Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರ 200 ನೇ ವರ್ಷದ ಜಯಂತಿಯ ಅಂಗವಾಗಿ ಬುಧವಾರ ದೆಹಲಿಯ ಸಂಸತ್ ಸಂಕೀರ್ಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಲೋಕಸಭೆಯ ಸಭಾಪತಿ ಓಂ ಬಿರ್ಲಾ, ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ, ಶಾಸಕ ಬಸನಗೌಡ ಪಾಟೀಲ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರೊಂದಿಗೆ ಸೇರಿ ಕಿತ್ತೂರು ರಾಣಿ ಚೆನ್ನಮ್ಮಳ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು .ಈ ಸಂದರ್ಭದಲ್ಲಿ ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಹಾಗೂ ದೆಹಲಿ ಕರ್ನಾಟಕ ಸಂಘದ ಪ್ರಮುಖರು ಹಾಗೂ ಅಭಿಮಾನಿ ಸಮೂಹ ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಪಟ್ಟಣದ ಗ್ರಾಮ ದೇವತೆ ಶ್ರೀ ಶಾಂತೇಶ್ವರ ದೇವಸ್ಥಾನದ ಮತ್ತು ಹಿರೇಇಂಡಿ ದೇವಸ್ಥಾನದ ಲೆಕ್ಕ ಪತ್ರ ನೀಡಬೇಕೆಂದು ಆಗ್ರಹಿಸಿ ಸಾರ್ವಜನಿಕರು ದೇವಸ್ಥಾನ ಸಮಿತಿಯ ಅಧ್ಯಕ್ಷ ಕಾಸುಗೌಡ ಬಿರಾದಾರ ಇವರನ್ನು ಆಗ್ರಹಿಸಿದರು.ಶ್ರೀ ಶಾಂತೇಶ್ವರ ದೇವಸ್ಥಾನ ಮತ್ತು ಹಿರೇ ಇಂಡಿ ದೇವಸ್ಥಾನದಲ್ಲಿ ಜರುಗುವ ಮತ್ತು ಮಂಗಲ ಕಾರ್ಯಾಲಯದಲ್ಲಿ ಜರುಗುವ ಲಗ್ನ, ನಿಶ್ಚಿತಾರ್ಥ, ಶ್ರೀಮಂತ ಹಾಗೂ ಇನ್ನಿತರ ಕಾರ್ಯಕ್ರಮಗಳ ನವೆಂಬರ್ ೨೦೨೧ ರಿಂದ ಡಿಶೆಂಬರ್ ೨೦೨೩ ರ ವರೆಗೆ ಲೆಕ್ಕ ನೀಡಬೇಕು. ದೇವಸ್ಥಾನದಲ್ಲಿ ಇರುವ ಒಟ್ಟು ಬಂಗಾರ ಮತ್ತು ಬೆಳ್ಳಿ ಲೆಕ್ಕ ಕೊಡುವದು, ೨೦೨೨ ಮತ್ತು ೨೩ ರಲ್ಲಿ ಡಿಸೆಂಬರ್ ತಿಂಗಳಲ್ಲಿ ಜರುಗಿದ ಪ್ರವಚನ ಕಾರ್ಯಕ್ರಮದಲ್ಲಿ ಕೂಡಿರುವ ಭಕ್ತರು ಕೊಟ್ಟ ಬಂಗಾರ ಮತ್ತು ಹಣದ ವಿವಿರ ನೀಡುವದು,ರುದ್ರಾಭಿಷೇಕಕ್ಕೆ ಒಟ್ಟು ಸದಸ್ಯರ ಸಂಖ್ಯೆ ೫೯೪ ಇದ್ದು ಪ್ರತಿಯೊಬ್ಬರಿಗೆ ರೂ ೧೦೦೧ ರಂತೆ ಹಣ ಸಂಗ್ರಹಣೆ ಮಾಡಿದ ೫ ಲಕ್ಷ ೯೪ ಸಾವಿರ ರೂ ಹಣ ಮತ್ತು ಅರ್ಚಕರ ಕಡೆಯಿಂದ ಪಡೆಯುವ ಪ್ರತಿ ವರ್ಷ ರೂ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ವೀರರಾಣಿ ಕಿತ್ತೂರು ಚೆನ್ನಮ್ಮ ದೇಶ ರಕ್ಷಣೆಗೆ ಧರ್ಮ ರಕ್ಷಣೆಗೆ ಹೋರಾಡಿದ ವೀರ ತಾಯಿಯರ ಸಾಲಿನ ಮುಕುಟ ಮಣಿ ಎಂದು ನಾದ ಸರಕಾರಿ ಪ್ರೌಢಶಾಲೆಯ ಮುಖ್ಯ ಗುರು ಸಿ.