Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ನರೇಗಾ ಯೋಜನೆಯ ೨೦೨೫-೨೬ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸುತ್ತಿದ್ದು, ಗ್ರಾಮಸ್ಥರು ತಮಗೆ ಬೇಕಾದ ವೈಯಕ್ತಿಕ ಬೇಡಿಕೆ ಸಲ್ಲಿಸಬಹುದು ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಾಂತಗೌಡ ನ್ಯಾಮಣ್ಣವರ ಹೇಳಿದರು.ತಾಲ್ಲೂಕಿನ ಕೊಂಡಗೂಳಿ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ಜರುಗಿದ ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನಕ್ಕೆ ಹಸಿರು ನಿಶಾನೆ ತೋರುವುದರ ಮೂಲಕ ಚಾಲನೆ ನೀಡಿದರು. ಅಕ್ಟೋಬರ್ ೨ರಿಂದ ೩೧ರವರೆಗೆ ತಾಲ್ಲೂಕಿನ ೧೪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಲಾಗುತ್ತಿದೆ ಎಂದರುಐಇಸಿ ಸಂಯೋಜಕ ಸಿದ್ದು ಕಾಂಬಳೆ ಮಾತನಾಡಿ, ನರೇಗಾ ಯೋಜನೆ ಅಡಿಯಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬಹುದು, ಒಂದು ವರ್ಷದಲ್ಲಿ ೧೦೦ ದಿನಗಳ ಕೆಲಸ ನೀಡಲಾಗುವುದು ಒಂದು ದಿನಕ್ಕೆ ೩೪೯ ರೂಪಾಯಿ ಕೂಲಿ ನೀಡಲಾಗುತ್ತಿದೆ. ಇವುಗಳ ಲಾಭ ಪಡೆದು ಕೊಳ್ಳಬೇಕು ಎಂದರು.ಗ್ರಾಮ ಕಾಯಕಮಿತ್ರ ನಜೀರಾಬೇಗಂ ಆಹೇರಿ, ಶ್ರೀಶೈಲ್ ಕವಿ, ಹುಸೇನಸಾಬ್ ಸೊಲ್ಲಾಪುರ, ಈರಪ್ಪ ಕುರಮಲ್ಲಪ್ಪಗೋಳ, ಸೋಮಶೇಖರ್…
ಉದಯರಶ್ಮಿ ದಿನಪತ್ರಿಕೆ ಬಬಲೇಶ್ವರ: ಜಿಲ್ಲಾ ಮಟ್ಟದ 2024-25 ನೇ ಸಾಲಿನ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಬಬಲೇಶ್ವರ ತಾಲ್ಲೂಕಿನ ಕೆಂಗಲಗುತ್ತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ಅತ್ಯುತ್ತಮ ಪ್ರದರ್ಶನ ನೀಡಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಸಿಂದಗಿ ತಾಲೂಕಿನ ಕೊರವಾರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ ಶಾಲೆಯ ತಂಡವು ತಮ್ಮ ಉತ್ಕೃಷ್ಟ ಆಟದ ಮೂಲಕ ಎಲ್ಲರ ಗಮನ ಸೆಳೆಯಿತು. ಕಳೆದ ಹತ್ತು ವರ್ಷಗಳಿಂದ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ನಿರಂತರವಾಗಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗುತ್ತಿರುವುದು ಈ ಶಾಲೆಯ ವಿಶೇಷ ಸಾಧನೆಯಾಗಿದೆ.”