ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ತಾಲೂಕಾಡಳಿತದಿಂದ ಸೋಮವಾರ ಹಮ್ಮಿಕೊಂಡಿದ್ದ ಭಕ್ತ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಭಕ್ತ ಕನಕದಾಸ ಭಾವಚಿತ್ರಕ್ಕೆ ಗ್ರೇಡ್-೨ ತಹಸೀಲ್ದಾರ ಜಿ.ಎಸ್.ನಾಯಕ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಎಇಇ ಜಿ.ವ್ಹಿ.ಕಿರಸೂರ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ದೇಸಾಯಿ, ಶಿರಸ್ತೇದಾರ ಬಿ.ಆರ್.ಪೋಲೇಶಿ, ಭೂದಾಖಲೆ ಇಲಾಖೆಯ ಕಲಾದಗಿ, ಪುರಸಭೆ ಮುಖ್ಯಾಧಿಕಾರಿ ಅಪ್ರೋಜ್ಅಹ್ಮದ ಪಟೇಲ, ಸಮಾಜ ಕಲ್ಯಾಣ ಇಲಾಖೆಯ ದಪ್ಪೇದಾರ, ವಿರೇಶ ಗೂಡ್ಲಮನಿ, ಖಜಾನೆ ಇಲಾಖೆಯ ಮನೋಜ ಪಾಟೀಲ, ಶಿಕ್ಷಣ ಇಲಾಖೆಯ ಎಂ.ವ್ಹಿ.ಗಬ್ಬೂರ, ತಹಸೀಲ್ದಾರ ಕಚೇರಿಯ ಸಿಬ್ಬಂದಿಗಳಾದ ಬಸವರಾಜ ದಾನಿ, ಮಂಜು ಹಳ್ಳೂರ,ಆರ್.ವ್ಹಿ.ಘಾಟಗೆ, ನಿರ್ಮಲಾ ಪೂಜಾರಿ, ಅನಿತಾ ಪಾಟೀಲ ಇತರರು ಇದ್ದರು.
ಭಾಗವಹಿಸದ ಹಾಲುಮತ ಸಮುದಾಯ
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳನ್ನು ಹೊರತು ಪಡಿಸಿದರೆ ಹಾಲುಮತ ಸಮಾಜ ಬಾಂಧವರಾಗಲಿ, ಬೇರೆ ಸಮಾಜ ಬಾಂಧವರಾಗಲಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳಾಗಲಿ, ವಿವಿಧ ಮುಖಂಡರಾಗಲಿ ಯಾರೊಬ್ಬರೂ ಭಾಗವಹಿಸಿರಲಿಲ್ಲ. ಹಾಲುಮತ ಸಮಾಜದ ಮುಖಂಡರು ಪಟ್ಟಣದಲ್ಲಿ ಭಕ್ತ ಕನಕದಾಸ ವೃತ್ತ ನಿರ್ಮಾಣ ಕಾಮಗಾರಿ ನೆರವೇರದೇ ಇರುವದರಿಂದಾಗಿ ಈ ಜಯಂತಿ ಕಾರ್ಯಕ್ರಮದಿಂದ ದೂರ ಉಳಿಯುವುದಾಗಿ ಹೇಳಿದ್ದರಿಂದಾಗಿ ಈ ಸಮಾಜದ ಬಾಂಧವರು ಯಾರೂಬ್ಬರೂ ಭಾಗವಹಿಸಿರಲಿಲ್ಲ. ತಾಲೂಕಾಡಳಿತದಿಂದ ಹಮ್ಮಿಕೊಂಡ ಭಕ್ತ ಕನಕದಾಸ ಜಯಂತಿ ಕಾರ್ಯಕ್ರಮ ಕೇವಲ ಅಧಿಕಾರಿಗಳಿಗೆ ಮಾತ್ರ ಸೀಮಿತವಾಗಿ ಜರುಗಿತು. ಕಾರ್ಯಕ್ರಮದಲ್ಲಿ ಕೇವಲ ಪೂಜೆ ಮಾತ್ರ ನೆರವೇರಿಸಲಾಯಿತು.