ಎಂ.ಬಡಗರ ಹೇಳಿದರು.ಅವರು ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾ ಭವನದಲ್ಲಿ ನಡೆದ ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ೨೪೬ ನೇಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಥ್ಯಾಕರೆಯ ಹೂಂಕಾರ ಕಿತ್ತೂರಿನ ಸ್ವಾಭಿಮಾನ ಕೆರಳಿಸುತ್ತದೆ ಎಂದು ಚೆನ್ನಮ್ಮ ನವರು ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪ, ಮಹಾಮುಖಂಡ ಗುರುಸಿದ್ದಪ್ಪ ಎಲ್ಲರೂ ಸೇರಿ ಬ್ರೀಟಿಷರ ಸೈನ್ಯದ ಮೇಲೆ ವಿಜಯಸಾಧಿಸಿರದಕ್ಕೆ ವಿಜಯೋತ್ಸವಕ್ಕೆ ಈಗ ೨೦೦ ವರ್ಷ ಎಂದರು.ಕಂದಾಯ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ ಮಾತನಾಡಿ, ಆದರ್ಶ ಎನ್ನಬಹುದಾದ ಎಲ್ಲ ಗುಣಗಳು ಒಳಗೊಂಡು ಬದುಕಿದರೆ ಹೀಗೆ ಬದುಕಬೇಕು ಎಂದು ತೋರಿಸಿಕೊಟ್ಟ ಅಗಣಿತ ಗುಣಗಳ ಆದರ್ಶ ಗುಣಗಳ ರಾಣಿ ಚೆನ್ನಮ್ಮ ಎಂದರು.ಆನಂದ ಹುಣಸಗಿ, ಪ್ರಕಾಶ ನಾಯಕ್ ಮಾತನಾಡಿದರು.ವೇದಿಕೆಯ ಮೇಲೆ ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ವಿ.ಎಚ್. ಬಿರಾದಾರ, ಧನಪಾಲಶೆಟ್ಟಿ ದೇವೂರ, ಟಿ.ಎಸ್.ಅಲಗೂರ ಇದ್ದರು.ಸಮಾರಂಭದಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಗುರುಧರ್ಮ, ದೇಶಪ್ರೇಮ, ನಾಡಧರ್ಮವನ್ನು ಎತ್ತಿಹಿಡಿದ ಮೊಟ್ಟ ಮೊದಲ ಮಹಿಳೆಯಾಗಿದ್ದಾಳೆ ಎಂದು ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ತಾಲೂಕು ಪಂಚಮಸಾಲಿ ಸಮಾಜವು ಹಮ್ಮಿಕೊಂಡಿದ್ದ ವೀರರಾಣಿ ಕಿತ್ತೂರ ಚನ್ನಮ್ಮಾಜೀಯ ೨೪೬ ನೇ ಜಯಂತ್ಯೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಕಿತ್ತೂರು ರಾಣಿ ಚನ್ನಮ್ಮಾ ಅವರ ಭಾವಚಿತ್ರವನ್ನು ನೋಡಿದಾಗ ಯುದ್ಧ ಮಾಡುವ ಸಂದರ್ಭದಲ್ಲಿಯೂ ಲಿಂಗವನ್ನು ಕಾಣಿಸುವಂತೆ ಹಾಕಿಕೊಂಡಿರುವದನ್ನು ನೋಡಿದಾಗ ನಾವು ವೀರಶೈವ ಲಿಂಗಾಯತ ಧರ್ಮದವರು ಎಂಬುವದನ್ನು ತೋರಿಸುತ್ತದೆ. ರಾಣಿ ಚನ್ನಮ್ಮಾಳ ಗುರುಭಕ್ತಿ, ಲಿಂಗಪೂಜೆ, ನಾಡಪ್ರೇಮ, ದೇಶಭಕ್ತಿಯ ಆದರ್ಶವನ್ನು ಇಡೀ ಸಮಾಜವು ಅನುಸರಿಸುವದು ತುಂಬಾ ಅಗತ್ಯವಿದೆ ಎಂದರು.