Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇದೇ ಅ.೩೧ ರಿಂದ ೩ ರವರೆಗೆ ದೀಪಾವಳಿ ಹಬ್ಬ ಆಚರಿಸಲಾಗುತ್ತಿದ್ದು, ಸರ್ಕಾರದ ನಿರ್ದೇಶನ ಹಾಗೂ ಮಾರ್ಗಸೂಚಿಯಂತೆ ಈ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಬಳಸುವಂತೆ ಹಾಗೂ ರಾತ್ರಿ ೧೦ ಗಂಟೆವರೆಗೆ ಮಾತ್ರ ಪಟಾಕಿಗಳನ್ನು ಬಳಸಲು ಅವಕಾಶ ನೀಡಿದೆ, ಉಳಿದ ಸಮಯದಲ್ಲಿ ಪಟಾಕಿಗಳನ್ನು ಬಳಸುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ತಿಳಿಸಿದ್ದಾರೆ.ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲಾ ಪಟಾಕಿ ಮಾರಾಟ ವರ್ತಕರು ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಹಾಗೂ ಪರಿಹಸರ ಹಾನಿ ಉಂಟಾಗುವ ಯಾವುದೇ ಪಟಾಕಿಗಳನ್ನು ಮಾರಾಟ ಮಾಡಬಾರದೆಂದು ತಿಳಿಸಿದ್ದು, ಸಾರ್ವಜನಿಕರು ಸಹ ಹಸಿರು ಪಟಾಕಿಯನ್ನು ಬಳಸುವ ಮೂಲಕ ದೀಪಾವಳಿ ಹಬ್ಬವನ್ನ ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ತಿಕೋಟಾ: ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಎಂದು ನಮೂದಿಸಿರುವುದನ್ನು ಖಂಡಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಕರಾಳ ದೀಪಾವಳಿ ಹೋರಾಟಕ್ಕೆ ಬೆಂಬಲ ಸೂಚಿಸುವುದಾಗಿ ಬಬಲೇಶ್ವರ ಮಂಡಲ ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾ ಅಧ್ಯಕ್ಷ ಸಚಿನ ಗದ್ಯಾಳ ತಿಳಿಸಿದ್ದಾರೆ.ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ರೈತರ ಪಹಣಿಯಲ್ಲಿ ಕರ್ನಾಟಕ ವಕ್ಪ್ ಬೊರ್ಡ್ ಅಂತ ನಮೂದಿಸಿ ಕಾಂಗ್ರೇಸ್ ಸರ್ಕಾರ ರಾಜ್ಯದಲ್ಲಿ ಗೊಂದಲ ಸೃಷ್ಟಿಸಿದೆ. ರಾಜ್ಯದಲ್ಲಿಯೇ ವಿಜಯಪುರ ಜಿಲ್ಲೆಯನ್ನೆ ಟಾರ್ಗೇಟ್ ಮಾಡಿದೆ. ತಲೆತಲಾಂತರಗಳಿಂದ ಉಳುಮೆ ಮಾಡಿ ಜೀವನ ಸಾಗಿಸುತ್ತಿರುವ ರೈತರು ಸಂಕಷ್ಟಕ್ಕೆ ಸಿಲುಕಿ ಭೂಮಿ ಕಳೆದು ಹೋಗುತ್ತದೆ ಎಂಬ ಆತಂಕದಲ್ಲಿದ್ದಾರೆ.