Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಚಡಚಣ: ಪಟ್ಟಣದ ಪಂಚಾಯತ ಮಟ್ಟದ ಕ್ರೀಡಾಕೂಟದಲ್ಲಿ ಸಂಗಮೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಅಮೋಘ ಸಾಧನೆ ಮಾಡಿದ್ದಾರೆ.ಬಾಲಕರ ವಯಕ್ತಿಕ ವಿಭಾಗದಲ್ಲಿ 400 m ಓಟ ಸಿದ್ದರಾಮ ಚೌದ್ರಿ ಪ್ರಥಮ, ರೋಹನ ಬನಸೋಡೆ ತೃತೀಯ, ಗುಂಡು ಎಸೆತ ಶ್ರೀನಾಥ್ ನಿಂಬರಗಿ ಪ್ರಥಮ,ಉದ್ದಜಿಗಿತ ಸಿದ್ದರಾಮ ಚೌದರಿ ಪ್ರಥಮ, 80 ಮೀಟರ್ ಅಡೆತಡೆ ಓಟ ಸಿದ್ಧರಾಮ ಚೌದರಿ ದ್ವಿತೀಯ, ಗುಂಪು ಆಟದಲ್ಲಿ ರಿಲೇ ಕಬ್ಬಡ್ಡಿ ವಾಲಿಬಾಲ್ ಥ್ರೋ ಬಾಲ್ ನಾಲ್ಕು ಆಟದಲ್ಲಿ ಪ್ರಥಮ ಸ್ಥಾನ ಗಳಿಸಿ ಅಮೋಘ ಸಾಧನೆ ಮಾಡಿದ್ದಾರೆ.ಬಾಲಕಿಯರ ವಿಭಾಗದಲ್ಲಿ 400 ಮೀಟರ್ ಗೌರಿ ಬಗಲಿ ತೃತೀಯ 600 m ರೀತು ನಿಗಡಿ ತೃತೀಯ, ಚಕ್ರ ಎಸೆತ ರೇವತಿ ಅವಟಿ ಪ್ರಥಮ, ಎತ್ತರ ಜಿಗಿತ ಅಂಕಿತಾ ಕೋಣ ಪ್ರಥಮ,ಉದ್ದ ಜಿಗಿತ ನಿಖಿತಾ ಉಪ್ಪಾರ ದ್ವಿತೀಯ, ಸ್ಥಾನ ಪಡೆದು ಅಮೊಘ ಸಾಧನೆ ಮಾಡಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆಈ ಮಕ್ಕಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ.ಎಸ್ ಆರ್ ಡೋಣಗಾವ್,ಮತ್ತು ಆಡಳಿತ ಅಧಿಕಾರಿಗಳಾದ ಡಾ.ಎಸ್ ಎಸ್ ಜೋರಗಿ…
ವಿಜಯಪುರ: ೨೦೨೪-೨೫ನೇ ಸಾಲಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಪರಿಶಿಷ್ಟ ಜಾತಿ ಉಪಯೋಜನೆಯಡಿಯಲ್ಲಿ ಅನುಷ್ಟಾನಗೊಳಿಸುತ್ತಿರುವ ವಿವಿಧ ತರಬೇತಿಗಳಿಗೆ ಅರ್ಹ ಪರಿಶಿಷ್ಟ ಜಾತಿಯ ಯುವಕ / ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ೧೯-೦೯-೨೦೨೪ ರಿಂದ ೦೩-೧೦-೨೦೨೪ರವರೆಗೆ ೧೫ ದಿನಗಳ ಕಾಲ ನಡೆಯುವ ಜಿಮ್ ಫಿಟ್ನೆಸ್ ತರಬೇತಿ ಶಿಬಿರ, ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ದಿನಾಂಕ: ೨೧-೦೯-೨೦೨೪ ರಿಂದ ೦೩-೧೦-೨೦೨೪ರವರೆಗೆ ೧೩ ದಿನಗಳ ಕಾಲ ಮಹಿಳೆಯರಿಗಾಗಿ ನಡೆಯುವ ಬ್ಯೂಟೀಷಿಯನ್ ತರಬೇತಿ ಶಿಬಿರ ಹಾಗೂ ದಿನಾಂಕ: ೦೪-೧೦-೨೦೨೪ ರಿಂದ ೦೯-೧೦-೨೦೨೪ರವರೆಗೆ ೬ ದಿನಗಳ ಕಾಲ ಚಾಟ್ಸ್ ತಯಾರಿಕೆ ತರಬೇತಿ ಶಿಬಿರ ನಡೆಯಲಿದೆ.ಆಸಕ್ತ ಎಸ್‌ಎಸ್‌ಎಲ್‌ಸಿ ಪಾಸ್/ಫೇಲ್ ಆದ ಯುವಕ/ಯುವತಿಯರು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರ್ಯಾಲಯದಿಂದ ಅರ್ಜಿಗಳನ್ನು ಪಡೆದುಕೊಂಡು ದಿನಾಂಕ: ೧೩-೦೯-೨೦೨೪ ರಂದು ಸಾಯಂಕಾಲ ೫. ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ: ೦೮೩೫೨-೨೫೧೦೮೫ ಮೊ.೮೭೯೨೧೮೫೧೪೧ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ…
ವಿಜಯಪುರ: ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಬಾಲಕರಿಗೆ ಹೊಯ್ಸಳ ಮತ್ತು ಬಾಲಕಿಯರಿಗೆ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ೬ ರಿಂದ ೧೮ ವರ್ಷದೊಳಗಿನ ಮಕ್ಕಳು ತಮ್ಮ ಪ್ರಾಣದ ಹಂಗನ್ನು ತೊರೆದು ಹಾಗೂ ಸಮಯ ಪ್ರಜ್ಞೆಯಿಂದ ಇತರರ ಪ್ರಾಣದ ರಕ್ಷಣೆಗಾಗಿ ಧೈರ್ಯ ಸಾಹಸ ಪ್ರದರ್ಶಿಸಿದ ಬಾಲಕರಿಗೆ ಹೊಯ್ಸಳ ಮತ್ತು ಬಾಲಕಿಯರಿಗೆ ಕೆಳದಿ ಚೆನ್ನಮ್ಮ ಪ್ರಶಸ್ತಿಯನ್ನು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತದೆ. ಧೈರ್ಯ ಸಾಹಸ ಪ್ರದರ್ಶಿಸಿದ ಮಕ್ಕಳಿಗೆ ತಲಾ ರೂ. ೧೦,೦೦೦/- ನಗದು ಬಹುಮಾನ ಮತ್ತು ಪ್ರಶಸ್ತಿ ನೀಡಲಾಗುವುದು.ಪ್ರಕರಣವು ಆಗಸ್ಟ್ ೧, ೨೦೨೩ ರಿಂದ ಜುಲೈ ೩೧, ೨೦೨೪ ರೊಳಗೆ ನಡೆದಿರಬೇಕು. ಆಗಸ್ಟ್ ೧, ೨೦೦೬ ರಂದು ಹಾಗೂ ನಂತರ ಜನಿಸಿದ ಮಕ್ಕಳು ಈ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ. ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕನಿಷ್ಠ ೫ ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿರುವಂತಹ ವ್ಯಕ್ತಿಗಳಿಗೆ ತಲಾ ರೂ.೨೫,೦೦೦ ಗಳ…
