Author: editor.udayarashmi@gmail.com

ಶಿವಾಜಿ ಗಣೇಶನ್, ಪದ್ಮರಾಜ ದಂಡಾವತಿ, ಪೂರ್ಣಿಮಾ, ಕಾಟ್ಕರ್ ಸೇರಿ ೫ ಜನ ಪತ್ರಕರ್ತರಿಗೆ ಟಿಎಸ್ಸಾರ್ ಪ್ರಶಸ್ತಿ ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಕನ್ನಡ ಪತ್ರಿಕೋದ್ಯಮದಲ್ಲಿ ಅನುಪಮ ಸೇವೆ ಸಲ್ಲಿಸಿದ ಪತ್ರಕರ್ತರಿಗೆ ನೀಡುವ ಟಿ.ಎಸ್.ರಾಮಚಂದ್ರರಾವ್ (ಟಿಎಸ್‌ಆರ್)ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಕನ್ನಡ ಪತ್ರಿಕೆ ಅಥವಾ ಪತ್ರಿಕಾ ಸಮೂಹವನ್ನು ಕಟ್ಟಿ ಬೆಳೆಸಿದ ಪತ್ರಕರ್ತರ ಸಾಧನೆ ಗುರುತಿಸಿ ನೀಡುವ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಕಟಿಸಿದೆ.ಕೋವಿಡ್ ಸೇರಿ ನಾನಾ ಕಾರಣಗಳಿಂದ ವಿಳಂಬವಾಗಿದ್ದ ೨೦೧೯ ರಿಂದ ೨೦೨೩ನೇ ಸಾಲಿನ ಒಟ್ಟು ೫ ವರ್ಷಗಳ ಅವಧಿಯ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ಅಧ್ಯಕ್ಷತೆಯ ರಚಿತವಾದ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಹಿರಿಯ ಪತ್ರಕರ್ತರಾದ ಡಾ.ಈಶ್ವರ ದೈತೋಟ, ಶಾಂತಲಾ ಧರ್ಮರಾಜ್, ಎಂ.ಎಸ್.ಮಣಿ ಹಾಗೂ ಸದಸ್ಯ ಕಾರ್ಯದರ್ಶಿಗಳಾದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ಎಂ.ನಿಂಬಾಳ್ಕರ್ ಅವರಿದ್ದರು. ಈ ಸಮಿತಿಯ ಶಿಫಾರಸ್ಸುಗಳನ್ನು ಸರಕಾರ ಅನುಮೋದಿಸಿ ಪ್ರಶಸ್ತಿ ಘೋಷಿಸಿದೆ.ಟಿ.ಎಸ್. ರಾಮಚಂದ್ರರಾವ್ (ಟಿಯೆಸ್ಸಾರ್) ಪತ್ರಿಕೋದ್ಯಮ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಗ್ರಾಮೀಣ ಪ್ರದೇಶದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳು ರೈತ ಸಮುದಾಯಕ್ಕೆ ಆಧಾರಸ್ತಂಭವಾಗಿವೆ ಎಂದು ಮಹಾಂತೇಶ್ವರಮಠದ ಬಸವಲಿಂಗಶ್ರೀಗಳು ಹೇಳಿದರು.ತಾಲ್ಲೂಕಿನ ಕೋರವಾರ ಗ್ರಾಮದಲ್ಲಿ ಶನಿವಾರ ಜರುಗಿದ ವಿ.ಪ್ರಾ.ಗ್ರಾ.ಕೃ.ಸ. ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು. ಕೃಷಿ ಸಹಕಾರಿ ಸಂಘಗಳು ರೈತ ಸಮುದಾಯಕ್ಕೆ ಸೇರಿದ ಸಂಸ್ಥೆಗಳು. ಇವುಗಳ ಲಾಭ, ಹಾನಿ ಸೇರಿದಂತೆ ಪ್ರತಿಯೊಂದು ಚಟುವಟಿಕೆಗಳ ಬಗ್ಗೆ ಅರಿಯುವುದು ರೈತರ ಜವಾಬ್ದಾರಿಯಾಗಿದೆ ಎಂದರು.ವಿ.ಪ್ರಾ.ಗ್ರಾ.ಕೃ.