ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಪಟ್ಟಣದ ಹಿಂದು ಮುಸ್ಲಿಂ ಭಾವೈಕ್ಯದ ದೇವತೆ ಹಜರತ್ ಜಚ್ಚಾ ಮಾಸಾಬಿ ಜಾತ್ರಾ ನಿಮಿತ್ಯ ಶುಕ್ರವಾರ ಹಜರತ್ ಜಚ್ಚಾ ಮಾಸಾಬಿ ದರ್ಗಾದ ಸಜ್ಜಾದಾ ನಶೀನ್ ಹಜರತ್ ಷಾ ಮಹಿಬೂಬ ಪಾಶಾ ಖಾಜಿ ಫಾರೂಖಿ ರವರ ನೇತೃತ್ವದಲ್ಲಿ ಭಕ್ತಾದಿಗಳೊಂದಿಗೆ ದರ್ಗಾಕ್ಕೆ ಭೇಟಿ ನೀಡಿ ಮಹಾ ಸತಿ, ಮಹಾ ಸತ್ಯಮ್ಮ, ಮಾಸಾಬಿಯ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಸಜ್ಜಾದಾ ನಶೀನ್ ರೊಂದಿಗೆ ಅನೇಕ ಭಕ್ತರು ಭಾಗವಹಿಸಿ ತಾಯಿಯ ಆರ್ಶಿವಾದ ಪಡೆದು, ಸರ್ವ ಜನರ ಒಳಿತಿಗಾಗಿ ಹಾಗೂ ಗ್ರಾಮದಲ್ಲಿ ಶಾಂತಿ ಸೌಹಾರ್ದತೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ನಂತರ ಪ್ರಸಾದ ವಿತರಿಸಲಾಯಿತು.