ಆತಂಕದಲ್ಲಿರುವ ರೈತರ ಸಂಕಷ್ಟಕ್ಕೆ ನೆರವಾಗಿ ಅವರ ಒಂದಿಚು ಭೂಮಿ ಕಳೆದು ಹೋಗದಂತೆ ಹೋರಾಟ ಮಾಡುತ್ತೇವೆ. ವಿವಿಧ ರೈತ ಸಂಘಟನೆಗಳು ನಡೆಸುವ ಕರಾಳ ದೀಪಾವಳಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸುವುದಾಗಿ ಅವರು ತಿಳಿಸಿದ್ದಾರೆ.
ಕರಡು ಮತದಾರರ ಪಟ್ಟಿ | ಮತದಾರ ಪಟ್ಟಿ ಪರಿಷ್ಕರಣೆ ವೇಳಾ ಪಟ್ಟಿ ನಿಗದಿ | ಜಿಲ್ಲಾ ಚುನಾವಣಾಧಿಕಾರಿ ಟಿ.ಭೂಬಾಲನ್ ಮಾಹಿತಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅರ್ಹತಾ ದಿನಾಂಕ : ೦೧-೦೧-೨೦೨೫ಕ್ಕೆ ಸಂಬಂಧಿಸಿದಂತೆ ಕರಡು ಮತದಾರ ಪಟ್ಟಿಯನ್ನು ಅ.೨೯ರಂದು ಪ್ರಕಟಿಸಲಾಗಿದ್ದು, ಅಂತಿಮ ಮತದಾರ ಪಟ್ಟಿಯನ್ನು ಪ್ರಕಟಿಸಲಾಗುವುದು ದಿನಾಂಕ : ೦೬-೦೧-೨೦೨೫ ರಂದು ಪ್ರಕಟಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ಪರಿಷ್ಕರಣೆ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದ್ದು, ವೇಳಾಪಟ್ಟಿಯಂತೆ ದಿನಾಂಕ : ೨೯-೧೦-೨೦೨೪ರ ಮಂಗಳವಾರ ಸಮಗ್ರ ಕರಡು ಮತದಾರ ಪಟ್ಟಿ ಪ್ರಕಟಿಸುವುದು, ಅ.೨೯ರಿಂದ ನವೆಂಬರ್ ೨೮ರವರೆಗೆ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಭರ್ತಿ ಮಾಡುವುದು ಹಾಗೂ ನವೆಂಬರ್ ೯,೧೦,೨೩ ಮತ್ತು ೨೪ರಂದು ಮತದಾರ ಪಟ್ಟಿ ಪರಿಷ್ಕರಣೆಗೆ ವಿಶೇಷ ಕ್ಯಾಂಪೇನ್‌ಗಳನ್ನು ಹಮ್ಮಿಕೊಳ್ಳುವುದು, ದಿನಾಂಕ : ೨೪-೧೨-೨೦೨೪ರಂದು ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ, ದಿನಾಂಕ : ೦೧-೦೧-೨೦೨೫…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾನಗರ ಪಾಲಿಕೆಯ ಆವರಣದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಮೂರ್ತಿ ಪ್ರತಿಷ್ಠಾಪನೆ ಮಾಡುವ ಕುರಿತು ವಿಜಯಪುರ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಠರಾವು ಪಾಸ ಮಾಡಲಾಗಿದೆ.