Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹರ್ಷಿ ವಾಲ್ಮೀಕಿ ಅವರು ಪ್ರತಿಪಾದಿಸಿದ ಜೀವನ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಮಹರ್ಷಿ ವಾಲ್ಮೀಕಿ ಪೀಠದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಾಲ್ಮೀಕಿ ಅವರ ಜೀವನಾದರ್ಶಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.ಇದೇ ಸಂದರ್ಭದಲ್ಲಿ ಕುಲಪತಿಗಳು ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ್, ಕಾರ್ಯಕ್ರಮದ ಸಂಯೋಜಕ ಸಂದೀಪ್, ಡಾ.ಹನುಮಂತಯ್ಯ ಪೂಜಾರ, ಡಾ.ನಟರಾಜ ದುರ್ಗಣ್ಣನವರ, ಡಾ.ದೀಪಕ್ ಶಿಂದೆ, ಡಾ.ಪ್ರಕಾಶ ಸಣ್ಣಕ್ಕನವರ, ಡಾ.ರಮೇಶ ಸೋನಕಾಂಬಳೆ, ಡಾ.ಗುಲಾಬ್ ರಾಠೋಡ, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಬಸವೇಶ್ವರ ವೃತ್ತದಿಂದ ಇಂದಿರಾ ವೃತ್ತದವರೆಗೆ ಬೀದಿ ಬದಿ ವ್ಯಾಪರಸ್ಥರು ತಮಗೆ ನಿಗದಿಪಡಿಸಿದ ಜಾಗೆಯಲ್ಲಿ ಮಾತ್ರ ವ್ಯಾಪಾರ ನಡೆಸಬೇಕು. ಅ೧೭ ರಿಂದ ತಳ್ಳುಗಾಡಿಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿರ್ಣಯ ಮೀರಿ ನಡೆದವರ ವಿರುದ್ಧ ಕ್ರಮ ಕೈಗೊಳ್ಳಲಾಗುವದು ಎಂದು ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ಹೇಳಿದರು.ಪಟ್ಟಣದ ಪುರಸಭೆ ಸಬಾಭವನದಲ್ಲಿ ಟ್ರಾಫಿಕ್ ಸಮಸ್ಯೆ ಮುಕ್ತಿಗಾಗಿ ಪುರಸಭೆ ವತಿಯಿಂದ ಆಯೋಜಿಸಲಾಗಿದ್ದ ಬೀದಿ ಬದಿ ವ್ಯಾಪಾರಸ್ಥರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಬಸವೇಶ್ವರ ವೃತ್ತದಿಂದ ಸಿದ್ರಾಮೇಶ್ವರ ವೃತ್ತದವರೆಗೆ ಸಾಕಷ್ಟು ಟ್ರಾಫಿಕ್ ಸಮಸ್ಯೆಯಾಗುತ್ತಿರುವದರಿಂದ ಎಲ್ಲ ವ್ಯಾಪಾರಿಗಳಿಗೆ ಒಂದೆಡೆ ಸ್ಥಳ ನಿಗದಿ ಮಾಡಲಾಗಿತ್ತು. ವ್ಯಾಪಾರಸ್ಥರು ದೀಪಾವಳಿಯವರೆಗೆ ಅವಕಾಶ ಕೇಳಿದ್ದರಿಂದ ಗಾಡಿಗಳಿಲ್ಲದೇ ಫುಟ್‌ಪಾತ್ ಮೇಲೆ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದೇವೆ. ತಮಗೆ ನಿಗದಿಪಡಿಸಿದ ಜಾಗೆಗಿಂತ ಮುಂದೆ ಬಂದರೆ ದಂಡ ವಿಧಿಸಲಾಗುವದು. ವಾಹನ ಸವಾರರು ತಮ್ಮ ವಾಹನಗಳನ್ನು ನಿಲ್ಲಿಸಲು ಹಳೆಯ ನ್ಯಾಯಾಲಯದ ಬಳಿ ಮತ್ತು ಹಳೆಯ ಪೊಲೀಸ್ ಕ್ವಾರ್ಟರ್ಸ ಜಾಗೆಯನ್ನು ನಿಗದಿಪಡಿಸಿದ್ದೇವೆ. ಅಲ್ಲಿಯೇ ಪಾರ್ಕ ಮಾಡಬೇಕು. ದೀಪಾವಳಿಯ ಬಳಿಕ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ಒಟ್ಟು ೨೦೮೫ ಮತಗಟ್ಟೆಗಳಿದ್ದು, ಅವುಗಳಲ್ಲಿ ಒಂದೇ ಆವರಣದ ಒಂದೇ ಕಟ್ಟಡದಲ್ಲಿರುವ ಮತಗಟ್ಟೆಯ ಮತದಾರರನ್ನು ಪಕ್ಕದಲ್ಲಿರುವ ಬೇರೆ ಕೋಣೆಯಲ್ಲಿರುವ ಮತಗಟ್ಟೆಗೆ ವಿಲೀನಗೊಳಿಸಲು ೧ ಮತಗಟ್ಟೆಯನ್ನು ಪಕ್ಕದ ಕಟ್ಟಡಕ್ಕೆ ಅಂದರೆ ಅದೇ ಆವರಣದ ಬೇರೆ ಕೊಣೆಯಲ್ಲಿರುವ ಮತಗಟ್ಟೆಗೆ ವಿಲೀನಗೊಳಿಸಲು ಹಾಗೂ ೮ ಮತಗಟ್ಟೆಗಳಲ್ಲಿ ೧,೫೦೦ಕ್ಕಿಂತ ಹೆಚ್ಚಿಗೆ ಮತದಾರರಿರುವ ಮತಗಟ್ಟೆಗಳಲ್ಲಿ ಹೊಸದಾಗಿ ಮತಗಟ್ಟೆ ಸ್ಥಾಪಿಸಲು ಭಾರತ ಚುನಾವಣೆ ಆಯೋಗಕ್ಕೆ ಪ್ರಸ್ತಾನನೆ ಸಲ್ಲಿಸಲಾಗಿತ್ತು. ಅದರಂತೆ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅರ್ಹತಾ ದಿನಾಂಕ ೦೧-೦೧-೨೦೨೫ಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು ೨,೦೯೨ ಮತಗಟ್ಟೆಗಳು ಅಸ್ತಿತ್ವದಲ್ಲಿರುತ್ತವೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ತಿಳಿಸಿದ್ದಾರೆ.

Read More

ವಿಜಯಪುರ ಜಿಲ್ಲಾಡಳಿತದಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ | ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಮಾಯಣ ಮಹಾಕಾವ್ಯ ರಚಿಸಿದ ವಾಲ್ಮೀಕಿಯವರ ಜೀವನ ಸಂದೇಶಗಳ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಧಾರವಾಡದ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಗರದ ಶ್ರೀ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜರುಗಿದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳಿಗೆ ಮಹರ್ಷಿ ವಾಲ್ಮೀಕಿಯವರ ಜೀವನ ಚರಿತ್ರೆಯನ್ನು ತಿಳಿಸಿ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಕರು ಪಾಲಕರು ಮುತುವರ್ಜಿವಹಿಸಬೇಕು ಎಂದು ಹೇಳಿದರು.ಸಾಹಿತಿ ಅಶೋಕ ಹಂಚಲಿ ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಪ್ರಭಾರ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಬಿ.ಎಸ್.ರಾಠೋಡ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪುಂಡಲೀಕ ಮಾನವರ್, ಮಹಾನಗರ ಪಾಲಿಕೆಯ ಉಪ…

Read More

ಹಿಂದೂ ಮುಸ್ಲಿಂ‌ ಭಾವೈಕ್ಯ ಬೆಸೆದ ಬಾಬಾನಗರ ಪಾನಿಸಾಹೇಬ್ ಉರುಸ್ ಉದಯರಶ್ಮಿ ದಿನಪತ್ರಿಕೆ – ರೇಖಾ ಪಿ.ಗದ್ಯಾಳತಿಕೋಟಾ: ಭೂಮಿ ಅದ್ಬುತ ಉಣ್ಣಾಕ, ಉಡಾಕ, ಕುಡಿಯಾಕ ಜೀವಿ ಹುಟ್ಟಿ ಬದುಕಬೇಕಾದದ್ದು ಎಲ್ಲವೂ ಭೂಮಿ ಮೇಲೆ ಇದೆ. ಅದ್ಬುತವಾದ ಭೂಮಿ ಮೇಲೆ ಎಲ್ಲರನ್ನು ಪ್ರೀತಿಸಿ ಸಂತೋಷದ ಬದುಕು ಕಟ್ಟಿಕೊಂಡು ಬದುಕುವುದೇ ಧರ್ಮ ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.