Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಇಂಡಿ: ಸೆ.22ರಂದು ಬೆಳಗಾವಿಯಲ್ಲಿ ನಡೆಯಲಿರುವ ಲಿಂಗಾಯತ ಪಂಚಮಸಾಲಿ ಸಮಾಜದ ಪ್ರವರ್ಗ 2 ಎ ಹೋರಾಟದ ವಕೀಲರ ಸಮಾವೇಶಕ್ಕೆ ತಾಲೂಕಿನ ಪಂಚಮಸಾಲಿ ಸಮಾಜದ ಸರ್ವ ವಕೀಲರು ಬೆಂಬಲಿಸಿ ಭಾಗವಹಿಸಲಿದ್ದೇವೆ ಎಂದು ವಕೀಲರ ಸಂಘದ ಜಿಲ್ಲಾ ಸಂಘಟನಾ ಸಮಿತಿಯ ಸದಸ್ಯ ಬಿ.ಬಿ. ಬಿರಾದಾರ (ಜೇವೂರ್) ಹೇಳಿದರು.ಅವರು ಗುರುವಾರ ಪಟ್ಟಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಸಮಾಜದ ಪೂಜ್ಯ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳು ದಶಕಗಳಿಂದ ಹಲವು ಹೋರಾಟ ನಡೆಸಿದರು ಸಹ ಯಾವ ಸರಕಾರವು ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡದ ಹಿನ್ನೆಲೆಯಲ್ಲಿ ಶ್ರೀಗಳ ಕಳಕಳಿಯ ಮೇರೆಗೆ ಕಾನೂನು ಹೋರಾಟ ಮಾಡಲು ಎಲ್ಲ ವಕೀಲರು ಸಂಘಟಿತರಾಗಿದ್ದು ಸಪ್ಟೆಂಬರ್ 22ರಂದು ಬೆಳಗಾವಿಯಲ್ಲಿ ಕಾನೂನು ಹೋರಾಟದ ಕುರಿತು ದೀರ್ಘ ಸಮಾವೇಶ ನಡೆಯಲಿದೆ.ಪೂಜ್ಯರ ನೇತೃತ್ವದಲ್ಲಿ ನಡೆಯಲಿರುವ ಸಮಾವೇಶಕ್ಕೆ ಎಲ್ಲ ಜಿಲ್ಲೆಗಳ ಪಂಚಮಸಾಲಿ ಸಮಾಜದ ವಕೀಲರು, ಬೆಂಬಲ ಸೂಚಿಸಿ ಕಾನೂನು ಹೋರಾಟಕ್ಕೆ ಮುಂದಾಗುತ್ತಿದ್ದು ಇಂಡಿ ತಾಲೂಕಿನ ವಕೀಲರು ಸಹ ಈ ಸಮಾವೇಶದಲ್ಲಿ ಪಾಲ್ಗೊಂಡು ಸಮಾಜದ ಬಡ ಮಕ್ಕಳಿಗೆ ಮೀಸಲಾತಿ ಕೊಡಿಸುವ ಹೋರಾಟ…
ಉದಯರಶ್ಮಿ ದಿನಪತ್ರಿಕೆತಿಕೋಟಾ: ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳು ಲೋಹಗಾಂವ ಗ್ರಾಮದಲ್ಲಿ ನಡೆದ ವಲಯ ಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ಗೆದ್ದು ತಾಲ್ಲೂಕ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಆಯ್ಕೆಯಾದ ವಿಧ್ಯಾರ್ಥಿಗಳಿಗೆ ಮುಖ್ಯೋಪಾಧ್ಯಾಯನಿ ಎಸ್.ಎನ್.ಕಲಾವಂತ, ಎಸ್ಡಿಎಂಸಿ ಅಧ್ಯಕ್ಷ ಎ.ಐ.ಸೌದಿ, ಶಿಕ್ಷಕರಾದ ಎ.ಆರ್.ಎಳಂಗಡಿ, ಡಿ.ಎಸ್.ಜತ್ತಿ, ಬಿ.ಎಂ.ತೊಂಡಿಕಟ್ಟಿ, ಎ.ಎಂ.ಹೊಸಮನಿ, ಎಸ್.ಎಸ್.