ಈ ವಿಷಯದ ಬಗ್ಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ, ಈ ಪ್ರಕಟಣೆಯ ದಿನಾಂಕದಿಂದ ೩೦ ದಿವಸಗಳ ಒಳಗಾಗಿ ತಮ್ಮ ಆಕ್ಷೇಪಣೆಯನ್ನು ವಿಜಯಪುರ ಮಹಾನಗರಪಾಲಿಕೆಗೆ ಸಲ್ಲಿಸಬಹುದಾಗಿದೆ. ನಂತರ ಸ್ವೀಕೃತವಾಗುವ ಆಕ್ಷೇಪಣಾ ಪತ್ರಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರಾದ ವಿಜಯ ಮೆಕ್ಕಳಕಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರಸಕ್ತ ೨೦೨೪-೨೫ನೇ ಸಾಲಿನಲ್ಲಿ ನೈಸರ್ಗಿಕ ವಿಕೋಪಗಳಾದ ಪ್ರವಾಹ-ಅತಿವೃಷ್ಟಿಯಿಂದ ವಿಜಯಪುರ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಉಂಟಾ ಬೆಳೆ ಹಾನಿ ಪರಿಹಾರವನ್ನು ಪಾವತಿಸಲು ಬೆಳೆ ಹಾನಿಯಾದ ರೈತರ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ಆಯಾ ತಹಶೀಲ್ದಾರರು, ಆಯಾ ಗ್ರಾಮ ಪಂಚಾಯತ್ ಮತ್ತು ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಅ.೨೯ರಂದು ಪ್ರಕಟಿಸಲಾಗಿದೆ.ಪ್ರಕಟಿತ ಪಟ್ಟಿಗೆ ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ಸಂಬಂಧಿಸಿದ ತಹಶೀಲ್ದಾರ-ಕೃಷಿ ತೋಟಗಾರಿಕೆ ಇಲಾಖೆಗಳ ತಾಲೂಕಾ ಕಚೇರಿಗಳಲ್ಲಿ ೦೭ ದಿನಗಳೊಳಗಾಗಿ ದಿನಾಂಕ : ೦೮-೧೧-೨೦೨೪ರೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದ್ದು, ಜಿಲ್ಲೆಯ ಅಂತರ್ಜಾಲ ವಿಳಾಸ https://vijayapura.nic.inದಲ್ಲಿಯೂ ಸಹ ಪರಿಶೀಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ರಂಗೇರಿದ ಹಾಗಿದೆ ತಂಗಾಳಿ ನೋಡುಹೂಗಳ ಕಂಪ ಸೂಸಿ ಹಾಡಿದೆ ಹಾಡುಹಿತವಾಗಿ ನುಡಿಸಿದೆ ಸುಮಧುರ ಧಾಟಿನಿನ್ನೊಲವ ಭಾವದ ವೀಣೆಯ ಮೀಟಿ ಚೆಲುವೇರಿದೆ ತಾಣ ನಿನ್ನೆಡೆಗೆ ಬರುವಾಗಹಿತವಾಗಿದೆ ದಿನ ಮೊಗದಿ ನಗು ಕಂಡಾಗಅರಿಯದ ತವಕ ಹೃದಯವ ತುಂಬಿದಾಗಅದೇನೋ ಹುರುಪು ಹೆಜ್ಜೆಗಳಿಗೆ ಈಗೀಗ ಮನಸಾಗಿದೆ ಮರುಳಂತೆ ಕನಸ ಕೂಡಿಸಿಸೊಗಸಾದ ಹೂಗಳ ಹೃದಯದಿ ಅರಳಿಸಿಬಯಲಾಗಿದೆ ಒಲವು ಮನಸನು ಸೇರಿಸಿಜೊತೆ ಸೇರಿ ನಡೆವ ಕನಸನು ನನಸಾಗಿಸಿ – ಪುಷ್ಪ ಹೆಚ್.ಎಸ್ಶಿವಮೊಗ್ಗ
