಂಗೀತ ಆಸಕ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಸುರಸಿಂಗಾರದ ಕಾರ್ಯದರ್ಶಿ ಸಂಗಣ್ಣ ಪಾಟೀಲ್ ಪ್ರಕಟಣೆಯಲ್ಲಿ ಕೋರಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಮಹಾಂತೇಶ ನಗರದ ಎಮ್.ಜಿ.ಎಮ್.ಕೆ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಮುದ್ದೇಬಿಹಾಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸಾಧನೆ ಗೈದಿದ್ದಾರೆ.ಹಿರಿಯರ ವಿಭಾಗದಲ್ಲಿ ಭಕ್ತಿಗೀತೆ ಸ್ಪರ್ಧೆಯಲ್ಲಿ ನಿಸರ್ಗಾ ಬಿರಾದಾರ ಪ್ರಥಮ ಸ್ಥಾನ ಮತ್ತು ಧಾರ್ಮಿಕ ಪಠಣ (ಸಂಸ್ಕೃತ) ಅಭಿರಾಮ ಹೆಗಡೆ ಪ್ರಥಮ ಸ್ಥಾನ ಪಡೆದು ತಾಲೂಕಾ ಮಟ್ಟಕ್ಕೆ ಆಯ್ಕೆಯಾದರೆ, ಅಪ್ಸರಾ ಆವಟಿ ಇಂಗ್ಲೀಷ್ ಭಾಷಣದಲ್ಲಿ ಪ್ರೌಢ ವಿಭಾಗದಲ್ಲಿ ದ್ವಿತೀಯ ಸ್ಥಾನ, ಅಂಮೃತಾ ಪತ್ತಾರ ಹಿರಿಯರ ವಿಭಾಗದ ದೇಶ ಭಕ್ತಿಯಲ್ಲಿ ತೃತೀಯ ಸ್ಥಾನ ಹಾಗೂ ಕಿರಿಯರ ವಿಭಾಗದ ದೇಶಭಕ್ತಿಯಲ್ಲಿ ಇಂಚರ ಹಡಲಗೇರಿ ತೃತೀಯ ಸ್ಥಾನವನ್ನು ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅವರ ಸಾಧನೆಗೆ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಕೆ.ಹರನಾಳ, ಪ್ರೌಢ ಶಾಲೆಯ ಮುಖ್ಯಗುರು ಎಸ್.ಎಸ್.ಆಳ್ವಿ, ಶಿಕ್ಷಕರಾದ ರಾಜೇಶ್ವರಿ ಬಿರಾದಾರ, ಶೋಭಾ ಬಲಕುಂದಿ, ವಿಜಯಲಕ್ಷ್ಮೀ ಪಾಟೀಲ್, ಸುಜಾತಾ ಬಲಕುಂದಿ, ಎ.ಕೆ.ಪಡೇಕನೂರ, ಜಿ.ಎಮ್.ಸಾಲಿಮಠ, ಎಸ್.ಎ.ಗಂಗನಗೌಡ ಸೇರಿದಂತೆ ಸರ್ವಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

