ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಕ್ತ ಕನಕದಾಸರ 537 ನೇ ಜಯಂತಿಯಂಗವಾಗಿ ಸೋಮವಾರ ಭಕ್ತ ಕನಕದಾಸ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ. ಎನ್. ಬಿ. ಹೊಸಮನಿ ಅವರು ಮಾತನಾಡಿ, ಕನ್ನಡ ನಾಡು ಕಂಡ ಶ್ರೇಷ್ಠ ಕೀರ್ತನಕಾರ. ಕವಿಯಾಗಿದ್ದ ಕನಕದಾಸರು ಮಹಾಜ್ಞಾನಿಯೂ ಆಗಿದ್ದರು.ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಅಸಮಾನತೆ, ಅಜ್ಞಾನಗಳನ್ನು ತೊಲಗಿಸಲು ಶ್ರಮಿಸಿದರು ಎಂದು ಹೇಳಿದರು.
ರಾಜ್ಯಶಾಸ್ತ್ರ ವಿಭಾಗದ ಡಾ. ಹೆಚ್. ಎಂ. ನಾಟಿಕಾರ, ಕನ್ನಡ ವಿಭಾಗದ ಶ್ರೀಶೈಲ ಬಳವಾಟ, ಡಾ. ಬಾನು, ನಿರ್ವಹಣಾ ಶಾಸ್ತ್ರ ವಿಭಾಗದ ಡಾ. ಅಮಿತ್ ಮಿರ್ಜಿ, ಇತಿಹಾಸ ವಿಭಾಗದ ವಿಜಯಲಕ್ಷ್ಮೀ, ಡಾ. ಪ್ರಶಾಂತ ನಾಯಕ, ದೈಹಿಕ ಶಿಕ್ಷಣ ನಿರ್ದೇಶಕ ರೇಣುಕಾ ಅಂಬಲಿ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

