ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶುಕ್ರವಾರ ರಾತ್ರಿ ದೆಹಲಿಯ ವಿಕಾಸಪುರಿ ವಿಧಾನಸಭಾ ಕ್ಷೇತ್ರದಲ್ಲಿ ಅರವಿಂದ್ ಕೇಜ್ರಿವಾಲ್ ರವರ ಮೇಲಿನ ಬಿಜೆಪಿ ಯುವ ಮೋರ್ಚಾದ ಗೂಂಡಾಗಳ ಹಲ್ಲೆ ತೀವ್ರ ಖಂಡನೀಯವಾಗಿದ್ದು, ಬಿಜೆಪಿ ಗೂಂಡಾ ನಾಯಕರು ಹತಾಶೆಯಿಂದ ಈ ರೀತಿಯ ದಾಳಿಗೆ ಕೈ ಹಾಕಿದ್ದಾರೆ. ಈ ಕೂಡಲೇ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ರಾಷ್ಟ್ರದ ಮುಂದೆ ಕ್ಷಮೆ ಯಾಚಿಸಬೇಕೆಂದು ವಿಜಯಪುರ ಆಮಆದ್ಮಿ ಪಾಕ್ಟಿ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಅಗ್ರಹಿಸಿದರು.
“ರಾಷ್ಟ್ರೀಯ ಪಕ್ಷವೊಂದರ ರಾಷ್ಟ್ರೀಯ ಸಂಚಾಲಕ ಹಾಗೂ 3 ಬಾರಿ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಪೊಲೀಸರ ಜತೆ ಶಾಮೀಲಾಗಿ ಬಿಜೆಪಿ ಗುಂಪೊಂದು ದಾಳಿ ನಡೆಸುತ್ತಿದೆ.
ಇದು ಗಂಭೀರ ಹಾಗೂ ಆತಂಕದ ವಿಚಾರ. ಖೊಟ್ಟಿ ಪ್ರಕರಣಗಳನ್ನು ದಾಖಲಿಸಿ ಆಮ್ ಆದ್ಮಿ ಪಕ್ಷದ ನಾಯಕರುಗಳನ್ನು ಜೈಲಿನಲ್ಲಿಟ್ಟರೂ ಸಹ ರಾಷ್ಟ್ರದ ಜನತೆ ನಮ್ಮೊಂದಿಗೆ ಇರುವುದನ್ನು ಸಹಿಸಲಾಗದೆ ಹತಾಶೆಯಿಂದ ಈ ರೀತಿಯ ದಾಳಿಗಳಿಗೆ ಬಿಜೆಪಿ ಗೂಂಡಾಗಳು ಮುಂದಾಗಿರುವುದು ಅಸಹ್ಯ ವೆನಿಸುತ್ತಿದೆ” ಎಂದು ಭೋಗೇಶ್ ಸೋಲಾಪುರ್ ಕಿಡಿಕಾರಿದ್ದಾರೆ.

