ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದಲ್ಲಿ ಪದವಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗಾಗಿ ಇದೇ ತಿಂಗಳ ಅಕ್ಟೋಬರ್ ೨೩ರಂದು ಬೆಳಿಗ್ಗೆ ೧೧ ಗಂಟೆಗೆ “ವಿಕಸಿತ ಭಾರತ- ಯುವಜನರ ಪಾತ್ರ” ಕುರಿತ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ.
ಪದವಿ ಕಾಲೇಜುಗಳಲ್ಲಿ ಬಿ.ಎ., ಬಿ.ಕಾಂ, ಬಿಎಸ್‌ಸಿ, ಬಿಸಿಎ, ಬಿಬಿಎಂ ಮುಂತಾದ ಕೋರ್ಸ್ಗಳಲ್ಲಿ ಒಂದರಿಂದ ಆರನೆಯ ಸೆಮಿಸ್ಟರ್ ವರೆಗೆ ಓದುತ್ತಿರುವ ಅಥವಾ ಈ ವರ್ಷ ೬ನೆಯ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗಿರುವ ವಿದ್ಯಾರ್ಥಿನಿಯರು ಈ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಈ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ- ರೂ.೧೫೦೦, ದ್ವಿತೀಯ ಬಹುಮಾನ- ರೂ.೧೦೦೦ ಮತ್ತು ತೃತೀಯ ಬಹುಮಾನ- ರೂ.೫೦೦ ರೂಪಾಯಿಗಳ ನಗದು ನೀಡಲಾಗುವುದು. ಅಲ್ಲದೇ ಐದು ಸಮಾಧಾನಕರ ಬಹುಮಾನಗಳನ್ನು ಕೂಡಾ ನೀಡಲಾಗುತ್ತದೆ.
ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ವಿದ್ಯಾರ್ಥಿನಿಯರು ಈ ಲಿಂಕ್ https://forms.gle/NsUC12WZ7MpbNQvy7 ಬಳಸಿ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಸಂದೀಪ್ ಮೊಬೈಲ್ ಸಂಖ್ಯೆ ೯೮೪೪೬೮೧೩೯೮ ಸಂಪರ್ಕಿಸಬಹುದು. ಇಲ್ಲವೇ ನೇರವಾಗಿ ಅಕ್ಟೋಬರ್ ೨೩ರಂದು ೧೦.೪೫ರೊಳಗಾಗಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದಲ್ಲಿ ನೇರವಾಗಿ ಬಂದು ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ವಿವಿ ಪ್ರಕಟಣೆ ತಿಳಿಸಿದೆ.