ಲೇಖನ- ಹೇಮಲತಾ ಉದಯರಶ್ಮಿ ದಿನಪತ್ರಿಕೆ ಹುಡುಗ ಜಾಣ ಆದರೆ ಗುರಿಯೆಡೆಗೆ ಗಮನವಿಲ್ಲ. ಓದಲು ಪುಸ್ತಕ ತೆರೆದರೆ ಸಾಕು ಮೇಲಿಂದ ಮೇಲೆ ಆಕಳಿಕೆ ತೂಕಡಿಕೆ ಹಸಿವು ಎಲ್ಲಾ ಒಮ್ಮೆಲೇ ದಾಳಿ ಮಾಡಿ ಪುಸ್ತಕ ಮುಚ್ಚುವಂತೆ ಮಾಡುತ್ತಿತ್ತು. ಇದೇ ಕಾರಣಕ್ಕೆ ಅಂಕಗಳಲ್ಲಿ ಸರಾಸರಿ ತೆಗೆದು ಪಾಸ್ ಆಗುವುದೇ ಮಹಾ ಭಾಗ್ಯ ಎನ್ನುವಂತಾಗಿ ಅಪ್ಪನ ಕೆಂಗಣ್ಣಿಗೆ ಗುರಿಯಾಗುತ್ತಿದ್ದ.ಮಗನ ಅಳು ಮನೆಯವರ ವಿರುಧ್ಧವಾದ ಅಭಿಪ್ರಾಯಗಳ ಮಧ್ಯೆಯೂ ದೀಪುವನ್ನು ಅವನ ತಂದೆ ದೊಡ್ಡ ಪಟ್ಟಣದ ಒಳ್ಳೆಯ ಹೆಸರಿದ್ದ ವಸತಿ ಸಮೇತದ ಶಾಲೆಗೆ ಸೇರಿಸಿ ಬಂದ.ಮರು ದಿನದಿಂದಲೇ ದೀಪುವಿಗೆ ಹಿರಿಯ ತರಗತಿಯ ವಿದ್ಯಾರ್ಥಿಗಳಿಂದ ರ್ಯಾಗಿಂಗ್ ಹೆಸರಲ್ಲಿನ ಕಿರುಕುಳ ಶುರುವಾಗಿತ್ತು. ಹೇಳಿದಂತೆ ಕೇಳದಿದ್ದರೇ ಚಿತ್ರ ಹಿಂಸೆ ಕೊಟ್ಟು ಅವಹೇಳನ ಮಾಡಿ ನಗುತ್ತಾ ಶಾಲೆಯ ಎಲ್ಲರಿಗೂ ಇವನು ಬರೀ ಅಂಗಿ ಚಡ್ಡಿ ಗಂಡಸು ಅಷ್ಟೇ. ಪುಕ್ಲ ಹುಡುಗಿರ ಹಾಗೆ, ಹೆಣ್ಣಪ್ಪಿ ಎಂದು ಉಳಿದ ವಿದ್ಯಾರ್ಥಿಗಳ ದೃಷ್ಟಿಯಲ್ಲಿ ಕೀಳಾಗಿಸುತ್ತಿದ್ದರು. ಊರಿಂದ ಕಳಿಸಿದ್ದ ಚಕ್ಲಿ ಕೊಬ್ರಿ ಮಿಠಾಯಿ ಉಂಡೆಗಳನ್ನೆಲ್ಲಾ ಕಿತ್ತುಕೊಂಡು ಅವನ ಮುಂದೆಯೇ ಹಂಚಿ ತಿಂದಿದ್ದರು.…
ಹುಲಜಂತಿಯಲ್ಲಿ ಮಾಳಿಂಗರಾಯನಿಗೆ ಮುಂಡಾಸ ಕಾರ್ಯಕ್ರಮ | ೩೦ಕ್ಕೂ ಹೆಚ್ಚು ದೇವರುಗಳ ಪಲ್ಲಕ್ಕಿಗಳ ಆಗಮನ ಉದಯರಶ್ಮಿ ದಿನಪತ್ರಿಕೆ ವರದಿ: ಸಿದ್ರಾಮ ಮಾಳಿಚಡಚಣ: ಸಮೀಪದ ಕರ್ನಾಟಕದ ಗಡಿಗೆ ಅಂಟಿಕೊಂಡಿರುವ ಮಹಾರಾಷ್ಟ್ರದ ಹುಲಜಂತಿ ಗ್ರಾಮದಲ್ಲಿ ಮಾಳಿಂಗರಾಯನ ಮುಂಡಾಸವು ಇದೇ ಗುರುವಾರ ರಾತ್ರಿ ನೆರವೇರಲಿದ್ದು ಹಾಗೂ ಮಾಳಿಂಗರಾಯನ ಭೇಟಿ ಕಾರ್ಯಕ್ರಮವು ಶುಕ್ರವಾರದಂದು ನೆರವೇರಲಿರುವ ಹಿನ್ನಲೆಯಲ್ಲಿ ಭಕ್ತರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.