ನಮ್ಮ ವಿದ್ಯಾರ್ಥಿನಿಯರು ಕ್ರೀಡೆಯಲ್ಲಿ ತೋರಿದ ಆಸಕ್ತಿ ಮತ್ತು ಪರಿಶ್ರಮ ಅಭಿನಂದನೀಯ. ಈ ಸಾಧನೆ ಇತರ ವಿದ್ಯಾರ್ಥಿಗಳಿಗೂ ಸ್ಫೂರ್ತಿದಾಯಕವಾಗಿದೆ” ಎಂದು ತರಬೇತುದಾರ ಹಣಮಂತ ಕಾತರಕಿ ಹಾಗೂ ಸಿಆರ್ಪಿ ಕೆ.ಕೆ.ಅಸ್ಕಿ ಸಂತಸ ವ್ಯಕ್ತಪಡಿಸಿದರು.ವಿಭಾಗ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಲು ತಂಡವು ಈಗ ಸಜ್ಜಾಗುತ್ತಿದೆ. ಕ್ರೀಡಾ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿನಿಯರು ತಮ್ಮ ಅಭ್ಯಾಸವನ್ನು ತೀವ್ರಗೊಳಿಸಿದ್ದಾರೆ.ಈ ಸಂದರ್ಭದಲ್ಲಿ ಜಿಲ್ಲಾ ಕ್ರೀಡಾಧಿಕಾರಿಗಳು, ಶಾಲಾ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರಾಭಿವೃದ್ಧಿ ಪ್ರಾಧಿಕಾರದಿಂದ ೨೦೨೨-೨೩ನೇ ಸಾಲಿನ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ೨೩ ಸಿವಿಲ್ ಮತ್ತು ೭ ವಿದ್ಯುತ್ ಕಾಮಗಾರಿಗಳಿಗಾಗಿ ವಿಡಿಎ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆದುಕೊಂಡು, ಟೆಂಡರ್ ಕರೆದು, ಬಿಡ್ ಓಪನ್ ಆಗಿ ಗುತ್ತಿಗೆದಾರರಿಗೆ ಕಾಮಗಾರಿ ಆದೇಶವನ್ನು ನೀಡಿದ ಮೇಲೆ, ತಡೆ ಹಿಡಿಯಲಾದ ರೂ.೬.೩೫ ಕೋಟಿ ಮೊತ್ತದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದ್ದು, ಆದಷ್ಟು ಶೀಘ್ರವಾಗಿ ಭೂಮಿಪೂಜೆ ನೆರವೇರಿಸಿ, ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಕಾಮಗಾರಿಗಳನ್ನು ತಡೆ ಹಿಡಿಯಲಾಗಿತ್ತು. ಹೊಸ ಸರ್ಕಾರ ರಚನೆಯಾದ ನಂತರ ನಮ್ಮ ಸರ್ಕಾರದ ಅವಧಿಯಲ್ಲಿ ಅನುಮೋದನೆಗೊಂಡ ಹಾಗೂ ಪ್ರಾರಂಭವಾಗದ ಎಲ್ಲಾ ಕಾಮಗಾರಿಗಳನ್ನು ತಡೆಹಿಡಿದು ಆದೇಶಿಸಿದ್ದರಿಂದ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಕಾಮಗಾರಿಗಳು ನೆನಗುದಿಗೆ ಬಿದ್ದಿದ್ದವು. ಅಧಿವೇಶನದಲ್ಲಿ ಈ ಕುರಿತಂತೆ ಪ್ರಶ್ನಿಸಿ, ಕಾಮಗಾರಿ ಆರಂಭಿಸಲು ಒತ್ತಾಯಿಸಲಾಗಿತ್ತು. ಇದರಿಂದ ಈ ಕೆಳಕಂಡ ಕಾಮಗಾರಿಗಳ ಟೆಂಡರ್…
