Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 27, 2026

ವಿವಿಧ ಬೇಡಿಕೆಗಳ ಈಡೇರಿಕೆಗೆ ಡಿಎಸ್ಎಸ್ ಧರಣಿ ಸತ್ಯಾಗ್ರಹ

ಗ್ರಾಹಕರ ಕಾಯ್ದೆಯಿಂದ ನ್ಯಾಯಸಮ್ಮತ ಸೇವೆ, ಸುರಕ್ಷಿತ ಉತ್ಪನ್ನ ಲಭ್ಯ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಜಿಲ್ಲೆಯಲ್ಲಿ ೨೦೯೨ ಮತಗಟ್ಟೆ- ೧೯,೫೫,೮೫೩ ಮತದಾರರು
(ರಾಜ್ಯ ) ಜಿಲ್ಲೆ

ಜಿಲ್ಲೆಯಲ್ಲಿ ೨೦೯೨ ಮತಗಟ್ಟೆ- ೧೯,೫೫,೮೫೩ ಮತದಾರರು

By Updated:No Comments4 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಕರಡು ಮತದಾರರ ಪಟ್ಟಿ | ಮತದಾರ ಪಟ್ಟಿ ಪರಿಷ್ಕರಣೆ ವೇಳಾ ಪಟ್ಟಿ ನಿಗದಿ | ಜಿಲ್ಲಾ ಚುನಾವಣಾಧಿಕಾರಿ ಟಿ.ಭೂಬಾಲನ್ ಮಾಹಿತಿ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅರ್ಹತಾ ದಿನಾಂಕ : ೦೧-೦೧-೨೦೨೫ಕ್ಕೆ ಸಂಬಂಧಿಸಿದಂತೆ ಕರಡು ಮತದಾರ ಪಟ್ಟಿಯನ್ನು ಅ.೨೯ರಂದು ಪ್ರಕಟಿಸಲಾಗಿದ್ದು, ಅಂತಿಮ ಮತದಾರ ಪಟ್ಟಿಯನ್ನು ಪ್ರಕಟಿಸಲಾಗುವುದು ದಿನಾಂಕ : ೦೬-೦೧-೨೦೨೫ ರಂದು ಪ್ರಕಟಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ಪರಿಷ್ಕರಣೆ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದ್ದು, ವೇಳಾಪಟ್ಟಿಯಂತೆ ದಿನಾಂಕ : ೨೯-೧೦-೨೦೨೪ರ ಮಂಗಳವಾರ ಸಮಗ್ರ ಕರಡು ಮತದಾರ ಪಟ್ಟಿ ಪ್ರಕಟಿಸುವುದು, ಅ.೨೯ರಿಂದ ನವೆಂಬರ್ ೨೮ರವರೆಗೆ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಭರ್ತಿ ಮಾಡುವುದು ಹಾಗೂ ನವೆಂಬರ್ ೯,೧೦,೨೩ ಮತ್ತು ೨೪ರಂದು ಮತದಾರ ಪಟ್ಟಿ ಪರಿಷ್ಕರಣೆಗೆ ವಿಶೇಷ ಕ್ಯಾಂಪೇನ್‌ಗಳನ್ನು ಹಮ್ಮಿಕೊಳ್ಳುವುದು, ದಿನಾಂಕ : ೨೪-೧೨-೨೦೨೪ರಂದು ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ, ದಿನಾಂಕ : ೦೧-೦೧-೨೦೨೫ ರಂದು ಆರೋಗ್ಯ ನಿಯತಾಂಕಗಳನ್ನು ಪರಿಶೀಲಿಸುವುದು ಮತ್ತು ಅಂತಿಮ ಪಟ್ಟಿ ಪ್ರಕಟಣೆಗೆ ಆಯೋಗದ ಅನುಮತಿ ಪಡೆಯುವುದು ಮತ್ತು ದಿನಾಂಕ : ೦೬-೦೧-೨೦೨೫ ರಂದು ಅಂತಿಮ ಮತದಾರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮತದಾರರ ವಿವರ : ಕರಡು ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ ೨೦೯೨ ಮತಗಟ್ಟೆಗಳು ಹಾಗೂ ೧೯,೫೫,೮೫೩ ಮತದಾರರಿದ್ದಾರೆ. ವಿಧಾನಸಭಾವಾರು ವಿವರದಂತೆ ೨೬-ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ೧,೧೩,೩೯೨ ಗಂಡು, ೧,೧೨,೧೨೪ ಹೆಣ್ಣು ಹಾಗೂ ೨೫ ಇತರೆ ಮತದಾರರು ಸೇರಿದಂತೆ ಒಟ್ಟು ೨,೨೫,೫೪೧ ಮತದಾರರಿದ್ದಾರೆ.
