Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಶಿಕ್ಷಕ ದಿನೋತ್ಸವ ಸಮೀತಿಗೆ ಶಿಕ್ಷಕ ಜಿತ್ತಿ ರೂ.1 ಲಕ್ಷ ದೇಣಿಗೆ ವಿಜಯಪುರ: ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗ್ರಾಮೀಣವಲಯದ ಶಿಕ್ಷಕ ದಿನೋತ್ಸವ ಸಮೀತಿಗೆ ಅಲಿಯಾಬಾದ ಗ್ರಾಮದ ಜಾಧವನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಹಾಗೂ ಜಿಓಸಿಸಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ ಜಿತ್ತಿ ಅವರ ತಂದೆ ದಿ.ತುಕಾರಾಂ ಜಿತ್ತಿ ಅವರ ಸ್ಮರಣಾರ್ಥವಾಗಿ ಸೆ.5 ರಂದು ನಗರದ ಸಂಗನಬಸವ ಸಮುದಾಯ ಭವನದಲ್ಲಿ ನಡೆದ ಶಿಕ್ಷಕ ದಿನಾಚರಣೆ ಸಂದರ್ಭದಲ್ಲಿ ₹ 1 ಲಕ್ಷ ದೇಣಿಗೆಯನ್ನು ಸಮೀತಿಗೆ ನೀಡಿದರು.ದೇಣಿಗೆ ಚೆಕ್ ನೀಡಿ ಮಾತನಾಡಿದ ಚಂದ್ರಶೇಖರ ನಮ್ಮ ತಂದೆಯವರ ಸ್ಮರಣಾರ್ಥವಾಗಿ ನೀಡಿದ ಈ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟು, ಪ್ರತಿ ವರ್ಷ ಬರುವ ಬಡ್ಡಿ ಹಣದಲ್ಲಿ ಶಿಕ್ಷಕ ದಿನಾಚರಣೆ ನಡೆಯುವ ಈ ಕಾರ್ಯಕ್ರಮಕ್ಕೆ ಸದುಪಯೋಗವಾಗಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ ಬಸವಲಿಂಗ ಸ್ವಾಮೀಜಿ, ಬಿಇಓ ಪ್ರಮೋದಿನಿ ಬಳೋಲಮಟ್ಟಿ, ತಾಲ್ಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪುರ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಡಿ.ಮೊಸಲಗಿ, ಪ್ರಾಥಮಿ ಶಾಲಾ ಶಿಕ್ಷಕ…
ಅಕ್ಕಮಹಾದೇವಿ ಮಹಿಳಾ ವಿವಿದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಪ್ರೊ.ಇನಾಮದಾರ ಅಭಿಮತ ವಿಜಯಪುರ: ಇವತ್ತಿನ ತಂತ್ರಜ್ಞಾನ ಯುಗದಲ್ಲಿ, ಶಿಕ್ಷಕರು ಮುಂಬರುವ ಸವಾಲುಗಳನ್ನು ಎದುರಿಸಿ, ಹೊಸ ಹೊಸ ಬಗೆಯ ಬೋಧನಾ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಕರು ನಿರಂತರವಾಗಿ ಕಲಿಕೆಯಲ್ಲಿ ತೊಡಗಿಸಿಕೊಂಡು, ತಮ್ಮ ವಿದ್ಯಾರ್ಥಿಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ಮಾರ್ಗದರ್ಶನ ನೀಡಲು ಸಿದ್ಧರಾಗಿರಬೇಕು ಬಿಎಲ್‌ಡಿಇಯ ಸಹ ಕುಲಪತಿ ಪ್ರೊ.ಅರುಣ ಸಿ ಇನಾಮದಾರ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜ್ಞಾನ ಕೊಟ್ಟ ಶಿಕ್ಷಕರನ್ನು ನೆನೆಸುತ್ತಾ, ನಾವು ಹೇಗೆ ಜ್ಞಾನ ಪಡೆಯಬೇಕು ಎಂಬುದನ್ನು ಯೋಚಿಸಬೇಕು ಎಂದರು.