ತಾಲ್ಲೂಕಿನ ಬಾಬಾನಗರ ಗ್ರಾಮದಲ್ಲಿ ಬುಧವಾರ ನಡೆದ ಹಜರತ್ ಬಾಬಾ ಪಾಣಿಸಾಹೇಬ ಉರುಸ್ ಹಾಗೂ ಸರ್ವಧರ್ಮ ಭಾವೈಕ್ಯತಾ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಚಿಗರಹಳ್ಳಿ ಮರುಳ ಶಂಕರದೇವರ ಗುರುಪೀಠದ ಶ್ರೀ ಸಿದ್ದ ಬಸವ ಕಬೀರ ಮಹಾಸ್ವಾಮೀಜಿ ಮಾತನಾಡಿ, ನಮ್ಮ ಭಾರತದಲ್ಲಿ ಭಿನ್ನ ಮಾಡುವ ಕಿಡಿಗೇಡಿಗಳಿಗೆ ಹಿಂದೂ ಮುಸ್ಲಿಂ ಐಕ್ಯತೆ ಭಾವದಿಂದ ಬದುಕುತ್ತಿರುವದನ್ನು ತೋರಿಸಬೇಕು. ವಿಷ ಬೀಜ ಬಿತ್ತುವದರಿಂದ ದೇಶಕ್ಕೆ ಆಪತ್ತು ಬರತ್ತದೆ. ಧರ್ಮಗಳು ಯಾವವು ಜಗಳ ಹಚ್ಚುವದಿಲ್ಲ. ನಾವು ಭಾರತೀಯರು ಅನ್ನೋ‌ಭಾವ ಇಟ್ಟಕೊಂಡು ಭಾತೃತ್ವದಿಂದ ಬಂದಿವಿ. ಎಲ್ಲ ಮುಸ್ಲಿಂರು ನಮ್ಮ ಅಣ್ಣ ತಮ್ಮವರು, ಯಾರೇ ಬಂದರೂ ಒಂದಾಗಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹರ್ಷಿ ವಾಲ್ಮಿಕಿ ಜಯಂತಿಯನ್ನು ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಆಚರಿಸಲಾಯಿತು.ಗುರುವಾರ ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಸಮಕುಲಾಧಿಪತಿ ಡಾ. ವೈ.ಎಂ.ಜಯರಾಜ ವಾಲ್ಮಿಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ .ಎಂ. ಹೊನ್ನುಟಗಿ ವೈದ್ಯರಾದ ಡಾ.ಆನಂದ ಅಂಬಲಿ, ಡಾ. ಎಸ್. ಎಸ್. ದೇವರಮನಿ ಡಾ.ತೇಜಸ್ವಿನಿ ವಲ್ಲಭ, ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ರಘುವೀರ ಕುಲಕರ್ಣಿ, ವಿವಿಯ ಬೋಧಕ ಮತ್ತು ಬೋಧಕರ ಹೊರತಾದ ಸಿಬ್ಬಂದಿ ಪಾಲ್ಗೊಂಡು ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಎಲ್ಲ ತರಹದ ಸಂಧಿ ನೋವುಗಳಾದ ಮೋಣಕಾಲು ನೊವು, ಸೋಂಟ ನೊವು ಕುತ್ತಿಗೆ ನೊವು, ಭುಜ ನೋವು, ಹಿಮ್ಮಡಿ ನೋವು ಮತ್ತು ಇನ್ನಿತರಹದ ಧೀರ್ಘಕಾಲಿನ ವಾತ ರೋಗಗಳಿಗೆ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎವಿಎಸ್ ಅಯುರ್ವೆದ ಮಹಾವಿದ್ಯಾಲಯದಲ್ಲಿ ಅಕ್ಟೋಬರ್ 21 ರಿಂದ 23ರ ವರೆಗೆ ನಡೆಯಲಿದೆ.ಆಸ್ಪತ್ರೆಯ ಕಾಯಚಿಕಿತ್ಸಾ ವಿಭಾಗದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಈ ಈ ಉಚಿತ ಶಿಬಿರದ ಪ್ರಯೋಜನವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ- 9513397413, 7483278348 ನ್ನು ಸಂಪರ್ಕಿಸಬಹುದಾಗಿದೆ.

