Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮುಂಬರುವ ಹಿಂದೂಗಳ ಪವಿತ್ರ ವಿಜಯ ದಶಮಿ, ದೀಪಾವಳಿ ಮತ್ತಿತರೆ ಹಬ್ಬಗಳ ಪಾವಿತ್ರ್ಯತೆಯನ್ನು ಕಾಪಾಡುವ ಮಹತ್ತರ ಉದ್ದೇಶದಿಂದ ಹಿಂದೂ ದೇವರನ್ನು ಆರಾಧಿಸುವ ಹಿಂದೂಗಳ ಹತ್ತಿರವೇ ಹೂ, ಹಣ್ಣು, ಕಾಯಿ, ಕರ್ಪೂರ, ಕುಂಕುಮ ಮತ್ತಿತರೆ ಪೂಜಾ ಸಾಮಾಗ್ರಿಗಳನ್ನು ಖರೀದಿಸಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಕರೆ ನೀಡಿದ್ದಾರೆ.ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹಿಂದೂ ವ್ಯಾಪಾರಿಗಳು ಕೂಡ ಹಿಂದೂಗಳ ಪ್ರತಿಯೊಂದು ಹಬ್ಬಗಳನ್ನು ಮಡಿವಂತಿಕೆ, ಭಕ್ತಿಯಿಂದ ಪೂಜೆ ಸಲ್ಲಿಸಿ, ನಮ್ಮ ದೇವರುಗಳನ್ನು ಆರಾಧಿಸುತ್ತಾರೆ. ಈ ರೀತಿ ಹಣೆಗೆ ಕುಂಕುಮ ಹಚ್ಚಿಕೊಂಡು ವ್ಯಾಪಾರ ಮಾಡುವ ಹಿಂದೂಗಳ ಹತ್ತಿರವೇ ಪೂಜಾ ಸಾಮಾಗ್ರಿಗಳನ್ನು ಖರೀದಿಸುವುದರಿಂದ, ನಮ್ಮ ಹಬ್ಬಗಳ ಪಾವಿತ್ರ್ಯತೆ ಕಾಪಾಡಿಕೊಂಡು, ಮಡಿವಂತಿಕೆಯಿಂದ, ಧರ್ಮಾನುಸಾರವಾಗಿ ನಡೆದುಕೊಳ್ಳುವ ಜೊತೆಗೆ ಭಗವಂತನ ಕೃಪೆಗೆ ಪಾತ್ರರಾಗಲು ನೆರವಾಗುತ್ತದೆ.ಪವಿತ್ರ ಹಿಂದೂ ಧರ್ಮದ ಬಗ್ಗೆ ಗೌರವವಿಲ್ಲದ, ಹಿಂದೂ ದೇವರನ್ನು ನಂಬದ, ಹಿಂದೂಗಳನ್ನು ವಿರೋಧಿಸುವರು ಅಲ್ಲಿಯೇ ತಮ್ಮ ಬುತ್ತಿಯಲ್ಲಿ ಮಾಂಸಾಹಾರ ತಂದು ತಿಂದು ಅಥವಾ ಮನೆಯಲ್ಲಿ ಮಾಂಸಾಹಾರ ತಿಂದು ಬಂದು,…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಇಂದು ಪಟ್ಟಣಕ್ಕೆ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು.ಪಟ್ಟಣದ ಅಂಬೇಡ್ಕರ್ ವೃತ್ತಕ್ಕೆ ಬುಧವಾರ ಸಾಯಂಕಾಲ ಆಗಮಿಸಿದ ಕನ್ನಡ ಜ್ಯೋತಿರಥಯಾತ್ರೆಗೆ ತಾಲ್ಲೂಕು ಆಡಳಿತ, ಪಟ್ಟಣ ಹಾಗೂ ತಾಲ್ಲೂಕು ಪಂಚಾಯಿತಿ, ಕಸಾಪ, ಕರವೇ, ಜಯಕರ್ನಾಟಕ, ದಸಂಸ, ಶಿಕ್ಷಕರ ಸಂಘ, ಶರಣ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸಾಂಪ್ರದಾಯಿಕವಾಗಿ ಸ್ವಾಗತಿಸಿ ಭುವನೇಶ್ವರಿ ಪ್ರತಿಮೆಗೆ ಪೂಜೆ ಸಲ್ಲಿಸಿ, ಆರತಿ ಎತ್ತಿ ಮಾಲಾರ್ಪಣೆ ಮಾಡಲಾಯಿತು.