Read More

ವಿಜಯಪುರ: ಕೆಪಿಟಿಸಿಎಲ್ ಮೂಲಕ ಬಬಲೇಶ್ವರ ೧೧೦/೧೧ ಕೆವ್ಹಿ s ಬೇಗಳ ಎರಡನೇ ತ್ರೆöÊಮಾಸಿಕ ನಿರ್ವಾಹಣಾ ಕಾರ್ಯ ಕೈಗೊಳ್ಳುತ್ತಿರುವುದರಿಂದ ೧೧೦/೧೧ ಕೆವ್ಹಿ ಸ್ವೀಕರಣಾ ಕೇಂದ್ರ ಬಬಲೇಶ್ವರದಿಂದ ಹೊರಗೋಗುವ ಎಲ್ಲ ೧೧ ಕೆವ್ಹಿ ವಿದ್ಯುತ್ ಮಾರ್ಗಗಳಿಗೆ ಸೆ.೨೧ ರಂದು ಬೆಳಿಗ್ಗೆ ೯ ರಿಂದ ಸಂಜೆ ೬ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಆದಕಾರಣ, ಗ್ರಾಹಕರು ಸಹಕರಿಸುವಂತೆ ವಿಜಯಪುರದ ಹೆಸ್ಕಾಂನ ಕಾರ್ಯನಿರ್ವಾಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕನ್ನಡ ಅಭಿವೃದ್ದಿ ಪ್ರಾಧಿಕಾರದಿಂದ ಸೊಲಾಪುರದಲ್ಲಿ ಆಯೋಜನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕನ್ನಡ ಅಭಿವೃದ್ದಿ ಪ್ರಾಧಿಕಾರದ ವತಿಯಿಂದ ಮಹಾರಾಷ್ಟ್ರ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಇದೇ ಸೆ.೨೨ರಂದು ಶ್ರೀ ಸಿದ್ದೇಶ್ವರ ಸಕ್ಕರೆ ಕಾರ್ಖಾನೆ ಹತ್ತಿರ, ವಿಮಾನ ನಿಲ್ದಾಣ ಪ್ರದೇಶ, ಶಂಕರ ನಗರ ಸೊಲಾಪುರದಲ್ಲಿ ಹಮ್ಮಿಕೊಳ್ಳಲಾಗಿದೆ.ಅಂದು ಬೆಳಿಗ್ಗೆ ೧೧ ಗಂಟೆಗೆ ನಡೆಯುವ ಮಹಾರಾಷ್ಟ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ೨೦೨೨-೨೩ ಮತ್ತು ೨೦೨೩-೨೪ನೇ ಸಾಲಿನ ಕಾರ್ಯಕ್ರಮವನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಲಿದ್ದಾರೆ. ಸೋಲಾಪುರ ದಕ್ಷಿಣ ಕ್ಷೇತ್ರದ ಶಾಸಕ ಸುಭಾಷ ದೇಶಮುಖ ಅಧ್ಯಕ್ಷತೆ ವಹಿಸಲಿದ್ದಾರೆ. ಸೋಲಾಪುರ ಸಂಸದೆ ಕು.ಪ್ರಣಿತಿ ಸುಶೀಲಕುಮಾರ ಶಿಂಧೆ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಕಲಬುರಗಿ ಸಂಸದ ರಾಧಾಕೃಷ್ಣ ದೊಡಮನಿ ಅವರು ಭಾಗವಹಿಸಲಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಅನಸೂಯ ಕಾಂಬಳೆ ಹಿತನುಡಿಯನ್ನಾಡಲಿದ್ದಾರೆ.ವಿಶೇಷ ಅಹ್ವಾನಿತರಾಗಿ ಸೋಲಾಪುರ ಶಾಸಕರಾದ ವಿಜಯಕುಮಾರ ದೇಶಮುಖ, ಸೋಲಾಪುರ ಜಿಲ್ಲಾಧಿಕಾರಿ ಕುಮಾರ ಆಶೀರ್ವಾದ, ಸೋಲಾಪುರ…

