ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತೇಲುವ ಸ್ಥಿತಿಯಲ್ಲಿ ಮಹಿಳೆ ಮತ್ತು ಹೆಣ್ಣು ಮಗುವಿನ ಶವಗಳು ಬಾವಿಯೊಳಗೆ ಪತ್ತೆಯಾದ ಘಟನೆ ತಾಲೂಕಿನ ಹಂಡರಗಲ್ಲ ಗ್ರಾಮದಲ್ಲಿ ಸೋಮವಾರ ವರದಿಯಾಗಿದೆ.
ಮೃತ ದುರ್ದೈವಿಗಳನ್ನು ರಿಯಾನಾ ಇನಾಮದಾರ(೨೫) ಮತ್ತು ಅಮೀರಾ ಇನಾಮದಾರ(೫) ಎಂದು ಗುರುತಿಸಲಾಗಿದೆ. ಮೃತರು ತಾಯಿ ಮತ್ತು ಮಗಳು ಎನ್ನಲಾಗುತ್ತಿದೆ. ಕಳೆದ ೨ ವರ್ಷಗಳಿಂದ ಪತಿಯನ್ನು ಬಿಟ್ಟು ತವರು ಮನೆಗೆ ಬಂದಿದ್ದ ರಿಯಾನಾ ಮಾನಸಿಕವಾಗಿ ನೊಂದಿದ್ದಳು ಎಂದು ಕೇಳಿಬಂದಿದೆ. ಘಟನೆಯ ಹಿನ್ನೆಲೆ ಸಂಶಯಾಸ್ಪದವಾಗಿದ್ದು ಸತ್ಯಾ ಸತ್ಯತೆ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.