ಸ. ಸಂಘದ ಅಧ್ಯಕ್ಷ ಸಂಗಮೇಶ ಛಾಯಾಗೋಳ ಮಾತನಾಡಿ, ರೈತ ಸಮುದಾಯ ಸರ್ವಸಾಧಾರಣ ಸಭೆಗೆ ಕಡ್ಡಾಯವಾಗಿ ಹಾಜರಾಗುವುದರ ಮೂಲಕ ತಮ್ಮ ಇಚ್ಛಾಶಕ್ತಿಯನ್ನು ತೋರ್ಪಡಿಸಬೇಕು. ಸಂಘ ಸದಸ್ಯರ ಸಹಕಾರದಿಂದ ಈ ವರ್ಷ ೧೩.೫೦ ಲಕ್ಷ ಲಾಭಗಳಿಸಿದ್ದು ಪ್ರಗತಿಪಥವನ್ನು ಸೂಚಿಸುತ್ತದೆ. ಸಂಘ ಇದೇ ರೀತಿಯಾಗಿ ಉತ್ತರೋತ್ತರವಾಗಿ ಅಭಿವೃದ್ಧಿಯಾಗಲು ಎಲ್ಲರ ಸಹಕಾರವಿರಲಿ ಎಂದರು.ಇದೇ ಸಂದರ್ಭದಲ್ಲಿ ಭೂದಾನ ಮಾಡಿದ ಖ್ಯಾತ ವೈದ್ಯ ಎಸ್.ಎ.ಹಿರೇಮಠ ಹಾಗೂ ಅತ್ಯುತ್ತಮ ಶಿಕ್ಷಕರು, ಪ್ರಗತಿಪರ ರೈತರು, ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಚೌಕಿಮಠದ ಕಾಶೀಲಿಂಗ ಶ್ರೀಗಳು, ಸಂಘದ ಉಪಾಧ್ಯಕ್ಷ ಶರಣಪ್ಪ ತಾಳಿಕೋಟಿ,…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಣದ ನೂತನ ಇಂದಿರಾ ಕ್ಯಾಂಟಿನ್‌ಗೆ ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಭೂಮಿಪೂಜೆ ನೆರವೇರಿಸಿದರು.ಪಟ್ಟಣದ ಪಶು ಆಸ್ಪತ್ರೆಯ ಮುಂಭಾಗದಲ್ಲಿ ಶನಿವಾರ ನೂತನವಾಗಿ ಆರಂಭಗೊಳ್ಳುತ್ತಿರುವ ಇಂದಿರಾ ಕ್ಯಾಂಟಿನ್ ಭೂಮಿಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಮತಕ್ಷೇತ್ರದ ಹಾಗೂ ತಾಲ್ಲೂಕಿನ ಕೇಂದ್ರ ಸ್ಥಳವಾದ ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನ್ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಇಂದು ಭೂಮಿ ಪೂಜೆ ಕೈಗೊಳ್ಳುವುದರ ಮೂಲಕ ಜನತೆಯ ಬಹುದಿನದ ಬೇಡಿಕೆಯನ್ನು ಇಡೇರಿಸಲಾಗುತ್ತಿದೆ. ನೂತನ ಇಂದಿರಾ ಕ್ಯಾಂಟಿನ್ ಶೀಘ್ರದಲ್ಲಿ ಕಾರ್ಯಾರಂಭಗೊಳ್ಳಲಿದೆ ಎಂದರು.ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ರಿಯಾಜ್ ತಾಂಬೋಳಿ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ, ಸದಸ್ಯರಾದ ಕಾಸುಗೌಡ ಬಿರಾದಾರ(ಜಲಕತ್ತಿ), ಶಾಂತಯ್ಯ ಜಡಿಮಠ, ಸುಮಂಗಲಾ ಸೆಬೇನವರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಎಸ್.ಬಾಗಲಕೋಟ, ಮಹಿಳಾ ಪಿಎಸೈ ಪಿ.ಎಮ್.ಚೌರ, ಬಸವರಾಜ ದೇವಣಗಾಂವ, ಕಾಶೀನಾಥ ಕಡ್ಲೇವಾಡ, ಸೋಮು ದೇವೂರ, ವಿನೋದ ಚವ್ಹಾಣ, ಕಾಶೀನಾಥ ವಡ್ಡೋಡಗಿ, ವೀರೇಶ ಕುದರಿ, ಮಿಯಾಜ್ ಯಲಗಾರ, ಫಿರೋಜ್ ಮುಲ್ಲಾ, ಮುತ್ತುರಾಜ ಹಿರೇಮಠ, ಸಹಿತ ಪಟ್ಟಣ ಪಂಚಾಯಿತಿ ಸದಸ್ಯರು, ಸಿಬ್ಬಂದಿ, ಸಾರ್ವಜನಿಕರು ಇದ್ದರು.

