ಉದಯರಶ್ಮಿ ದಿನಪತ್ರಿಕೆ
ಚಿಕ್ಕಪಡಸಲಗಿ: ಕೀರ್ತನೆಗಳ ಹರಿಕಾರ ಭಕ್ತ ಕನಕದಾಸರ ಚರಿತ್ರೆ ಆವಣಿ೯ನೀಯವಾಗಿದೆ.ಅವರ ಸಕಲ ಚಿಂತನೆಗಳ ತತ್ವಸಾರಗಳು ಇಡೀ ಮನುಕುಲಕ್ಕೆ ಬೆಳಕಾಗಿವೆ.ಮನು ತತ್ವದ ಒಳಗಣ್ಣು ತೆರೆಸಿವೆ. ಜ್ಞಾನೋದಯದ ರಸವೋನ್ಪತಿ ಉಣಬಡಿಸಿದ್ದು, ಅವು ಬದುಕಿನ ಉನ್ಮಾದಕ್ಕೆ ಬೆಳಕಾಗಿವೆ ಎಂದು ಪ್ರಭಾರ ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ ಅಭಿಪ್ರಾಯಿಸಿದರು.
ಅವರು ಚಿಕ್ಕಪಡಸಲಗಿ ಗ್ರಾಮದಲ್ಲಿ ಗದುಗಿನ ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಸೋಮವಾರ ದಾಸ ಶ್ರೇಷ್ಟ ಕನಕದಾಸರ ಜಯಂತಿ ಅಂಗವಾಗಿ ಕನಕರ ಹಾಗೂ ಕನ್ನಡ ಕುಲಗುರು ಲಿಂ,ತೋಂಟದ ಡಾ.ಸಿದ್ದಲಿಂಗ ಪೂಜ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಸಮಾಜದ ಹಿಂದುಳಿದ ಕುಟುಂಬದಲ್ಲಿ ಜನಿಸಿ ತಮ್ಮ ವೈಚಾರಿಕ ಕೃತಿಗಳ ಮೂಲಕ ಗುರುತಿಸಿಕೊಂಡಿರುವ ಕನಕರು ಶ್ರೇಷ್ಠ ವಿದ್ವಾಂಸರು. ಜಾತಿ,ಮತ, ಕುಲ, ಗೋತ್ರಗಳಿಗೆ ಅಂಟಿಕೊಳ್ಳದೇ ಮನುಕುಲದ ದಿವ್ಯತೆಗೆ ಮಹತ್ವವನ್ನು ನೀಡಿದ್ದಾರೆ. ತಮ್ಮದೇ ಬುದ್ದಿವಂತಿಕೆ, ಚುರುಕತನದ ಆಲೋಚನಾ ಲಹರಿಯ ಪ್ರಜ್ಞೆಯಿಂದ ಸಾಹಿತ್ಯ, ಕೃತಿಗಳ ಮೂಲಕ ಅನ್ಯೋನ್ಯ ಸಂದೇಶಗಳನ್ನು ಸಮಾಜದ ಒಳಿತಿಗೆ ಕನಕರು ನೀಡಿದ್ದಾರೆ ಎಂದರು.
ಕವಿಯಾಗಿ,ಕೀರ್ತನಗಾರರಾಗಿ, ದಾಸರಾಗಿ ಪ್ರಫುಲ್ ವೈಚಾರಿಕತೆ ಪ್ರಜ್ಞೆಯೊಂದಿಗೆ ಕನ್ನಡ ಭಾಷೆ ಲೀಲಾಜಾಲವಾಗಿ ಬಳಸಿ ಕನ್ನಡ ಭಾಷೆ ಶ್ರೇಷ್ಠತೆ ಶ್ರೀಮಂತಿಕೆ ಕನಕದಾಸರು ಹೆಚ್ಚಿಸಿದ್ದಾರೆ. ಅವರ ಎಲ್ಲ ಕಾವ್ಯಗಳಲ್ಲಿ ಕವಿ ಸಹಜ ಭಾವ ಅನವರಣಗೊಂಡಿವೆ. ಕನಕರ ಕಾವ್ಯ ಕೌಶಲ್ಯ ಬೆರಗುಗೊಳಿಸುವಂತಿದೆ. ಅವು ಜನಸಾಮಾನ್ಯರ ಜೀವನಕ್ಕೆ ದಾರಿದೀಪಗಳಾಗಿವೆ. ಕನಕದಾಸರ ಜೀವನ ಕಥಾ ಹಂದರ ಅಮೂಲ್ಯ ಚಿಂತನೆಗಳಿಂದ ಕೂಡಿವೆ.ಎಲ್ಲ ಜೀವಗಳ ಒಳಿತು ಬಯಸುವಂತಿವೆ. ಹೀಗಾಗಿ ಅವರ ಚಿಂತನೆ ಸಕಲ ಮನು ಕುಲಕ್ಕೆ ಪ್ರಸ್ತುತವಾಗಿದೆ ಎಂದು ಬಸವರಾಜ ಜಾಲೋಜಿ ಅಭಿಪ್ರಾಯಿಸಿದರು.
ವಿಶ್ರಾಂತ ಶಿಕ್ಷಕ ಬಸವರಾಜ ಅನಂತಪೂರ, ಸಮಾಜದ ಅಂಕು,ಡೊಂಕುಗಳನ್ನು ತಿದ್ದಿರುವ ದಾಸಶ್ರೇಷ್ಟ ಕನಕದಾಸರ ಸಾಧನೆ,ಬದುಕಿನ ಮೌಲ್ಯ ನಮಗೆಲ್ಲ ಪ್ರೇರಣೆಗಳಾಗಿವೆ.ಮಕ್ಕಳು ಇಂಥ ಸಾಧಕರ ಜೀವನ ಚರಿತ್ರೆಯನ್ನು ಮೆಲುಕು ಹಾಕಿ ತತ್ವಾದರ್ಶಗಳನ್ನ ಅಳವಡಿಸಿಕೊಳ್ಳಬೇಕು ಎಂದರು
ಶಿಕ್ಷಕರಾದ ಈರಪ್ಪ ದೇಸಾಯಿ, ಲೋಹಿತ ಮಿಜಿ೯, ಕುಮಾರ ವಾಣಿ, ಜಿ.ಆರ್.ಜಾಧವ, ಶಿಕ್ಷಕಿಯರಾದ ಕವಿತಾ ಅಂಬಿ, ಸಹನಾ ಕಲ್ಯಾಣಿ (ಹತ್ತಳ್ಳಿ), ಪ್ರಮೀಳಾ ತೇಲಸಂಗ ಸೇರಿದಂತೆ ಶಾಲಾ ಮಕ್ಕಳು ಇತರರಿದ್ದರು.