ವಿಜಯಪುರ: ಜಿಲ್ಲೆಯಲ್ಲಿ ಆಚರಿಸುವ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಕಾಲಕ್ಕೆ ಎಲ್ಲ ತರಹದ ಮದ್ಯ ಮಾರಾಟ, ಸಂಗ್ರಹಣೆ ಹಾಗೂ ಹಂಚಿಕೆಯನ್ನು ನಿಷೇಧಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಟಿ.ಭೂಬಾಲನ್ ಅವರು ಆದೇಶ ಹೊರಡಿಸಿದ್ದಾರೆ.ಗಣೇಶ ಮೂರ್ತಿ ಪ್ರತಿಷ್ಠಾಪನೆಯ ದಿನವಾದ ಸೆ.೦೭ರ ಬೆಳಿಗ್ಗೆ ೬ ರಿಂದ ಸೆ.೦೮ರ ಬೆಳಿಗ್ಗೆ ೬ರವರೆಗೆ, ಐದನೇ ದಿವಸದ ಮೂರ್ತಿ ವಿಸರ್ಜನೆ ಪ್ರಯುಕ್ತ ಸೆ.೧೧ರ ಬೆಳಿಗ್ಗೆ ೬ ಗಂಟೆಯಿಂದ ಸೆ.೧೨ರ ಬೆಳಿಗ್ಗೆ ೬ ಗಂಟೆಯವರೆಗೆ, ಏಳನೇ ದಿವಸದ ಗಣೇಶ ಮೂರ್ತಿ ವಿಸರ್ಜನೆ ಪ್ರಯುಕ್ತ ಸೆ.೧೩ರ ಬೆಳಿಗ್ಗೆ ೬ ಗಂಟೆಯಿಂದ ಸೆ.೧೪ರ ಬೆಳಿಗ್ಗೆ ೬ ಗಂಟೆಯವರೆಗೆ, ಒಂಭತ್ತನೇ ದಿವಸದ ಮೂರ್ತಿ ವಿಸರ್ಜನೆ ಪ್ರಯುಕ್ತ ಸೆ.೧೫ರ ಬೆಳಿಗ್ಗೆ ೬ ಗಂಟೆಯಿಂದ ಸೆ.೧೬ರ ಬೆಳಿಗ್ಗೆ ೬ ಗಂಟೆಯವರೆಗೆ ಹಾಗೂ ಹನ್ನೊಂದನೇ ದಿವಸದ ಮೂರ್ತಿ ವಿಸರ್ಜನೆ ಪ್ರಯುಕ್ತ ಸೆ.೧೭ರ ಬೆಳಿಗ್ಗೆ ೬ ಗಂಟೆಯಿಂದ ಸೆ.೧೮ರ ಬೆಳಿಗ್ಗೆ ೬ ಗಂಟೆಯವರೆಗೆ ಜಿಲ್ಲೆಯಾದ್ಯಂತ…
ವಿಜಯಪುರ: ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಜಿಲ್ಲೆಯ ನಿಡಗುಂದಿ ತಾಲೂಕು ಪಂಚಾಯತಿ ಸಭಾ ಭವನದಲ್ಲಿ ಸೆಪ್ಟೆಂಬರ್ ೧೧ ರಂದು ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.ಲೋಕಾಯುಕ್ತ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು (ಮೊ:೯೩೬೪೦೬೨೫೨೮), ಪೊಲೀಸ್ ಉಪಾಧೀಕ್ಷಕರ (ಮೊ:೯೩೬೪೦೬೨೫೫೭), ಪೊಲೀಸ್ ಇನ್‌ಸ್ಪೆಕ್ಟರ್-೧ (ಮೊ:೯೩೬೪೦೬೨೬೪೦) ಹಾಗೂ ಪೊಲೀಸ್ ಇನ್‌ಸ್ಪೆಕ್ಟರ್-೨ (ಮೊ:೯೩೬೪೦೬೨೬೩೯) ಇವರು ಅಂದು ಬೆಳಿಗ್ಗೆ ೧೧ ಗಂಟೆಯಿಂದ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.