ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರ ಅಧ್ಯಕ್ಷತೆಯ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನೂತನವಾಗಿ ಜಾರಿಗೆ ತರಲಾದ ಜೆಎಸ್ಎಸ್ ಲಕ್ಷ್ಮಿಪುತ್ರಿ ಸುರಕ್ಷಾ ಯೋಜನೆಗೆ ಸಿದ್ಧಸಿರಿ ಬಹುರಾಜ್ಯ ಬಹುಉದ್ದೇಶ ಸಹಕಾರಿ ಸೊಸೈಟಿ ನಿಯಮಿತ ನಿರ್ದೇಶಕರಾದ ಶೈಲಜಾ ಬಸನಗೌಡ ಪಾಟೀಲ ಯತ್ನಾಳ ಹಾಗೂ ಅಬೋಲಿ ರಾಮನಗೌಡ ಪಾಟೀಲ ಯತ್ನಾಳ ಅವರು ಗುರುವಾರ ಚಾಲನೆ ನೀಡಿದರು.
ಅತ್ಯಾಧುನಿಕ ತಂತ್ರಜ್ಞಾನ, ತಜ್ಞ ವೈದ್ಯರುಗಳೊಂದಿಗೆ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಚಿಕಿತ್ಸೆ ಒದಗಿಸಿ, ಅತ್ಯುತ್ತಮ ಆರೈಕೆಗೆ ಹೆಸರುವಾಸಿಯಾದ, ನಮ್ಮ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ, ಸುರಕ್ಷತೆ ಹೆರಿಗೆ ನಮ್ಮ ಬದ್ದತೆ ಎಂಬ ಸಾಮಾಜಿಕ ಕಾಳಜಿ ಯೊಂದಿಗೆ ಇದೀಗ ಜಾರಿಗೆ ತಂದಿರುವ ಜೆಎಸ್ಎಸ್ ಲಕ್ಷ್ಮಿಪುತ್ರಿ ಸುರಕ್ಷಾ ಯೋಜನೆಯಡಿ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿದರೆ ತಾಯಿಗೆ ಉಚಿತ ಆರೈಕೆ ಮಾಡಲಾಗುತ್ತದೆ. ತಾಯಿ ಮತ್ತು ಮಗುವಿನ ಆರೋಗ್ಯ ರಕ್ಷಣೆಗೆ ಇಂತಹ ಯೋಜನೆಗಳು ಸಹಕಾರಿ ಆಗಲಿವೆ.
ಈ ಸಂದರ್ಭದಲ್ಲಿ ಆಸ್ಪತ್ರೆಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರವಿ ಆರ್.ಬಿ (ನಾಯ್ಕ), ವೈದ್ಯರುಗಳಾದ ಡಾ.ವೀಣಾ ದಿವಟೆರ, ಡಾ.ಸಂಗಮೇಶ ಮಠಪತಿ, ಡಾ.ಬಲವಂತರಾಯ ಮಸಳಿ, ಡಾ.ಸುನೀಲ ಉಕುಮನಾಳ ಸೇರಿದಂತೆ ಆಸ್ಪತ್ರೆ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