Read More

ದೇವರಹಿಪ್ಪರಗಿ: ಪಟ್ಟಣ ಸೇರಿದಂತೆ ಮತಕ್ಷೇತ್ರದಾದ್ಯಂತ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಮಾಜಿಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಹೇಳಿದರು.ಪಟ್ಟಣದ ಪ್ರವಾಸಿಮಂದಿರದಲ್ಲಿ ಶನಿವಾರ ಪಟ್ಟಣದ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ಪಕ್ಷದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಸದಸ್ಯತ್ವ ಅಭಿಯಾನದ ಮೂಲಕ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಪ್ರತಿದಿನ ೫೦ ಸದಸ್ಯರ ನೋಂದಣಿ ಕಾರ್ಯ ಪೂರ್ಣಗೊಳಿಸಬೇಕು. ಈಗಾಗಲೇ ಪಟ್ಟಣದ ೧೭ ವಾರ್ಡುಗಳಲ್ಲಿ ನೋಂದಣಿಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು.ಮಂಡಲ ಅಧ್ಯಕ್ಷ ಅವ್ವಣ್ಣ ಗ್ವಾತಗಿ ಮಾತನಾಡಿ, ಇದೇ ದಿ:೩೦ರ ಒಳಗಾಗಿ ೪೦ ಸಾವಿರಕ್ಕಿಂತಲೂ ಹೆಚ್ಚು ಪಕ್ಷದ ಸದಸ್ಯತ್ವ ಪೂರ್ಣಗೊಳಿಸಲು ಕಾರ್ಯಕರ್ತರ ಪಡೆ ಸಜ್ಜಾಗಿದೆ. ಲಿಂಕ್ ಮೂಲಕ ಆಸಕ್ತರು ಸಹ ಪಕ್ಷದ ಸದಸ್ಯತ್ವ ಪಡೆಯಬಹುದಾಗಿದೆ ಎಂದರು.ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ, ಸೋಮಶೇಖರ ಹಿರೇಮಠ, ಕಾಶೀನಾಥ ಕಡ್ಲೇವಾಡ, ಪ್ರಕಾಶ ದೊಡಮನಿ, ಪ್ರಕಾಶ ಡೋಣೂರಮಠ, ಸೋಮು ದೇವೂರ, ಮಹಾಂತೇಶ ಬಿರಾದಾರ, ಭೀಮನಗೌಡ ಲಚ್ಯಾಣ, ಕಿರಣ ಬುದ್ನಿ, ಶ್ರೀಶೈಲ ಯಂಭತ್ನಾಳ, ವಿನೋದ ಚವ್ಹಾಣ, ಸಿದ್ರಾಮಯ್ಯ ಮಠ, ಸಂಜೀವ ಹರವಾಳ, ಭೀಮನಗೌಡ…

Read More

ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಸೌಹಾರ್ದ ಸಹಕಾರಿಗಳ ಆರ್ಥಿಕ ಬೆಳವಣಿಗೆಯಲ್ಲಿ ಸಾಲಗಾರರು ಹಾಗೂ ಜಾಮೀನುದಾರರ ಪಾತ್ರ ಬಹಳ ಪ್ರಮುಖವಾಗಿದೆ ಎಂದು ನಿರ್ದೇಶಕ ವೈ ಟಿ ಪಾಟೀಲ ಹೇಳಿದರುಪಟ್ಟಣದ ಶ್ರೀ ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀ ಹೇಮರೆಡ್ಡಿ ಮಲ್ಲಮ್ಮ ಸೌಹಾರ್ದ ಸಹಕಾರಿ ಸಂಘ ನಿಯಮಿತದ 17 ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಕಾಲಕ್ಕೆ ಸಾಲ ಪಡೆಯುವ ಸದಸ್ಯರಿಗೆ, ಜಾಮೀನು ಆಗುವ ಸದಸ್ಯರು ಸಾಲ ಮರುಪಾವತಿ ವಿಷಯದಲ್ಲಿ ಸಾಲಗಾರನಷ್ಟೇ ಜವಾಬ್ದಾರಿಯನ್ನು ಹೊಂದಿರುತ್ತಾನೆ ಎಂದವರು, ಸಾಲ ಬೇಡಿಕೆ ಸಮಯದಲ್ಲಿದ್ದ ಗ್ರಾಹಕರ ಉತ್ಸಾಹ, ಹುಮ್ಮಸ್ಸು, ಸಾಲ ಮರುಪಾವತಿ ಮಾಡುವವರೆಗೂ ಉಳಿಸಿಕೊಂಡಾಗ ಸೌಹಾರ್ದ ಸಹಕಾರಿಗಳು ನಿರೀಕ್ಷಿತ ಗುರಿ ತಲುಪಲು ಸಾಧ್ಯ. ಸಹಕಾರವೇ ಸೌಹಾರ್ದ ಸಹಕಾರಿಗಳ ಆರ್ಥಿಕತೆಗೆ ತಳಹದಿ ಎನ್ನುತ್ತಾ, ಪ್ರಸಕ್ತ ಸಾಲಿನ ಡಿವಿಡೆಂಡ್ 18% ಕೊಡುವುದಾಗಿ ಘೋಷಿಸಿದರು.ಮುಖ್ಯ ಕಾರ್ಯನಿರ್ವಾಹಕ ಸುರೇಶ ಯಾಳಗಿ 17 ನೇ ವಾರ್ಷಿಕ ಮಹಾಸಭೆಯ ನೋಟೀಸ್ ಓದಿ ಮಂಡಿಸಿದಾಗ ಸರ್ವ ಸದಸ್ಯರು ಚಪ್ಪಾಳೆ ತಟ್ಟುವ…

Read More

ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಟೀಕೆಗೆ ಖಂಡನೆ |ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಪತ್ರಿಕಾಗೋಷ್ಠಿ ನವದೆಹಲಿ: ಆರೆಸ್ಸೆಸ್-ಬಿಜೆಪಿಯ ವಿಷಕಾರಿ ಮನಸ್ಥಿತಿಯಿಂದ ತಾವು ಹೆದರುವುದಿಲ್ಲ ಎಂದು ಪ್ರತಿಪಾದಿಸಿದ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿಗೆ ಬೆದರಿಕೆಗಳ ವಿರುದ್ಧ ತಮ್ಮ ಪಕ್ಷವು ಆಂದೋಲನವನ್ನು ಪ್ರಾರಂಭಿಸುತ್ತದೆ ಎಂದು ಹೇಳಿದ್ದಾರೆ.ಲೋಕಸಭೆಯ ವಿರೋಧ ಪಕ್ಷದ ನಾಯಕ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಬಳಸಿದ ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ವೈಫಲ್ಯವನ್ನು ಪ್ರಶ್ನಿಸಿದ್ದಾರೆ.