ಗುರುವಾರದಂದು ನೆರವೇರುವ ಈ ಮುಂಡಾಸವನ್ನು ನೋಡಲು ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನ ಸಾಗರ ರಾತ್ರಿ ವೇಳೆಯಲ್ಲಿಯೇ ಆಗಮಿಸುತ್ತಿದೆ. ಈ ಮುಂಡಾಸ್ ಯಾವ ದಿಕ್ಕಿನೆಡೆಗೆ ವಾಲಿರುತ್ತದೆ ಎಂಬುದರ ಮೇಲೆ ಮುಂಬರುವ ರಾಜಕೀಯ, ಸಾಮಾಜಿಕ ಹಾಗೂ ಮಳೆ-ಬೆಳೆಯನ್ನು ವಿಶ್ಲೇಷಿಸುವುದು ಇಲ್ಲಿನ ವಿಶೇಷ.ಭಂಡಾರದಲ್ಲಿ ಮಿಂದೇಳುವ ಭಕ್ತ ಸಮೂಹ: ಶುಕ್ರವಾರದಂದು ಸಾಯಂಕಾಲ ೩ ಗಂಟೆಗೆ ಮಾಳಿಂಗರಾಯನ ಭೇಟಿ ಕಾರ್ಯಕ್ರಮದಲ್ಲಿ ಶಿರಾಡೋಣದ ಬೀರಲಿಂಗೇಶ್ವರ, ಏಣಕಿ ಜಕರಾಯ, ಹುನ್ನೂರು ಬೀರಲಿಂಗೇಶ್ವರ ದೇವರುಗಳ ಪಲ್ಲಕ್ಕಿಗಳು ಸೇರಿದಂತೆ ೩೦ಕ್ಕೂ ಹೆಚ್ಚು ದೇವರುಗಳ ಪಲ್ಲಕ್ಕಿಗಳು ಸೇರಿದಂತೆ ಕಂಟಲು ಎತ್ತುಗಳು ದೇವಾಲಯದ ಎದುರಿನ ಹಳ್ಳದ…
ನಾಗರಿಕ ಮೇಲ್ವಿಚಾರಣಾ ಸಮಿತಿ ಸದಸ್ಯರ ತಿಕೋಟಾ ತಾಲೂಕು ಮಟ್ಟದ ಸಮಾವೇಶ ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಪಟ್ಟಣದಲ್ಲಿ ಅ.೨೮ ರಂದು ವಿಶಾಲಾ ಸ್ವಯಂ ಸೇವಾ ಸಂಸ್ಥೆ, ವಿಜಯಪುರ ವತಿಯಿಂದ ಅಜೀಂ ಪ್ರೇಮಜಿ ಪ್ರತಿಷ್ಠಾನದ ನೆರವಿನಿಂದ ತಿಕೋಟಾ ತಾಲೂಕಿನ ೦೬ ಗ್ರಾಮ ಪಂಚಾಯತಿಗಳಲ್ಲಿ ರಚನೆಯಾದ ನಾಗರಿಕ ಮೇಲ್ವಿಚಾರಣಾ ಸಮಿತಿ ಸದಸ್ಯರ ತಾಲೂಕು ಮಟ್ಟದ ಸಮಾವೇಶ ಜರುಗಿತು.ಸಮಾವೇಶಕ್ಕೆ ತಾಲೂಕು ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಬಸವರಾಜ ಸಂಕಗೊಂಡ ಚಾಲನೆ ನೀಡಿ, ಮಾತನಾಡಿದರು.ಸರಕಾರದ ಯೋಜನೆಗಳನ್ನು ಗ್ರಾಮೀಣ ಭಾಗದ ಜನರಿಗೆ ತಲುಪಿಸುವಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿವೆ. ಈ ನಿಟ್ಟಿನಲ್ಲಿ ಸಮಾವೇಶದಲ್ಲಿ ಭಾಗಿಯಾದ ಎಲ್ಲ ಸದಸ್ಯರು ಇಲ್ಲಿ ಪಡೆದುಕೊಂಡ ಮಾಹಿತಿಯನ್ನು ನಿಮ್ಮ ಗ್ರಾಮದ ಇತರ ಜನರಿಗೂ ತಿಳಿಸಿ ಹೇಳಿ ಅವರಿಗೂ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಪ್ರೇರೆಪಿಸಬೇಕು ಎಂದರು.ವಿಶಾಲಾ ಸಂಸ್ಥೆಯ ನಿರ್ದೇಶಕಿ ಸರೋಜಾ ಕಮಲಾಪುರ ಮಾತನಾಡಿ, ಸಂಸ್ಥೆ ಬೆಳೆದು ಬಂದ ದಾರಿಯ ಕುರಿತು ಮಾಹಿತಿ ನೀಡಿದರು.ತಾಲೂಕು ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಂಯೋಜನಾಧಿಕಾರಿ ಕಲ್ಲಪ್ಪ ನಂದರಗಿ ಮಾತನಾಡಿ, ಮಹಾತ್ಮ ಗಾಂಧಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪರವಾನಗಿ ಭೂಮಾಪಕರರ ಮೇಲೆ ಪದೇ ಪದೇ ಪದೇ ಹಲ್ಲೆಯಾಗುತ್ತಿರುವುದನ್ನು ಖಂಡಿಸಿ, ಶಾಶ್ವತ ಪರಿಹಾರಕ್ಕಾಗಿ ರಾಜ್ಯ ಪರವಾನಗಿ ಭೂಮಾಪಕರ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾಧಿಕಾರಿಗಳ ಭೂಮಾಪನ ತಾಂತ್ರಿಕ ಸಹಾಯಕರು ಹಾಗು ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.ಬಸವನಬಾಗೇವಾಡಿ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೋಲ್ಹಾರ ತಾಲೂಕು ಕಾರ್ಯಕ್ಷೇತ್ರವನ್ನು ಹೊಂದಿರುವ ಭೂಮಾಪಕ ಸದಾನಂದ ಹೆಗಡ್ಯಾಳರವರ ಮೇಲೆ ಹಲ್ಲೆಯಾಗಿದ್ದನ್ನು ಖಂಡಿಸಿ ಸಾಂಕೇತಿಕವಾಗಿ ಪ್ರತಿಭಟನೆ ಕೈಗೊಂಡು ಮನವಿ ಪತ್ರ ನೀಡಲಾಯಿತು.ಈ ವೇಳೆ ರಾಜ್ಯ ಸಂಘದ ಉಪಾಧ್ಯಕ್ಷ ಎಸ್ ಕೆ. ಗಂಗಾಧರ ಮಾತನಾಡಿ, ಅತೀ ಸೂಕ್ಷ್ಮಪ್ರಕರಣಗಳಾದಂತ ಹದ್ದುಬಸ್ತು, ಕೋರ್ಟಕೇಸ್, ಪೋಡಿ ಮತ್ತು ತಕರಾರು ಪ್ರಕರಣಗಳನ್ನು ಯಾವುದೇ ಸೇವಾಭದ್ರತೆ, ಜೀವಭದ್ರತೆ, ಸಹಾಯಕರು (ಬಾಂದಜವಾನರು) ಹಾಗೂ ಕನಿಷ್ಟವೇತನ ಇಲ್ಲದೇ ಪ್ರಕರಣಗಳನ್ನು ಹಂಚಿಕೆ ಮಾಡುತ್ತಿರುವುದು ಖಂಡನೀಯ. ಈ ಘಟನೆಗೆ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದರು.ಜಿಲ್ಲಾ ಅಧ್ಯಕ್ಷ ಲಾಲಸಾಬ ಹುಸೇನಸಾಬ ಮುಲ್ಲಾ ಮಾತನಾಡಿ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ವ್ಯಕ್ತಿಗಳ ಮೇಲೆ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.ನಿರ್ದೇಶಕರಾದ ಷಣ್ಮುಕ ಪಿ…