ಶಿಕ್ಷಕರ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿಯಾಗಿದ್ದು, ಸಮಾಜ ನಿರ್ಮಾಣದಲ್ಲಿ ಶಿಕ್ಷಕರು ಮಹತ್ವದ ಪಾತ್ರವನ್ನು ವಹಿಸುತ್ತಾರೆ ಎಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಕುಲಸಚಿವ ಶಂಕರಗೌಡ ಸೋಮನಾಳ ಹೇಳಿದರು.ಮನುಷ್ಯತ್ವ ಮತ್ತು ಸಂಸ್ಕಾರ ಕಲಿಸುವವರು ಶಿಕ್ಷಕರು ಮಾತ್ರ. ಸಮಾಜವನ್ನು ಎತ್ತರಕ್ಕೆ ಒಯ್ಯಲು ಗುರಿ ಮತ್ತು ಗುರು ಅವಶ್ಯಕ. ಕೇವಲ ಶಿಕ್ಷಕರ ದಿನಾಚರಣೆ ದಿನವೇ ಗುರುಗಳಿಗೆ ಗೌರವಿಸುವುದು ಅಲ್ಲ,…
ವಿಜಯಪುರ: ವಿಜಯಪುರ ಅಂಚೆ ವಿಭಾಗದಲ್ಲಿ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿಗಳ ಆಯ್ಕೆಗೆ ನೇರ ಸಂದರ್ಶನ ಏರ್ಪಡಿಸಲಾಗಿದೆ.ಆಸಕ್ತ ಅಭ್ಯರ್ಥಿಗಳು ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಸ್ವವಿವರ, ಶೈಕ್ಷಣಿಕ ಪ್ರಮಾಣಪತ್ರದ ನಕಲುಗಳೊಂದಿಗೆ ದಿನಾಂಕ : ೨೪-೦೯-೨೦೨೪ ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಸ್ಟೇಶನ್ ರಸ್ತೆಯಲ್ಲಿರುವ ಗೋಲಗುಂಬಜ್ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.ಆಯ್ಕೆಯಾದ ಅಭ್ಯರ್ಥಿಗಳು ೫ ಸಾವಿರ ರೂ.ಗಳ ರಾಷ್ಟ್ರೀಯ ಉಳಿತಾಯ ಪತ್ರ ಅಥವಾ ಕಿಸಾನ ವಿಕಾಸ ಪತ್ರದ ರೂಪದಲ್ಲಿ ಭದ್ರತಾ ಠೇವಣಿಯನ್ನು ಇಡಬೇಕು. ಕನಿಷ್ಠ ಎಸ್.ಎಸ್.ಎಲ್.ಸಿ. ಪಾಸಾಗಿರಬೇಕು. ನುರಿತ, ಸಂವಹನ ಕಲೆ ಹಾಗೂ ವಿಮಾ ಮಾರಾಟ ಕ್ಷೇತ್ರದಲ್ಲಿ ಪೂರ್ವಾನುಭವ ಹೊಂದಿದವರಿಗೆ ಆದ್ಯತೆ ನೀಡಲಾಗುವುದು. ಆಯ್ಕೆಯಾದ ನೇರ ಪ್ರತಿನಿಧಿಗಳಿಗೆ ವ್ಯವಹಾರಕ್ಕೆ ತಕ್ಕಂತೆ ಸೂಕ್ತ ಕಮೀಶನ್ ನೀಡಲಾಗುವುದು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಚೇರಿ ಅಥವಾ ಅಂಚೆ ವಿಮಾ ಅಭಿವೃದ್ದಿ ಅಧಿಕಾರಿ ಮೊ:೮೯೭೧೧೨೭೭೭೨ ಸಂಪರ್ಕಿಸುವಂತೆ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಸೆ.೧೨ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಹಿರಿಯ ನಾಗರಿಕರಿಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.