ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರ ಸಾವಿರಾರು ಎಕರೆ ವಿಸ್ತಾರದಲ್ಲಿ ನಿರ್ಮಾಣಗೊಂಡಿದ್ದು, ನಗರದ ಅಭಿವೃದ್ಧಿಗೆ ನಗರ ಯೋಜನಾ ಪ್ರಾಧಿಕಾರ ಸೂಕ್ತ ಯೋಜನೆ ರೂಪಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಿ ಎಂದು ಶಾಸಕ ಅಶೋಕ ಮನಗೂಳಿ ಶುಭ ಹಾರೈಸಿದರು.
ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಛೇರಿಗೆ ವರುವವರಿಗೆ ಯಾವುದೇ ರೀತಿಯ ತೊಂದರೆ ಇಲ್ಲದಂತೆ ಭ್ರಷ್ಠಾಚಾರ ರಹಿತವಾಗಿ ಕಾರ್ಯನಿರ್ವಹಿಸಬೇಕು. ನಗರದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕು ಎಂದರು.
ಈ ವೇಳ ನೂತನ ಅಧ್ಯಕ್ಷ ಹಣಮಂತ ಸುಣಗಾರ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಶಾಸಕರ ಮೂಲಕ ಸರಕಾರದಿಂದ ಸಿಂದಗಿ ಯೋಜನಾ ಪ್ರಾಧಿಕಾರದ ಜವಾಬ್ದಾರಿಯನ್ನು ನನಗೆ ವಹಿಸಿದ್ದಾರೆ. ಉತ್ತಮವಾಗಿ, ಬಡವರ ಕಾರ್ಯಗಳನ್ನು ನಡೆಸುವಂತೆ ಶಾಸಕರು ಕಿವಿಮಾತು ಹೇಳಿದ್ದು ಅವರ ಮಾತಿಗೆ ಚ್ಯುತಿ ಬಾರದಂತೆ ಶಿರಸಾ ವಹಿಸಿ ಪಾಲಿಸುತ್ತೇನೆ. ಸಿಂದಗಿ ತಾಲೂಕಿನ ಜನತೆ ಏನನ್ನು ಬಯಸುತ್ತಾರೆಯೋ ಅದನ್ನು ನಡೆಸಲಾಗುವುದು. ನನಗೆ ಆಯ್ಕೆ ಮಾಡಿದ ಸಿಎಂ, ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ, ಪೌರಾಡಳಿತ ಸಚಿವ ರಹೀಂಖಾನ ಹಾಗೂ ಪಕ್ಷದ ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಮಾಜಿ ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ, ರವಿ ನಾವಿ, ಯಾಶೀನ ಬಿಳಗಿ, ಅಂಬರೀಷ ಚೌಗಲೆ, ದಯಾನಂದ ಪತ್ತಾರ, ಸೇರಿದಂತೆ ಯೋಜನಾ ಪ್ರಾಧಿಕಾರದ ಸದಸ್ಯರು, ಪುರಸಭೆ ಮಾಜಿ ಸದಸ್ಯರು, ನಾಮ ನಿರ್ದೇಶನ ಸದಸ್ಯರು ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