Read More

ಕನ್ನಡ ಅಭಿವೃದ್ದಿ ಪ್ರಾಧಿಕಾರದಿಂದ ಸೊಲಾಪುರದಲ್ಲಿ ಆಯೋಜನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕನ್ನಡ ಅಭಿವೃದ್ದಿ ಪ್ರಾಧಿಕಾರದ ವತಿಯಿಂದ ಮಹಾರಾಷ್ಟ್ರ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಇದೇ ಸೆ.೨೨ರಂದು ಶ್ರೀ ಸಿದ್ದೇಶ್ವರ ಸಕ್ಕರೆ ಕಾರ್ಖಾನೆ ಹತ್ತಿರ, ವಿಮಾನ ನಿಲ್ದಾಣ ಪ್ರದೇಶ, ಶಂಕರ ನಗರ ಸೊಲಾಪುರದಲ್ಲಿ ಹಮ್ಮಿಕೊಳ್ಳಲಾಗಿದೆ.ಅಂದು ಬೆಳಿಗ್ಗೆ ೧೧ ಗಂಟೆಗೆ ನಡೆಯುವ ಮಹಾರಾಷ್ಟ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ೨೦೨೨-೨೩ ಮತ್ತು ೨೦೨೩-೨೪ನೇ ಸಾಲಿನ ಕಾರ್ಯಕ್ರಮವನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಲಿದ್ದಾರೆ. ಸೋಲಾಪುರ ದಕ್ಷಿಣ ಕ್ಷೇತ್ರದ ಶಾಸಕ ಸುಭಾಷ ದೇಶಮುಖ ಅಧ್ಯಕ್ಷತೆ ವಹಿಸಲಿದ್ದಾರೆ. ಸೋಲಾಪುರ ಸಂಸದೆ ಕು.ಪ್ರಣಿತಿ ಸುಶೀಲಕುಮಾರ ಶಿಂಧೆ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಕಲಬುರಗಿ ಸಂಸದ ರಾಧಾಕೃಷ್ಣ ದೊಡಮನಿ ಅವರು ಭಾಗವಹಿಸಲಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಅನಸೂಯ ಕಾಂಬಳೆ ಹಿತನುಡಿಯನ್ನಾಡಲಿದ್ದಾರೆ.ವಿಶೇಷ ಅಹ್ವಾನಿತರಾಗಿ ಸೋಲಾಪುರ ಶಾಸಕರಾದ ವಿಜಯಕುಮಾರ ದೇಶಮುಖ, ಸೋಲಾಪುರ ಜಿಲ್ಲಾಧಿಕಾರಿ ಕುಮಾರ ಆಶೀರ್ವಾದ, ಸೋಲಾಪುರ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಸವಣ್ಣನವರ ಹಿರಿಮೆಯನ್ನು ಕೇಳಿ ರಾಜ್ಯ ತ್ಯಾಗಮಾಡಿ ಕಲ್ಯಾಣಕ್ಕೆ ಬಂದು ಮಾರಯ್ಯ ಹೆಸರಿನಿಂದ ಕಟ್ಟಿಗೆ ಮಾರುವ ಕಾಯಕವನ್ನು ಕೈಕೊಂಡು ಶರಣ ಜೀವನ ನಡೆಸುತ್ತಾ, ಅವರು ಕಾಯಕನಿಷ್ಠರಾಗಿದ್ದರು ಎಂದು ಚೇತನಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ಜುಗತಿ ಹೇಳಿದರು.ನಗರದ ಚೇತನಾ ಶಿಕ್ಷಣ ಸಂಸ್ಥೆಯಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಯುವ ವೇದಿಕೆ ಹಾಗೂ ಚೇತನಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಹಯೋಗದಲ್ಲಿ ಜರುಗಿದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಾ, ಶರಣರ ಜೀವನವೇ ಇಂದಿನ ಪೀಳಿಗೆಗೆ ಆದರ್ಶಪ್ರಾಯ ಎಂದು ಹೇಳಿದರು.ಶರಣ ಮೋಳಿಗೆ ಮಾರಯ್ಯರ ಅನುಭಾವ ಕುರಿತು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಉಪನ್ಯಾಸ ನೀಡುತ್ತಾ,ದುಡಿತವೇ ದುಡ್ಡಿನ ತಾಯಿ ಎಂಬಂತೆ ದುಡಿಮೆಯಲ್ಲಿ ಅಪಾರ ಸಂಪತ್ತಿದೆ ಎಂಬುದನ್ನು ಕಲ್ಯಾಣದ ಪರಿಸರದಲ್ಲಿ ಕಂಡುಕೊಂಡ ಮಾರಯ್ಯನವರ ವಚನಗಳಲ್ಲಿ ವೈವಿಧ್ಯಮಯ ತಾತ್ವಿಕ, ಧಾರ್ಮಿಕ, ಸಾಮಾಜಿಕ, ಅನುಭಾವಿಕ ಚಿಂತನೆಗಳಿವೆ. ಅವು ಮಾರಯ್ಯನ ವಿದ್ವತ್ತು, ಆಧ್ಯಾತ್ಮಿಕ ನಿಲುವು, ಅನುಭಾವದ ಎತ್ತರ, ಸಾಮಾಜಿಕ ಕಳಕಳಿ, ಸಾಹಿತ್ಯಿಕ ಶ್ರೀಮಂತಿಕೆಯನ್ನು ಇಂದಿಗೂ ಎತ್ತಿ ತೋರುತ್ತವೆ…

