ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಮಹಾಂತೇಶ ನಗರದ ಎಮ್.ಜಿ.ಎಮ್.ಕೆ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಮುದ್ದೇಬಿಹಾಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸಾಧನೆ ಗೈದಿದ್ದಾರೆ.
ಹಿರಿಯರ ವಿಭಾಗದಲ್ಲಿ ಭಕ್ತಿಗೀತೆ ಸ್ಪರ್ಧೆಯಲ್ಲಿ ನಿಸರ್ಗಾ ಬಿರಾದಾರ ಪ್ರಥಮ ಸ್ಥಾನ ಮತ್ತು ಧಾರ್ಮಿಕ ಪಠಣ (ಸಂಸ್ಕೃತ) ಅಭಿರಾಮ ಹೆಗಡೆ ಪ್ರಥಮ ಸ್ಥಾನ ಪಡೆದು ತಾಲೂಕಾ ಮಟ್ಟಕ್ಕೆ ಆಯ್ಕೆಯಾದರೆ, ಅಪ್ಸರಾ ಆವಟಿ ಇಂಗ್ಲೀಷ್ ಭಾಷಣದಲ್ಲಿ ಪ್ರೌಢ ವಿಭಾಗದಲ್ಲಿ ದ್ವಿತೀಯ ಸ್ಥಾನ, ಅಂಮೃತಾ ಪತ್ತಾರ ಹಿರಿಯರ ವಿಭಾಗದ ದೇಶ ಭಕ್ತಿಯಲ್ಲಿ ತೃತೀಯ ಸ್ಥಾನ ಹಾಗೂ ಕಿರಿಯರ ವಿಭಾಗದ ದೇಶಭಕ್ತಿಯಲ್ಲಿ ಇಂಚರ ಹಡಲಗೇರಿ ತೃತೀಯ ಸ್ಥಾನವನ್ನು ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅವರ ಸಾಧನೆಗೆ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಕೆ.ಹರನಾಳ, ಪ್ರೌಢ ಶಾಲೆಯ ಮುಖ್ಯಗುರು ಎಸ್.ಎಸ್.ಆಳ್ವಿ, ಶಿಕ್ಷಕರಾದ ರಾಜೇಶ್ವರಿ ಬಿರಾದಾರ, ಶೋಭಾ ಬಲಕುಂದಿ, ವಿಜಯಲಕ್ಷ್ಮೀ ಪಾಟೀಲ್, ಸುಜಾತಾ ಬಲಕುಂದಿ, ಎ.ಕೆ.ಪಡೇಕನೂರ, ಜಿ.ಎಮ್.ಸಾಲಿಮಠ, ಎಸ್.ಎ.ಗಂಗನಗೌಡ ಸೇರಿದಂತೆ ಸರ್ವಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

