ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೨೧ನೇ ಜಾನುವಾರು ಗಣತಿಯನ್ನು ಮಹಾನಗರ ಪಾಲಿಕೆ ಮಹಾಪೌರೆ ಶ್ರೀಮತಿ ಮಾಹೇಜಬಿನ ಅ ಹೊರ್ತಿ ಅ.೨೫ರಂದು ಅಧಿಕೃತವಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೆಶಕ ಡಾ. ಬಿ ಎಸ್ ಕನಮಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿಜಯಪುರ ತಾಲ್ಲೂಕಿನಲ್ಲಿ ಒಟ್ಟು ೧೭ ಎಣಿಕೆದಾರರು, ೨ ಜನ ಮೇಲ್ವಿಚಾರಕರಿದ್ದು, ವಿಜಯಪುರ ಶಹರದಲ್ಲಿ ಒಬ್ಬ ಎಣಿಕೆದಾರರು ೬೦೦೦ ಮನೆ ಎಣಿಕೆಯನ್ನು ಮಾಡುತ್ತಾರೆ. ಮತ್ತು ಗ್ರಾಮಿಣ ಪ್ರದೇಶದಲ್ಲಿ ೪೫೦೦ ಮನೆಯನ್ನು ಒಬ್ಬ ಎಣಿಕೆದಾರರು ಎಣಿಕೆ ಮಾಡುತ್ತಾರೆ. ಈ ಬಾರಿಯ ಜಾನುವಾರು ಗಣತಿ ಕಾರ್ಯಗಳನ್ನು ಆಫ್ಲೈನ್ ಮೂಡ್’ನಲ್ಲಿಯೂ ಸಹ ನಿರ್ವಹಿಸಲೂ ಅನುವುವಾಗುವಂತೆ ಸಾಫ್ಟವೇರ್ ಅಭಿವೃದ್ಧಿ ಪಡಿಸಲಾಗಿದ್ದೂ, ಇದಕ್ಕೆ ಸಂಬಂಧಿಸಿದಂತೆ ಗಣತಿ ಕಾರ್ಯ ಪ್ರಾರಂಭಿಸುವ ಮುನ್ನ ಎಲ್ಲ ಗಣತಿದಾರರು ತಮ್ಮ ತಮ್ಮ ಮೂಬೈಲ್’ಗಳಲ್ಲಿ ಜಾನುವಾರು ಗಣತಿಯ ಮೊಬ್ಯಲ್ ಅಪ್ಲಿಕೇಶನ್’ನ್ನು ಡೌನಲೋಡ್ ಮಾಡಿಕೊಂಡು ಸದರಿ ಜಾನುವಾರು ಗಣತಿಯನ್ನು ಈ ಸಲ ನಿರ್ವಹಿಸಲಾಗುತ್ತದೆ. ಈ ಜಾನುವಾರು ಗಣತಿ ಕಾರ್ಯಕ್ರಮವು ಅ.೨೫ ರಿಂದ ಫೆಬ್ರುವರಿ ೨೦೨೫ ರ ಒಳಗಾಗಿ ಜಾನುವಾರು ಗಣತಿಯನ್ನು ಪೂರ್ಣಗೊಳಿಸುವುದು. ಆದ ಕಾರಣ ತಾಲ್ಲೂಕಿನ ಹಿರಿಯರು ಮಹಿಳೆಯರು, ರೈತರು, ಈ ರಾಷ್ಟ್ರೀಯ ಜಾನುವಾರು ಗಣತಿಯನ್ನು ಎಲ್ಲರೂ ಗಣತಿದಾರರಿಗೆ ಸಹಕರಿಸಿ ಸಂಪೂರ್ಣವಾಗಿ ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಅಬ್ದುಲ ರಝಾಕ ಹೊರ್ತಿ, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೆಶಕ ಡಾ. ಬಿ ಎಸ್ ಕನಮಡಿ, ಮುಖ್ಯ ಪಶುವೈದ್ಯಾಧಿಕಾರಿ ಡಾ.ಸುಜಾತಾ ಎಸ್ ಎಮ್, ಹಿರಿಯ ಪಶುವೈದ್ಯಾಧಿಕಾರಿ ಡಾ.ಬಾಳಾಸಾಹೇಬ ಬಂಡಿ ಮತ್ತು ವಿಜಯಪುರ ತಾಲ್ಲೂಕಿನ ಎಲ್ಲ ಸಿಬ್ಬಂದಿ ಹಾಜರಿದ್ದರು.
ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ)
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ
ಪಶು ಆಸ್ಪತ್ರೆ ವಿಜಯಪೂರ