ದೇವರಹಿಪ್ಪರಗಿ ಶಾಸಕ ಭೀಮನಗೌಡ(ರಾಜುಗೌಡ) ಪಾಟೀಲ ಮಾತನಾಡಿ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸಾಕಷ್ಟು ಮಹನೀಯರು ಹೋರಾಟ ಮಾಡಿದ್ದನ್ನು ಇತಿಹಾಸದಿಂದ ತಿಳಿದುಕೊಳ್ಳುತ್ತೇವೆ. ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತ ಪ್ರಥಮ ಮಹಿಳೆಯೆಂದರೆ ಕಿತ್ತೂರು ರಾಣಿ ಚನ್ನಮ್ಮ ಆಗಿದ್ದಾರೆ. ದೇಶದ ಆಡಳಿತ ಚುಕ್ಕಾಣಿ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಅ೨೬ ರಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಾರ್ಷಿಕೋತ್ಸವದ ನಿಮಿತ್ಯ ಹಮ್ಮಿಕೊಳ್ಳಲಾದ ಭವ್ಯ ಪಥಸಂಚಲನವನ್ನು ಇನ್ನಷ್ಟು ಆಕರ್ಷಿತಗೊಳಿಸಲು ಭರ್ಜರಿ ಪೂರ್ವಸಿದ್ಧತಾ ತಯಾರಿ ನಡೆಸಲಾಗುತ್ತಿದೆ.ಕಳೆದ ಕೆಲ ವರ್ಷಗಳಿಂದ ಪಥ ಸಂಚಲನ ನಡೆಯದ ಹಿನ್ನೆಲೆ ಬೇಜಾರಾಗಿದ್ದ ಸಂಘದ ಕಾರ್ಯಕರ್ತರು ಮತ್ತು ಹಲವು ಹಿಂದೂ ಯುವಕರಿಗೆ ಉತ್ಸಾಹ ಬಂದಂತಾಗಿದೆ. ಬೆಳ್ಳಬೆಳಿಗ್ಗೆ ಪಟ್ಟಣದ ವಿಬಿಸಿ ಮೈದಾನದಲ್ಲಿ ಸೇರಿವ ಅನೇಕ ಕಾರ್ಯಕರ್ತರು ಪೂರ್ವಸಿದ್ಧತಾ ತಯಾರಿಯಲ್ಲಿ ಭಾಗಿಯಾಗಿ ಆವರಣವನ್ನು ಒಂದೆರಡು ಸುತ್ತು ಹಾಕುತ್ತಾರೆ. ಕಿರಿಯ ಕಾರ್ಯಕರ್ತರು, ಹಿರಿಯ ಕಾರ್ಯಕರ್ತರು ಹೇಳಿಕೊಡುವ ತಾಲೀಮುಗಳನ್ನು ಶಿಸ್ತಿನಿಂದ ಪಾಲಿಸುತ್ತಿದ್ದಾರೆ.ಈ ಕುರಿತು ತಾಲೂಕು ಕಾರ್ಯವಾಹ ಚೇತನ ಮೂಗನೂರ ಮಾತನಾಡಿ, ಅಂದು ಮಧ್ಯಾಹ್ನ ೩ಗಂಟೆಗೆ ಪಟ್ಟಣದ ಹುಡ್ಕೋ ಬಡಾವಣೆಯ ಗವಿಸಿದ್ದೇಶ್ವರ ಕ್ರೀಡಾ ಮೈದಾನದಿಂದ ಶುರುವಾಗುವ ಪಥಸಂಚಲನ ಹೇಮರೆಡ್ಡಿ ಮಲ್ಲಮ್ಮ ವೃತ್ತ, ನ್ಯಾಯಾಲಯದ ಹಿಂದಿನ ಈಶ್ವರ ದೇವಸ್ಥಾನ, ಸ್ಟೇಟ್ ಬ್ಯಾಂಕ್ ರಸ್ತೆ, ಕರ್ನಾಟಕ ಕೋ ಅಪ್ ಬ್ಯಾಂಕ್, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಸಂತ ಕನಕದಾಸ ವೃತ್ತ, ವಾಲ್ಮೀಕಿ ವೃತ್ತ, ಲಕ್ಷಿö್ಮÃ ವೆಂಕಟೇಶ್ವರ ದೇವಸ್ಥಾನ,…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ರಂಗಭೂಮಿ ಸಂಸ್ಕೃತಿ ಕಣ್ಮರೆಯಾಗುತ್ತಿರುವ ಹೊತ್ತಿನಲ್ಲಿ ಮಾಧ್ಯಮರಂಗ ಫೌಂಡೇಶನ್ ಅದನ್ನು ಉಳಿಸಿ ಮುಂದಿನ ಪೀಳಿಗೆಗೆ ದಾಟಿಸುವ ಕೆಲಸ ಮಾಡುತ್ತಿರುವುದು ಉತ್ತಮ ಕಾರ್ಯ ಎಂದು ಎಸಿಡಿಪಿಒ ಎಸ್.