ಜನಗೊಂಡ, ಕಸ್ತೂರಿ ಶಿವಪ್ಪ, ಸುರೇಶ ಮಾಳೇದ, ಸೋವೆಲ್, ಅಕ್ಷಯ, ಪ್ರವೀಣ, ಗ್ರಾಮ ಪಂಚಾಯತಿ ಅಧ್ಯಕ್ಷ, ಸದಸ್ಯರು, ಶಾಲಾ ಹಳೆಯ ವಿಧ್ಯಾರ್ಥಿಗಳು ಅಭಿನಂದಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ತಿಕೋಟಾ: ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳೆಲ್ಲರೂ ತಿಕೋಟಾ ತಾಲೂಕು ಪ್ರಥಮ ಸಾಹಿತ್ಯ ಸಮ್ಮೇಳನ ನಡೆಸುವ ಕುರಿತಾಗಿ ತಹಸೀಲ್ದಾರ ಚನಗೊoಡ ಅವರನ್ನು ಸಂಪರ್ಕಿಸಿ ಸಲಹೆ ಸೂಚನೆ ನೀಡಲು ಗುರುವಾರ ವಿನಂತಿಸಿಕೊಳ್ಳಲಾಯಿತು.ಎಲ್ಲರ ವಿಚಾರಗಳನ್ನು ತಾಳ್ಮೆಯಿಂದ ಆಲಿಸಿದ ಅವರು ತಾಲೂಕಿನ ಪ್ರಥಮ ಸಮ್ಮೇಳನ ಆಯೋಜಿಸುತ್ತಿರುವದು ತುಂಬಾ ಹೆಮ್ಮೆಯ ಸಂಗತಿ, ಪ್ರತಿಯೊಬ್ಬ ಕನ್ನಡಿಗ ಹೆಮ್ಮೆಪಡುವ ಸಂಗತಿಯಾಗಿದ್ದು ಸಮ್ಮೇಳನಕ್ಕೆ ಎಲ್ಲಾ ರೀತಿಯ ಸಹಾಯ ಸಹಕಾರ ತಾಲೂಕ ಆಡಳಿತ ವತಿಯಿಂದ ನೀಡಲಾಗುವದೆಂದು ಭರವಸೆ ನೀಡಿದರು.ಪ್ರಥಮ ಸಮ್ಮೇಳನ ಅಚ್ಚುಕಟ್ಟಾಗಿರುವಂತೆ ನೋಡಿಕೊಳ್ಳಲು ಮತ್ತು ವಿವಾದ ರಹಿತ ಸಮ್ಮೇಳನ ಆಗಬೇಕೆಂದು ಆಶಯ ವ್ಯಕ್ತಪಡಿಸಿದರು. ತಾಲೂಕಿನ ಎಲ್ಲಾ ಕನ್ನಡ ಪರ ಸಂಘಟನೆಗಳು, ಸಂಘ ಸೌoಸ್ಥೆಗಳು,ಶಾಲಾ ಕಾಲೇಜುಗಳು, ಎಲ್ಲಾ ರಾಜಕೀಯ ಮುಖಂಡರನ್ನು, ಪತ್ರಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮ್ಮೇಳನ ಆಯೋಜಿಸಲು ಸಲಹೆ ನೀಡಿದರು.ಈ ಅನೌಪಚಾರಿಕ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ, ಹೊನವಾಡದ ಬಾಬುರಾವ ಮಹಾರಾಜರು, ಲಿಂಗರಾಜ್ ಪಾಟೀಲ್, ಮುತ್ತು ಹಿರೇಮಠ, ಧರೆಪ್ಪ ಎಚ್ಚಿ, ಎಸ್ ಎಸ್ ಕುಂಬಾರ ಪಪ್ಪು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಆವರಣದಲ್ಲಿ ಬುಧವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಹಾಗೂ ಬಿಜೆಪಿ ನಗರ ಮಂಡಲ ಯುವ ಮೋರ್ಚಾ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು.ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ವಿಶ್ವ ನಾಯಕರಾದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನವನ್ನು ಉಪಕಾರಿ ಕಾರ್ಯದ ಮೂಲಕ ವಿಶೇಷವಾಗಿ ಆಚರಿಸುವ ನಿಟ್ಟಿನಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರು ಕೂಡ ರಕ್ತದಾನ ಮಾಡಿ, ರಕ್ತದ ಅವಶ್ಯಕತೆ ಇರುವವರಿಗೆ ಕಲ್ಪಿಸುವ ಪುಣ್ಯದ ಕೆಲಸ ಮಾಡೋಣ ಎಂದರು.