ಉದಯರಶ್ಮಿ ದಿನಪತ್ರಿಕೆ
ಆಲಮೇಲ: ವಚನಗಳ ಆಧಾರದ ಮೇಲೆ ನಮ್ಮ ಜೀವನ ನಡೆದರೆ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ. ಒಂದು ವೇಳೆ ಕಷ್ಟಗಳು ಬಂದರೂ ಅವುಗಳನ್ನು ಎದುರಿಸುವ ಧೈರ್ಯ ನಮಗೆ ವಚನ ಸಾಹಿತ್ಯದಿಂದ ಸಿಗುತ್ತದೆ, ಆದ್ದರಿಂದ ಯಾವುದಕ್ಕೂ ದೃತಿಗೇಡಬಾರದು ಎಂದು ಡಾ. ಸಂಗಮೇಶ್ವರಿ ಪ್ರಮೋದ ಮಹಾಜನ ಅವರು ಅಭಿಪ್ರಾಯಪಟ್ಟರು.
ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡದ ಮೊದಲ ಮಹಿಳಾ ಕವಿಯತ್ರಿ ಅಕ್ಕಮಹಾದೇವಿ ಅವರ 896ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, 12ನೇ ಶತಮಾನದಲ್ಲಿ ಅಕ್ಕಮಹಾದೇವಿಯವರು ತೋರಿದ ವೈರಾಗ್ಯ ಮತ್ತು ಧೈರ್ಯ ಇಂದಿನ ಮಹಿಳೆಯರಿಗೆ ಹಾಗೂ ಇಡೀ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಸ್ಮರಿಸಿದರು.
ಈ ಸಂಭ್ರಮದ ಕಾರ್ಯಕ್ರಮದಲ್ಲಿ ಬಣಜಿಗ ಸಮಾಜದ ಅಧ್ಯಕ್ಷ ಸಿದ್ದಲಿಂಗ ಸುಬೇದಾರ,ಕಾಂಗ್ರೇಸ ಮುಖಂಡ ಮಲ್ಲಿಕಾರ್ಜುನ ಅಚಲೇರಿ,ಡಾ.ಪ್ರಮೋದ ಮಹಾಜನ, ಶಿವಪ್ಪ ಜಂಗಮಶೆಟ್ಟಿ, ಬಸವರಾಜ ಜಾನಾ, ಮಲ್ಲಿಕಾರ್ಜುನ ಜೋಗೋರ, ಪ್ರಶಾಂತ ನಾಶಿ, ಸೋಮಶೇಖರ ಬಂದೆ, ವಿಶ್ವನಾಥ ಕೊರಳ್ಳಿ, ಈರಪ್ಪ ತೆಲ್ಲೂರ, ಆಕಾಶ ಗಂದಗೆ, ಶರಣು ಶ್ರೀಗಿರಿ, ಗೊಲ್ಲಾಳ ಉಪ್ಪಿನ,ರತನ ಒಣಕುದರಿ ಸೇರಿದಂತೆ ತಹಸೀಲ್ದಾರ್ ಕಚೇರಿಯ ಸಮಸ್ತ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