Read More

ಉದಯರಶ್ಮಿ ದಿನಪತ್ರಿಕೆ. ಕೆಂಭಾವಿ: ಸದ್ಭಕ್ತರು ಸದ್ಗುರುವಿನ ಸನ್ನಿಧಿಯಲ್ಲಿ ಸೇರಿ, ದೇವರ ದರ್ಶನ ಪಡೆದು, ಸಂಸಾರ ಜಂಜಾಟಗಳಿಂದ ಮುಕ್ತಿ ಹೊಂದಲು ಸಾಧ್ಯ ಎಂದು ಅಕ್ಷರ ದಾಸೋಹ ನಿವೃತ್ತ ಸಹಾಯಕ ನಿರ್ದೇಶಕ ಜಿ ಎನ್, ರೊಡಲಬಂಡಿ ಹೇಳಿದರು.ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಭವರೋಗ ಕಳೆಯಲು ಭಗವಂತನ ನಾಮಸ್ಮರಣೆ ಸಾಕು, ಪುರಾಣ, ಪ್ರವಚನ, ಭಜನೆ, ಕೀರ್ತನೆ, ಸತ್ಸಂಗ, ಶಿವಾನುಭವ, ಸಾಹಿತ್ಯ, ಸಂಗೀತ, ಸತ್ಕಾರ್ಯಗಳಲ್ಲಿ ಭಾಗವಹಿಸುವ ಸದ್ಭಕ್ತರು ಸದಾ ಪುಣ್ಯವಂತರು ಎಂದರು.ಮುರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕ, ಪುರಾಣ ಪ್ರವಚನಕಾರ ರಮೇಶ ಶಾಸ್ತ್ರೀ ಯಾಳಗಿ ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗುರುವಿನ ಸ್ಪರ್ಶ, ಗುರುವಿನ ವಾಣಿ, ಗುರುವಿನ ದರ್ಶನದಿಂದ ಮಾನವ ಜನ್ಮ ಮುಕ್ತಿ ಹೊಂದಲು ಸಾಧ್ಯ ಎಂದವರು, ಮಲಮೂತ್ರದ ಈ ಕಾಯ ಮಣ್ಣಾಗುವ ಮುನ್ನ ಮಹಾದೇವನ ನೆನೆಯಲು ಸದ್ಭಕ್ತರು ಸತ್ಸಂಗದಲ್ಲಿ ಸೇರಬೇಕು, ಕಾಯ ಶುದ್ದಿಗೆ ಕಾಂತೇಶ್ವರನ ನಿತ್ಯವೂ ಭಜಿಸಿ…

Read More

ಮಾನನಷ್ಟ ಮೊಕದ್ದಮೆಗೆ ತಡೆ ಕೋರಿದ್ದ ಪ್ರಕರಣದಲ್ಲಿ ಶಾಸಕ ಯತ್ನಾಳಗೆ ಹಿನ್ನಡೆ ಬೆಂಗಳೂರು: ಸಚಿವ ದಿನೇಶ್ ಗುಂಡೂರಾವ್ ಅವರ ಕುಟುಂಬದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಹೈಕೋರ್ಟ್ ಗುರುವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ.ತಮ್ಮ ಕುಟುಂಬ ಹಾಗೂ ವೈಯಕ್ತಿಕ ನಿಂಧನೆ ಹೇಳಿಕೆ ನೀಡಿದ್ದ ಯತ್ನಾಳ್ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ಅವರ ಪತ್ನಿ ಟಬು ರಾವ್ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.ತಮ್ಮ ವಿರುದ್ಧದ ಮಾನಹಾನಿ ಪ್ರಕರಣಕ್ಕೆ ತಡೆ ನೀಡುವಂತೆ ಕೋರಿ ಯತ್ನಾಳ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ, ಪ್ರಕರಣಕ್ಕೆ ತಡೆ ನೀಡಲು ನಿರಾಕರಿಸಿದೆ. ಅಲ್ಲದೇ ಶಾಸಕರ ಕೀಳು ಅಭಿರುಚಿಯ ಹೇಳಿಕೆಯನ್ನು ಪ್ರಶ್ನಿಸಿದ ನ್ಯಾಯಾಧೀಶರು, ನೀವು ಹೇಳಿಕೆ ನೀಡಿದ್ದು ಹೌದೋ ಅಲ್ಲವೋ ಎಂದು ಪ್ರಶ್ನಿಸಿದರು. ಹೇಳಿಕೆ ನೀಡಿದ್ದನ್ನು ಯತ್ನಾಳ್ ಪರ ವಕೀಲರು ಒಪ್ಪಿಕೊಂಡರು.ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಈ ರೀತಿಯ ಪದ ಬಳಕೆ ಯಾವ ಅರ್ಥ ನೀಡುತ್ತದೆ. ವೈಯಕ್ತಿಕ ತೇಜೋವಧೆಗೆ…

Read More