ಪದಾಧಿಕಾರಿಗಳಾದ ಪ್ರವೀಣ ವಂದಾಲ, ರಾಚು ಬಿರಾದಾರ, ಲಕ್ಷ್ಮಿ ಕನ್ನೋಳ್ಳಿ, ಸಾಯಿ ಪ್ರಕಾಶ, ವಿಜಯಕುಮಾರ ಗಚ್ಚಿನಕಟ್ಟಿ ಸೇರಿದಂತೆ ಮತ್ತಿತರರು ರಕ್ತದಾನ ಮಾಡಿದರು.ಮಹಾನಗರ ಪಾಲಿಕೆ ಸದಸ್ಯರಾದ ಕುಮಾರ ಗಡಗಿ, ಮಳುಗೌಡ ಪಾಟೀಲ, ಮುಖಂಡರಾದ ಈರಣ್ಣ ರಾವೂರ್, ಪಾಪುಸಿಂಗ್ ರಜಪೂತ, ಪ್ರವೀಣ ಕೂಡಗಿ, ಪ್ರವೀಣ ನಾಟೀಕಾರ,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಾಂಗ್ರೆಸ್ ಹಿರಿಯ ಮುಖಂಡರು ಹಾಗೂ ವಿಧಾನ ಪರಿಷತ್ ಮುಖ್ಯ ಸಚೇತಕ ಪ್ರಕಾಶ ಕೆ. ರಾಠೋಡ ರವರ ೬೪ನೇ ಜನ್ಮದಿನವನ್ನು ವಿಜಯಪುರ ನಗರದ ಅನಾಥಾಶ್ರಮದಲ್ಲಿ ಕಾಂಗ್ರೆಸ್ ಎಸ್.ಸಿ. ಘಟಕ ಜಿಲ್ಲಾ ಉಪಾಧ್ಯಕ್ಷರಾದ ರಾಜು ಎಸ್.ಪವಾರ ಇವರ ಮುಖಂಡತ್ವದಲ್ಲಿ ಅನಾಥಾಶ್ರಮದ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಆಚರಣೆ ಮಾಡಲಾಯಿತು.ಸುರೇಶ ರಂಗು ಚವ್ಹಾಣ (ಭೂತನಾಳ) ಮಾತನಾಡಿ ಪ್ರಕಾಶ ಕೆ. ರಾಠೋಡ ರವರು ಸಕ್ರೀಯವಾಗಿ ಕಾಂಗ್ರೆಸ್ ಪಕ್ಷವನ್ನು ಜಿಲ್ಲೆಯಲ್ಲಿ ಕಟ್ಟಿ ಬೆಳೆಸುವ ಕೆಲಸಗಳನ್ನು ಮಾಡುತ್ತಾ ಬಂದಿದ್ದು, ಇವರು ಪಕ್ಷದ ಕಾರ್ಯಕರ್ತರನ್ನು ಬಹಳ ಆತ್ಮೀಯವಾಗಿ ಕಾಣುತ್ತಾರೆ ಎಂದರು.ಈ ಸಮಯದಲ್ಲಿ ಅಶೋಕ ಜಿ. ಚವ್ಹಾಣ (ಅಲಿಯಾಬಾದದ), ಸಂತೋಷ ಚವ್ಹಾಣ, ಬಾಸು ರಾಠೋಡ, ಕೃಷ್ಣಾ ಲಮಾಣಿ ಇನ್ನಿತರರು ಇದ್ದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ೨೦೨೪-೨೫ನೆಯ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿ, ಪಿಜಿ ಡಿಪ್ಲೋಮಾ, ವ್ಯಾಲ್ಯು ಆಡೆಡ್ ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ಗಳ ಪ್ರಥಮ ವರ್ಷಕ್ಕೆ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಯುಯುಸಿಎಂಎಸ್ ತಂತ್ರ‍್ರಾಂಶದ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.