೬೦ ರಿಂದ ೭೦ ವರ್ಷ ವಯೋಮಾನದ ಮಹಿಳೆ-ಪುರುಷರಿಗೆ ಮ್ಯೂಸಿಕಲ್ ಚೇರ್, ೬೦ ರಿಂದ ೬೯ ವಯೋಮಾನದ ಮಹಿಳೆ-ಪುರುಷರಿಗೆ ಬಿರುಸಿನ ನಡಿಗೆ, ೬೦ ರಿಂದ ೭೦ ವರ್ಷ ಹಾಗೂ ೭೦ ವರ್ಷ ಮೇಲ್ಪಟ್ಟ ಮಹಿಳೆ-ಪುರುಷರಿಗೆ ಬಕೆಟ್‌ನಲ್ಲಿ ಬಾಲ್ ಎಸೆಯುವ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ೬೦ ರಿಂದ ೭೦ ವರ್ಷ ಹಾಗೂ ೭೦ ವರ್ಷ ಹಾಗೂ ಮೇಲ್ಪಟ್ಟ ಮಹಿಳೆ-ಪುರುಷರಿಗೆ ಗಾಯನ ಹಾಗೂ ಏಕ ಪಾತ್ರಾಭಿನಯ ಸ್ಪರ್ಧೆ ಏರ್ಪಡಿಸಲಾಗಿದೆ.ಸ್ಪರ್ಧೆಗಳಲ್ಲಿ ಭಾಗವಹಿಸಲಿಚ್ಚಿಸುವವರು ಹೆಸರನ್ನು ನೊಂದಾಯಿಸಲು ಹಾಗೂ ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ವಿವಿಧ ತಾಲೂಕಾ ಪಂಚಾಯತಿ ಕಚೇರಿಯ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರುಗಳಾದ ವಿಜಯಪುರ ತಾಲೂಕಿನ ರವಿ ರಾಠೋಡ ಮೊ: ೯೦೩೫೫೫೩೩೩೭, ಸಿಂದಗಿ ತಾಲೂಕಿನ ಮುತ್ತುರಾಜ ಸಾತಿಹಾಳ ಮೊ: ೯೯೮೦೦೧೯೬೩೫, ಬಸವನಬಾಗೇವಾಡಿ ತಾಲೂಕಿನ ಎಸ್.ಡಿ.ಬಿರಾದಾರ ಮೊ: ೮೭೨೨೧೩೫೬೬೦, ಇಂಡಿ ತಾಲೂಕಿನ ಪರಶುರಾಮ ಭೋಸಲೆ ಮೊ:…
ವಿಜಯಪುರ: ತಮಿಳುನಾಡಿನ ಚೈನ್ನೈನಲ್ಲಿ ಆ.೩೧ರಿಂದ ಸೆ.೧ರವರೆಗೆ ನಡೆದ ಖೇಲೋ ಇಂಡಿಯಾ ಮಹಿಳಾ ಲೀಗ್ ರೋಡ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ವಿಜಯಪುರದ ೦೭ ಮಹಿಳಾ ಸೈಕ್ಲಿಸ್ಟ್ಗಳು ಸಾಧನೆ ಮಾಡಿ ಪದಕವನ್ನು ಪಡೆದಿದ್ದು, ಇವರ ಸಾಧನೆಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳು ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.ಖೇಲೋ ಇಂಡಿಯಾ ಮಹಿಳಾ ಲೀಗ್ ರೋಡ್ ಸೈಕ್ಲಿಂಗ್ ಕಿರಿಯ ಬಾಲಕಿಯರ ವಿಭಾಗದಲ್ಲಿ ಕೋಕಿಲಾ ಚವ್ಹಾಣ (ಬಂಗಾರ), ಜ್ಯೊತಿ ರಾಠೋಡ (ಬೆಳ್ಳಿ) ಹಾಗೂ ದೀಪಿಕಾ ಫಡತರೆ (ಕಂಚು) ಪಡೆದಿದ್ದಾರೆ.ಕಿರಿಯ ಮಹಿಳಾ ವಿಭಾಗದಲ್ಲಿ ಪಾಯಲ್ ಚವ್ಹಾಣ (ಬಂಗಾರ) ಹಾಗೂ ಆರಾಧನಾ ಸಂತೋಷ (ಬೆಳ್ಳಿ), ಅಕ್ಷತಾ ಭೂತನಾಲ ಹಾಗೂ ಅಕ್ಷತಾ ಬಿರಾದಾರ (ಕಂಚು) ಪಡೆದಿದ್ದಾರೆ. ಸೈಕ್ಲಿಂಗ್ ತರಬೇತಿದಾರರಾದ ಶ್ರೀಮತಿ ಅಲ್ಕಾ ಎನ್.ಫಡತರೆ, ಅನಂತ ದೇಸಾಯಿ, ಖೇಲೋ ಇಂಡಿ ತರಬೇತಿದಾರರಾದ ರಮೇಶ ರಾಠೋಡ ಮತ್ತು ಕಚೇರಿ ಅಧೀಕ್ಷಕರಾದ ಎಸ್.ಬಿ.ಕಡಕಲ್ ಅವರು ಉಪಸ್ಥಿತರಿದ್ದರು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ.೧೫ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ | ಮಾನವ ಸರಪಳಿ ಆಯೋಜನೆ ವಿಜಯಪುರ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವದ ದಿನದ ಅಂಗವಾಗಿ ಜಿಲ್ಲೆಯಲ್ಲಿ ಸೆ.