Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಅಂದದ ಶೌಚಾಲಯ-ಆನಂದದ ಜೀವನ ಎಂಬ ಘೋಷವಾಕ್ಯದೊಂದಿಗೆ ನ.೧೯ರಿಂದ ಡಿ.೧೨ರವರೆಗೆ ವಿಶೇಷ ಆಂದೋಲನವನ್ನು ಹಮ್ಮಿಕೊಳ್ಳುವ ಕುರಿತು ಮಂಗಳವಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆ ಜರುಗಿತು.ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ವಿವಿಧ ಅನುಷ್ಠಾನ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಂಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ದಿನಾಂಕ: ೧೯.೧೧.೨೦೨೪ ರಿಂದ ದಿನಾಂಕ:೧೦.೧೨.೨೦೨೪ ರವರೆಗೆ ನಿರಂತರವಾಗಿ “ನಮ್ಮ ಶೌಚಾಲಯ -ನಮ್ಮ ಗೌರವ” ಎಂಬ ಶಿರ್ಷಿಕೆ ಹಾಗೂ “ಅಂದದ ಶೌಚಾಲಯ-ಆನಂದದ ಜೀವನ” ಎಂಬ ಘೋಷವಾಕ್ಯದೊಂದಿಗೆ ವಿಶೇಷ ಆಂದೋಲನವನ್ನು ಆಯೋಜನೆ ಮಾಡಲು ಸೂಚಿಸಿದರು.ಸಭೆಯಲ್ಲಿ ಮಹಿಳಾ…
ತೊರವಿಯಲ್ಲಿ ನಮ್ಮ ಶೌಚಾಲಯ-ನಮ್ಮ ಗೌರವ ಧ್ಯೇಯವಾಕ್ಯದೊಂದಿಗೆ ವಿಶ್ವ ಶೌಚಾಲಯ ದಿನಾಚರಣೆ-೨೦೨೪ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಪಂಚಾಯತಿ ವತಿಯಿಂದ ಜಿಲ್ಲೆಯ ತಿಕೋಟಾ ತಾಲೂಕಿನ ತೊರವಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಂಗಳವಾರ ನಮ್ಮ ಶೌಚಾಲಯ-ನಮ್ಮ ಗೌರವ ಎಂಬ ಧ್ಯೇಯವಾಕ್ಯದೊಂದಿಗೆ ವಿಶ್ವ ಶೌಚಾಲಯ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರು ಮತ್ತು ಶಾಲಾ ಮಕ್ಕಳನ್ನು ಒಳಗೊಂಡಂತೆ “ವಿಶ್ವ ಶೌಚಾಲಯ ದಿನಾಚರಣೆ”ಯ ಮಹತ್ವ ಸಾರುವ ಅಭಿಯಾನವನ್ನು ನ.೧೯ ರಿಂದ ಡಿ.೧೨ರವರೆಗೆ ಹಮ್ಮಿಕೊಳ್ಳಲಾಗಿದೆ. ಪ್ರತಿ ಮನೆ ಮನೆಯಲ್ಲಿಯೂ ಶೌಚಾಲಯ ಕಟ್ಟಿಸಿಕೊಂಡು ಪ್ರತಿಯೊಬ್ಬರು ಶೌಚಾಲಯವನ್ನು ಬಳಸಬೇಕು, ಸ್ವಚ್ಛತೆಯಿಂದ ನಿರ್ವಹಣೆ ಮಾಡಬೇಕು. ಈ ಮೂಲಕ ಬಯಲು ಬರ್ಹಿದೆಸೆ ಮುಕ್ತ ಗ್ರಾಮವನ್ನಾಗಿ ಮಾಡಬೇಕೆಂದು ಹೇಳಿದರು.