ಸ್ನಾತಕ ಪದವಿಯ ೬ನೆಯ ಸೆಮಿಸ್ಟರ್ ಪರೀಕ್ಷಾ ಫಲಿತಾಂಶಕ್ಕಾಗಿ ಕಾಯುವ ಅಗತ್ಯವಿಲ್ಲ. ಐದು ಸೆಮಿಸ್ಟರ್‌ಗಳ ಅಂಕಪಟ್ಟಿಯೊಂದಿಗೆ ಈಗಲೇ ಅರ್ಜಿ ಸಲ್ಲಿಸಿ. ಪರೀಕ್ಷಾ ಫಲಿತಾಂಶ ಬಂದ ನಂತರ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗಾಗಿ ಆಯಾ ವಿಭಾಗಗಳಿಗೆ ೬ನೆಯ ಸೆಮಿಸ್ಟರ್ ಅಂಕಪಟ್ಟಿ ಸಲ್ಲಿಸಬಹುದಾಗಿದೆ.ಅರ್ಜಿ ಸಲ್ಲಿಸಲು ಅಕ್ಟೋಬರ್ ೨೦ ಕೊನೆಯ ದಿನವಾಗಿದ್ದು ಯುಯುಸಿಎಂಎಸ್ https://uucms.karnataka.gov.in/Login/Indexತಂತ್ರಾಂಶದಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆನ್‌ಲೈನ್ ಮೂಲಕ ಸಲ್ಲಿಸಿರುವ ಅರ್ಜಿಯ ಪ್ರತಿಯನ್ನು ವಿಶ್ವವಿದ್ಯಾನಿಲಯದ ಕಚೇರಿಗೆ ಅಥವಾ ಆಯಾ ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರಿಗೆ ಅ.೨೧ರೊಳಗೆ ಸಲ್ಲಿಸಬೇಕು. ವಿದ್ಯಾರ್ಥಿನಿಯರ ಆಯ್ಕೆಯನ್ನು ಮೆರಿಟ್ ಹಾಗೂ ರೋಸ್ಟರ್ ಆಧಾರದ ಮೇಲೆ ಮಾಡಲಾಗುವುದು. ಆಪ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಪ್ರವೇಶಾತಿಯನ್ನು ಕೌನ್ಸೆಲಿಂಗ್ ಮೂಲಕ ನೀಡಲಾಗುವುದು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಆಮ್ ಆದ್ಮಿ ಪಾರ್ಟಿ ಶಾಸಕಾಂಗ ಸಭೆಯಲ್ಲಿ ಸರ್ವಾನುಮತದಿಂದ ದೆಹಲಿಯ ನೂತನ ಮುಖ್ಯಮಂತ್ರಿಗಳಾಗಿ ಶ್ರೀಮತಿ ಆತಿಶಿ ಅವರ ಆಯ್ಕೆಯನ್ನು ಪಕ್ವದ ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಸ್ವಾಗತಿಸಿದ್ದಾರೆ.ದೇಶದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಆಮ್ ಆದ್ಮಿ ಪಕ್ಷದ ಕಾರ್ಯಕರ್ತೆಯಾಗಿ ನಂತರ ಪರ್ಯಾಯ ರಾಜಕಾರಣದ ಪಯಣದಲ್ಲಿ ಹಲವು ಜವಾಬ್ದಾರಿಗಳನ್ನು ಅತ್ಯಂತ ಯಶಸ್ವಿಯಾಗಿ ಆತಿಶಿ ಅವರು ನಿರ್ವಹಿಸಿದ್ದಾರೆ. ವಿಶ್ವವೇ ದೆಹಲಿಯ ಶೈಕ್ಷಣಿಕ ಕ್ರಾಂತಿಯನ್ನು ಬೆರಗುಗಣ್ಣುಗಳಿಂದ ನೋಡುವಂತೆ ಮಾಡಿರುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದ ಆತಿಶಿ, ಭಾರತ ದೇಶದ ಬಡತನವನ್ನು ದೇಶದ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣವನ್ನು ನೀಡುವ ಮೂಲಕ ಮಾತ್ರ ಪರಿಹಾರ ಮಾಡಬಹುದೆಂಬ ಅವರ ಯೋಚನಾ ಲಹರಿ ದೆಹಲಿಯಲ್ಲಿ ಸಂಪೂರ್ಣವಾಗಿ ಸಾರ್ಥಕತೆಯನ್ನು ಸಾಧಿಸಿದ್ದಾರೆ.