೧೫ರಂದು ಆಯೋಜಿಸುವ ಮಾನವ ಸರಪಳಿ ಕಾರ್ಯಕ್ರಮದಲ್ಲಿ ವಿವಿಧ ಸಂಘ-ಸಂಸ್ಥೆಗಳು, ವಿದ್ಯಾರ್ಥಿಗಳು, ಸರ್ಕಾರಿ-ಅರೆ ಸರ್ಕಾರಿ ನೌಕರರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮನವಿ ಮಾಡಿಕೊಂಡಿದ್ದಾರೆ.ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ದೇಶದ ನಾಗರಿಕರಿಗೆ ಅರಿವು ಮೂಡಿಸುವುದು ಮುಖ್ಯ ಉದ್ದೇಶವಾಗಿದೆ. ಈ ದಿಸೆಯಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ೨೦೨೪-೨೫ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ದಿ ಮತ್ತು ನಗರ ಯೋಜನಾ ಇಲಾಖೆ, ಪೌರಾಡಳಿತ ಮತ್ತು ಹಜ್ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಬೀದರಿನಿಂದ ಚಾಮರಾಜ್‌ನಗರದವರೆಗೆ ೨೮೦೦ ಕಿ.ಮೀ. ಮಾನವ ಸರಪಳಿ ಆಯೋಜಿಸುವ ಮೂಲಕ ಆಚರಿಸಲು ಸರ್ಕಾರ ತೀರ್ಮಾನಿಸಿದೆ.ನೋಡಲ್ ಅಧಿಕಾರಿಗಳು : ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ ಯಶಸ್ವಿಯಾಗಿ ಹಮ್ಮಿಕೊಳ್ಳಲು ನೋಡಲ್ ಅಧಿಕಾರಿಗಳನ್ನು…
ದೇವರಹಿಪ್ಪರಗಿ: ಇಂದಿನ ವಿದ್ಯಾರ್ಥಿಗಳು ಹೆಚ್ಚು ಕ್ರಿಯಾತ್ಮಕ ಹಾಗೂ ಪ್ರಯತ್ನಶೀಲರಾದಾಗ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಕೆಸರಟ್ಟಿ ಶಂಕರಲಿಂಗಮಠದ ಸೋಮಲಿಂಗ ಮಹಾರಾಜರು ಹೇಳಿದರು.ತಾಲ್ಲೂಕಿನ ಕೆಸರಟ್ಟಿ ಗ್ರಾಮದ ಶಿವಶಂಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಜರುಗಿದ ಕೊಂಡಗೂಳಿ ವಲಯ ಮಟ್ಟದ ಪ್ರತಿಭಾ ಕಾರಂಜಿಗೆ ಚಾಲನೆ ನೀಡಿ ಮಾತನಾಡಿದರು.ವಲಯದ ಸಮೂಹ ಸಂಪನ್ಮೂಲ ವ್ಯಕ್ತಿ ಎಮ್.ಎನ್.ಒಡೆಯರ್ ಪ್ರಾಸ್ತಾವಿಕವಾಗಿ ಮಾತನಾಡಿದರು.ನಿವೃತ್ತ ಪ್ರೌಢಶಾಲಾ ಶಿಕ್ಷಕ ಕೆ.ಎಸ್.ಹಿರೇಕುರುಬರ ಮಾತನಾಡಿದರು.ಕೊಂಡಗೂಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಾವಲಬಿ ಸೋಲಾಪೂರ ಅಧ್ಯಕ್ಷತೆ ವಹಿಸಿದ್ದರು.ಗ್ರಾಮ ಪಂಚಾಯಿತಿ ಸದಸ್ಯೆ ಪಾರ್ವತಿ ಚವ್ಹಾಣ, ಮುಖ್ಯಶಿಕ್ಷಕಿ ಮಧುಮತಿ ತೋಟದ, ಬಿ.ಡಿ.ಮುಲ್ಲಾ, ಶಂಕರರಾವ್ ಕುಲಕರ್ಣಿ, ಚಂದು ನಾಯಕ್, ಜಿ.ಬಿ.ಹೊಕ್ಕುಂಡಿ, ಎಸ್.ಎಸ್.ಕುಂಬಾರ, ಮಹಾಂತೇಶ ಮಮದಾಪೂರ, ಜೆ.ಎಸ್.ಸಿಂದಗಿ, ಶೈಲಾ ಕೆಂಭಾವಿ, ರಾಜು ನಾಯಕ, ಬಾಬುರಾವ ಬಿರಾದಾರ, ಎಸ್.ಎಸ್.ಹಾದಿಮನಿ ಹಾಗೂ ಮಕ್ಕಳು ಇದ್ದರು.