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಸಿಂಪೀರ್ ವಾಲಿಕಾರ ಮಾತನಾಡಿ, ಕನ್ನಡ ನೆಲ, ಜಲ, ಭಾಷೆಯ ಜಾಗೃತಿಗಾಗಿ ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಜನರಲ್ಲಿ ಸಾಹಿತ್ಯಕ ಅಭಿಮಾನವನ್ನು ಮೂಡಿಸುವ ಅಂಗವಾಗಿ ರಾಜ್ಯಾದ್ಯಂತ ಕನ್ನಡ ಜ್ಯೋತಿ ರಥಯಾತ್ರೆ ಸಂಚರಿಸುತ್ತಿದೆ ಎಂದರು.ತಹಶೀಲ್ದಾರ ಪ್ರಕಾಶ ಸಿಂದಗಿ, ವಿಜಯಪುರ ಅನುಗ್ರಹ ಆಸ್ಪತ್ರೆಯ ನೇತ್ರ ತಜ್ಞ ಪ್ರಭುಗೌಡ ಬಿ.ಎಲ್ (ಚಬನೂರ), ಕಸಾಪ ತಾಲ್ಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ, ಸಿಂದಗಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಕನ್ನಡ ನಾಡು, ನುಡಿ, ಭಾಷೆ, ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.ಬುಧವಾರ ಪಟ್ಟಣದ ಹಂಜಗಿ ಕ್ರಾಸ್ ಹತ್ತಿರ ಹೊರ್ತಿಯಿಂದ ಆಗಮಿಸಿದ ಕನ್ನಡ ರಥಕ್ಕೆ ತಾಲೂಕಾ ಆಡಳಿತ ಮತ್ತು ಸಮಸ್ತ ಕನ್ನಡ ಪರ ಸಂಘಟನೆ ವತಿಯಿಂದ ಸ್ವಾಗತಿಸಿ ಅವರು ಮಾತನಾಡಿದರು.ಆಡಳಿತದಲ್ಲಿ ಕನ್ನಡ ಹೆಚ್ಚು ಬಳಕೆ ಮಾಡಿ ಕನ್ನಡದ ಬೆಳವಣೆಗೆ ಮಾಡಬೇಕಾಗಿದೆ. ಬಳಕೆಯಲ್ಲಿ ಇದ್ದದ್ದು ಹೆಚ್ಚು ಉಳಿಯುತ್ತದೆ ಎಂದರು.ವಿಜಯಪುರ ಜಿಲ್ಲಾ ಕಸಾಪ ಅಧ್ಯಕ್ಷ ಹಾಸೀಂಪೀರ ವಾಲಿಕಾರ ಮಾತನಾಡಿ, ಕರ್ನಾಟಕ ರಾಜ್ಯ ಜನಪದ, ಕಲೆ, ಸಾಹಿತ್ಯ ಮತ್ತು ಪ್ರಕೃತಿ ಸೌಂದರ್ಯದಲ್ಲಿ ಅಡಗಿದೆ. ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಲನ ನಡೆಯಲಿದ್ದು ಅದರ ಪ್ರಚಾರಾರ್ಥ ಮತ್ತು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ ೫೦ ವರ್ಷ ಆಗುತ್ತಿದ್ದು ಈ ದಿಶೆಯಲ್ಲಿ ರಥ ಸಾಗುತ್ತಿದ್ದು ಅದಕ್ಕೆ ಹೆಚ್ಚಿನ ಪ್ರಚಾರ ನೀಡಬೇಕಾಗಿದೆ ಎಂದರು.ಕ್ಷೇತ್ರಶಿಕ್ಷಣಾದಿಕಾರಿ ಟಿ.