ದೇವರಹಿಪ್ಪರಗಿ: ಪಟ್ಟಣ ಸೇರಿದಂತೆ ಮತಕ್ಷೇತ್ರದಾದ್ಯಂತ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಮಾಜಿಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಹೇಳಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಶನಿವಾರ ಪಟ್ಟಣದ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಕ್ಷದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಸದಸ್ಯತ್ವ ಅಭಿಯಾನದ ಮೂಲಕ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಪ್ರತಿದಿನ ೫೦ ಸದಸ್ಯರ ನೋಂದಣಿ ಕಾರ್ಯ ಪೂರ್ಣಗೊಳಿಸಬೇಕು. ಈಗಾಗಲೇ ಪಟ್ಟಣದ ೧೭ ವಾರ್ಡುಗಳಲ್ಲಿ ನೋಂದಣಿಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು.
ಮಂಡಲ ಅಧ್ಯಕ್ಷ ಅವ್ವಣ್ಣ ಗ್ವಾತಗಿ ಮಾತನಾಡಿ, ಇದೇ ದಿ:೩೦ರ ಒಳಗಾಗಿ ೪೦ ಸಾವಿರಕ್ಕಿಂತಲೂ ಹೆಚ್ಚು ಪಕ್ಷದ ಸದಸ್ಯತ್ವ ಪೂರ್ಣಗೊಳಿಸಲು ಕಾರ್ಯಕರ್ತರ ಪಡೆ ಸಜ್ಜಾಗಿದೆ. ಲಿಂಕ್ ಮೂಲಕ ಆಸಕ್ತರು ಸಹ ಪಕ್ಷದ ಸದಸ್ಯತ್ವ ಪಡೆಯಬಹುದಾಗಿದೆ ಎಂದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ, ಸೋಮಶೇಖರ ಹಿರೇಮಠ, ಕಾಶೀನಾಥ ಕಡ್ಲೇವಾಡ, ಪ್ರಕಾಶ ದೊಡಮನಿ, ಪ್ರಕಾಶ ಡೋಣೂರಮಠ, ಸೋಮು ದೇವೂರ, ಮಹಾಂತೇಶ ಬಿರಾದಾರ, ಭೀಮನಗೌಡ ಲಚ್ಯಾಣ, ಕಿರಣ ಬುದ್ನಿ, ಶ್ರೀಶೈಲ ಯಂಭತ್ನಾಳ, ವಿನೋದ ಚವ್ಹಾಣ, ಸಿದ್ರಾಮಯ್ಯ ಮಠ, ಸಂಜೀವ ಹರವಾಳ, ಭೀಮನಗೌಡ ರಾಯರೆಡ್ಡಿ, ಪಿಂಟೂ ಬಾಸುತ್ಕರ್, ಯಲ್ಲು ಬಾವೂರ, ಮಲ್ಲನಗೌಡ ಬಿರಾದಾರ, ಮುತ್ತುರಾಜ ಹಾಲಿಹಾಳ, ಸುಧಾಕರ ಅಡಕಿ, ಮಹಾಂತೇಶ ಬೇವೂರ, ಮಲ್ಕು ಬಾಗೇವಾಡಿ, ರಮೇಶ ಇಳಗೇರ, ಮಲ್ಲು ಕೋಲಕಾರ, ಸದ್ದಾಂ ಮಕ್ಕೂಬಾಯಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

