Author: editor.udayarashmi@gmail.com

*ಉದಯರಶ್ಮಿ ದಿನಪತ್ರಿಕೆ* ಕೊಲ್ಹಾರ: ನಾಳಿನ ನಾಡಿನ ನಕ್ಷತ್ರಗಳಾಗಿ ಬೆಳೆಯಬೇಕಾದ ವಿದ್ಯಾರ್ಥಿಗಳು, ಹೆತ್ತವರ ಕನಸುಗಳಿಗೆ ಕೊಳ್ಳೆ ಇಟ್ಟು ಮಾದಕ ದ್ರವ್ಯ ವ್ಯಸನಕ್ಕೆ ಬಲಿಯಾಗುತ್ತಿರುವುದು ಅತ್ಯಂತ ದುಃಖಕರ ಸಂಗತಿ ಎಂದು ಕೂಡಗಿ ಪೊಲೀಸ್ ಠಾಣೆಯ ಕ್ರೈಂ ಪಿಎಸ್‌ಐ ವಿ.ಎಚ್. ಹತ್ತಳ್ಳಿ ಹೇಳಿದರು.ಅವರು ತೆಲಗಿ ಗ್ರಾಮದ ಶ್ರೀ ಸದ್ಗುರು ಸದಾನಂದ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕೂಡಗಿ ಪೊಲೀಸ್ ಠಾಣೆಯ ವತಿಯಿಂದ ಶನಿವಾರ ಆಯೋಜಿಸಲಾದ ಎನ್‌ಟಿ ಡ್ರಗ್ಸ್ – ಮಾದಕ ದ್ರವ್ಯ ದುರ್ಬಳಕೆ ಮತ್ತು ಅಕ್ರಮ ಸಾಗಾಣಿಕೆ ತಡೆ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.ವಿದ್ಯಾರ್ಥಿಗಳು ಇಂತಹ ದುಷ್ಚಟಗಳಿಂದ ದೂರವಿದ್ದು, ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು. ಮಾದಕ ದ್ರವ್ಯಗಳ ಅಕ್ರಮ ಸಾಗಾಣಿಕೆ ಅಥವಾ ದುರ್ಬಳಕೆ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ, ಸಮಾಜವನ್ನು ವ್ಯಸನಮುಕ್ತಗೊಳಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಎಲ್.ಎಚ್. ಪತ್ತಾರ, ಪೊಲೀಸ್ ಸಿಬ್ಬಂದಿಗಳಾದ ಮಲ್ಲು ಆರ್. ಆಶಂಪೂರ, ಸುನೀಲ ತಿವಾರಿ ಸೇರಿದಂತೆ ಇತರರು…

Read More

ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೨ ಉದಯರಶ್ಮಿ ದಿನಪತ್ರಿಕೆ ಒಲವಿನ ರಾಧಾನನ್ನ ಗೆಳೆಯರ ಬದುಕಿನಲ್ಲಿ ಆದ ದುಸ್ಥಿತಿಯನ್ನು ಕಂಡು ನನಗೆ ಪ್ರೀತಿ ಪ್ರೇಮ ಮದುವೆಯಲ್ಲಿ ಆಸಕ್ತಿಯೇ ಇರಲಿಲ್ಲ. ಅಪ್ಪ ಅವ್ವನಿಗೆ ಮೊಮ್ಮಕ್ಕಳನ್ನು ನೋಡಬೇಕೆಂಬ ಆಸೆ. ಪದೇ ಪದೇ ಅದೇ ವಿಷಯ ಕೇಳಬೇಡಿ ಎನ್ನುವ ನನ್ನ ನುಡಿಗಳಿಂದ ಅವರಿಗೆ ಬೇಸರವಾಗಿತ್ತು. ಸಾಲದ್ದಕ್ಕೆ ನಾನು ಏಕೈಕ ಪುತ್ರ ಅಮ್ಮನ ಮುದ್ದಿನ ಮಗ.. ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುವ ನಿನಗೆ ಹೆಣ್ಣು ಕೊಡಲು ಮುಗಿಬಿದ್ದಿದ್ದಾರೆ ಎಂದು ಅವ್ವ ಹೇಳುವಾಗ ಅವರ ಕಣ್ತುಂಬಿ ಬರುತ್ತಿತ್ತು. ಆದರೂ ನನ್ನ ಕಲ್ಲು ಹೃದಯ ಕರಗಿರಲಿಲ್ಲ. ಎಲ್ಲರಿಗೂ ಅವರವರ ಭಾವನೆಗಳೇ ಹೆಚ್ಚು ಅವರವರ ಯೋಚನೆಗಳೇ ಸರಿ. ಹೀಗಿರುವಾಗ ನನ್ನ ಹೆತ್ತವರ ಭಾವನೆಗಳಿಗೆ ನಾನು ಬೆಲೆ ಕೊಡದಾಗಿದ್ದೆ. ಆನೆ ನಡೆದಿದ್ದೆ ದಾರಿ ಎಂಬAತೆ ನನ್ನ ದಾರಿಯಲ್ಲಿ ನಡೆದಿದ್ದೆ. ಮನದಲ್ಲಿ ಸಣ್ಣ ತಲ್ಲಣವಿತ್ತು. ನಾ ನಡೆವ ದಾರಿ ಅದೆಲ್ಲಿಗೆ ಕರೆದೊಯ್ಯುತ್ತದೆಯೋ ಎಂದು ಸಣ್ಣಗೆ ನಡುಕವು ಶುರುವಾಗಿತ್ತು..ಅದೇ ಸಮಯದಲ್ಲಿ ನಮ್ಮ ಆಫೀಸಿಗೆ ಕಾಲಿಟ್ಟವಳು ನೀನು. ಅದೊಂದು…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ಅನಿವಾರ್ಯತೆ ಬಹಳಷ್ಟಿದೆ. ಎಂದು ಟ್ರಸ್ಟ್ ನ ಸಂಘಟಕರಾದ ಪಂಚಾಕ್ಷರಿ ಮಠದ ಹೇಳಿದರು.ಜಮಖಂಡಿ ತಾಲೂಕಿನ ತುಬಚಿ ಗ್ರಾಮದ ದಳವಾಯಿ ವಸತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಶಾಲೆಗೆ ಬರುವ ಎಲ್ಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನಮ್ಮ ಟ್ರಸ್ಟ್ ವತಿಯಿಂದ ಈ ಸಣ್ಣ ಕಾಣಿಕೆಯನ್ನು ನೀಡಿದ್ದೇವೆ. ಇಂತಹ ಸಾಮಾಜಿಕ ಕಾರ್ಯಕ್ರಮಗಳು ಮುಂದೆಯೂ ನಿರಂತರವಾಗಿ ಮುಂದುವರಿಯಲಿವೆ,” ಎಂದು ತಿಳಿಸಿದರು.ರೈತ ಮುಖಂಡರಾದ ಬಿ.ಎಸ್. ಸಿಂಧೂರ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣದೊಂದಿಗೆ ಆರೋಗ್ಯವಂತರಾಗಿಯೂ ಬೆಳೆಯಬೇಕು. ಪ್ಲಾಸ್ಟಿಕ್ ಬಾಟಲ್‌ಗಳ ಅತಿಯಾದ ಬಳಕೆಯನ್ನು ಕಡಿಮೆ ಮಾಡಿ, ಇಂತಹ ಮರುಬಳಕೆ ಮಾಡಬಹುದಾದ ಬಾಟಲ್‌ಗಳನ್ನು ಬಳಸುವುದರಿಂದ ಪರಿಸರಕ್ಕೂ ಒಳಿತು. ಟ್ರಸ್ಟ್‌ನ ಈ ಕೆಲಸವು ಇತರರಿಗೆ ಮಾದರಿಯಾಗಿದೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಮುಖಂಡರಾದ ಸುರೇಶ ಗೌಡ ಪಾಟೀಲ್ ಮಾತನಾಡಿ, ಸಮಾಜಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಶಿವಲಿಂಗೇಶ್ವರ ಚಾರಿಟೇಬಲ್ ಟ್ರಸ್ಟ್‌ನ ಈ ಮಾನವೀಯ ಕಾರ್ಯ ಶ್ಲಾಘನೀಯ ಎಂದರು.