ಉದಯರಶ್ಮಿ ದಿನಪತ್ರಿಕೆ ಚಡಚಣ: ಪಟ್ಟಣವು ಮೊದಲಿನಿಂದಲೂ ಕಲೆ, ಸಾಹಿತ್ಯ, ವ್ಯಾಪಾರ ಹಾಗೂ ಧಾರ್ಮಿಕ ಭಾವನೆಗಳಿಂದ ಶ್ರೀಮಂತವಾದ ಊರು. ವೇದಾಂತಕೇಸರಿ ಪೂಜ್ಯ ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳು ಈ ಗ್ರಾಮದಲ್ಲಿ ಮೂರ್ಮೂರು ತಿಂಗಳವರೆಗೆ ನೀಡಿದ ಪ್ರವಚನದ ಜ್ಞಾನ-ಸುಧೆಯಿಂದ ಪಾವನವಾದ ನೆಲವಿದು. ಅವರ ಆಶೀರ್ವಾದದಿಂದಲೇ ಅನೇಕ ಸಂಘ-ಸಂಸ್ಥೆಗಳು ಜೀವ ತಳೆದವು. ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ನಮ್ಮ ಚಡಚಣದಲ್ಲೇ ಶಿಕ್ಷಣ ಪಡೆದದ್ದು ಕೂಡಾ ಅಮರ ಇತಿಹಾಸ. ಪೂಜ್ಯನೀಯರ ಅಮೃತ ಕೃಪಾಶೀರ್ವಾದ ದೊರೆತಿರುವುದು ನಮ್ಮೆಲ್ಲರ ಸೌಭಾಗ್ಯವೇ ಸರಿ.ಅಮೃತಾನಂದ ಸ್ವಾಮಿಗಳವರು ಬಾಲ್ಯದಲ್ಲಿಯೇ ಅಧ್ಯಾತ್ಮಿಕ ಸಾಧನೆಯಲ್ಲಿ ಆಸಕ್ತಿ ಹೊಂದಿದವರು. ಅವರ ತೀವ್ರವಾದ ಪಾರಮಾರ್ಥದ ಹಂಬಲ ತಮ್ಮ 14ನೇ ಕಿರಿಯ ವಯಸ್ಸಿನಲ್ಲಿಯೆ ತಂದೆ-ತಾಯಿ, ಬಂಧು-ಬಳಗ ಎಲ್ಲವನು ಪರಿತ್ಯಜಿಸಿ ವಿಜಯಪುರ ಜ್ಞಾನ ಯೋಗಾಶ್ರಮಕ್ಕೆ ಕರೆ ತಂದಿತು.ಜ್ಞಾನಯೋಗಿ ಸಿದ್ದೇಶ್ವರ ಅಪ್ಪಗಳವರ ಸೇವೆ ಮಾಡುತ್ತಾ ಅವರ ಮಾರ್ಗದರ್ಶನದಲ್ಲಿ ಉಪನಿಷತ್ತುಗಳು, ಭಗವದ್ಗೀತೆ, ಭಾರತೀಯ ದರ್ಶನಗಳು, ವಚನಶಾಸ್ತ್ರ ಮೊದಲಾದ ಗ್ರಂಥಗಳ ಅಧ್ಯಯನ ಗೈದವರು. ಮತ್ತು ಯೋಗ ಸಾಧನೆಯಲ್ಲಿ ನೈಪುಣ್ಯರು. ಏಕಕಾಲದಲ್ಲಿ ಒಂದು ಲಕ್ಷ ಜನರನ್ನು ಸೇರಿಸಿ ಯೋಗ…
ಜನಸಾಮಾನ್ಯರಲ್ಲಿ ಇಲ್ಲದ ಗೊಂದಲ-ಆತಂಕ ಮೂಡಿಸುವುದು ಬೇಡ ಎಂದ ಸಚಿವ ಎಂ.ಬಿ ಪಾಟೀಲ್ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ 10 ಸರ್ವೇ ನಂಬರುಗಳ 11 ಎಕರೆ ಆಸ್ತಿ ಮಾತ್ರ ವಕ್ಫ್ ಆಸ್ತಿ ಎಂದು ಗೆಜೆಟ್ ನೋಟಿಫಿಕೇಷನ್ ಆಗಿದ್ದು, ಅದರಲ್ಲಿ 10 ಎಕರೆ 14 ಗುಂಟೆ ಖಬರಸ್ತಾನ ಇದೆ. ಉಳಿದದ್ದು ಈದ್ಗಾ, ಮಸೀದಿ ಇತ್ಯಾದಿ ಕಟ್ಟಡಗಳಿವೆ ಹಾಗೂ ಈ ಭೂಮಿಯು ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಸೇರಿದ್ದು, ಯಾವುದೇ ರೈತರ ಖಾಸಗಿ ಜಮೀನು ಒಳಪಟ್ಟಿಲ್ಲ ಎಂಬುದನ್ನು ಗಮನಿಸಬೇಕು ಎಂದು ಕೈಗಾರಿಕೆ ಮೂಲಸೌಕರ್ಯ ಅಭಿವೃದ್ಧಿ ಮತ್ತು ವಿಜಯಪುರ ಜಿಲ್ಲೆ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.