ಶಾಸಕರು, ಸಂಸದರು ಸೇರಿದಂತೆ ಬಿಜೆಪಿ, ಆರ್‌ಎಸ್‌ಎಸ್ ನಾಯಕರು ನಮ್ಮ ನಾಯಕರ ನಾಲಿಗೆಯನ್ನು ಕತ್ತರಿಸುವ ಬಗ್ಗೆ ಮಾತನಾಡುತ್ತಾರೆ, ಸತ್ಯವನ್ನು ಮಾತನಾಡಿದ್ದಕ್ಕಾಗಿ ರಾಹುಲ್ ಗಾಂಧಿಯವರ ಮೇಲೆ ದಾಳಿ ನಡೆಯುತ್ತಿದೆ ಮತ್ತು ಅವರ ವಿರುದ್ಧ ದ್ವೇಷದ ವಾತಾವರಣವನ್ನು ಸೃಷ್ಟಿಸಲಾಗಿದೆ (ಅವರ ಅಜ್ಜಿ ಇಂದಿರಾ ಗಾಂಧಿ ವಿರುದ್ಧ ಇದನ್ನು ಮಾಡಲಾಗಿದೆ) ಎಂದು ಜಮ್ಮುವಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಹೇಳಿದರು. “ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಇಂತಹ ಪ್ರಚೋದನಕಾರಿ ಭಾಷಣಗಳನ್ನು ಪ್ರಧಾನಿ ನಿರ್ಲಕ್ಷಿಸಿದ್ದಾರೆ, ಅವರು ಈ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರು ಸೆ.೨೩ ರಿಂದ ೨೪ ರವರೆಗೆ ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಸೆ.೨೩ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರ್ನಾಟಕ ಸಂಭ್ರಮ-೫೦ ರ ಆಚರಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸುವರು.ಮಧ್ಯಾಹ್ನ ೧.೩೦ಕ್ಕೆ ವಿಜಯಪುರದಿಂದ ಹೊರಟು, ಸಂಜೆ ೪ಗಂಟೆಗೆ ಮಹಾರಾಷ್ಟ್ರದ ಜತ್ತ ತಾಲೂಕಿನ ಗುಡ್ಡಾಪೂರದಲ್ಲಿ ವಿಜಯಪುರದ ಅಪರ ಜಿಲ್ಲಾಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಇತರೆ ಅಧಿಕಾರಿಗಳೊಂದಿಗೆ ಶ್ರೀದಾನಮ್ಮ ದೇವಿ ದೇವಸ್ಥಾನದ ಸಭಾಂಗಣದಲ್ಲಿ ಸೆ.೩೦ರಂದು ನಡೆಯುವ ಕರ್ನಾಟಕ ಸಂಭ್ರಮ-೫೦ರ ಆಚರಣೆಗೆ ಸಂಬಂಧಿಸಿದಂತೆ ವೇದಿಕೆ ಮತ್ತು ಇತರ ವ್ಯವಸ್ಥೆಗಳ ಕುರಿತು ಸ್ಥಳ ಪರಿಶೀಲನೆ ಮತ್ತು ಪ್ರಮುಖ ಸಂಘ ಸಂಸ್ಥೆಗಳೊಂದಿಗೆ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಂಜೆ ೭.೩೦ಕ್ಕೆ ಗುಡ್ಡಾಪೂರದಿಂದ ಹೊರಟು, ವಿಜಯಪುರಕ್ಕೆ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ. ಸೆ೨೪ ರಂದು ಬೆಳಿಗ್ಗೆ ೧೧ಗಂಟೆಗೆ ವಿಜಯಪುರದಿಂದ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಪ್ರಕಟಣೆ…

Read More