ಈ ಸಂದರ್ಭದಲ್ಲಿ ಎಸ್…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಎಂ.ಬಿ.ಎ. ವಿಭಾಗ, ಆರ್ಯನ್ ಡಿಜಿಟಲ್ ಲ್ಯಾಬ್, ವಿಜಯಪುರ ಹಾಗೂ ನೈಕಾನ್ ಸ್ಕೂಲ್ ಇಂಡಿಯಾ ಇವರ ಸಹಯೋಗದಲ್ಲಿ ನೈಕಾನ್ ಮಿರರ್‌ಲೆಸ್ ತಂತ್ರಜ್ಞಾನ ಕುರಿತು ವಿಶೇಷ ಕಾರ್ಯಾಗಾರ ಜುಲೈ 14 ರಂದು ಮಂಗಳವಾರ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3.30ರ ವರೆಗೆ ನಡೆಯಲಿದೆ.ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಾಗಾರದಲ್ಲಿ ನೈಕಾನ್‌ನ ಅತ್ಯಾಧುನಿಕ ಮಿರರ್‌ಲೆಸ್ ಕ್ಯಾಮೆರಾ ತಂತ್ರಜ್ಞಾನದ ಕುರಿತು ಪ್ರಾಯೋಗಿಕ ಅನುಭವವನ್ನು ನೀಡಲಾಗುವುದು. ಛಾಯಾಗ್ರಹಣದ ಸೈದ್ಧಾಂತಿಕ ಜ್ಞಾನ ಮತ್ತು ಉದ್ಯಮದಲ್ಲಿನ ಪ್ರಾಯೋಗಿಕ ಬಳಕೆಯ ನಡುವಿನ ಅಂತರವನ್ನು ಕಡಿಮೆ ಮಾಡುವುದರ ಜೊತೆಗೆ ವಿದ್ಯಾರ್ಥಿಗಳು ಮತ್ತು ಛಾಯಾಗ್ರಹಣ ಆಸಕ್ತರಿಗೆ ಆಧುನಿಕ ಇಮೇಜಿಂಗ್ ತಂತ್ರಜ್ಞಾನಗಳ ಬಗ್ಗೆ ಸಮಗ್ರ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.ಈ ವಿಶೇಷ ತರಬೇತಿಯನ್ನು ನೈಕಾನ್‌ನ ಖ್ಯಾತ ಕಂಟೆಂಟ್ ಕ್ರಿಯೇಟರ್ ಜೋಯೆಲ್ ಶಮನ್ ಡಿ’ ಸೋಜಾ ಮತ್ತು ಕರ್ನಾಟಕ ವನ್ಯಜೀವಿ ಮಂಡಳಿ…

Read More

ಬಿಜೆಪಿ‌ ಮುಖಂಡರು ಮತ್ತು ಕಾರ್ಯಕರ್ತರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಎಂಎಲ್ಸಿ ಸುನೀಲಗೌಡ ಪಾಟೀಲ ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಕ್ರೀಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು‌ ಎಂದು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಹೇಳಿದ್ದಾರೆ.