ಪ್ರತಿಯೊಬ್ಬರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಬಯಲು ಶೌಚಾಲಯ ತ್ಯಜಿಸಿ, ಉತ್ತಮ ಹಾಗೂ ಸ್ಚಚ್ಚವಾದ ಶೌಚಾಲಯಗಳನ್ನು ಬಳಸಬೇಕು. ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಮನವಿ ಮಾಡಿದ ಅವರು, ಶೌಚಾಲಯ ಹೊಂದಿಲ್ಲದವರು “ಸಿಟಿಜನ್ ಪೋರ್ಟಲ್” ಮೂಲಕ ಅರ್ಜಿಗಳನ್ನು ಸಲ್ಲಿಸಿ…
ದೇವರಹಿಪ್ಪರಗಿಯಲ್ಲಿ ೭೧ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಗಳು ಕೇವಲ ತಮ್ಮ ಲಾಭಕ್ಕಾಗಿ ಕಾರ್ಯನಿರ್ವಹಿಸದೇ ರೈತರು ಹಾಗೂ ಜನತೆಯ ಏಳಿಗೆಗಾಗಿ ಶ್ರಮ ವಹಿಸುತ್ತಿವೆ ಎಂದು ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಹೇಳಿದರು.ಪಟ್ಟಣದ ಸದಯ್ಯನಮಠದಲ್ಲಿ ಮಂಗಳವಾರ ವಿಜಯಪುರ ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ ಹಾಗೂ ವಿ.ಪ್ರಾ.ಗ್ರಾ.ಕೃ.ಸ.ಸಂಘಗಳು ಚಟ್ಟರಕಿ, ಮುಳಸಾವಳಗಿ, ಕೋರವಾರ, ಬಮ್ಮನಜೋಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ೭೧ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಅಂದು ಸಹಕಾರ ಸಂಘಗಳು ಆರಂಭದಲ್ಲಿ ಕೆಲವೇ ಬಂಡವಾಳದೊಂದಿಗೆ ಆರಂಭಗೊಂಡು ಇಂದು ಬೃಹತ್ ಬ್ಯಾಂಕ್‌ಗಳಾಗಿ ಬೆಳೆದಿವೆ. ಜಿಲ್ಲೆಯಲ್ಲಿ ಸಹಕಾರ ಸಂಘಗಳು ಬೆಳೆಯಬೇಕು ಅದರಲ್ಲಿ ರಾಜಕಾರಣ ಬೇಡ ಎಂದರು.ಕರ್ನಾಟಕ ರಾಜ್ಯ ಸಹಕಾರ ವಿಮಾ ಮಹಾಮಂಡಳದ ಅಧ್ಯಕ್ಷ ಶಿವನಗೌಡ ಬಿರಾದಾರ, ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಸಂಗನಬಸಪ್ಪ ತಳೇವಾಡ, ಸಹಾಯಕ ನಿಬಂಧಕ ಕೆ.ಎಚ್.ವಡ್ಡರ, ಡಾ. ಆರ್.ಆರ್.ನಾಯಿಕ್, ಸಂಗಮೇಶ ಛಾಯಾಗೋಳ, ಸಂಗನಗೌಡ ಬಿರಾದಾರ, ಎಂ.ಎಸ್.ಪಾಟೀಲ(ಕೋರಳ್ಳಿ),…
ಮದಭಾವಿ ಅರಣ್ಯ ಹುಲ್ಲುಗಾವಲಿನಲ್ಲಿ ಅಕ್ರಮವಾಗಿ ಮುರ್ಮ(ಗರಚು) ಸಾಗಾಣೆಗೆ ತಡೆಗೆ ಆಗ್ರಹ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕವಲಗಿ ಮದಭಾವಿ ಅರಣ್ಯ ಹುಲ್ಲುಗಾವಲಿನಲ್ಲಿ ಅಕ್ರಮವಾಗಿ ಮುರ್ಮ(ಗರಚು) ಸಾಗಾಣೆಯೂ ಕಳೆದ ಕೆಲವು ತಿಂಗಳಿನಿಂದ ಎಗ್ಗಿಲ್ಲದೇ ನಡೆಯುತ್ತಿದ್ದು, ತಲಾಟಿ ಹಾಗೂ ತಹಶಿಲ್ದಾರರ ಗಮನಕ್ಕೆ ಮೌಕೀಕವಾಗಿ ತಿಳಿಸಿದರೂ ಯಾರೂ ತಲೆಕೆಡಿಸಿಕೊಂಡಿಲ್ಲ, ಇದರಿಂದಾಗಿ ಅರಣ್ಯ ಸಂಪತ್ತು ನಾಶವಾಗುವುದರಲ್ಲಿ ಸಂಶಯವಿಲ್ಲ, ಇದು ನಿರಂತರವಾದರೆ ಅರಣ್ಯದ ಜೊತೆ ರಸ್ತೆ ಕೂಡಾ ಹಾಳಾಗುತ್ತಿದೆ ಅಂತಹ ಭೂಗಳ್ಳರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸೋಮನಿಂಗ ಗೆಣ್ಣೂರ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮನವಿ ಸಲ್ಲಿಸಲಾಯಿತು.ರೈತಸಂಘ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಮನವಿ ಸಲ್ಲಿಸಿ ಜೆ.ಸಿ.ಪಿಗಳಲ್ಲಿ ದೊಡ್ಡ ದೊಡ್ಡ ಭಾರತಬೆಂಚ್ ವಾಹನಗಳ ಮೂಲಕ ಅಕ್ರಮವಾಗಿ ಮುರ್ಮ(ಗರಚು) ಸಾಗಾಣೆ ಮಾಡುತ್ತಿರುವುದರಿಂದ ಒಳ್ಳೆಯ ಡಾಂಬರ ರಸ್ತೆಗಳು ಸಂಪೂರ್ಣ ಹಾಳಾಗುತ್ತಿವೆ, ಇದರಿಂದ ಜನಸಾಮಾನ್ಯರಿಗೂ ಹಾಗೂ ಸರಕಾರಕ್ಕೆ ದೊಡ್ಡ ನಷ್ಟ ಉಂಟಾಗುತಿದೆ, ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ಮಾಡಿ ಅಕ್ರಮ ಮುರ್ಮ(ಗರಚು)…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮುಂದಿನ ಅವಧಿಗೆ ಮೇಯರ್ ಮತ್ತು ಉಪಮೇಯರ್ ಭಾರತೀಯ ಜನತಾ ಪಾರ್ಟಿಯವರೆ ಆಗಬೇಕೆಂದು ಪಟ ತೊಟ್ಟಿದ್ದೇವೆ. ಹೀಗಾಗಿ ಸ್ವಾಭಿಮಾನದಿಂದ ಬಿಜೆಪಿಗೆ ಮತ ನೀಡಿ, ನಮ್ಮ ಅಭ್ಯರ್ಥಿ ಗೆಲ್ಲಿಸುವ ಶಪಥ ಮಾಡಬೇಕು ಎಂದು ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ಮಹಾನಗರ ಪಾಲಿಕೆ ವಾರ್ಡ್ ನಂ.29 ರ ಉಪಚುನಾವಣೆ ಪ್ರಚಾರಾರ್ಥವಾಗಿ ಸೋಮವಾರ ಸಂಜೆ ಬಿಜೆಪಿ ಅಭ್ಯರ್ಥಿ ಪರವಾಗಿ ರಾಜಾಜಿನಗರ ಮತ್ತಿತರೆ ಕಡೆ ಮತಯಾಚನೆ ಮಾಡಿ, ನಂತರ ಆಂಜನೇಯ ದೇವಸ್ಥಾನ ಹತ್ತಿರ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.