ಉದಯರಶ್ಮಿ ದಿನಪತ್ರಿಕೆ
ಚಡಚಣ: ಬೀರಲಿಂಗೇಶ್ವರ ಐಕ್ಯ ಕ್ಷೇತ್ರವಾದ ಶಿರಾಡೋಣ ಗ್ರಾಮಕ್ಕೆ ಮಹಾರಾಷ್ಟ್ರ ಸೇರಿದಂತೆ ರಾಜ್ಯದಿಂದ ಸಹಸ್ರಾರು ಭಕ್ತರು ಭೇಟಿ ನೀಡುತ್ತಾರೆ. ಇಲ್ಲಿ ನೆಲೆ ನಿಂತಿರುವ ಬೀರಲಿಂಗೇಶ್ವರನ ಆರ್ಶೀವಾದ ಪಡೆದು ಭಕ್ತರು ಹುಲಜಂತಿಯ ಶಿವ-ಪಾರ್ವತಿಯರ ಮುಂಡಾಸ ನೋಡಲು ಭಕ್ತರು ತೆರಳುತ್ತಾರೆ. ಇಂತಹ ಯಾತ್ರಿಗಳಿಗೆ ತಂಗಲು ಯಾತ್ರಿ ನಿವಾಸ ನಿರ್ಮಾಣ ಕಾಮಗಾರಿ ಶೀಘ್ರವಾಗಿ ಪ್ರಾರಂಭಿಸಿಲು ಸಹಕರಿಸುವಂತೆ ಮುಖ್ಯಮಂತ್ರಿಗಳಿಗೂ ಹಾಗೂ ಸಂಬಂಧಪಟ್ಟ ಸಚಿವರಿಗಳಿಗೂ ಕಾಗಿನೆಲೆ ಶ್ರೀಕನಕ ಗುರು ಪೀಠದ ತಿಂಥಿಣಿ ಬ್ರಿಜ್ ಶಾಖಾ ಮಠದ ಪೀಠಾಧಿಪತಿಗಳಾದ ಶ್ರೀ ಸಿದ್ಧರಾಮಾನಂದ ಶ್ರೀಗಳು ಮನವಿ ಮಾಡಿದರು.
ಶಿರಾಡೋಣ ಗ್ರಾಮದಲ್ಲಿ ಗುರುವಾರದಂದು ಯಾತ್ರಿ ನಿವಾಸ ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭ ನೆರವೇರಿಸಿ ಮಾತನಾಡಿದ ಅವರು. ರಾಜ್ಯದ ಯಾತ್ರಿಗಳಿಗೆ ತಂಗಲು ಯಾವುದೇ ವ್ಯವಸ್ಥೆ ಇಲ್ಲ. ಇಡೀ ವಿಶ್ವದಲ್ಲಿ ಭಾರತ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. ನಮ್ಮ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವುದು ಮುಖ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಿಕ್ಷಣ ಸಚಿವರು ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥರವರು ಡೊಳ್ಳು ಭಾರಿಸುವ ಮೂಲಕ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು. ಶಿರಾಡೋಣದ ಸೀಗಿ ಮಠವು ದಕ್ಷಿಣ ಭಾರತದ ಕಾಶೀಯ ರೀತಿಯಲ್ಲಿ ಅಭಿವೃದ್ಧಿಯಾಗಬೇಕು. ಅದಕ್ಕಾಗಿ ನಾನು ಕೂಡ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದರು.
ಈ ವೇಳೆಯಲ್ಲಿ ಎಂ.ಆರ್.ಪಾಟೀಲ್ ಹಾಗೂ ರಾಜೇಶ್ವರಿ ಯರನಾಳರವರುಗಳು ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿದರು. ಶೀಗಿ ಮಠ ಟ್ರೇಸ್ಟ್ನ ಗೌರವ ಅಧ್ಯಕ್ಷ ಸ್ಥಾನವನ್ನು ಶಾಸಕ ವಿಠ್ಠಲ ಕಟಕದೊಂಡರವರು ವಹಿಸಿದ್ದರು. ಗಿರಿಮಲ್ಲ ಬೆಳ್ಳುಂಡಗಿ, ಕನುಮಂತ ಬನಸೋಡೆ, ಸದಾಶಿವ ಜುಮಣ್ಣ, ರಾಜಕುಮಾರ ಕಂಬಾಗಿ, ಮೋಹನ್ ದಳವಾಯಿ, ವಿಶಾಲ ತಂಗ, ಕಾಶಿಬಾಯಿ ವಾಲಿಕಾರ, ಭಾರತಿ ಸಲಗರ, ಮಾಳಪ್ಪ ಪೂಜಾರಿ, ಜಕ್ಕಪ್ಪ ಕಲಾಟೆ, ಬೀರಪ್ಪ ಪೂಜಾರಿ, ಗಂಗೂಬಾಯಿ ಬಗಲಿ, ರಾಜಕುಮಾರ ಖರಾತ, ಹರಿದಾಸ ಪಾಟೀಲ, ಸಾಕ್ಷತ ಬಗಲಿ, ಶಿವಣ್ಣ ಪಾಂಡ್ರೆ, ಬಂಗಾರೆವ್ವ ಬಗಲಿ, ರುದ್ರಪ್ಪ ಪೂಜಾರಿಯವರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆ ರಾಮಚಂದ್ರ ಚೋಪಡೆ, ಸ್ವಾಗತ ಬೀಮರಾಯ ಹಬಗೊಂಡೆ, ವಂದನಾರ್ಪಣೆ ರಾಯಗೊಂಡ ಪೂಜಾರಿಯವರುಗಳು ನೆರವೇರಿಸಿದರು.