ಅಹವಾಲು ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಭರ್ತಿ ಮಾಡಿದ ಮತ್ತು ನೋಟರಿಯಿಂದ ಅಫಿಡವಿಟ್ ಮಾಡಿಸಿದ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಸರ್ಕಾರಿ ಕಚೇರಿಗಳಲ್ಲಿ ಅಧಿಕೃತವಾಗಿ ಕೆಲಸಗಳನ್ನು ಮಾಡಿಕೊಡುವಲ್ಲಿ ವಿಳಂಬ ಸೇರಿದಂತೆ ಇನ್ನಿತರೆ ತೊಂದರೆ ನೀಡುತ್ತಿರುವ ಅಧಿಕಾರಿ-ಸಿಬ್ಬಂದಿಗಳ ವಿರುದ್ದ ಸಾರ್ವಜನಿಕರು ದೂರುಗಳನ್ನು ನೀಡಬಹುದಾಗಿದೆ. ಸ್ಥಳದಲ್ಲಿ ಪರಿಹಾರ ಕಂಡುಕೊಳ್ಳಬಹುದಾದ ದೂರುಗಳನ್ನು ಅಲ್ಲಿನ ಸ್ಥಳೀಯ ಅಧಿಕಾರಿಗಳ ಸಹಯೋಗದಲ್ಲಿ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವುದು ಹಾಗೂ ಸರಕಾರಿ ಅಧಿಕಾರಿಗಳು ಅಕ್ರಮ ಆಸ್ತಿ ಸಂಪಾದನೆ, ಸರಕಾರಿ ಹಣದ ದುರುಪಯೋಗ, ಕಳಪೆ ಕಾಮಗಾರಿ ಹಾಗೂ ಇತರೆ ಯಾವುದೇ ರೀತಿಯ ದೂರುಗಳಿಗಾಗಿ ಕಚೇರಿ ದೂರವಾಣಿ: ೦೮೩೫೨-೨೫೫೩೩೩, ೨೫೭೭೮೬, ೨೯೫೦೭೪ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ…
ಮುದ್ದೇಬಿಹಾಳ: ಮಹಾರಾಷ್ಟ್ರದ ರಾಮಗಿರಿ ಮಹಾರಾಜ ಇಸ್ಲಾಮ ಧರ್ಮದ ಪ್ರವಾದಿ ಮಹ್ಮದ ಪೈಗಂಬರರ ಕುರಿತು ಮಾತನಾಡಿರುವದನ್ನು ಖಂಡಿಸಿ ಸ್ವಾಮೀಜಿ ವಿರುದ್ದ ಕಾನೂನು ಕ್ರಮಕ್ಕಾಗಿ ಆಗ್ರಹಿಸಿ ತಾಲೂಕಾ ಮುಸ್ಲಿಂ ಪೋರಂ ವತಿಯಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.ಪಟ್ಟಣದ ಕಿಲ್ಲಾ ಗಲ್ಲಿಯಲ್ಲಿರುವ ಟಿಪ್ಪು ಸುಲ್ತಾನ ವೃತ್ತದಿಂದ ಶುರುವಾದ ಪ್ರತಿಭಟನಾ ಮೆರವಣಿಗೆ ಸರಾಫ ಬಜಾರ, ಬಸವೇಶ್ವರ ವೃತ್ತ, ಹೈದರಾಲಿ ಸರ್ಕಲ, ಸಂಗೊಳ್ಳಿ ರಾಯಣ್ಣ ವೃತ್ತ, ಅಂಬೇಡ್ಕರ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಮಾರ್ಗವಾಗಿ ತಹಸೀಲ್ದಾರ ಕಚೇರಿಯವರೆಗೆ ಸಾಗಿತು.ಅಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮುಖಂಡ ಎಚ್.ಆರ್.ಬಾಗವಾನ ಮಾತನಾಡಿ, ಜಗತ್ತಿನ ಜನತೆಯ ಒಳಿತನ್ನು ಬಯಸುವದು ಇಸ್ಲಾಂ ಧರ್ಮ. ದೇಶದಲ್ಲಿ ಎಲ್ಲ ಧರ್ಮೀಯರು ಅತ್ಯಂತ ಸೌಹಾರ್ಧಯುತವಾಗಿ ಬಾಳುತ್ತಿದ್ದೇವೆ. ಇದನ್ನು ಸಹಿಸದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾರೆ. ಮಹಾರಾಷ್ಟ್ರದ ಪುಟ್ಟ ಗ್ರಾಮದಲ್ಲಿರುವ ಈ ಸ್ವಾಮೀಜಿ ನಮ್ಮ ಪ್ರವಾದಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ…
’ಜಯ್ ನುಡಿ’ (ವ್ಯಕ್ತಿತ್ವ ವಿಕಸನ ಮಾಲಿಕೆ) ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ ಮೊ:೯೪೪೯೨೩೪೧೪೨ ನನಗೆ ಈ ಸಂದರ್ಭದಲ್ಲಿ ದೇಜಗೌ ಅವರು ಅನುವಾದಿಸಿದ ಕೃಷ್ಣ ಹತೀಸಿಂಗ್ ಅವರ ಆತ್ಮಚರಿತ್ರೆ ‘ನೆನಪು ಕಹಿಯಲ್ಲ’ ಶೀರ್ಷಿಕೆ ನೆನಪಿಗೆ ಬರುತ್ತಿದೆ. ಬದಲಾಗುವ ಜನರ ನಡುವೆ ಬದಲಾಗದೆ ಉಳಿಯುವ ನೆನಪುಗಳೇ ಶಾಶ್ವತ. ನೆನಪುಗಳಿಗೆ ಸಂದರ್ಭ ಸನ್ನಿವೇಶ ಘಟನೆ ಎಲ್ಲವೂ ಮುಖ್ಯವಾಗಿರುತ್ತದೆ. ನೆನಪುಗಳ ಕುರಿತಾಗಿ ನೆನಪಿಸಿಕೊಂಡು ಹೇಳಬೇಕೆಂದರೆ ಜ್ಞಾಪಕ ಶಕ್ತಿ ಮಹತ್ವದ್ದೆನಿಸುತ್ತದೆ. ಕಹಿ ನೆನಪುಗಳು ಯಾರನ್ನೂ ಬಿಡವು ಎನ್ನುವ ಮಾತಿನಲ್ಲಿ ಸತ್ಯವಿದೆ. ಬಡವರು ಸಿರಿವಂತರು ಅಕ್ಷರಸ್ಥರು, ಅನಕ್ಷರಸ್ಥರು ಯಾರೇ ಇರಲಿ ಇದರ ತಾಪದಿಂದ ಉಳಿದುಕೊಳ್ಳುವಂತಿಲ್ಲ. ಕೆಲವರಿಗಂತೂ ಈ ತಾಪ ತಡೆದುಕೊಳ್ಳಲಾಗದ ಮಟ್ಟಕ್ಕೆ ಏರಬಹುದು. ಅಂತಹ ಸಮಯದಲ್ಲಿ ಕೋಪ, ಭಯ, ಭೀತಿ, ಹತಾಶೆ, ಜಿಗುಪ್ಸೆಯ ವರ್ತನೆಗಳು ಸಾಮಾನ್ಯ ನಡೆನುಡಿಗಳೊಂದಿಗೆ ವ್ಯಕ್ತಗೊಳ್ಳುವವು. ಕೆಲವು ನೆನಪುಗಳು ನಮ್ಮನ್ನು ಮುಜುಗರದಿಂದ ಕುಗ್ಗುವಂತೆ ಮಾಡುತ್ತವೆ. ಹಾಗೆ ಇನ್ನೂ ಕೆಲವು ನೆನಪುಗಳು ದುಃಖದಿಂದ ನರಳುವಂತೆ ಮಾಡುತ್ತವೆ. ಕೆಲವಂತೂ ಆಘಾತಕಾರಿಯಾಗಿರುತ್ತವೆ. ಬಹುಶಃ ಮನಸಿಗೆ ನೋವು ತರುವಂತಹ ನೆನಪುಗಳನ್ನು ನೆನಪಿಸಿಕೊಳ್ಳಲು ಮನಸ್ಸು…