೨೭-ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ೧,೧೫,೮೩೩ ಗಂಡು, ೧,೧೧,೦೪೫ ಹೆಣ್ಣು ಹಾಗೂ ೨೪ ಇತರೆ ಮತದಾರರು ಸೇರಿದಂತೆ ೨,೨೬,೯೦೨ ಮತದಾರರಿದ್ದಾರೆ. ೨೮-ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ೧,೧೦,೯೧೬ ಗಂಡು, ೧,೦೮,೨೪೬ ಹೆಣ್ಣು, ಹಾಗೂ ೧೬ ಇತರೆ ಮತದಾರರು ಸೇರಿದಂತೆ ೨,೧೯,೧೭೮ ಮತದಾರರಿದ್ದಾರೆ.
೨೯-ಬಬಲೇಶ್ವರ ಮತಕ್ಷೇತ್ರದಲ್ಲಿ ೧,೧೩,೦೧೫ ಗಂಡು, ೧,೦೯,೮೮೪ ಹೆಣ್ಣು ಹಾಗೂ ೭ ಇತರೆ ಮತದಾರರು ಸೇರಿದಂತೆ ೨,೨೨,೯೦೬ ಮತದಾರರಿದ್ದಾರೆ. ೩೦-ಬಿಜಾಪೂರ ನಗರ ಮತಕ್ಷೇತ್ರದಲ್ಲಿ ೧,೪೨,೪೨೦ ಗಂಡು, ೧,೪೬,೨೧೪ ಹೆಣ್ಣು ಹಾಗೂ ೯೫ ಇತರೆ ಮತದಾರರು ಸೇರಿದಂತೆ ೨,೮೮,೭೨೯ ಮತದಾರರಿದ್ದಾರೆ.
೩೧-ನಾಗಠಾಣ ಮತಕ್ಷೇತ್ರದಲ್ಲಿ ೧,೪೧,೫೬೦ ಗಂಡು, ೧,೩೫,೧೪೮ ಹೆಣ್ಣು ಹಾಗೂ ೫ ಇತರೆ ಮತದಾರರು ಸೇರಿದಂತೆ ೨,೭೬,೭೧೩ ಮತದಾರರಿದ್ದಾರೆ. ೩೨-ಇಂಡಿ ಮತಕ್ಷೇತ್ರದಲ್ಲಿ ೧,೨೯,೩೬೮ ಗಂಡು, ೧,೨೧,೯೭೮ ಹೆಣ್ಣು ಹಾಗೂ ೧೮ ಇತರೆ ಮತದಾರರು ಸೇರಿದಂತೆ ೨,೫೧,೩೬೪ ಮತದಾರರಿದ್ದಾರೆ.
೩೩-ಸಿಂದಗಿ ಮತಕ್ಷೇತ್ರದಲ್ಲಿ ೧,೨೪,೮೪೦ ಗಂಡು, ೧,೧೯,೬೫೧ ಹೆಣ್ಣು ಹಾಗೂ ೨೯ ಇತರೆ ಮತದಾರರು ಸೇರಿದಂತೆ ೨,೪೪,೫೨೦ ಮತದಾರರಿದ್ದಾರೆ. ಜಿಲ್ಲೆಯಾದ್ಯಂತ ಒಟ್ಟಾರೆ ೯,೯೧,೩೪೪ ಗಂಡು, ೯,೬೪,೨೯೦ ಹೆಣ್ಣು ಹಾಗೂ ೨೧೯ ಇತರೆ ಮತದಾರರು ಸೇರಿದಂತೆ ಒಟ್ಟು ೧೯,೫೫,೮೫೩ ಮತದಾರರಿದ್ದಾರೆ.