ಸದ್ಯ ಮಹಾನಗರ ಪಾಲಿಕೆಯಲ್ಲಿ ಲೂಟಿ ನಡೆದಿದ್ದು, ನಮ್ಮವರನ್ನು ಮೇಯರ್ ಮಾಡಿ, ಅದನ್ನು ತಡೆಯುತ್ತೇವೆ. ಸಾಕಷ್ಟು ಅನುದಾನ ಕೂಡ ಬರುವುದಿದೆ. ಉಳಿದ ಅಭಿವೃದ್ಧಿ ಕೆಲಸಗಳನ್ನು ಮುಗಿಸಿ ನಗರವನ್ನು ಮಾದರಿ ನಗರವನ್ನಾಗಿ ಮಾಡಲಾಗುವುದು. ಹೀಗಾಗಿ ನಮ್ಮ ಅಭ್ಯರ್ಥಿಗೆ ಹೆಚ್ಚಿನ ಮತಗಳಿಂದ ಗೆಲ್ಲಿಸಲು ಶೇ 100 ರಷ್ಟು ಮತದಾನ ಮಾಡಬೇಕು. ಕನಿಷ್ಠ 4 ಸಾವಿರ ಮತಗಳ ಲೀಡ್ ಕೊಡಬೇಕು. ತಾವುಗಳು ನಿರಂತರವಾಗಿ ಮತ ನೀಡಿದರೆ, ನಾನು ಮತ್ತು ನಮ್ಮ…
ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಜಾತಿಗಳ ಶ್ರೇಣೀಕೃತ ವ್ಯವಸ್ಥೆಯನ್ನು ಅಳಿಸಿ ಮಾನವ ಕುಲವೊಂದೇ ಎಂದು ಎಷ್ಟೇ ಪ್ರತಿಪಾದಿಸುತ್ತಾ ಬಂದಿದ್ದರೂ ಶ್ರೇಣೀಕೃತ ವ್ಯವಸ್ಥೆ ಅಳಿಯುತ್ತಿಲ್ಲ ಎಂದು ಎಸ್.ಆರ್.ವಿಭೂತಿ ಹೇಳಿದರು.ಸೋಮವಾರ ಇಲ್ಲಿನ ಹನುಮಾನ್ ದೇವಾಲಯದ ಆವರಣದಲ್ಲಿ ಶ್ರೀ ರೇವಣಸಿದ್ದೇಶ್ವರ ಹಾಲುಮತ ಕ್ಷೇಮಾಭಿವೃದ್ಧಿ ಸಂಸ್ಥೆಯವತಿಯಿಂದ ನಡೆದ ಸಂತಶ್ರೇಷ್ಠ ಕನಕದಾಸ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಜಾತಿ ವ್ಯವಸ್ಥೆ ತೊಲಗಿಸಲು ಬಸವಣ್ಣನವರು ಇವನಾರವ ಇವನಾರವ ಎನ್ನದಿರಿ ಇವ ನಮ್ಮವ ಎನ್ನಿರಿ ಎಂದು ಹೇಳಿದ್ದರೆ ಸಂತಶ್ರೇಷ್ಠ ಕನಕದಾಸ ಅವರು ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎಂದು ಹೇಳಿದ್ದಾರೆ. ಅಂಥ ಮಹಾನ್ ಚೇತನಗಳ ಆಶಯದಂತೆ ಆಲಮಟ್ಟಿಯ ರೇವಣಸಿದ್ದೇಶ್ವರ ಸಂಸ್ಥೆಯವರೂ ಕೂಡ ಇಲ್ಲಿರುವ ಎಲ್ಲಾ ಜಾತಿ ಜನಾಂಗದವರನ್ನು ಕರೆದು ಎಲ್ಲಾ ಧರ್ಮದವರಿಗೆ ಸಂತಶ್ರೇಷ್ಠ ಕನಕದಾಸ ಅವರ ವ್ಯಕ್ತಿತ್ವದ ಪರಿಚಯ ಮಾಡುವದರೊಂದಿಗೆ ಸವರ್ಣೀಯ, ದಲಿತ, ಹಿಂದು-ಮುಸ್ಲಿಂ ಕ್ರೈಸ್ತ ಎನ್ನದೇ ಎಲ್ಲರಿಗೂ ಸಮಾನ ವೇದಿಕೆ ಕಲ್ಪಿಸಿರುವುದು ಸಂತಸದಾಯಕಯವಾಗಿದೆ ಎಂದು ಬಣ್ಣಿಸಿದರು.ವಿಶ್ರಾಂತ ಸಹಾಯಕ ಅಭಿಯಂತರ ಎ.ಎ.ಬಿಲ್ವಾಡ್ ಹಾಗೂ ಗ್ರಾಪಂ. ಮಾಜಿಸದಸ್ಯ ಎಚ್.ಎಫ್.ಕಟ್ಟಿಮನಿ ಮಾತನಾಡಿ,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ಡಿಸೆಂಬರ್ 22 ರಂದು ನಡೆಯಲಿರುವ ವೃಕ್ಷೋಥಾನ್ ಹೆರಿಟೇಜ್ ರನ್-2024ಕ್ಕೆ ನೋಂದಣಿ ಕಾರ್ಯ ಭರದಿಂದ ಸಾಗಿದ್ದು, ಹಿರಿಯ ನಾಗರಿಕರೂ ಕೂಡ ನೋಂದಣಿ ಮಾಡಿಸುವ ಮೂಲಕ ಇತರರಿಗೆ ಸ್ಪೂರ್ತಿಯಾಗಿದ್ದಾರೆ.