ಸಿಂದಗಿ: ಸರಕಾರಿ ಆಸ್ಪತ್ರೆಗಳ ಸುಧಾರಣೆ ಹಾಗೂ ಜನಸ್ನೇಹಿಯಾಗಿಸುವ ಪ್ರಯತ್ನವನ್ನು ಸರ್ಕಾರ ನಡೆಸಿದೆ. ಸರಕಾರದಿಂದ ದೊರೆಯುವ ಆರೋಗ್ಯ ಸೌಲಭ್ಯಗಳನ್ನು ಬಡ ಜನತೆಗೆ ಸರಿಯಾಗಿ ತಲುಪಿಸುವ ಕಾರ್ಯವಾಗಲಿ ಎಂದು ಇಂಡಿ ಉಪವಿಭಾಗಾಧಿಕರಿ ಅಬೀದ್ ಗದ್ಯಾಳ ಹೇಳಿದರು.ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ಸಾಯಂಕಾಲ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ಸ್ವಚ್ಚತೆಗೆ ಮೊದಲ ಆದ್ಯತೆ ನೀಡಬೇಕು. ಬಡ ರೋಗಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಹೆಚ್ಚಿನ ನಿಗಾವಹಿಸಬೇಕು. ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಬೆಳವಣಿಗೆಗೆ ಅಗತ್ಯ ಕ್ರಮವಹಿಸಬೇಕು ಎಂದು ತಿಳಸಿದರು.ಈ ವೇಳೆ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ, ಡಾ.ರಮೇಶ ರಾಠೋಡ ಸೇರಿದಂತೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಇದ್ದರು.
ಕಲಕೇರಿ: “ಬಡತನದ ಜೀವನದಾಗ ಸಾಲಿ ಕಲಿಬೇಕಂತ ನಮ್ಗ್ ಆಶೆ ರೀ, ಆದ್ರ ಸರ್, ನಾವು ದಿನಾಲೂ ಸಾಲಿಗೆ ಹೋಗಲು ಎರಡು ಕಿ.ಮೀ ನಡಿಬೇಕ್ರಿ, ರಸ್ತೆ ತುಂಬೆಲ್ಲಾ ನೀರ್ ರೀ, ಎಲ್ಲಿ ತೆಗ್ಗ ಹಾದ ಏನ್ರಿ ಒಂದು ಗೊತ್ತಾಗಲ್ಲರೀ, ಸ್ವಲ್ಪ ಕಾಲ ಜಾರಿದ್ರ ಮುಗಿತ್ರಿ ನಮ್ದು ಗತಿರೀ, ಹೇಗಾದರೂ ಮಾಡಿ ಸಾಲಿಗೆ ಬಂದಿವಿ ಅಂತ ಒಂದ ಕಡೆ ಧೈರ್ಯ ಬರ್ತಾದ ರೀ, ಸಾಲಿ ಬಿಟ್ಟಾಗ ಅದೇ ಕೆಸರು ಗದ್ದೆದಾಗ ಜೀವ ಕೈಯಾಗ ಹಿಡ್ಕೊಂಡ ಹೋಗಬೇಕಲ್ಲಾ ಅಂತ ಮತ್ತೊಂದು ಕಡೆ ಚಿಂತಿರೀ, ನಮ್ ಗೋಳ ಯಾರ ಕೇಳ್ತಾರೆ” ಎಂಬುದು ಇಲ್ಲಿಯ ವಿದ್ಯಾರ್ಥಿಗಳ ಅಳಲು.