ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಭಾವನಾ ವಿಕ್ರಂ ಮಾರು ಅವರು ಸಲ್ಲಿಸಿದ್ದ “ಎ ಕಂಪಾರೇಟಿವ್ ಸ್ಟಡಿ ಆಫ್ ದ ಕರೆಂಟ್ ಸ್ಟೇಟಸ್ ಅಂಡ್ ಫ್ಯೂಚರ್ ನೀಡ್ಸ್ ಆಫ್ ಲೈಬ್ರರಿ ಆಟೋಮೇಷನ್ ಅಂಡ್ ನೆಟ್ವರ್ಕಿಂಗ್ ಇನ್ ಡಿಲೆವರಿಗ್ ಲೈಬ್ರರಿ ಸರ್ವಿಸಸ್ ಅಟ್ ಗೋವಾ ಸ್ಟೇಟ್ ಸೆಂಟ್ರಲ್ ಲೈಬ್ರರಿ ಅಂಡ್ ಕರ್ನಾಟಕ ಸ್ಟೇಟ್ ಸೆಂಟ್ರಲ್ ಲೈಬ್ರರಿ” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.
ಭಾವನಾ ವಿಕ್ರಂ ಮಾರು ಅವರು ಸಮಾಜ ವಿಜ್ಞಾನ ಅಧ್ಯಯನ ವಿಭಾಗದ ಪ್ರೊ. ಪಿ. ಜಿ. ತಡಸದ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ಭಾವನಾ ವಿಕ್ರಂ ಮಾರು ಅವರನ್ನು ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವ ಪ್ರೊ.ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್.ಎಂ. ಚಂದ್ರಶೇಕರ ಅಭಿನಂದಿಸಿದ್ದಾರೆ.