ವಿಜಯಪುರ: ಗ್ರಾಮೀಣ ರೈತ ಉತ್ಪಾದಕರ ಕಂಪನಿಯ ಮೂರನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಸೆ.೨೧ರಂದು ನಗರದ ಕಾರ್ಪೋರೇಟ್ ಆಫೀಸ್‌ನಲ್ಲಿ ಜರುಗಿತು.ದಿವ್ಯ ಸಾನಿಧ್ಯ ವಹಿಸಿಕೊಂಡಂತ ನಬಾರ್ಡ್ ಸಂಸ್ಥೆಯ ಎಜಿಎಂ ವಿಕಾಸ್ ರಾಠೋಡ್ ಹಾಗೂ ಡಾ|| ಎಸ್ ಪಿ ಕುಂಬಾರ್ ಡಾ|| ಬಿ ಆರ್ ಅಥಣಿ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಶರಣಪ್ಪ ಉಕ್ಕಲಿ ಅವರ ನೇತೃತ್ವದಲ್ಲಿ ಕಂಪನಿಯ ಶೇರುದಾರರು ಹಾಗೂ ನಿರ್ದೇಶಕರು ಸೇರಿಕೊಂಡು ವಾರ್ಷಿಕ ವ್ಯಾಪಾರ ವಿನಿಮಯ ಬಗ್ಗೆ ಚರ್ಚಿಸಿದರುನಬಾರ್ಡಿನ ಎಜಿಎಂ ವಿಕಾಸ್ ರಾಠೋಡ್ ಅವರು ೨೦೨೩-೨೪ರ ವಾರ್ಷಿಕ ವರ್ಷದಲ್ಲಿ ೫೦ ಲಕ್ಷ ವ್ಯವಹಾರ ಮಾಡಿರುವುದು ಇರುತ್ತದೆ. ಇದೇ ರೀತಿ ಮುಂಬರುವ ೨೦೨೪-೨೫ ವಾರ್ಷಿಕ ವರ್ಷದಲ್ಲಿ ಕಂಪನಿಯು ಒಂದು ಕೋಟಿ ವರೆಗೆ ವ್ಯವಹಾರ ಮಾಡಬೇಕೆಂದು ಸಲಹೆ ನೀಡಿದರುಭೀಮನಗೌಡ ಇಂಚಗೇರಿ, ಜಯಶ್ರೀ ಕವಲಗಿ, ರೇಖಾ ಚಿಪಾಟಿ, ಉಮೇಶ ಬಿರಾದಾರ ಉಪಸ್ಥಿತರಿದ್ದರು.ಕಂಪನಿಯ ನಿರ್ದೇಶಕ ರಾಮಪ್ಪ ಪೂಜಾರಿ ಅವರ ನಿರೂಪಿಸಿದರು.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲ್ಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟ ಭರದಿಂದ ನಡೆಯುತ್ತಿದ್ದು, ಅಪರಾಧ‌ ಎಂದು ತಿಳಿದರೂ ಅಕ್ರಮ ಮದ್ಯ ಮಾರಾಟಗಾರರಿಗೆ ಕಾನೂನಿನ ಭಯವೇ ಇಲ್ಲ. ಇದಕ್ಕೆಲ್ಲ ಕಾರಣ ಅಬಕಾರಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಎಂದು ದೂರಿದ ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರು ಅಬಕಾರಿ ‌ನಿರೀಕ್ಷಕ ನಾಯಿಕ‌ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಗಣಪತಿ ರಾಠೋಡ ‌ಮಾತನಾಡಿದ ಅವರು, ಅಕ್ರಮ ಮದ್ಯ ಮಾರಾಟ ತಡೆಯುವಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ವೈಫಲ್ಯ ಕಂಡಿದ್ದಾರೆ. ಸುಮಾರು 3 