ಮತಗಟ್ಟೆಗಳ ವಿವರ :ಜಿಲ್ಲೆಯಲ್ಲಿರುವ ೨೦೮೫ ಮತಗಟ್ಟೆಗಳ ಪೈಕಿ ಚುನಾವಣಾ ಆಯೋಗದ ಅನುಮೋದನೆಯೊಂದಿಗೆ ಮತಗಟ್ಟೆಗಳ ದೃವೀಕರಣ ಕಾರ್ಯ ಕೈಗೊಂಡು ೦೧ ಮತಗಟ್ಟೆಯ ಒಂದೇ ಕಟ್ಟಡದಲ್ಲಿರುವ ಮತಗಟ್ಟೆಯ ಮತದಾರರನ್ನು ಪಕ್ಕದಲ್ಲಿರುವ ಮತಗಟ್ಟೆಗೆ ವಿಲೀನಗೊಳಿಸಲಾಗಿದೆ. ೧೫೦೦ಕ್ಕಿಂತ ಹೆಚ್ಚಿಗೆ ಮತದಾರರಿರುವ ಮತಗಟ್ಟೆಗಳಲ್ಲಿ ೦೮ ಹೊಸದಾಗಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ೧೯ ಮತಗಟ್ಟೆಗಳ ಹೆಸರು ಬದಲಾವಣೆಯಾಗಿದೆ.೦೯ ಮತಗಟ್ಟೆಗಳ ಸ್ಥಳ ಬದಲಾವಣೆಯಾಗಿದೆ. ಮತಗಟ್ಟೆಗಳ ದೃವೀಕರಣದ ನಂತರ ಜಿಲ್ಲೆಯಲ್ಲಿ ಅಂತಿಮವಾಗಿ ಒಟ್ಟು ೨೦೯೨ ಮತಗಟ್ಟೆಗಳು ಅಸ್ವಿತ್ವದಲ್ಲಿವೆ.
ವಿಧಾನಸಭಾವಾರು ಮತಗಟ್ಟೆಗಳ ವಿವರದಂತೆ ೨೬-ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಈ ಮೊದಲು ೨೪೫ ಮತಗಟ್ಟೆಗಳಿದ್ದು, ೦೧ ಹೊಸದಾಗಿ ಮತಗಟ್ಟೆ ಸ್ಥಾಪಿಸಲಾಗಿದ್ದು, ೨೪೬ ಮತಗಟ್ಟೆಗಳಿವೆ. ೨೭-ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ೨೫೨ ಮತಗಟ್ಟೆಗಳಿವೆ. ೨೮-ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ಈ ಮೊದಲು ೨೩೦ ಮತಗಟ್ಟೆಗಳಿದ್ದು, ಹೊಸದಾಗಿ ೦೧ ಮತಗಟ್ಟೆ ಸ್ಥಾಪಿಸಲಾಗಿದ್ದು, ೨೩೧ ಮತಗಟ್ಟೆಗಳಿವೆ.
೨೯-ಬಬಲೇಶ್ವರ ಮತಕ್ಷೇತ್ರದಲ್ಲಿ ಈ ಮೊದಲು ೨೪೩ ಮತಗಟ್ಟೆಗಳಿದ್ದು, ಹೊಸಾಗಿ ೦೧ ಮತಗಟ್ಟೆ ಸ್ಥಾಪಿಸಲಾಗಿದ್ದು, ೨೪೪ ಮತಗಟ್ಟೆಗಳಿವೆ. ೩೦-ಬಿಜಾಪೂರ ನಗರ ಮತಕ್ಷೇತ್ರದಲ್ಲಿ ಈ ಮೊದಲು ೨೮೨ ಮತಗಟ್ಟೆಗಳಿದ್ದು, ಹೊಸದಾಗಿ ೦೩ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು ೨೮೫ ಮತಗಟ್ಟೆಗಳಿವೆ. ೩೧-ನಾಗಠಾಣ ಮತಕ್ಷೇತ್ರದಲ್ಲಿ ಈ ಮೊದಲು ೨೯೭ ಮತಗಟ್ಟೆಗಳಿದ್ದು, ಹೊಸದಾಗಿ ೦೨ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ೨೯೯ ಮತಗಟ್ಟೆಗಳಿವೆ. ೩೨-ಇಂಡಿ ಮತಕ್ಷೇತ್ರದಲ್ಲಿ ೨೬೮ ಮತಗಟ್ಟೆಗಳಿವೆ.