ಲಕ್ಷಾಂತರ ಮಕ್ಕಳು ಇಂದು ಶಿಕ್ಷಣದಲ್ಲಿ ಉನ್ನತಿ ಸಾಧಿಸಿ ತಮ್ಮ ಬಡತನವನ್ನು ತೊಲಗಿಸಿಕೊಂಡಿರುವ ಹಿರಿಮೆ ಗರಿಮೆ ಆತಿಶಿ ಅವರಿಗೆ ಸಲ್ಲುತ್ತದೆ.ದೆಹಲಿ ಸರ್ಕಾರದ 14 ಇಲಾಖೆಗಳನ್ನು ನಿಭಾಯಿಸಿರುವ ಅನುಭವವನ್ನು ಹೊಂದಿರುವ ಆತಿಶಿ ಅವರು ಶಿಕ್ಷಣ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಅಮೂಲಾಗ್ರ ಬದಲಾವಣೆಗಳನ್ನು…
ಜಾಲಗೇರಿ ಎಲ್. ಟಿ.-1 ದುರ್ಗಾದೇವಿ ಜಾತ್ರೆ ಸಮಾರಂಭದಲ್ಲಿ ಸಚಿವ ಎಂ. ಬಿ. ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಂಜಾರಾ ಸಮಾಜ ಬಸವಾದಿ ಶರಣರ ಕಾಯಕ ತತ್ವ ಪಾಲಿಸುವುದರ ಜೊತೆಗೆ ಅದರದೇ ಆದ ಸಂಸ್ಕೃತಿಯನ್ನೂ ಮುಂದುವರೆಸಿಕೊಂಡು ಬರುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಬುಧವಾರ ತಿಕೋಟಾ ತಾಲೂಕಿನ ಜಾಲಗೇರಿ ಎಲ್. ಟಿ.-1 ರಲ್ಲಿ ದುರ್ಗಾದೇವಿ ಜಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಬಂಜಾರಾ ಸಮಾಜ ಅದರದೇ ಆದ ವಿಭಿನ್ನ ಸಂಸ್ಕೃತಿ ಹೊಂದಿದ್ದು, ದುಡಿಮೆಯ ಕುರಿತು ಬಸವಾದಿ ಶರಣರು ಮತ್ತು ಅಣ್ಣ ಬಸವಣ್ಣನವರು ಹೇಳಿದಂತೆ ಕಾಯಕ ತತ್ವಕ್ಕೆ ಮಹತ್ವ ಕೊಡುತ್ತದೆ. ಶ್ರಮ ಜೀವಿಗಳಾಗಿರುವ ಈ ಸಮಾಜದ ಜನರು ಶ್ರಮವಹಿಸಿ ದುಡಿದು ತಂತಮ್ಮ ತಾಂಡಾಗಳಲ್ಲಿ ಅಷ್ಟೇ ಶ್ರದ್ಧಾ ಭಕ್ತಿಯಿಂದ ದೇವರ ಸೇವೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಕಾಯಕಕ್ಕೆ ನೀಡುವಷ್ಟೇ ಮಹತ್ವವನ್ನು ಸಂಸ್ಕೃತಿಗೂ ನೀಡುತ್ತಿದೆ. ಬಹಳಷ್ಟು ಸಮುದಾಯಗಳು ತಮ್ಮ ಸಂಸ್ಕೃತಿಯನ್ನು ಮರೆಯುತ್ತಿರುವ ಇಂದಿನ ದಿನಗಳಲ್ಲಿ…
ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ತಮ್ಮದೇಯಾದ ಮಹತ್ವ ಹೊಂದಿರುವ ಗ್ರಾಮೀಣ ಜಾನಪದ ಕಲೆಗಳನ್ನು ಉಳಿಸಿ ಬೆಳೆಸಬೇಕು. ಅವುಗಳಲ್ಲಿ ನೀತಿಯಿದೆ. ಸತ್ವವಿದೆ. ಬದುಕಿಗೆ ದಾರಿದೀಪವಾಗಬಲ್ಲ ಅಂಶಗಳು ಜಾನಪದ ಹಾಡುಗಳು, ಕಥೆಗಳು ಹೊಂದಿರುವುದರಿಂದ ಅವುಗಳನ್ನು ಮುಂದಿನ ಪೀಳಿಗೆಗೂ ಪರಿಚಯಿಸುವುದು ಅಗತ್ಯವಿದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.