ಹೌದು, ಆಲಗೂರ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳುವ ಮುಖ್ಯ ರಸ್ತೆ ಕೆಸರು ಗದ್ದೆಯಂತಾಗಿದ್ದು, ವಿದ್ಯಾರ್ಥಿಗಳು ಪ್ರತಿನಿತ್ಯ ಶಾಲೆಗೆ ಹೋಗಲು ಹರಸಾಹಸ ಪಡುವಂತಾಗಿದೆ.ಹುಣಚ್ಯಾಳ ಗ್ರಾಮ ಪಂಚಾಯಿತಿಗೆ ಒಳಪಡುವ ಆಲಗೂರ ಗ್ರಾಮ ಮೂಲ ಸಾಕರ್ಯಗಳಿಂದ ವಂಚಿತವಾಗಿದೆ. ಅಲಗೂರ ಕ್ರಾಸ್ ದಿಂದ ಅಲಗೂರ ಗ್ರಾಮದವರೆಗೆ ರಸ್ತೆ ಗುಂಡಿಗಳಿಂದ ಮಾರ್ಪಟ್ಟಿದೆ.ನಿತ್ಯ ನೂರಾರು ವಿದ್ಯಾರ್ಥಿಗಳು ಇದೇ…
ಮುದ್ದೇಬಿಹಾಳ: ಸತತ ಪ್ರಯತ್ನದಿಂದ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಹೇಳಿದರು.ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ದಕ್ಷಿಣ ವಲಯ ಮಟ್ಟದ ಕ್ರೀಡಾ ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕ್ರೀಡೆ ನ್ಯಾಯಯುತವಾಗಿರಬೇಕು. ಕ್ರೀಡೆಯಲ್ಲಿ ಆಸಕ್ತಿ ಮತ್ತು ಅಭಿರುಚಿಯನ್ನು ತೋರಿಸಬೇಕು. ಆಗಲೇ ಮಗುವಿನ ಮುಂದಿನ ಭವಿಷ್ಯದ ಔದ್ಯೋಗಿಕ ರಂಗದಲ್ಲಿ ಸಹಕಾರಿಯಾಗುತ್ತದೆ ಎಂದರು.ಸಂಸ್ಥೆಯ ಕಾರ್ಯದರ್ಶಿ ಪ್ರಭು ಎಸ್.ಕಡಿ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕ್ರೀಡಾಕೂಟದಲ್ಲಿ ಬಾಲಕರ ಕಬಡ್ಡಿಯಲ್ಲಿ ಎಸ್.ಎಸ್.ಎಮ್ ಪ್ರೌಢ ಶಾಲೆ ಪ್ರಥಮ, ಬಾಲಕೀಯರ ಕಬಡ್ಡಿಯಲ್ಲಿ ಜ್ಞಾನ ಭಾರತಿ ಪ್ರೌಢ ಶಾಲೆ ಪ್ರಥಮ, ಬಾಲಕರ ಮತ್ತು ಬಾಲಕೀಯರ ಖೋಖೋದಲ್ಲಿ ಸಂತ ಕನಕದಾಸ ಪ್ರೌಢ ಶಾಲೆ ಪ್ರಥಮ, ಬಾಲಕರ ವಾಲಿಬಾಲ್ ನಲ್ಲಿ ಟಿ.ಎಸ್.ಎಸ್. ಪ್ರೌಢ ಶಾಲೆ ಪ್ರಥಮ, ಬಾಲಕೀಯರ ವಾಲಿಬಾಲ್ ನಲ್ಲಿ ಸರಕಾರಿ ಪ್ರೌಢ ಶಾಲೆ ಪ್ರಥಮ ಸ್ಥಾನಗಳಿಸಿ ತಾಲೂಕಾ ಮಟ್ಟಕ್ಕೆ ಆಯ್ಕೆಯಾದರು.ಈ ವೇಳೆ ದೈಹಿಕ ಪರಿವೀಕ್ಷಕ ಬಿ.ವಾಯ್.ಕವಡಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಮ್.ಎಮ್.ಬೆಳಗಲ್, ಶಿಕ್ಷಣ ಸಂಯೋಜಕಿ…