೩೩-ಸಿಂದಗಿ ಮತಕ್ಷೇತ್ರದಲ್ಲಿ ಈ ಮೊದಲು ೨೬೮ ಮತಗಟ್ಟೆಗಳಿದ್ದು, ೦೧ ಮತಗಟ್ಟೆ ವಿಲೀನಗೊಳಿಸಲಾಗಿದ್ದು, ಪ್ರಸ್ತುತ ೨೬೭ ಮತಗಟ್ಟೆಗಳು ಅಸ್ವಿತ್ವದಲ್ಲಿವೆ.
ಹೆಸರು ಸೇರ್ಪಡೆಗೆ ೦೪ ಅರ್ಹತಾ ದಿನಾಂಕ : ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಜನೇವರಿ-೦೧, ಎಪ್ರಿಲ್-೦೧, ಜುಲೈ-೦೧ ಹಾಗೂ ಅಕ್ಟೋಬರ್-೦೧ ರಂದು ಅವಕಾಶ ಕಲ್ಪಿಸಲಾಗಿದೆ. ಅರ್ಹ ಮತದಾರರು ಹೆಸರು ಸೇರ್ಪಡೆಗೆ ನಮೂನೆ ೬ ರಲ್ಲಿ ಅರ್ಜಿ ಸಲ್ಲಿಸಿ ಹೆಸರು ಸೇರ್ಪಡೆಗೊಳಿಸಲು ಅವಕಾಶ ಕಲ್ಪಿಸಲಾಗಿದೆ.
ಮತದಾರರು ತಮ್ಮ ಮತದಾರರುತಮ್ಮ ಹೆಸರು ಮತದಾರರ ಪಟ್ಟಿಯಲ್ಲಿರುವದನ್ನು Voter Help line Mobile App Or VSP Portal Or www.ceo.karnataka.gov.in)ಮುಖಾಂತರ ಪರಿಶೀಲಿಸಿ ಖಚಿತಪಡಿಸಿಕೊಳ್ಳಬಹುದಾಗಿದೆ. ಖಚಿತಪಡಿಸಿಕೊಂಡ ನಂತರ ಯಾವುದಾರರೂ ತಿದ್ದುಪಡಿ, ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು, ಹೊಸ ಸೇರ್ಪಡೆಗಾಗಿ ಹಕ್ಕು ಮತ್ತು ಆಕ್ಷೇಪಣೆ ಅವಧಿಯಲ್ಲಿ ಅಂದರೆ ದಿನಾಂಕ:೨೯.೧೦.೨೦೨೪ರಿAದ೨೮.೧೧.೨೦೨೪ರ ವರೆಗೆ ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ನಿಗದಿತ ನಮೂನೆಗಳಲ್ಲಿ ಸಲ್ಲಿಸಲು ಅವಕಾಶವಿರುತ್ತದೆ. ಈ ಅವಧಿಯಲ್ಲಿ ಹೊಸದಾಗಿ ಸೇರ್ಪಡೆಗೊಳಿಸಲು ನಮೂನೆ ೬, ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ತೆಗೆದುಹಾಕಲು ನಮೂನೆ ೭, ಮತದಾರರ ಗುರುತಿನ ಚೀಟಿಗೆ ಆಧಾರ ಸಂಖ್ಯೆ ಅಥವಾ ಇತರೆ ದಾಖಲೆಗಳ ಜೋಡಣೆ ಮಾಡಲು ನಮೂನೆ ೬ “ಬಿ” ಮತದಾರರ ಪಟ್ಟಿಯಲ್ಲಿನ ತಿದ್ದುಪಡಿ, ಬದಲಿ ಗುರುತಿನ ಚೀಟಿ, ಮತದಾರರು ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೊಂದು ವಿಧಾನಸಭಾ ಕ್ಷೇತ್ರಕ್ಕೆ ಅಥವಾ ಒಂದೇ ವಿಧಾನಸಭಾ ಕ್ಷೇತ್ರದಲ್ಲಿರುವ ಭಾಗಕ್ಕೆ ಸ್ಥಳಾಂತರಕ್ಕಾಗಿ ನಮೂನೆ ೮ರಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.