ಬಾರಿ‌ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಅದಕ್ಕಾಗಿ ಅಕ್ರಮ ಮದ್ಯ ಮಾರಾಟಗಾರರಿಗೆ ಕಾನೂನಿನ ಭಯ ಅಥವಾ ಅಧಿಕಾರಿಗಳ ಬಗ್ಗೆ ಕಿಂಚಿತ್ತೂ ಭಯವೇ ಇಲ್ಲ. ತಾಲ್ಲೂಕಿನ ಪ್ರತಿ ಹಳ್ಳಿಯಲ್ಲೂ ಅಕ್ರಮ ಮದ್ಯ ಹೆಚ್ಚಾಗಿ ಜನರ ಜೀವನ ಅಸ್ತವ್ಯಸ್ತತೆ ಕೂಡುತ್ತಿದೆ. ಅದಕ್ಕೆ ನೇರಹೊಣೆ ಅಬಕಾರಿ ಅಧಿಕಾರಿಗಳು ‌ಹೊಣೆ‌ ಹೊರಬೇಕಾಗುತ್ತದೆ. ಈ ಕೂಡಲೇ ಅಕ್ರಮ ಮದ್ಯ ತಡೆಗಟ್ಟಲು ಕಾನೂನು ಕ್ರಮಕೈಗೊಳ್ಳಬೇಕು. ಒಂದು…

Read More

ಮಲಘಾಣ: ತಂದೆತಾಯಿ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಸವನಬಾಗೇವಾಡಿ ತಾಲ್ಲೂಕಿನ ಮಲಘಾಣದ ನಿವೃತ್ತ ಶಿಕ್ಷಕ‌ ಲಿಂಗೈಕ್ಯ ಹಣಮಂತಗೌಡ ತಿಮ್ಮನಗೌಡ ಬಿರಾದಾರ ಹಾಗೂ ಅವರ ಧರ್ಮಪತ್ನಿ ಲಿಂ. ಕಸ್ತೂರಿ ಅವರ ಸ್ಮರಣಾರ್ಥ ಶಿಕ್ಷಣಪ್ರೇಮಿಗಳಾಗಿರುವ ಅವರ ಮೂವರು ಮಕ್ಕಳು ಕಳೆದ 6 ವರ್ಷಗಳಿಂದ ಗ್ರಾಮದ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುವ ಪರಂಪರೆ ಮುಂದುವರೆಸಿಕೊಂಡು ಬಂದಿದ್ದು ಪ್ರೇರಣೀಯ ಸೇವೆಗೈಯುತ್ತಿದ್ದಾರೆ ಎಂದು ನಿವೃತ್ತ ಶಿಕ್ಷಕ ಎಸ್.ಎಸ್.ಗರಸಂಗಿ ಶ್ಲಾಘನೆ ವ್ಯಕ್ತಪಡಿಸಿದರು.ಮಲಘಾಣದ ಆರಾಧ್ಯದೈವ ಸದ್ಗುರು ಸದಾನಂದ ಶಿವಯೋಗಿಗಳ 52 ನೇ ಪುಣ್ಯಾರಾಧನೆ ಹಾಗೂ ಜಾತ್ರೋತ್ಸವ ನಿಮಿತ್ತ ಶುಕ್ರವಾರ ಶಿವಯೋಗಾಶ್ರಮದಲ್ಲಿ ಜರುಗಿದ ಧರ್ಮಸಭೆಯಲ್ಲಿ ಪ್ರತಿಭಾನ್ವಿತ ಮಕ್ಕಳಿಗೆ ಪ್ರೋತ್ಸಾಹಧನ ವಿತರಿಸುವ ವೇಳೆ ಅವರು ಮಾತನಾಡಿದರು. ನಿವೃತ್ತ ಶಿಕ್ಷಕ ಲಿಂ. ಹಣಮಂತಗೌಡ ತಿಮ್ಮನಗೌಡ ಬಿರಾದಾರ ಶಿಕ್ಷಕರಾಗಿದ್ದರೂ ಜೀವನದಲ್ಲಿ ಕಷ್ಟಪಟ್ಟು ಅವರ ಮೂವರು ಮಕ್ಕಳಾದ ಡಾ.ಮಹಾಂತೇಶ ಬಿರಾದಾರ, ಪಾಂಡುರಂಗ ಬಿರಾದಾರ ಹಾಗೂ ಡಾ.ವಾಸಂತಿ ಪಾಟೀಲ್ ಅವರಿಗೆ ನೈತಿಕ, ಮೌಲ್ಯಯುತ ಶಿಕ್ಷಣ ನೀಡಿ ಇಂದು ಎಲ್ಲರೂ ನೌಕರಸ್ಥರಾಗಿ ಉನ್ನತ ಸ್ಥಾನಮಾನದಲ್ಲಿದ್ದಾರೆ. ಸದ್ಯ ಮೂವರು…

Read More