ಇಂಡಿ: ದುಶ್ಚಟಗಳನ್ನು ಬಿಡುವ ಮೂಲಕ ಬಂಜಾರ ಜನಾಂಗ, ಬಂಗಾರದ ಜನಾಂಗವಾಗಬೇಕು ಎಂದು ಸಿದ್ದೇಶ್ವರ ಸ್ವಾಮೀಜಿ ಹೇಳುತ್ತಿದ್ದರೆಂದು ಸೋಮನಿಂಗ ಮಹಾರಾಜರು (ಕೆಸರಟ್ಟಿ) ಹೇಳಿದರು.
ತಾಲ್ಲೂಕಿನ ಆಳೂರ ಎಲ್ ಟಿ 1 ರಲ್ಲಿ ಆಯೋಜಿಸಿದ್ದ ಜಗದಂಭಾದೇವಿ ಹಾಗೂ ಶ್ರೀ ಸಂತ ಸೇವಾಲಾಲ 18 ನೇ ಜಾತ್ರಾ ಮಹೋತ್ಸವದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ದುಶ್ಚಟಗಳನ್ನು ತೊರೆದಾಗ ಬಂಗಾರದಂತಹ ಜೀವನ ಕಟ್ಟಲು, ಉತ್ತಮ ಸಂಸ್ಕಾರ ಸಂಸ್ಕೃತಿ ಉಳಿಸಲು, ಬೆಳೆಸಲು ಸಾಧ್ಯ ಎಂದು ಹೇಳಿದರು.
ಈ ಸದ್ಯ ಆಳೂರ ತಾಂಡಾದಲ್ಲಿ ಬದಲಾವಣೆ ಕಾಣುತ್ತಿದ್ದೆವೆ. ಇಲ್ಲೀಗ ಆಧ್ಯಾತ್ಮಿಕ ಚಿಂತನೆ, ಪ್ರವಚನ, ಭಯ, ಭಕ್ತಿ ಕಾಣುತ್ತಿರುವುದು ಹೆಮ್ಮೆಯ ಸಂಗತಿ. ಬಂಜಾರ ಸಮುದಾಯದ ಸಂಸ್ಕಾರ, ಸಂಸ್ಕೃತಿಗೆ ದ್ವಾಪರ ಯುಗ, ತ್ರೇತಾಯುಗ ಹಾಗೂ ಕಲಿಯುಗದ ಇತಿಹಾಸವಿದೆ. ಬಂಜಾರ ಸಮುದಾಯದ ಶ್ರಯೋಭಿವೃದ್ದಿ ಪ್ರತಿಯೊಬ್ಬರೂ ಶ್ರಮವಹಿಸಬೇಕು. ಅತೀ ಹೆಚ್ಚಿನದಾಗಿ ಶೈಕ್ಷಣಿಕ್ಕೆ ಮಹತ್ವ ಕೊಟ್ಟು ಹಾಗೂ ಸಂತ ಸೇವಾಲಾಲರ ಆದರ್ಶವನ್ನು ತಿಳಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ವರೂಪನಾಂದ ಸ್ವಾಮಿಜಿ, ಸಿದ್ಧಲಿಂಗ ಮಹಾಸ್ವಾಮಿಜಿ, ವಿಜಯ ಮಹಾಂತೇಶ ಮಠ, ಶಂಕರಾನಂದ ಮಹಾಸ್ವಾಮಿಜಿ, ಆಳೂರ ಯಶವಂತ ಮಹಾರಾಜರು, ಗ್ರಾ.ಪಂ ಅಧ್ಯಕ್ಷೆ ಸಮೀತ್ರಾ ನಾಯಿಕ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಎಲ್ ಪಿ ರಾಠೋಡ, ಭೀಮಸಿಂಗ ರಾಠೋಡ, ಹಣಮಂತ ಚಾಬುಕಸವಾರ, ಯಲ್ಲಪ ಹೀರೆಕುರಬುರ, ನಾಮದೇವ ಮಾವಿನಹಳ್ಳಿ, ಸಂಜೀವ ಚವ್ಹಾಣ, ಚಂದು ದನಸಿಂಗ ರಾಠೋಡ, ತಾರಾಸಿಂಗ ಕಾಸಿನಾಥ ಪವ್ಹಾರ, ಭೀಮು ರಾಠೋಡ, ತಾರಾಸಿಂಗ ರಾಠೋಡ, ಲೋಕು ರಾಠೋಡ ಇನ್ನೂ ಅನೇಕರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