Read More

ಕಲಕೇರಿಯ ಶ್ರೀ ಬಸವೇಶ್ವರ ಪ್ರೌಡಶಾಲೆಯಲ್ಲಿ ಸ್ನೇಹ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಗ್ರಾಮದ ಶ್ರೀ ಬಸವೇಶ್ವರ ಪ್ರೌಢಶಾಲೆಯಲ್ಲಿ ೨೦೧೪-೧೫ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿಧ್ಯಾರ್ಥಿ ಗೆಳೆಯರ ಬಳಗದಿಂದ ಸ್ನೇಹ ಸಮ್ಮಿಲನ ಮತ್ತು ಗುರು ವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮ ಉದ್ಘಾಟನೆ ಮಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೌಢಶಾಲೆಯ ಮುಖ್ಯಗುರು ಜೆ.ಬಿ.ಗುಮಶೆಟ್ಟಿ ಅವರು, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ವೈಚಾರಿಕತೆಯನ್ನು ಬೆಳೆಸಿಕೊಳ್ಳಬೇಕು ಹಾಗೂ ಗುರು ಹಿರಿಯರಿಗೆ ವಿಧೇಯರಾಗಿ ಜಗತ್ತಿಗೆ ಸಂಸ್ಕಾರ ಕಲಿಸಿಕೊಟ್ಟ ನಮ್ಮ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿ ಬೆಳೆದು ನಿಲ್ಲುವ ಸ್ವಾವಲಂಬಿ ಪ್ರಜೆಗಳಾಗಿ ಬೆಳೆಯಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳೆಲ್ಲ ಒಟ್ಟಾಗಿ ಸೇರಿ ಗುರುಗಳಿಗೆ ವಂದಿಸುವ ಗೌರವಿಸುವ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.ಪ್ರಾಥನಾಗೀತೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವು ಶಿಕ್ಷಕರಾದ ಎಸ್.ಆರ್.ಹರಿಜನ ಮತ್ತು ರಾಕೇಶ ಅವರ ಸುಂದರ ಹಾಡುಗಳಿಂದ ಎಲ್ಲರನ್ನು ಮನರಂಜಿಸಿದರು.ಶಿಕ್ಷಕರಾದ ಎಸ್.ಪಿ.ರಾಣಗಟ್ಟಿ ಅವರು ಶಿಕ್ಷಕ ಎಂಬ ಪದದ ಅರ್ಥವನ್ನು ತಿಳಿಸಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮದ್ಯ…

Read More

ವೈಚಾರಿಕ ಸಂತನ ಪುಣ್ಯ ಸ್ಮರಣೆಗೆ ಅಪಾರ ಭಕ್ತಗಣ | ಗೊರುಚಗೆ ಸಿದ್ದಲಿಂಗ ಶ್ರೀ ರಾಷ್ಟ್ರೀಯ ಪ್ರಶಸ್ತಿ ಪ್ರದಾನ | ಗ್ರಂಥಗಳು ಲೋಕಾರ್ಪಣೆ ಉದಯರಶ್ಮಿ ದಿನಪತ್ರಿಕೆ ಗದಗ: ಕರುನಾಡು ಕಂಡ ಅಪರೂಪದ ಸಂತ ಲಿಂ, ತೋಂಟದ ಸಿದ್ದಲಿಂಗ ಶ್ರೀಗಳು ವೈಚಾರಿಕತೆ ಭಾವದ ಮೇರು ಪರ್ವತಕರು.ಅವರ ಮೌಲ್ಯಾಧಾರಿತ ನೇರ ನಡೆ,ನುಡಿಗಳು ಜನಮಾನಸದ ಹೃದಯದಲ್ಲಿಂದು ನೆಲೆಗೊಂಡಿವೆ. ಬಸವತತ್ವಕ್ಕೆ ತಮ್ಮ ಬದುಕನ್ನು ಮೀಸಲಿರಿಸಿ ಸ್ವಾಮಿತ್ವ ಪದಕ್ಕೆ ಘನತೆ,ಗೌರವ ತಂದುಕೊಟ್ಟಿದ್ದಾರೆ.ಪವಿತ್ರ ಕಾವಿಲೋಕದ ಶ್ರೇಷ್ಠತೆ ಹೆಚ್ಚಿಸಿದ್ದಾರೆ.ಸಿದ್ದಲಿಂಗ ಶ್ರೀಗಳು ಸೂರ್ಯನಂತೆ ಪ್ರಕಾಶಿಸುವ ಮಹಾನ ದಾರ್ಶನಿಕರು ಎಂದು ನಾಡೋಜ ಸಾಹಿತಿ ಡಾ.ಗೊ.ರು.ಚನ್ನಬಸಪ್ಪ ಹೇಳಿದರು.ಗದಗ ನಗರದ ತೋಂಟದಾರ್ಯ ಮಠದ ಆವರಣದಲ್ಲಿ ಸಿದ್ದಲಿಂಗ ಪೂಜ್ಯರ ಹೆಸರಿನಲ್ಲಿರುವ ಶಿವಾನುಭವ ಮಂಟಪದಲ್ಲಿ ಸೋಮವಾರ ಜರುಗಿದ ಲಿಂ,ತೋಂಟದ ಡಾ.ಸಿದ್ದಲಿಂಗ ಮಹಾಸ್ವಾಮಿಗಳವರ 6 ನೇ ಪುಣ್ಯಸ್ಮರಣೋತ್ಸವ,ಮರಣವೇ ಮಹಾನವಮಿ ಆಚರಣೆ, ಪ್ರಶಸ್ತಿ ಪ್ರದಾನ, ಗ್ರಂಥಗಳ ಬಿಡುಗಡೆ ಸಮಾರಂಭದಲ್ಲಿ 5 ಲಕ್ಷ ರೂಪಾಯಿ ನಗದು ಹಾಗೂ ಫಲಕ ಒಳಗೊಂಡ “ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ” ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಪೂಜ್ಯ…

Read More