ಎನ್.ಕೋರವಾರ ಹೇಳಿದರು.ಪಟ್ಟಣದ ಚೌಡೇಶ್ವರಿ ದೇವಸ್ಥಾನ ಸಭಾಭವನದಲ್ಲಿ ಮಾಧ್ಯಮರಂಗ ಪೌಂಡೇಶನ್ ವತಿಯಿಂದ ದಸರಾ ಹಬ್ಬದ ರಜೆಯ ಪ್ರಯುಕ್ತ ಸರ್ಕಾರಿ ಶಾಲೆಯ ಮಕ್ಕಳಿಗೆ ೧೫ ದಿನಗಳ ಕಾಲ ಹಮ್ಮಿಕೊಂಡ ರಂಗ ತರಬೇತಿ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆ, ಅಲ್ಲಿ ಓದುವ ಮಕ್ಕಳು ಅಂದರೆ ಈ ಸಮಾಜ ನೋಡುವ ದೃಷ್ಟಿ ಬೇರೆಯಿದೆ. ಸಾಲ ಮಾಡಿಯಾದರೂ ಖಾಸಗಿ ಶಾಲೆಯಲ್ಲಿ ಓದಿಸುವ ಪೋಷಕರು ಇಂತಹ ಮಕ್ಕಳನ್ನು ನೋಡಿ ಅರ್ಥ ಮಾಡಿಕೊಳ್ಳಬೇಕು. ಬಡ, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಮಾಧ್ಯಮರಂಗ ಫೌಂಡೇಶನ್ ರಂಗ ತರಬೇತಿ ನೀಡಿರುವುದು ನಿಜಕ್ಕೂ ಶ್ಲಾಘನೀಯ ಕೆಲಸ ಎಂದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಸುರೇಶ ಪೂಜಾರ ಮಾತನಾಡಿ, ಮಕ್ಕಳಿಗೆ ಕೇವಲ ಓದು ಬರಿ ಎಂದು ಹೇಳುವುದು, ವೈದ್ಯ ಇಂಜಿನಿಯರ್ ಮಾಡುವುದಲ್ಲ. ಸಾಂಸ್ಕೃತಿಕ ಪ್ರಪಂಚದಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕಿತ್ತೂರು ರಾಣಿ ಚೆನ್ನಮ್ಮಳ ವೀರಗಾಥೆಯನ್ನು ನಮ್ಮ ಮಕ್ಕಳಿಗೆ ತಿಳಿಸೋಣ, ನಮ್ಮ ನಾಡಿನ, ನಮ್ಮ ದೇಶದ ವೀರಪರಂಪರೆಯ ಕಥೆಯನ್ನು ಮುಂದಿನ ತಲೆಮಾರುಗಳಿಗೆ ಪಸರಿಸೋಣ ಎಂದು ಚಿತ್ತಾಪೂರ ಕರದಾಳ ಗ್ರಾಮದ ಸರಕಾರಿ ಪ್ರೌಢಶಾಲೆ ಮುಖ್ಯಗುರು ಪಂಡಿತ ನೆಲ್ಲಗಿ ಹೇಳಿದರು.ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಹಮ್ಮಿಕೊಂಡ ವೀರ ರಾಣಿ ಕಿತ್ತೂರ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ, ಕೃಷಿಕ ಸಮಾಜದ ಅದ್ಯಕ್ಷ ಶಿವಪ್ಪಗೌಡ ಬಿರಾದಾರ ಮಾತನಾಡಿ, ಹೋರಾಟ, ದೈರ್ಯ, ಸ್ವಾತಂತ್ರ್ಯ, ಸ್ವಾಭಿಮಾನ ಎಂದರೆ ಏನು ಎಂಬುದನ್ನು ೨೪೬ ವರ್ಷಗಳ ಹಿಂದೆಯೇ ತಿಳಿಸಿಕೊಟ್ಟ ಮಹಾನ್ ತಾಯಿ, ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ವೇದಿಕೆಯ ಮೇಲೆ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ, ಪುರಸಭೆ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ ಇದ್ದರು.