ದೇವರಹಿಪ್ಪರಗಿ: ವ್ಯಕ್ತಿ ಶಾಶ್ವತವಲ್ಲ, ಆದರೆ ವ್ಯಕ್ತಿತ್ವ ಮತ್ತು ವ್ಯಕ್ತಿಯ ವಿಚಾರಗಳು ಶಾಶ್ವತವಾಗಿ ಉಳಿಯುತ್ತವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಲಯ ಮೇಲ್ವಿಚಾರಕಿ ಸಾವಿತ್ರಿ ಬಾತಾಖಾನೆ ಹೇಳಿದರು.ತಾಲ್ಲೂಕಿನ ಸಾತಿಹಾಳ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಶಿಕ್ಷಕರ ದಿನಾಚರಣೆ ಅಂಗವಾಗಿ ಯಾಳವಾರ, ಸಾತಿಹಾಳ, ಮಾರ್ಕಬ್ಬಿನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಿ ಮಾತನಾಡಿದರು. ಇಂದು ನೀವು ಕೇವಲ ಕಾರ್ಯಕರ್ತೆಯರಲ್ಲ, ಶಿಕ್ಷಕಿಯರು. ನೀವು ಮಾಡಿದ ಒಳ್ಳೆಯ ಕೆಲಸಗಳು, ಮಕ್ಕಳಿಗೆ ನೀಡಿದ ಶಾಲಾ ಪೂರ್ವಶಿಕ್ಷಣ ಮಕ್ಕಳಲ್ಲಿ ಅಚ್ಚಳಿಯದೇ ಉಳಿಯುತ್ತದೆ ಎಂದರು.ಕಾರ್ಯಕರ್ತೆಯರಾದ ವಿಜಯಲಕ್ಷ್ಮಿ ಹಿಪ್ಪರಗಿ, ಸುನಂದಾ ಅಗ್ನಿ ಮಾತನಾಡಿದರು.ಉಜ್ವಲ ಸಂಸ್ಥೆಯ ಶಿಕ್ಷಣ ಯಾತ್ರೆಯ ಸಂಯೋಜಕ ಸಾಗರ್ ಘಾಟಗೆ ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲಿ ಈಗ ಗಮನಾರ್ಹ ಬದಲಾವಣೆಗಳಾಗುತ್ತಿದ್ದು ಇದಕ್ಕೆ ವಲಯ ಮೇಲ್ವಚಾರಕರ ಸತತ ಪ್ರಯತ್ನವೇ ಮುಖ್ಯಕಾರಣವಾಗಿದೆ ಎಂದರು.ಉಜ್ವಲ ಸಂಸ್ಥೆಯ ಗೌಡಪ್ಪ ಬಿರಾದಾರ, ಅಕ್ಕಮ್ಮ ಬಿರಾದಾರ, ಮಾದೇವಿ ಹಿರೇಮಠ, ಸೂಗಮ್ಮಾ ಸಜ್ಜನ, ಶಹಿನಾಜ್ ತಾಂಬೋಳಿ, (ಸಾತಿಹಾಳ), ಅನಸೂಬಾಯಿ ಬಿರಾದಾರ(ಭೈರವಾಡಗಿ), ಕಸ್ತೂರಿ ಹಿಪ್ಪರಗಿ(ಮಾರ್ಕಬ್ಬಿನಹಳ್ಳಿ), ಶರಣಮ್ಮ ಬಿರಾದಾರ(ಕಡಕೋಳ),ಬಿ.ಬಿ.ಪಾಟೀಲ, ರೇಣುಕಾ ಸಂಗಣ್ಣವರ,…
ಚಡಚಣ: ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಒಳ್ಳೆಯ ನಡತೆ ಭೋದನೆಯ ಮೂಲಕ ಮಕ್ಕಳ ಭವಿಷ್ಯದೊಂದಿಗೆ ರಾಷ್ಟ್ರದ ಭವಿಷ್ಯ ನಿರ್ಮಾಣ ಮಾಡುವದು ಶಿಕ್ಷಕರಿಂದ ಮಾತ್ರ ಸಾದ್ಯ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಸಂಜಯ ಖಡಗೇಕರ ಹೇಳಿದರು.ಸ್ಥಳಿಯ ಗುರು ಕೃಪಾ ಮಂಗಲ ಕಾರ್ಯಾಲಯದಲ್ಲಿ ಗುರುವಾರ ಆಯೋಜಿಸಲಾದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಶಿಲ್ದಾರ ಸಂಜಯ ಇಂಗಳೆ, ವಿದ್ಯಾರ್ಥಿಗಳ ಜ್ಞಾನ,ಆತ್ಮ ವಿಶ್ವಾಸ, ಕೌಶಗಳನ್ನು ವೃದ್ಧಿಸಿ,ವ್ಯಕ್ತಿತ್ವ ವಿಕಸನಕ್ಕೆ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸಿವ ಶಿಕ್ಷಕರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು.ಶಿಕ್ಷಕರಿಗೆ ಸಮಾಜದಲ್ಲಿ ಉನ್ನತ ಸ್ಥಾನವಿದೆ. ಅದನ್ನು ಕಾಪಾಡಿಕೊಂಡು ಹೋಗುವದು ಅವರ ಜವಾಬ್ದಾರಿಯಾಗಿದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜೆ.ನಾಯಕ್, ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಸವಿನೆನಪಿಗಾಗಿ ಶಿಕ್ಷಕರ ದಿನವನ್ನು ಆಚರಿಸುತ್ತೇವೆ. ಅವರ ತತ್ವಾದರ್ಶಗಳನ್ನು ಶಿಕ್ಷಕರು ಪಾಲಿಸಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಸ್.ಸೊನಗಿ, ಶಿಕ್ಷಕರ ಸೋಸಾಯಿಟಿ ಅಧ್ಯಕ್ಷ ಎಸ್.ಎಸ್. ಪಾಟೀಲ ಮಾತನಾಡಿದರು.ಸಾನಿಧ್ಯವಹಿಸಿದ…
– ಮಹಾಂತೇಶ ನೂಲಾನವರಸಿಂದಗಿ: ಹಲವು ತಿಂಗಳುಗಳಿಂದ ಇಂಡಿ ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರು ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಿಂದಗಿ ಪುರಸಭೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲು ಪ್ರಕಟ ಮಾಡಿ ಸರ್ಕಾರ ಆದೇಶ ಹೋರಡಿಸಿದೆ. ಪುರಸಭೆಗೆ ಮೀಸಲು ಪ್ರಕಟವಾಗುತ್ತಿದಂತೆ ಬಿಜೆಪಿ3, ಜೆಡಿಎಸ್6, ಪಕ್ಷೇತರ3, ಕಾಂಗ್ರೆಸ್11 ಸದಸ್ಯರಲ್ಲಿ ಯಾರಾಗ್ತಾರೆ ಅಧ್ಯಕ್ಷ ಎಂಬ ಕೂತೂಹಲ ಸಾರ್ವಜನಿಕರಲ್ಲಿ ಮೂಡಿದೆ.ಪಟ್ಟಣದ ಮುಂದಿನ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲು ಪ್ರಕಟಗೋಳುತ್ತಿದಂತೆ ಸದಸ್ಯರ ನಡುವೆ ಹಲವಾರು ಹೊಂದಾಣಿಕೆಯ ಮಾತುಕತೆಗಳು ಪ್ರಾರಂಭಗೊಂಡಿವೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡು ಇತರೆ ಮೀಸಲಾತಿ ಪ್ರಕಟಗೊಂಡಿರುವುದರಿಂದ 23 ಸದಸ್ಯರಿಗೂ ಅಧ್ಯಕ್ಷರಾಗುವ ಅವಕಾಶವಿದೆ. ಬಲಾ-ಬಲ ನೋಡಿದರೆ ಜೆಡಿಎಸ್ ನ 6 ಸದಸ್ಯರಲ್ಲಿ ಮಾಜಿ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಹಾಗೂ ಶಾಂತವೀರ ಬಿರಾದಾರ ಇವರ ಮಧ್ಯ ಪ್ರಬಲ ಪೈಪೋಟಿ ನಡೆಯುತ್ತಿದ್ದು, ಶಾಸಕ ಅಶೋಕ ಮನಗೂಳಿ ಅವರು ತಮ್ಮ ತಮ್ಮನಿಗೆ ಬೆಂಬಲ ಸೂಚಿಸುತ್ತಾರೋ ಅಥವಾ ಅಳಿಯನಿಗೆ ಬೆಂಬಲಿಸುತ್ತಾರೋ ಎಂಬುದು ಕುತೂಹಲವಾಗಿದೆ.ಇದರ ಮಧ್ಯ ಶಾಸಕರ ಆಪ್ತರಾದ ವಾರ್ಡ್ ನಂ…