ಹಕ್ಕು ಮತ್ತು ಆಕ್ಷೇಪಣೆ ಅವಧಿಯಲ್ಲಿ ಸೇರ್ಪಡೆಗಾಗಿ ಸ್ವೀಕೃತವಾಗುವ ಅರ್ಜಿಗಳಿಗೆ ಸಂಬಂಧಿಸಿದಂತೆ, ಸ್ವೀಕೃತವಾಗುವ ಅರ್ಜಿಗಳ ಪಟ್ಟಿಯನ್ನು ನಮೂನೆ ೯ ರಲ್ಲಿ, ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡ ಮತದಾರರ ಕುರಿತು ಸಲ್ಲಿಸಲಾಗುವ ಆಕ್ಷೇಪಣೆಗಳ ಪಟ್ಟಿಯನ್ನು ನಮೂನೆ ೧೦ ರಲ್ಲಿ,ಹಾಗೂ ಮತದಾರರ ಪಟ್ಟಿಯಲ್ಲಿರುವ ತಮ್ಮ ಹೆಸರಿನ ತಿದ್ದುಪಡಿಗಾಗಿ ಸಲ್ಲಿಸಲಾಗುವ ಅರ್ಜಿಗಳ ಪಟ್ಟಿಯನ್ನು ನಮೂನೆ ೧೧ ರಲ್ಲಿ, ಒಂದೇ ವಿಧಾನಸಭಾ ಮತಕ್ಷೇತ್ರ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ಸ್ಥಳಾಂತರಕ್ಕಾಗಿ ಸಲ್ಲಿಸಲಾಗುವ ಅರ್ಜಿಗಳ ಪಟ್ಟಿಯನ್ನು ನಮೂನೆ೧೧ಎ ರಲ್ಲಿ ಹಾಗೂ ವಿಧಾನಸಭಾ ಮತಕ್ಷೇತ್ರದಿಂದ ಬೇರೊಂದು ವಿಧಾನಸಭಾ ಮತಕ್ಷೇತ್ರಕ್ಕೆ ಸ್ಥಳಾಂತರಕ್ಕಾಗಿ ಸಲ್ಲಿಸಲಾಗುವ ಅರ್ಜಿಗಳ ಪಟ್ಟಿಯನ್ನು ನಮೂನೆ ೧೧ ಬಿ ರಲ್ಲಿ ಸಲ್ಲಿಸಬಹುದಾಗಿದೆ.
ಮತದಾರರ ಪಟ್ಟಿಗೆ ಸಂಬಂಧಿಸಿದಂತೆ (ಹೊಸ ಸೇರ್ಪಡೆ,ತಿದ್ದುಪಡಿ, ಸ್ಥಳಾಂತರ ಇತ್ಯಾದಿ)ಆನ್‌ಲೈನ್ ಫಾರ್ಮ್ಯಾಟ್ ಗಳನ್ನು ವ್ಹಿ.ಎಚ್.ಎ.,(Voter Helpline App) «.J¸ï.¦. (Voters Services Portal)ಹಾಗೂ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಸಂಪರ್ಕಿಸಿ ಬಿಎಲ್‌ಓ ಆಪ್ ಮೂಲಕವೂ ಕೂಡಾ ಅರ್ಜಿನ್ನು ಸಲ್ಲಿಸಬಹುದಾಗಿದೆ.