ಎಸ್. ಅಲಗೂರ, ಕಸಾಪ ಇಂಡಿ ಘಟಕದ ಅಧ್ಯಕ್ಷ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಪಂ ಹಾಗೂ ಜಿಲ್ಲಾ ಯೋಜನಾ ಪ್ರಾಧಿಕಾರ ಸ್ವಚ್ಚ ಭಾರತ ಯೋಜನೆಯಡಿಯಲ್ಲಿ ಬಯಲು ಮುಕ್ತ ಶೌಚಾಲಯ ನಿರ್ಮಾಣಕ್ಕೆ ಸಾರ್ವಜನಿಕರಿಗೆ ಹಾಗೂ ಸರಿಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಶೌಚಾಲಯಗಳನ್ನು ಕಟ್ಟಿಸಿ ಬಯಲು ಶೌಚಾಲಯ ಮುಕ್ತ ಸಮಾಜ ನಿರ್ಮಾಣಕ್ಕೆ ಹಲವಾರು ಯೋಜನೆಗಳನ್ನು ರೂಪಿಸುತ್ತದೆ ಅದನ್ನು ಜಾಗೃತಿ ಮೂಡಿಸುವ ಕೊರತೆಯಿಂದ ಅದು ಸಫಲತೆ ಕಾಣುತ್ತಿಲ್ಲ ಎಂದು ಲೋಕಾಯುಕ್ತ ಎಸ್‌ಪಿ ಟಿ.ಮಲ್ಲೇಶ ಏಚ್ಚರಿಕೆ ನೀಡಿದರು.ಪಟ್ಟಣದ ತಾಪಂ ಕಾರ್ಯಾಲಯದ ಸಭಾ ಭವನದಲ್ಲಿ ಲೋಕಾಯುಕ್ತರು ಸಾರ್ವಜನಿಕರ ಅಹವಾಲ ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಸರಕಾರ ಸಾರ್ವಜನಿಕರಿಗಾಗಿ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ ಅದು ಪಾರದರ್ಶಕ ಹಾಗೂ ಸಮಪರ್ಕವಾಗಿ ಭ್ರಷ್ಠಾಚಾರ ರಹಿತ ಸೌಲಭ್ಯಗಳು ಮುಟ್ಟಿದೆ ಅಥವಾ ಇಲ್ಲವೋ ಎಂಬದನ್ನು ನಿಗಾ ವಹಿಸಲು ಲೋಕಾಯುಕ್ತ ಇಲಾಖೆಗೆ ಅಧಿಕಾರವಿದೆ ಕಾರಣ ಸೌಲಭ್ಯಗಳು ಸಮರ್ಪಕವಾಗಿ ಮುಟ್ಟಿಸುವಲ್ಲಿ ಲೋಪವಾದರೆ ಕರ್ತವ್ಯ ನಿರ್ಲಕ್ಷ್ಯ ಕಾಯ್ದೆಯಡಿ ಪ್ರಕರಣ ದಾಖಲಾಗುತ್ತದೆ. ಕಾರಣ ಶಾಲೆಗಳಲ್ಲಿ ಮಕ್ಕಳಿಗೆ ಬಿಇಓ, ಶಿಶು ಅಭಿವೃದ್ದಿ ಇಲಾಖೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮದ ಅರಿವು ಮೂಡಬೇಕು, ಅಲ್ಲದೆ ವಯಕ್ತಿಕ ಶೌಚಾಲಯ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಜಿಲ್ಲೆಯ ಇಂಡಿ, ಚಡಚಣ, ಸಿಂದಗಿ, ವಿಜಯಪುರ(ಗ್ರಾ), ವಿಜಯಪುರ(ನ), ಬಸವನ ಬಾಗೇವಾಡಿ ಹಾಗೂ ಮುದ್ದೇಬಿಹಾಳ ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿನ ವಿವಿಧ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ ವ್ಯಾಪ್ತಿಯಲ್ಲಿನ ಖಾಲಿ ಇರುವ ಅಂಗನವಾಡಿ ಕಾಯಕರ್ತೆ ಹಾಗೂ ಸಹಾಯಕಿಯರ ಗೌರವಧನ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.