ಶನಿವಾರ ನಗರದಲ್ಲಿ ಕಾತ್ರಾಳ ಗ್ರಾಮದ ಬಿಜೆಪಿ‌ ಮುಖಂಡರು ಮತ್ತು ಕಾರ್ಯಕರ್ತರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಾಂಗ್ರೆಸ್ ಸರ್ವಜನರ ಏಳಿಗೆಗಾಗಿ ಕೆಲಸ ಮಾಡುತ್ತಿದೆ. ಹೊಸ ಕಾರ್ಯಕರ್ತರ ಸೇರ್ಪಡೆಯಿಂದ ಪಕ್ಷಕ್ಕೆ ಮತ್ತಷ್ಟು ಬಲ ಬರಲಿದೆ. ಹಳಬರು, ಹೊಸಬರು ಒಗ್ಗಟ್ಟಿನಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿ‌ ಮಾತನಾಡಿದ ಮುಖಂಡರು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ‌ ಅವರ ಅಭಿವೃದ್ಧಿ ಕಾರ್ಯಗಳಿಗೆ ಮನಸೋತು ಕಾಂಗ್ರೆಸ್ ಸೇರ್ಪಡೆಯಾಗಿದ್ದೇವೆ. ಸಚಿವ ಎಂ. ಬಿ. ಪಾಟೀಲ ಮತ್ತು ಶಾಸಕ‌ ಸುನೀಲಗೌಡ ಪಾಟೀಲ ಅವರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟಿಸುತ್ತೇವೆ ಎಂದು ಹೇಳಿದರು.ಕಾತ್ರಾಳ ಗ್ರಾಮದ ಹಿರಿಯರು ಮತ್ತು ಮಾಜಿ ಗ್ರಾ.…

Read More

ಲೇಖನ- ಡಾ. ರಾಜಶೇಖರ ನಾಗೂರಸಂಚಾಲಕರು’ನಮ್ಮ ಕಥಾ ಅರಮನೆ’ ಉದಯರಶ್ಮಿ ದಿನಪತ್ರಿಕೆ ಮನುಷ್ಯನ ಜೀವನವನ್ನು ರೂಪಿಸುವುದು ಘಟನೆಗಳಲ್ಲ. ಅವುಗಳಿಗೆ ಅವನು ನೀಡುವ ಪ್ರತಿಕ್ರಿಯೆಗಳು.ಯಾವುದೇ ಘಟನೆ ನಡೆದ ಕ್ಷಣ ಮತ್ತು ಅದಕ್ಕೆ ನಾವು ಪ್ರತಿಕ್ರಿಯಿಸುವ ಕ್ಷಣದ ನಡುವೆ ಒಂದು ಸೂಕ್ಷ್ಮ ವಿರಾಮವಿರುತ್ತದೆ. ಅದು ಕಣ್ಣಿಗೆ ಕಾಣದಷ್ಟು ಚಿಕ್ಕದಾಗಿರಬಹುದು. ಆದರೆ ಬದುಕಿನ ಅತಿ ದೊಡ್ಡ ರಹಸ್ಯ ಅಡಗಿರುವುದು ಅಲ್ಲಿಯೇ.ಮಳೆ ಬೀಳುವುದು ನಮ್ಮ ಕೈಯಲ್ಲಿಲ್ಲ. ಆದರೆ ಛತ್ರಿ ಹಿಡಿಯಬೇಕೋ, ಮಳೆಯನ್ನು ಆಸ್ವಾದಿಸಬೇಕೋ, ಅಥವಾ ಮಳೆಯನ್ನು ದೂಷಿಸುತ್ತಾ ನಿಲ್ಲಬೇಕೋ ಎಂಬುದು ನಮ್ಮ ಆಯ್ಕೆ. ಇದೇ ರೀತಿ ಜೀವನದಲ್ಲಿಯೂ ಅನೇಕ ಘಟನೆಗಳು ನಮ್ಮ ಅನುಮತಿಯಿಲ್ಲದೆ ಸಂಭವಿಸುತ್ತವೆ. ಆದರೆ ಅವುಗಳ ಮುಂದೆ ನಾವು ಹೇಗೆ ನಿಲ್ಲುತ್ತೇವೆ ಎಂಬುದೇ ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ.ಆ ಒಂದು ಕ್ಷಣ ಕೋಪವನ್ನು ತಾಳ್ಮೆಯಾಗಿ ಪರಿವರ್ತಿಸಬಹುದು. ದ್ವೇಷವನ್ನು ಕರುಣೆಯಾಗಿ ಬದಲಿಸಬಹುದು. ಪ್ರತೀಕಾರವನ್ನು ಕ್ಷಮೆಯಾಗಿ ರೂಪಿಸಬಹುದು. ಭಯವನ್ನು ಧೈರ್ಯವಾಗಿ ಪರಿವರ್ತಿಸಬಹುದು. ಆತುರವನ್ನು ವಿವೇಕವನ್ನಾಗಿ ಮಾಡಬಹುದು.