ಹಕ್ಕು ಮತ್ತು ಆಕ್ಷೇಪಣೆ ಸಮಯದಲ್ಲಿ ಸ್ವೀಕೃತವಾಗುವ ಎಲ್ಲ ಆಕ್ಷೇಪಣೆಗಳನ್ನು ದಿನಾಂಕ : ೨೪-೧೨-೨೦೨೪ರೊಳಗಾಗಿ ಇತ್ಯರ್ಥಪಡಿಸಲಾಗುವುದು. ದಿನಾಂಕ : ೦೬-೦೧-೨೦೨೫ ರಂದು ಅಂತಿಮ ಮತದಾರ ಪಟ್ಟಿಯನ್ನು ಪ್ರಕಟಿಸಲಾಗುವುದು. ಮತದಾರ ಪಟ್ಟಿಗೆ ಸಂಬಂಧಿಸಿದಂತೆ ಗೊಂದಲ-ಸಮಸ್ಯೆಗಳಿದ್ದಲ್ಲಿ ಜಿಲ್ಲೆಯ ಮತದಾರ ನೋಂದಣಾಧಿಕಾರಿ, ಸಹಾಯಕ ಮತದಾರರ ನೊಂದಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗೆ ಮತ್ತು ದೂರು ನಿರ್ವಹಣಾ ಕೇಂದ್ರದ ಟೋಲ್ ಫ್ರೀ ಸಂಖ್ಯೆ ೧೯೫೦ಗೆ ಕರೆ ಮಾಡಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 27, 2026

ವಿವಿಧ ಬೇಡಿಕೆಗಳ ಈಡೇರಿಕೆಗೆ ಡಿಎಸ್ಎಸ್ ಧರಣಿ ಸತ್ಯಾಗ್ರಹ

ಗ್ರಾಹಕರ ಕಾಯ್ದೆಯಿಂದ ನ್ಯಾಯಸಮ್ಮತ ಸೇವೆ, ಸುರಕ್ಷಿತ ಉತ್ಪನ್ನ ಲಭ್ಯ

ಮಾ.೩೦ ರಿಂದ ಲಿವರ್ ಸಮಸ್ಯೆ ಕುರಿತು ಉಚಿತ ತಪಾಸಣೆ & ಚಿಕಿತ್ಸೆ ಶಿಬಿರ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 27, 2026
    In ದಿನಪತ್ರಿಕೆ
  • ವಿವಿಧ ಬೇಡಿಕೆಗಳ ಈಡೇರಿಕೆಗೆ ಡಿಎಸ್ಎಸ್ ಧರಣಿ ಸತ್ಯಾಗ್ರಹ
    In (ರಾಜ್ಯ ) ಜಿಲ್ಲೆ
  • ಗ್ರಾಹಕರ ಕಾಯ್ದೆಯಿಂದ ನ್ಯಾಯಸಮ್ಮತ ಸೇವೆ, ಸುರಕ್ಷಿತ ಉತ್ಪನ್ನ ಲಭ್ಯ
    In (ರಾಜ್ಯ ) ಜಿಲ್ಲೆ
  • ಮಾ.೩೦ ರಿಂದ ಲಿವರ್ ಸಮಸ್ಯೆ ಕುರಿತು ಉಚಿತ ತಪಾಸಣೆ & ಚಿಕಿತ್ಸೆ ಶಿಬಿರ
    In (ರಾಜ್ಯ ) ಜಿಲ್ಲೆ
  • ರಾಷ್ಟ್ರಕವಿ ಶಿವರುದ್ರಪ್ಪನವರು ಕನ್ನಡದ ಅಸ್ಮಿತೆ :ಪ್ರೊ.ಮೇತ್ರಿ
    In (ರಾಜ್ಯ ) ಜಿಲ್ಲೆ
  • ಮುಂದುವರೆದ ಅಡುಗೆ ಅನಿಲ ಸಿಲಿಂಡರ್‌ಗಳ ಅಭಾವ
    In (ರಾಜ್ಯ ) ಜಿಲ್ಲೆ
  • ಕಾಂಗ್ರೆಸ್ ಅಭ್ಯರ್ಥಿಗೆ 25 ಸಾವಿರ ಮತಗಳ ಅಂತರದ ಗೆಲುವು ಖಚಿತ
    In (ರಾಜ್ಯ ) ಜಿಲ್ಲೆ
  • ಮಾ.31ರಂದು ವಿಶ್ವ ಮಹಿಳಾ ದಿನಾಚರಣೆ & ಮುತ್ತೈದೆಯರಿಗೆ ಉಡಿ ತುಂಬುವಿಕೆ
    In (ರಾಜ್ಯ ) ಜಿಲ್ಲೆ
  • ರಾಮನ ಜೀವನದ ಮೌಲ್ಯಗಳು ಬದುಕಿಗೆ ಶಾಶ್ವತ ಪ್ರೇರಣೆ
    In ವಿಶೇಷ ಲೇಖನ
  • ಬಿರುಗಾಳಿ – ವರುಣನ ಅರ್ಭಟಕ್ಕೆ ನಲುಗಿದ ದ್ರಾಕ್ಷಿ ಬೆಳೆಗಾರರು
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.