ಖಾಲಿಯಿರುವ ೩೧೩ ಅಂಗನವಾಡಿ ಕಾರ್ಯಕರ್ತೆ ಹಾಗೂ ೮೫೭ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ೦೯-೧೧-೨೦೨೪ ಕೊನೆಯ ದಿನವಾಗಿದ್ದು, ಅಂಗನವಾಡಿ ಕಾರ್ಯಕತೆಯರ ಹುದ್ದೆಗೆ ಕನಿಷ್ಠ ಪಿಯುಸಿ ಹಾಗೂ ಸಹಾಯಕಿಯರ ಹುದ್ದೆಗೆ ಕನಿಷ್ಠ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಯನ್ನು ಹೊಂದಿರಬೇಕು. ಅರ್ಜಿಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವೆಬ್‌ಸೈಟ್ https://karnemakaone.kar.nic.in/abcd/ಮೂಲಕ ಸಲ್ಲಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಶಿಶು ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯ ಪ್ರಕಟಣೆ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಬುಧವಾರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳ ಪರಿಶೀಲನೆ ಮಾಡಿದರು.ಈ ವೇಳೆ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಶಿವಾನಂದ ಮಾಸ್ತಿಹೊಳಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಈರಣ್ಣ ಆಶಾಪೂರ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಜಿ.ಎನ್. ಮಲಜಿ, ಜಿಲ್ಲಾ ಆಸ್ಪತ್ರೆಯ ಸಹಾಯಕ ಆಡಳಿತ ಅಧಿಕಾರಿ ಸಿಂದಗಿಕರ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದಿಂದ ಕಾಯಕ ಸ್ಪೂರ್ತಿ(ಮಹಿಳೆಯರಿಗೆ) ಯೋಜನೆ, ಪಾದುಕೆ ಕುಟೀರ ಯೋಜನೆ, ಮಾರುಕಟ್ಟೆ ಸಹಾಯ ಯೋಜನೆ, ಚರ್ಮಕಾರರ ಕಿರು ಆರ್ಥಿಕ ನೇರ ಸಾಲ ಯೋಜನೆ, ನೇರ/ಸಂಚಾರಿ ಮಾರಾಟ ಯೋಜನೆ ಸೌಲಭ್ಯಗಳನ್ನು ಪಡೆಯಲು ಆನ್‌ಲೈನ್ ಅರ್ಜಿ ಅಹ್ವಾನಿಸಲಾಗಿದೆ.ಸೇವಾ ಸಿಂಧೂ, ಗ್ರಾಮ ಒನ್, ಕರ್ನಾಟಕ ಒನ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ೩೦-೧೦-೨೦೨೪ ಕೊನೆಯ ದಿನವಾಗಿದ್ದು, ಅರ್ಜಿ ಸಲ್ಲಿಸಿದವರು ಆನ್‌ಲೈನ್ ಅರ್ಜಿಯ ರಶೀದಿಯೊಂದಿಗೆ ಸೂಕ್ತ ದಾಖಲಾತಿಗಳನ್ನು ಲಿಡ್ಕರ್ ಕಚೇರಿಗೆ ಸಲ್ಲಿಸಬಹುದು ಎಂದು ವಿಜಯಪುರದ ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮಮದ ಜಿಲ್ಲಾ ಸಂಯೋಜಕರ ಪ್ರಕಟಣೆ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದಲ್ಲಿ ಪದವಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗಾಗಿ ಇದೇ ತಿಂಗಳ ಅಕ್ಟೋಬರ್ ೨೩ರಂದು ಬೆಳಿಗ್ಗೆ ೧೧ ಗಂಟೆಗೆ “ವಿಕಸಿತ ಭಾರತ- ಯುವಜನರ ಪಾತ್ರ” ಕುರಿತ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ.ಪದವಿ ಕಾಲೇಜುಗಳಲ್ಲಿ ಬಿ.ಎ., ಬಿ.ಕಾಂ, ಬಿಎಸ್‌ಸಿ, ಬಿಸಿಎ, ಬಿಬಿಎಂ ಮುಂತಾದ ಕೋರ್ಸ್ಗಳಲ್ಲಿ ಒಂದರಿಂದ ಆರನೆಯ ಸೆಮಿಸ್ಟರ್ ವರೆಗೆ ಓದುತ್ತಿರುವ ಅಥವಾ ಈ ವರ್ಷ ೬ನೆಯ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗಿರುವ ವಿದ್ಯಾರ್ಥಿನಿಯರು ಈ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಬಹುದು.ಈ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ- ರೂ.೧೫೦೦, ದ್ವಿತೀಯ ಬಹುಮಾನ- ರೂ.೧೦೦೦ ಮತ್ತು ತೃತೀಯ ಬಹುಮಾನ- ರೂ.೫೦೦ ರೂಪಾಯಿಗಳ ನಗದು ನೀಡಲಾಗುವುದು. ಅಲ್ಲದೇ ಐದು ಸಮಾಧಾನಕರ ಬಹುಮಾನಗಳನ್ನು ಕೂಡಾ ನೀಡಲಾಗುತ್ತದೆ.ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ವಿದ್ಯಾರ್ಥಿನಿಯರು ಈ ಲಿಂಕ್ https://forms.gle/NsUC12WZ7MpbNQvy7 ಬಳಸಿ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಸಂದೀಪ್ ಮೊಬೈಲ್ ಸಂಖ್ಯೆ ೯೮೪೪೬೮೧೩೯೮ ಸಂಪರ್ಕಿಸಬಹುದು. ಇಲ್ಲವೇ ನೇರವಾಗಿ ಅಕ್ಟೋಬರ್ ೨೩ರಂದು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮುಂದಿನ ಪೀಳಿಗೆಗೆ ದೈಹಿಕ ಆರೋಗ್ಯದ ಕುರಿತು ಅರಿವು ಮೂಡಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಆಡಳಿತಾಧಿಕಾರಿ ಡಾ. ವಿ. ಎಸ್. ಬಗಲಿ ಹೇಳಿದ್ದಾರೆ.ಬುಧವಾರ ಬಿ. ಎಲ್. ಡಿ. ಇ ಸಂಸ್ಥೆಯ ಜೆ.ಎಸ್.ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ವಿಜಯಪುರ ನಗರ ವಲಯ ಬಿ.ಎಡ್ ಕಾಲೇಜುಗಳ ಅಂತರ್ ಕಾಲೇಜು ವ್ಹಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.ಬಿ.