ಈ ಕುರಿತು ಶನಿವಾರ ಪ್ರಕಟಣೆ ನೀಡಿರುವ ಅವರು ಹಜರತ್ ಪೀರ ದಸ್ತಿಗೀರ ಸಾಬ್ ಮೊಹಮ್ಮದ ಚಿಂಗ್ ಸಿಯಾ ತಖಿಯಾ ದರ್ಗಾ ವಿಜಯಪುರ ಮಹಾಲಬಾಗಯತ ಸೇರಿದ ಆಸ್ತಿಯಾಗಿದ್ದು, ಕೆಳಗಡೆ ತಪ್ಪಾಗಿ ಹೊನವಾಡ ಎಂದು ಸೇರಿದೆ. ಇದು ಗೊಂದಲಕ್ಕೆ ಕಾರಣವಾಗಿದೆ. ಈ ಯಾವ ರೈತರಿಗೂ ವಕ್ಫ್ ಸಮಿತಿ ಅಥವಾ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶುಕ್ರವಾರ ರಾತ್ರಿ ದೆಹಲಿಯ ವಿಕಾಸಪುರಿ ವಿಧಾನಸಭಾ ಕ್ಷೇತ್ರದಲ್ಲಿ ಅರವಿಂದ್ ಕೇಜ್ರಿವಾಲ್ ರವರ ಮೇಲಿನ ಬಿಜೆಪಿ ಯುವ ಮೋರ್ಚಾದ ಗೂಂಡಾಗಳ ಹಲ್ಲೆ ತೀವ್ರ ಖಂಡನೀಯವಾಗಿದ್ದು, ಬಿಜೆಪಿ ಗೂಂಡಾ ನಾಯಕರು ಹತಾಶೆಯಿಂದ ಈ ರೀತಿಯ ದಾಳಿಗೆ ಕೈ ಹಾಕಿದ್ದಾರೆ. ಈ ಕೂಡಲೇ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ರಾಷ್ಟ್ರದ ಮುಂದೆ ಕ್ಷಮೆ ಯಾಚಿಸಬೇಕೆಂದು ವಿಜಯಪುರ ಆಮಆದ್ಮಿ ಪಾಕ್ಟಿ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಅಗ್ರಹಿಸಿದರು.”ರಾಷ್ಟ್ರೀಯ ಪಕ್ಷವೊಂದರ ರಾಷ್ಟ್ರೀಯ ಸಂಚಾಲಕ ಹಾಗೂ 3 ಬಾರಿ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಪೊಲೀಸರ ಜತೆ ಶಾಮೀಲಾಗಿ ಬಿಜೆಪಿ ಗುಂಪೊಂದು ದಾಳಿ ನಡೆಸುತ್ತಿದೆ.ಇದು ಗಂಭೀರ ಹಾಗೂ ಆತಂಕದ ವಿಚಾರ. ಖೊಟ್ಟಿ ಪ್ರಕರಣಗಳನ್ನು ದಾಖಲಿಸಿ ಆಮ್ ಆದ್ಮಿ ಪಕ್ಷದ ನಾಯಕರುಗಳನ್ನು ಜೈಲಿನಲ್ಲಿಟ್ಟರೂ ಸಹ ರಾಷ್ಟ್ರದ ಜನತೆ ನಮ್ಮೊಂದಿಗೆ ಇರುವುದನ್ನು ಸಹಿಸಲಾಗದೆ ಹತಾಶೆಯಿಂದ ಈ ರೀತಿಯ ದಾಳಿಗಳಿಗೆ ಬಿಜೆಪಿ ಗೂಂಡಾಗಳು ಮುಂದಾಗಿರುವುದು ಅಸಹ್ಯ ವೆನಿಸುತ್ತಿದೆ” ಎಂದು ಭೋಗೇಶ್ ಸೋಲಾಪುರ್ ಕಿಡಿಕಾರಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಭಾವನಾ ವಿಕ್ರಂ ಮಾರು ಅವರು ಸಲ್ಲಿಸಿದ್ದ “ಎ ಕಂಪಾರೇಟಿವ್ ಸ್ಟಡಿ ಆಫ್ ದ ಕರೆಂಟ್ ಸ್ಟೇಟಸ್ ಅಂಡ್ ಫ್ಯೂಚರ್ ನೀಡ್ಸ್ ಆಫ್ ಲೈಬ್ರರಿ ಆಟೋಮೇಷನ್ ಅಂಡ್ ನೆಟ್ವರ್ಕಿಂಗ್ ಇನ್ ಡಿಲೆವರಿಗ್ ಲೈಬ್ರರಿ ಸರ್ವಿಸಸ್ ಅಟ್ ಗೋವಾ ಸ್ಟೇಟ್ ಸೆಂಟ್ರಲ್ ಲೈಬ್ರರಿ ಅಂಡ್ ಕರ್ನಾಟಕ ಸ್ಟೇಟ್ ಸೆಂಟ್ರಲ್ ಲೈಬ್ರರಿ” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.