ಕಾರ್ಯಕ್ರಮಕ್ಕೂ ಮುನ್ನ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದ ಬಳಿ ಪೂಜೆ ನೆರವೇರಿಸಲಾಯಿತು.ಕಾರ್ಯಕ್ರಮದಲ್ಲಿ ಸಿಡಿಪಿಒ ಶಂಭುಲಿಂಗ ಹಿರೇಮಠ, ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಹರಿ ಕುಲಕರ್ಣಿ, ಮಾಜಿ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸರ್ಕಾರದ ವಿವಿಧ ಜನಪರ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೊತಿ, ಯುವನಿಧಿ ಹಾಗೂ ಶಕ್ತಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು-ಜಾಗೃತಿ ಮೂಡಿಸುವ ಬೀದಿ ನಾಟಕ ಹಾಗೂ ಜಾನಪದ ಕಲಾ ತಂಡಗಳ ಪ್ರಸ್ತುತಿಯನ್ನು ವೀಕ್ಷಿಸಿ ಪರಿಶೀಲಿಸಲಾಯಿತು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಯನ್ನೊಳಗೊಂಡ ಸಮಿತಿ ಬುಧವಾರ ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆವರಣದಲ್ಲಿ ಕಲಾ ತಂಡಗಳ ಪ್ರದರ್ಶನವನ್ನು ವೀಕ್ಷಿಸಿ ಸಮಿತಿಯು ಕಲಾ ತಂಡಗಳಿಗೆ ಸರ್ಕಾರದ ವಿವಿಧ ಯೋಜನೆಗಳ ಕುರಿತು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಲು ಅಗತ್ಯ ಸಲಹೆ-ಸೂಚನೆಗಳನ್ನು ನೀಡಿತು.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಟಕ್ಕಳಕಿ ಗ್ರಾಮದ ವಿಶ್ವಚೇತನ ಕಲಾ ಸಂಸ್ಥೆ ಬೀದಿನಾಟಕ ತಂಡ ಹಾಗೂ ಸಿದ್ದಾಪೂರದ ಶ್ರೀ ಗುರುಪ್ರಸಾದ ಜಾನಪದ ಕಲಾ ತಂಡ ಜಿಲ್ಲೆಯ ವಿವಿಧ ಆಯ್ದೆ ಗ್ರಾಮಗಳಲ್ಲಿ ಸಂಚರಿಸಿ ಕಲಾ ಪ್ರದರ್ಶನಗಳ ಮೂಲಕ ಸರ್ಕಾರದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಂಡಿ ತಾಲೂಕಿನ ಯಂಕಂಚಿ ೧೧೦ ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಸೆಕ್ಯೂರಿಟಿ ಕಂಪೌಂಡ್ ವಾಲ್ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ೩೩/೧೧ಕೆವ್ಹಿ ಗೊಲಗೇರಿಯಿಂದ ಸರಬರಾಜಾಗುವ ಎಲ್ಲಾ ೧೧ ಕೆವ್ಹಿ ಮಾರ್ಗಗಳಿಗೆ ಅ.೨೪ರಂದು ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೧ ಗಂಟೆ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಇಂಡಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.