ಆ ಕ್ಷಣವನ್ನು ಕಳೆದುಕೊಂಡರೆ ಭಾವನೆಗಳು ನಮ್ಮನ್ನು ಮೀರುತ್ತವೆ ಎಂಬುದು ನನ್ನ ಅಭಿಪ್ರಾಯ. ಆದರೆ ಆ ಕ್ಷಣವನ್ನು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ದಾರುಣ ಘಟನೆ ಶುಕ್ರವಾರ ನಡೆದಿದೆ.ಮೃತರನ್ನು ಸತ್ಯವೇಣಿ (38), ಅವರ ಪುತ್ರರಾದ ಹರಿವೆಂಕಟರಾಮ್ (20) ಹಾಗೂ ಜಶ್ವಂತ (18) ಎಂದು ಗುರುತಿಸಲಾಗಿದೆ. ಕುಟುಂಬದ ಮುಖ್ಯಸ್ಥ ರಾಘವೇಂದ್ರ (41) ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಕಾರಟಗಿಯಿಂದ ಶಿರಡಿಗೆ ತೆರಳುತ್ತಿದ್ದ ಈ ಕುಟುಂಬದ KA-33 N-4689 ನೋಂದಣಿಯ ಕ್ರೆಟಾ ಕಾರನ್ನು ಹರಿವೆಂಕಟರಾಮ್ ಚಾಲನೆ ಮಾಡುತ್ತಿದ್ದರು. ಈ ವೇಳೆ ಕಾರು ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ.ಪ್ರಾಥಮಿಕ ಮಾಹಿತಿಯ ಪ್ರಕಾರ, ಚಾಲಕನಿಗೆ ನಿದ್ದೆ ಮಂಪರು ಬಂದಿರುವುದೇ ಅಪಘಾತಕ್ಕೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮಾಹಿತಿ ತಿಳಿದು ಮನಗೂಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

Read More

ವಿಜಯಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರ ಆರೋಪ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಎಸ್‌ಐಆರ್ ಪ್ರಕ್ರಿಯೆ ನಿಷ್ಕ್ರೀಯಗೊಳಿಸುವ ಷಡ್ಯಂತ್ರದ ಭಾಗವಾಗಿ ಶಾಶ್ವತ ರಹವಾಸಿ ಪ್ರಮಾಣಪತ್ರ ಪ್ರಕ್ರಿಯೆ ಆರಂಭಿಸಲು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ, ಇಷ್ಟು ದಿನ ಈ ಪ್ರಕ್ರಿಯೆ ನೆನಪಾಗಲಿಲ್ಲವೇ? ಈಗ ಎಸ್‌ಐಆರ್ ನಡೆದಿರುವಾಗ ಇದರ ಔಚಿತ್ಯವೇನಿತ್ತು ಎಂದು ಬಿಜೆಪಿ ಮುಖಂಡ ಕೃಷ್ಣಾ ಗುನ್ನಾಳಕರ ಖಾರವಾಗಿ ಪ್ರಶ್ನಿಸಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ವಲಸಿಗರಿಗೆ ರಕ್ಷಣೆ ನೀಡುವ ಎಂಬ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಈ ಪಿಆರ್‌ಸಿ ಎಂಬ ಪ್ರಕ್ರಿಯೆ ಜಾರಿಗೆ ತರುತ್ತಿದೆ, ಇಲ್ಲಿರುವ ಅಕ್ರಮ ವಲಸಿಗರಿಗೆ ಶಾಶ್ವತ ರಹವಾಸಿ ಪ್ರಮಾಣ ಪತ್ರ ನೀಡುವ ಮೂಲಕ ತನ್ನ ವೋಟ್ ಬ್ಯಾಂಕ್ ಭದ್ರಪಡಿಸಿಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದೆ, ಈ ರೀತಿ ಅಕ್ರಮ ವಲಸಿಗರಿಗೆ ಈ ರೀತಿಯ ರಕ್ಷಣೆ ದೊರಕಿದರೆ ಅವರು ಇಲ್ಲಿ ಶಾಶ್ವತವಾಗಿ ನೆಲೆಸಲು ಬಲ ನೀಡಲಿದೆ, ಇದು ರಾಷ್ಟ್ರದ ಭದ್ರತೆಗೆ ದೊಡ್ಡ ಅಪಾಯವಾಗಿದೆ, ಕೂಡಲೇ ಈ ಅವೈಜ್ಞಾನಿಕ ಪ್ರಕ್ರಿಯೆಯನ್ನು ಕೈ ಬಿಡಬೇಕು ಎಂದರು.ಈ ಅವೈಜ್ಞಾನಿಕ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಎಚ್.ಜಿ ಪದವಿ ಪೂರ್ವ ಕಾಲೇಜಿನಲ್ಲಿ ಇದೇ ತಿಂಗಳು 21 ಮತ್ತು 22 ರಂದು ನಡೆಯಲಿರುವ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಮಕ್ಕಳ ಸಾಹಿತಿ ಹ.ಮಾ ಪೂಜಾರ ಆಯ್ಕೆಯಾಗಿರುವುದಕ್ಕೆ ಹೆಡ್ ಕಾನ್ಸ್‌ಟೇಬಲ್, ಬರಹಗಾರ ಮೌಲಾಲಿ ಆಲಗೂರ ಹರ್ಷವ್ಯಕ್ತಪಡಿಸಿದ್ದಾರೆ.ಕನ್ನಡ ಸಾಹಿತ್ಯ ಲೋಕಕ್ಕೆ ಮಕ್ಕಳ ಸಾಹಿತ್ಯದ ಕೊಡುಗೆ ಅಪಾರ. ಇಂತಹ ಶ್ರೇಷ್ಠ ಮಕ್ಕಳ ಸಾಹಿತ್ಯದ ಉನ್ನತಿಗಾಗಿ ಶ್ರಮಿಸಿದವರು ಹ.ಮಾ ಪೂಜಾರ. ತಮ್ಮ ನಲವತ್ತು ವರ್ಷಗಳ ಸುದೀರ್ಘ ಮತ್ತು ಸಾರ್ಥಕ ಶಿಕ್ಷಕ ವೃತ್ತಿಯ ಜೊತೆಗೆ ಮಕ್ಕಳ ಕಥೆ, ಕಾದಂಬರಿ, ಕವನ ಸೇರಿದಂತೆ ಮಕ್ಕಳ ಸಾಹಿತ್ಯ ಕುರಿತು ಅನೇಕ ಕೃತಿಗಳನ್ನು ಹೊರ ತಂದಿರುವ ಹಿರಿಯ ಜೀವ ಹ.ಮಾ ಪೂಜಾರ.ಸಾವಿರಾರು ವಿಧ್ಯಾರ್ಥಿಗಳಿಗೆ ಅಕ್ಷರ ಧಾರೆ ಎರೆದ ದೈವ ಸ್ವರೂಪಿ. ನಾಡಿನಲ್ಲಿ ಮಕ್ಕಳ ಸಾಹಿತ್ಯ ವಿಜೃಂಭಿಸಲು ಇವರ ಪರಿಶ್ರಮ ಬಹಳಷ್ಟಿದೆ. ಶಿಕ್ಷಣ ಮತ್ತು ಸಾಹಿತ್ಯದ ಮೂಲಕ ಮಕ್ಕಳ ಬೌದ್ಧಿಕ ಮತ್ತು ಮಾನಸಿಕ ವಿಕಾಸವನ್ನು ಗಟ್ಟಿಗೊಳಿಸಿದ ಕೀರ್ತಿ ಹ.ಮಾ ಪೂಜಾರರದ್ದು.…

Read More