ಭಾವನಾ ವಿಕ್ರಂ ಮಾರು ಅವರು ಸಮಾಜ ವಿಜ್ಞಾನ ಅಧ್ಯಯನ ವಿಭಾಗದ ಪ್ರೊ. ಪಿ. ಜಿ. ತಡಸದ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ಭಾವನಾ ವಿಕ್ರಂ ಮಾರು ಅವರನ್ನು ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವ ಪ್ರೊ.ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್.ಎಂ. ಚಂದ್ರಶೇಖರ ಅಭಿನಂದಿಸಿದ್ದಾರೆ.
– ಜಯಶ್ರೀ .ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ ಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಅತ್ಯಾಧುನಿಕ ತಂತ್ರಜ್ಞಾನದಿಂದಾಗಿ ನಮ್ಮ ಹಿಂದಿನ ಹಿರಿಯರು ಪಡುತ್ತಿದ್ದ ಶ್ರಮಜೀವನ ಈಗಿಲ್ಲ. ಆದರೂ ವರ್ಗ ವಯಸ್ಸು ಲಿಂಗಭೇದವನ್ನು ಲೆಕ್ಕಿಸದೇ ದಿನದಿಂದ ದಿನೇ ಒತ್ತಡ ಹೆಚ್ಚುತ್ತಲೇ ಇದೆ. ಶಾಂತವಿರಬೇಕೆನ್ನುವ ಮನಸ್ಸುಗಳು ಸಹ ಗದ್ದಲ ಗೋಜಲಿನಲ್ಲೇ ದಿನಗಳನ್ನು ದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದಿನವಿಡೀ ಏನೂ ಕೆಲಸ ಮಾಡದಿದ್ದರೂ ದಣಿವು ಕಾಡುತ್ತದೆ. ಅಂತಹ ದೇಹಕ್ಕೆ ಒಂದೇ ಒಂದು ಸಣ್ಣ ದನಿ ಕೇಳಿದರೂ ರೇಜಿಗೇಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಮನೆಯಿಂದ ದೂರ ಇರುವವರು, ಬೇರೆ ಊರಿನಲ್ಲಿ ಕೆಲಸ ನಿರ್ವಹಿಸುವವರು ಪುಟ್ಟ ಬೀಜದ ಮೊಳಕೆಯಂತೆ ಹೊಸ ಆಸೆಯನ್ನು ಹೊತ್ತು ವಾರಕ್ಕೆ ಒಮ್ಮೆ ಅಥವಾ ಎರಡು ಸಲ ಇಲ್ಲವೇ ವಾರಾಂತ್ಯಕ್ಕ್ಲೆ ಬಂದು ಮನೆಯವರೊಂದಿಗೆ ಕಾಲ ಕಳೆಯುವ ವಾಡಿಕೆ ಹಲವರದು. ಇದಕ್ಕೆ ಸಂತೋಷದಿಂದ ಕೈ ಜೋಡಿಸುವ ಜೋಡಿಗಳು ಜೊತೆ ಜೊತೆಯಲಿ ಕಾಲ ಕಳೆಯಬೇಕೆನ್ನುವ ಬಯಕೆ ಮನದಲ್ಲಿದ್ದರೂ ಒತ್ತಡದಿಂದಾಗಿ ಬಯಕೆ ಕೈಗೂಡುವುದು ಕಡಿಮೆಯೇ ಅನ್ನಿ.ಕೈತುಂಬ ಹಣ ಎಣಿಸುವ ಹಲವಾರು ಜನರ ಬದುಕು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೧ನೇ ಜಾನುವಾರು ಗಣತಿಯನ್ನು ಮಹಾನಗರ ಪಾಲಿಕೆ ಮಹಾಪೌರೆ ಶ್ರೀಮತಿ ಮಾಹೇಜಬಿನ ಅ ಹೊರ್ತಿ ಅ.