ಚಿಮ್ಮಡ ಓಂ ಪ್ರಭುಲಿಂಗೇಶ್ವರ ಕಿಚಡಿ ಜಾತ್ರೆಯಂಗವಾಗಿ ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕಾ ಘಟಕ ಹಾಗೂ ಓಂ ಪ್ರಭುಲಿಂಗೇಶ್ವರ ಜಾತ್ರಾ ಮಹೋತ್ಸವ ಸಮಿತಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಾನಪದ ಜಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಅನ್ನದಾಸೋಹ ಹಾಗೂ ಜ್ಞಾನ ದಾಸೋಹ ಒಟ್ಟಿಗೆ ಸಿಗುವ ಜಾತ್ರೆಯಂದರೆ ಅದು ಚಿಮ್ಮಡ ಕಿಚಡಿ ಜಾತ್ರೆ ಎಂದರು.ಯುವಕರ ಶಾಸಕ ಸಿದ್ದು ಸವದಿ ಮಾತನಾಡಿ, ಗ್ರಾಮದ ಹಿರಿಯರ ಒಗ್ಗಟ್ಟಿನ ಶಕ್ತಿ ಹಾಗೂ ಇಲ್ಲಿನ ಯುವಕರ ಅವಿರತ ಪರೀಶ್ರಮದಿಂದ ಜಾತ್ರೆಯು ಪ್ರತೀವರ್ಷ ಯಶಸ್ವಿಯಾಗಿ ಜರುಗುತ್ತಿದೆ ಎಂದರು.ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಮಾತನಾಡಿ, ಉತ್ತರ ಕರ್ನಾಟಕದಲ್ಲಿಯೇ ವಿಶಿಷ್ಟ ಜಾತ್ರೆಯೆಂಬ ಹೆಗ್ಗಳಿಕೆ ಹೊಂದಿರುವ ಚಿಮ್ಮಡ ಕಿಚಡಿ ಜಾತ್ರೆ ಲಕ್ಷಾಂತರ ಜನರಿಗೆ ಏಕಕಾಲಕ್ಕೆ ದಾಸೋಹ…
ಶಿಕ್ಷಣ ಇಲಾಖೆ ಆಯೋಜಿಸಿದ್ದ ಪ್ರಾಥಮಿಕ ಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಶಿಕ್ಷಣ ಇಲಾಖೆ ಆಯೋಜಿಸಿದ್ದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ನಮಗೆ ಅನ್ಯಾಯ ಮಾಡಲಾಗಿದೆ. ಕೂಡಲೇ ಈ ಬಗ್ಗೆ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಸರಕೋಡದ ಸಂಗಮೇಶ ಕಟಾರೆ ಮತ್ತು ಬಸವರಾಜ ಬಿರಾದಾರ ಆರೋಪಿಸಿದ್ದಾರೆ.ಈ ಕುರಿತು ಮಾಧ್ಯಮಕ್ಕೆ ಚಿತ್ರೀಕರಿಸಿದ ವಿಡಿಯೋ ಮೂಲಕ ಮಾಹಿತಿ ನೀಡಿದ ಅವರು, ಬುಧವಾರ ತಾಲೂಕಿನ ಯರಝರಿ ಗ್ರಾಮದಲ್ಲಿ ನಡೆದ ಪ್ರಾಥಮಿಕ ಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟದ ಖೋಖೋ ಆಟದಲ್ಲಿ ಯರಝರಿ ಶಾಲೆಯವರು ಇಬ್ಬರು ಪ್ರೌಢ ಶಾಲೆಯ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಆಟವಾಡಿ ಗೆದ್ದಿರುತ್ತಾರೆ. ಇದರಿಂದ ನಮ್ಮೂರ ಶಾಲೆಯ ಕ್ರೀಡಾಪಟುಗಳಿಗೆ ಅನ್ಯಾಯವಾಗಿದೆ. ಶಿಕ್ಷಣ ಇಲಾಖೆ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಮತ್ತೊಮ್ಮೆ ಆಟವಾಡಿಸಬೇಕು. ಜೊತೆಗೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