Read More

ಇಂಡಿ: ದುಶ್ಚಟಗಳನ್ನು ಬಿಡುವ ಮೂಲಕ ಬಂಜಾರ ಜನಾಂಗ, ಬಂಗಾರದ ಜನಾಂಗವಾಗಬೇಕು ಎಂದು ಸಿದ್ದೇಶ್ವರ ಸ್ವಾಮೀಜಿ ಹೇಳುತ್ತಿದ್ದರೆಂದು ಸೋಮನಿಂಗ‌ ಮಹಾರಾಜರು (ಕೆಸರಟ್ಟಿ) ಹೇಳಿದರು.ತಾಲ್ಲೂಕಿನ ಆಳೂರ ಎಲ್ ಟಿ 1 ರಲ್ಲಿ ಆಯೋಜಿಸಿದ್ದ ಜಗದಂಭಾದೇವಿ ಹಾಗೂ ಶ್ರೀ ಸಂತ ಸೇವಾಲಾಲ‌ 18 ನೇ ಜಾತ್ರಾ ಮಹೋತ್ಸವದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.ದುಶ್ಚಟಗಳನ್ನು ತೊರೆದಾಗ ಬಂಗಾರದಂತಹ ಜೀವನ ಕಟ್ಟಲು, ಉತ್ತಮ ಸಂಸ್ಕಾರ ಸಂಸ್ಕೃತಿ ಉಳಿಸಲು, ಬೆಳೆಸಲು ಸಾಧ್ಯ ಎಂದು ಹೇಳಿದರು.ಈ ಸದ್ಯ ಆಳೂರ ತಾಂಡಾದಲ್ಲಿ ಬದಲಾವಣೆ ಕಾಣುತ್ತಿದ್ದೆವೆ. ಇಲ್ಲೀಗ ಆಧ್ಯಾತ್ಮಿಕ ಚಿಂತನೆ, ಪ್ರವಚನ, ಭಯ, ಭಕ್ತಿ ಕಾಣುತ್ತಿರುವುದು ಹೆಮ್ಮೆಯ ಸಂಗತಿ. ಬಂಜಾರ ಸಮುದಾಯದ ಸಂಸ್ಕಾರ, ಸಂಸ್ಕೃತಿಗೆ ದ್ವಾಪರ ಯುಗ, ತ್ರೇತಾಯುಗ ಹಾಗೂ ಕಲಿಯುಗದ ಇತಿಹಾಸವಿದೆ. ಬಂಜಾರ ಸಮುದಾಯದ ಶ್ರಯೋಭಿವೃದ್ದಿ ಪ್ರತಿಯೊಬ್ಬರೂ ಶ್ರಮವಹಿಸಬೇಕು. ಅತೀ ಹೆಚ್ಚಿನದಾಗಿ ಶೈಕ್ಷಣಿಕ್ಕೆ ಮಹತ್ವ ಕೊಟ್ಟು ಹಾಗೂ ಸಂತ ಸೇವಾಲಾಲರ ಆದರ್ಶವನ್ನು ತಿಳಿಸಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಸ್ವರೂಪನಾಂದ ಸ್ವಾಮಿಜಿ, ಸಿದ್ಧಲಿಂಗ ಮಹಾಸ್ವಾಮಿಜಿ, ವಿಜಯ ಮಹಾಂತೇಶ ಮಠ, ಶಂಕರಾನಂದ ಮಹಾಸ್ವಾಮಿಜಿ, ಆಳೂರ ಯಶವಂತ…

Read More