೨೫ರಂದು ಅಧಿಕೃತವಾಗಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಸಹಾಯಕ ನಿರ್ದೆಶಕ ಡಾ. ಬಿ ಎಸ್ ಕನಮಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿಜಯಪುರ ತಾಲ್ಲೂಕಿನಲ್ಲಿ ಒಟ್ಟು ೧೭ ಎಣಿಕೆದಾರರು, ೨ ಜನ ಮೇಲ್ವಿಚಾರಕರಿದ್ದು, ವಿಜಯಪುರ ಶಹರದಲ್ಲಿ ಒಬ್ಬ ಎಣಿಕೆದಾರರು ೬೦೦೦ ಮನೆ ಎಣಿಕೆಯನ್ನು ಮಾಡುತ್ತಾರೆ. ಮತ್ತು ಗ್ರಾಮಿಣ ಪ್ರದೇಶದಲ್ಲಿ ೪೫೦೦ ಮನೆಯನ್ನು ಒಬ್ಬ ಎಣಿಕೆದಾರರು ಎಣಿಕೆ ಮಾಡುತ್ತಾರೆ. ಈ ಬಾರಿಯ ಜಾನುವಾರು ಗಣತಿ ಕಾರ್ಯಗಳನ್ನು ಆಫ್ಲೈನ್ ಮೂಡ್’ನಲ್ಲಿಯೂ ಸಹ ನಿರ್ವಹಿಸಲೂ ಅನುವುವಾಗುವಂತೆ ಸಾಫ್ಟವೇರ್ ಅಭಿವೃದ್ಧಿ ಪಡಿಸಲಾಗಿದ್ದೂ, ಇದಕ್ಕೆ ಸಂಬಂಧಿಸಿದಂತೆ ಗಣತಿ ಕಾರ್ಯ ಪ್ರಾರಂಭಿಸುವ ಮುನ್ನ ಎಲ್ಲ ಗಣತಿದಾರರು ತಮ್ಮ ತಮ್ಮ ಮೂಬೈಲ್’ಗಳಲ್ಲಿ ಜಾನುವಾರು ಗಣತಿಯ ಮೊಬ್ಯಲ್ ಅಪ್ಲಿಕೇಶನ್’ನ್ನು ಡೌನಲೋಡ್ ಮಾಡಿಕೊಂಡು ಸದರಿ ಜಾನುವಾರು ಗಣತಿಯನ್ನು ಈ ಸಲ ನಿರ್ವಹಿಸಲಾಗುತ್ತದೆ. ಈ ಜಾನುವಾರು ಗಣತಿ ಕಾರ್ಯಕ್ರಮವು ಅ.೨೫ ರಿಂದ ಫೆಬ್ರುವರಿ ೨೦೨೫ ರ ಒಳಗಾಗಿ ಜಾನುವಾರು ಗಣತಿಯನ್ನು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಭಾವನಾ ವಿಕ್ರಂ ಮಾರು ಅವರು ಸಲ್ಲಿಸಿದ್ದ “ಎ ಕಂಪಾರೇಟಿವ್ ಸ್ಟಡಿ ಆಫ್ ದ ಕರೆಂಟ್ ಸ್ಟೇಟಸ್ ಅಂಡ್ ಫ್ಯೂಚರ್ ನೀಡ್ಸ್ ಆಫ್ ಲೈಬ್ರರಿ ಆಟೋಮೇಷನ್ ಅಂಡ್ ನೆಟ್ವರ್ಕಿಂಗ್ ಇನ್ ಡಿಲೆವರಿಗ್ ಲೈಬ್ರರಿ ಸರ್ವಿಸಸ್ ಅಟ್ ಗೋವಾ ಸ್ಟೇಟ್ ಸೆಂಟ್ರಲ್ ಲೈಬ್ರರಿ ಅಂಡ್ ಕರ್ನಾಟಕ ಸ್ಟೇಟ್ ಸೆಂಟ್ರಲ್ ಲೈಬ್ರರಿ” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.ಭಾವನಾ ವಿಕ್ರಂ ಮಾರು ಅವರು ಸಮಾಜ ವಿಜ್ಞಾನ ಅಧ್ಯಯನ ವಿಭಾಗದ ಪ್ರೊ. ಪಿ. ಜಿ. ತಡಸದ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ಭಾವನಾ ವಿಕ್ರಂ ಮಾರು ಅವರನ್ನು ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವ ಪ್ರೊ.ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್.ಎಂ. ಚಂದ್ರಶೇಕರ ಅಭಿನಂದಿಸಿದ್ದಾರೆ.
