ಉದಯರಶ್ಮಿ ದಿನಪತ್ರಿಕೆ
ಚಡಚಣ: ಸಿದ್ದೇಶ್ವರ ಶ್ರೀಗಳು ತಮ್ಮ ಆಧ್ಯಾತ್ಮಿಕ ಪ್ರವಚನಗಳ ಮುಖಾಂತರ ನಮ್ಮ ಅಜ್ಞಾನವನ್ನು ಕಳೆದು ನಮಗೆ ಸನ್ಮಾರ್ಗವನ್ನು ತೋರಿಸಿದ ಮಹಾನ್ ಸಂತರು ಎಂದು ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕಧೋಂಡ ಹೇಳಿದರು.
ಚಡಚಣದ ಸಂಗಮೇಶ್ವರ ದೇವಸ್ಥಾನದಲ್ಲಿ ದಿನಾಂಕ ೩.೧೧.೨೪ ರಿಂದ ೧೭.೧೧.೨೪ ರವರೆಗೆ ನಡೆಯಲಿರುವ ಅಮೃತಾನಂದ ಶ್ರೀಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಉಧ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಸಿದ್ದೇಶ್ವರ ಶ್ರೀಗಳ ಜ್ಞಾನ ದಾಸೋಹದ ಪಥವನ್ನು ಅಮೃತಾನಂದ ಶ್ರೀಗಳು ಮುಂದುವರಿಸಿಕೊಂಡು ಹೋಗುತ್ತಿರುವದು ಸ್ತುತ್ಯಾರ್ಹ ಎಂದು ಅವರು ಹೇಳಿದರು. ನಡೆದಾಡುವ ದೇವರೆಂದು ಹೆಸರು ಪಡೆದಿದ್ದ ಸಿದ್ದೇಶ್ವರ ಶ್ರೀಗಳು ಜನ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಆಧ್ಯಾತ್ಮವನ್ನು ತಿಳಿಸಿ ಜನರ ಬದುಕನ್ನು ಬದಲಿಸಿದ ಮಹಾನ ಸಂತರಾಗಿದ್ದರು ಎಂದು ಅವರು ಹೇಳಿದರು.
ದಿವ್ಯ ಸಾನಿಧ್ಯವನ್ನು ವಹಿಸಿದ್ದ ಹತ್ತಳ್ಳಿಯ ಗುರು ಗುರುಪಾದೇಶ್ವರ ಶಿವಾಚಾರ್ಯರು ಮಾತನಾಡಿ ಚಡಚಣ ಆಧ್ಯಾತ್ಮಿಕ ಒಲವನ್ನು ಹೊಂದಿರುವ ಊರಾಗಿದ್ದು, ಸಿದ್ದೇಶ್ವರ ಶ್ರೀಗಳು ಶಾಲೆ ಕಲಿತ ಪುಣ್ಯ ಭೂಮಿಯಾಗಿದೆ ಇಲ್ಲಿ ಅಮೃತಾನಂದ ಶ್ರೀಗಳಿಂದ ಆದ್ಯಾತ್ಮೀಕ ಪ್ರವಚನ ಪ್ರಾರಂಭವಾಗಿದ್ದು ಸ್ತೂತ್ಯಾರ್ಹ ಎಂದು ಹೇಳಿದರು.
ಭಾರತ ಆಧ್ಯಾತ್ಮಿಕತೆಯನ್ನು ಪ್ರೀತಿಸುವ ದೇಶ, ನೆರೆಯ ದೇಶಗಳಲ್ಲಿ, ಆಧ್ಯಾತ್ಮಿಕ ವಿಚಾರಗಳು ಮತ್ತು ಸಂಸ್ಕಾರಗಳು ನಶಿಸಿ ಹೋಗುತ್ತಿದ್ದರೂ ಭಾರತದಲ್ಲಿ ಮಾತ್ರ ಬೆಳೆಯುತ್ತಿದ್ದೆ. ಇದು ಈ ದೇಶದ ಮಣ್ಣೀನ ಗುಣ ಎಂದು ಹೇಳಿದರು. ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ಚಡಚಣ ಗುರುದೇವ ಆಶ್ರಮದ ಯೋಗಾನಂದ ಶ್ರೀಗಳು, ಹಾವಿನಾಳದ ಚರಂತಿಮಠದ ವಿಜಯ ಮಹಾಂತೇಶ ಶಿವಾಚಾರ್ಯರು, ಚಡಚಣದ ವಿರಕ್ತ ಮಠದ ಷಡಕ್ಷರ ಶ್ರೀಗಳು, ಘೋರ ಚಿಂಚೋಳ್ಳಿಯ ಸಿದ್ದರಾಮೇಶ್ವರ ಪಟ್ಟದೇವರು, ಬೆಳ್ಳೆರಿ ಶಿವಾನಂದ ಮಠದ ಬಸವಾನಂದ ಶ್ರೀಗಳು, ಪ್ರವಚನ ನೀಡಲಿರುವ ಅಮೃತಾನಂದ ಶ್ರೀಗಳು, ಪ್ರವಚನ ಸೇವಾ ಸಮೀತಿಯ ಸದಸ್ಯರುಗಳು ಹಾಜರಿದ್ದರು.
ಪ್ರಾಚಾರ್ಯ ಮನೋಜ ಕಟಗೇರಿ ಸ್ವಾಗತಿಸಿದರು, ಪ್ರೊ ಆರ್.ಪಿ ಬಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರೊ ರವಿ ಅರಳಿ ವಂದಿಸಿದರು ಮತ್ತು ನಿವೃತ್ತ ಪ್ರಾಚಾರ್ಯ ಎಸ್.ಕೆ.ಕುಲಕಣಿ೯ ಕಾರ್ಯಕ್ರಮ ನಿರೂಪಿಸಿದರು.