ಎಡ್ ವಿದ್ಯಾರ್ಥಿಗಳು ಶಿಕ್ಷಕ ವೃತ್ತಿಯ ಕಡೆಗೆ ಗಮನ ಹರಿಸುವುದರ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ದೈಹಿಕವಾಗಿ ಸದೃಢರಾಗಲು ಇಂಥ ಪಂದ್ಯಾವಳಿಗಳಲ್ಲಿ ಭಾಗವಹಿಸಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಇದು ಕಡಿಮೆಯಾಗುತ್ತಿದೆ ಎಂದು ಹೇಳಿದರು.ಬಿ. ಎಲ್. ಡಿ. ಇ ಸಂಸ್ಥೆಯ ನಿರ್ದೇಶಕ ಮತ್ತು ದೈಹಿಕ ಶಿಕ್ಷಣ ಆಡಳಿತಾಧಿಕಾರಿ ಡಾ. ಎಸ್. ಎಸ್. ಕೋರಿ ಮಾತನಾಡಿ, ಇಂದಿನ ಯಾಂತ್ರಿಕ ಯುಗದಲ್ಲಿ ಜನರು ದೈಹಿಕ ಚಟುವಟಿಕೆಗಳ ಅಭಾವವನ್ನು ಎದುರಿಸುತ್ತಿದ್ದಾರೆ. ಕ್ರೀಡೆಗಳಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯವಾಗಿದೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಕ್ರೀಡಾ ಮನೋಭಾವ ಮತ್ತು ಉತ್ತಮ ವ್ಯಕ್ತಿತ್ವ…

Read More

– ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿ – ಗದಗ್ ಉದಯರಶ್ಮಿ ದಿನಪತ್ರಿಕೆ ಯಶಸ್ ಮೂರು ವರ್ಷದ ಪುಟ್ಟ ಮಗುವಾಗಿದ್ದಾಗ ಆತನನ್ನು ಹಿಡಿಯುವುದು ಆತನ ತಾಯಿ ತಂದೆಯರಿಗೆ ಅತಿ ದೊಡ್ಡ ಸವಾಲಾಗಿತ್ತು. ಸಾಮಾನ್ಯವಾಗಿ ಚುರುಕಾಗಿರುವ ಮಕ್ಕಳಿಗೆ ಹೋಲಿಸಿದರೆ ಈತನದ್ದು ತುಸು ಅತಿರೇಕವೇ ಎನ್ನಿಸುವಂತಹ ವರ್ತನೆ. ಮನೆಗೆ ಯಾರಾದರೂ ಅತಿಥಿಗಳು ಬಂದರೆ ತುಸು ಹೆಚ್ಚೇ ಉದ್ವೇಗಕ್ಕೆ ಒಳಗಾಗುತ್ತಿದ್ದ ಆತ ಮನೆಯ ಎಲ್ಲ ಸಾಮಾನುಗಳನ್ನು ಕಿತ್ತು ಹಾಕುತ್ತಿದ್ದ. ಒಂದೇ ಒಂದು ಕ್ಷಣವೂ ಆತನನ್ನು ಸುಮ್ಮನಿರಿಸಲು ಸಾಧ್ಯವಾಗುತ್ತಿರಲಿಲ್ಲ ಆತನ ಪಾಲಕರಿಗೆ.ಮೂರು ವರ್ಷದವನಾದ ಯಶಸ್ ನನ್ನು ಪ್ಲೇ ಹೋಮ್ ಗೆ ಕಳಿಸೋಣವೆಂದು ಯೋಚಿಸಿದ ಪಾಲಕರು ಆತನನ್ನು ಪ್ಲೇ ಹೋಂಗೆ ದಾಖಲು ಮಾಡಿದರೆ ಅಲ್ಲಿಯೂ ಕೂಡ ಆತನನ್ನು ಒಂದೆಡೆ ಕೂಡಿಸಲು ಸಾಧ್ಯವಾಗದೆ ಕೈ ಚೆಲ್ಲುತ್ತಿದ್ದರು ಶಿಕ್ಷಕರು. ಉಳಿದ ಮಕ್ಕಳಿಗೆ ತೊಂದರೆ ಮಾಡದಿದ್ದರೂ ಆಟದ ಸಾಮಾನುಗಳನ್ನು ಕಿತ್ತುವ, ಕೆಡವುವ, ಸರಿದಾಡಿಸುವ ಆಟದ ಜಾರು ಬಂಡೆಯ ನಟ್ಟು ಬೋಲ್ಟ್ ಗಳನ್ನು ಬಿಚ್ಚುವ ಆತನ ಕೃತ್ಯ ಗಳಿಂದ ಆತನನ್ನು ಹಿಡಿಯುವುದರಲ್ಲಿ ಅಲ್ಲಿನ ಸಿಬ್ಬಂದಿಗೆ ಸಾಕಾಗಿ…

Read More