ಕನ್ನಡ ಅಭಿವೃದ್ದಿ ಪ್ರಾಧಿಕಾರದಿಂದ ಸೊಲಾಪುರದಲ್ಲಿ ಆಯೋಜನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕನ್ನಡ ಅಭಿವೃದ್ದಿ ಪ್ರಾಧಿಕಾರದ ವತಿಯಿಂದ ಮಹಾರಾಷ್ಟ್ರ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಇದೇ ಸೆ.೨೨ರಂದು ಶ್ರೀ ಸಿದ್ದೇಶ್ವರ ಸಕ್ಕರೆ ಕಾರ್ಖಾನೆ ಹತ್ತಿರ, ವಿಮಾನ ನಿಲ್ದಾಣ ಪ್ರದೇಶ, ಶಂಕರ ನಗರ ಸೊಲಾಪುರದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ ೧೧ ಗಂಟೆಗೆ ನಡೆಯುವ ಮಹಾರಾಷ್ಟ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ೨೦೨೨-೨೩ ಮತ್ತು ೨೦೨೩-೨೪ನೇ ಸಾಲಿನ ಕಾರ್ಯಕ್ರಮವನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಲಿದ್ದಾರೆ. ಸೋಲಾಪುರ ದಕ್ಷಿಣ ಕ್ಷೇತ್ರದ ಶಾಸಕ ಸುಭಾಷ ದೇಶಮುಖ ಅಧ್ಯಕ್ಷತೆ ವಹಿಸಲಿದ್ದಾರೆ. ಸೋಲಾಪುರ ಸಂಸದೆ ಕು.ಪ್ರಣಿತಿ ಸುಶೀಲಕುಮಾರ ಶಿಂಧೆ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕಲಬುರಗಿ ಸಂಸದ ರಾಧಾಕೃಷ್ಣ ದೊಡಮನಿ ಅವರು ಭಾಗವಹಿಸಲಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಅನಸೂಯ ಕಾಂಬಳೆ ಹಿತನುಡಿಯನ್ನಾಡಲಿದ್ದಾರೆ.
ವಿಶೇಷ ಅಹ್ವಾನಿತರಾಗಿ ಸೋಲಾಪುರ ಶಾಸಕರಾದ ವಿಜಯಕುಮಾರ ದೇಶಮುಖ, ಸೋಲಾಪುರ ಜಿಲ್ಲಾಧಿಕಾರಿ ಕುಮಾರ ಆಶೀರ್ವಾದ, ಸೋಲಾಪುರ ಪೊಲೀಸ್ ಆಯುಕ್ತ ಎಂ.ರಾಜಕುಮಾರ, ಜಿಲ್ಲಾ ಶಿಕ್ಷಣಾದಿಕಾರಿ ಸಚಿನ ಜಗತಾಪ್, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸದಸ್ಯರುಗಳಾದ ಶ್ರೀಮತಿ ದ್ರಾಕ್ಷಾಯಿನಿ ಹುಡೇದ, ವಿರೂಪಣ್ಣ ಕಲ್ಲೂರು, ಅಕ್ಕಲಕೋಟದ ಸಿ.ಬಿ.ಖೇಡಗಿ ಬಸವೇಶ್ವರ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಗುರುಲಿಂಗಪ್ಪ ಧಬಾಲೆ, ಸಾಹಿತಿ ಡಾ.ಗಿರಿಶ ಜಕಾಪುರೆ, ಮಹಾರಾಷ್ಟç ಘಟಕದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೋಮಶೇಖರ ಜಮಶೆಟ್ಟಿ, ಅಕ್ಕಲಕೋಟ ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕಜಾನ ಶೇಖ, ಸಾಹಿತಿ ಬಸವರಾಜ ಮಸೂತಿ ಅವರು ಭಾಗವಹಿಸಲಿದ್ದಾರೆ.