ಉಡುಪಿ ಕಟಪಾಡಿಯವರಾದ ಮತ್ತು ಹಾಲಿ ಪಂಚಕಲ್ ನಿವಾಸಿಯಾಗಿರುವ 73 ವರ್ಷದ ಸುಲತಾ ಕಾಮತ ಈ ಬಾರಿಯೂ ವೃಕ್ಷೋಥಾನ್ ಹೆರಿಟೇಜ್ ರನ್ ನಲ್ಲಿ ಪಾಲ್ಗೊಳ್ಳುತ್ತಿದ್ದು ಗಮನ ಸೆಳೆದಿದ್ದಾರೆ.ಕಳೆದ 30 ವರ್ಷದಿಂದ ದೇಶ ವಿದೇಶಗಳ ನಾನಾ ಭಾಗಗಳಲ್ಲಿ ನಡೆದ ಮ್ಯಾರಾಥಾನ್ ಗಳಲ್ಲಿ ಪಾಲ್ಗೋಂಡಿರುವ ಸುಲತಾ ಕಾಮತ, ತಿಂಗಳಲ್ಲಿ ಕನಿಷ್ಠ ಮೂರ್ನಾಲ್ಕು ಮ್ಯಾರಾಥಾನ್ ಗಳಲ್ಲಿ ಓಡುವ ಮೂಲಕ ಮ್ಯಾರಾಥಾನ್ ಪಟುಗಳಲ್ಲಿ ಮನೆಮಾತಾಗಿದ್ದಾರೆ. ಈವರೆಗೆ ಸುಮಾರು 1200ಕ್ಕೂ ಹೆಚ್ಚು ಚಿನ್ನ, ಬೆಳ್ಳಿ, ರಜತ ಪದಕಗಳನ್ನೂ ಜಯಿಸಿರುವ ಇವರು ವಿಜಯಪುರ ವೃಕ್ಷೋಥಾನ್ ನಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ.73ನೇ ಇಳಿ ವಯಸ್ಸಿನಲ್ಲಿಯೂ ಸ್ವಾವಲಂಬಿ ಬದುಕು ಸಾಗಿಸುತ್ತಿರುವ ಅವರು, ತಮ್ಮೂರಿನಲ್ಲಿ ನೀರಿನ ವ್ಯಾಪಾರ ಮಾಡುತ್ತ ಕ್ಯಾನ್ ಗಳನ್ನೂ ಎತ್ತಿ ವಾಹನದಲ್ಲಿ ಹಾಕುತ್ತ ಆರೋಗ್ಯವನ್ನು ಸದೃಢವಾಗಿಸಿಕೊಂಡಿದ್ದಾರೆ.ಇವರು ಭಾರತವಷ್ಟೇ ಅಲ್ಲ, ಸಿಂಗಪೂರ, ಮಲೇಷ್ಯಾ…
ಸಂತ ಸೇವಾಲಾಲ್ ಮತ್ತು ಜಗದಂಬಾ ದೇವಸ್ಥಾನ ಉದ್ಘಾಟಿಸಿದ ಸಚಿವ ಎಂ.ಬಿ.ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಾಯಕ ಮತ್ತು ಭಕ್ತಿಗೆ ಹೆಸರಾಗಿರುವ ಬಂಜಾರಾ ಸಮಾಜ ತಮ್ಮ ಕಲೆ, ಸಂಸ್ಕೃತಿ, ಉಡುಪಿನ ಇತಿಹಾಸವನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ತಿಕೋಟಾ ತಾಲೂಕಿನ ಕ್ಷೇತ್ರದ ಹಂಚಿನಾಳ ಎಲ್.ಟಿ- 3 ರಲ್ಲಿ ಶ್ರೀ ಸಂತ ಸೇವಾಲಾಲ್ ಮತ್ತು ಜಗದಂಬಾ ದೇವಸ್ಥಾನ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಬಂಜಾರಾ ಸಮುದಾಯದ ಜನ ಶ್ರಮಜೀವಿಗಳಾಗಿದ್ದು, ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವಗಳಡಿ ಜೀವನ ಸಾಗಿಸುತ್ತಿದ್ದಾರೆ. ಶ್ರಮಪಟ್ಟು ದುಡಿದು ಅದರಿಂದ ಬರುವ ಹಣವನ್ನು ಶ್ರದ್ಧಾಭಕ್ತಿಯಿಂದ ದುರ್ಗಾದೇವಿ, ಸೇವಾಲಲ, ಹಾಮುಲಾಲ ಸೇರಿದಂತೆ ನಾನಾ ದೇವಸ್ಥಾನಗಳ ಜಾತ್ರೆಗಳಲ್ಲಿ ಪಾಲ್ಗೋಂಡು ದಾಸೋಹದಲ್ಲಿ ಪಾಲ್ಗೋಳ್ಳುತ್ತಾರೆ. ಜೊತೆಗೆ ತಮ್ಮ ಇತಿಹಾಸ, ಸಂಸ್ಕೃತಿ, ಕಲೆ ಉಡುಪನ್ನು ಈಗಲೂ ಮುಂದುವರೆಸಿಕೊಂಡು ಬಂದಿದ್ದು ಅದನ್ನು ಎತ್ತಿ ಹಿಡಿಯುವ ಕೆಲಸವನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಹೇಳಿದರು.ವಿಶಿಷ್ಠವಾಗಿರುವ ಬಂಜಾರಾ ಕಲೆ, ಸಂಸ್ಕೃತಿ, ಕಸೂತಿ…
ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ದಾಸ ಶ್ರೇಷ್ಟ ಕನಕದಾಸ ಜಯಂತಿಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಆರ್.ಎಂ.ಮಿರ್ದೆ ಮಾತನಾಡಿ, ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವಲ್ಲಿ ಕನಕದಾಸ ಪಾತ್ರ ಅನನ್ಯವಾಗಿದೆ. ಅವರ ವಿಚಾರಧಾರೆಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕವೆಂದು ಹೇಳಿದರು.ಈ ವೇಳೆಯಲ್ಲಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಉಷದೇವಿ.ಹಿರೇಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ೧೫ ನೇ ಶತಮಾನದಲ್ಲಿನ ಶ್ರೇಷ್ಟ ದಾಸ, ದಾರ್ಶನಿಕ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿದ ಮಹಾನ್ ಚೇತನರಾಗಿದ್ದಾರೆ. ದಾಸರು ತಮ್ಮ ಕೀರ್ತನೆ ಮೂಲಕ ಸಮಾಜದಲ್ಲಿನ ಅಸಮಾನತೆ, ಭಕ್ತಿ ಪಂಥ ಮತ್ತು ತಮ್ಮ ಕೀರ್ತನೆಗಳ ಮೂಲಕ ಕನ್ನಡ ದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ವ್ಯಕ್ತಿ ಅದು ದಾಸರು ಎಂದು ಹೇಳಿದರು.ಈ ವೇಳೆಯಲ್ಲಿ ಮಹಾವಿದ್ಯಾಲಯದ ಬೋಧಕರು ಭಕ್ತಿ ಗೀತೆಗಳನ್ನು ಹಾಡಿ ಭಕ್ತಿ ಮರೆದರು.ಈ ಸಂದರ್ಭದಲ್ಲಿ ಉಪ ಪ್ರಾಚಾರ್ಯ ಡ್ರಾ.ಅನಿಲ್ ನಾಯಕ,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ.ಪಾಟೀಲ ಪಬ್ಲಿಕ್ ಶಾಲೆಯಲ್ಲಿ ಭಕ್ತ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು.ಕಾರ್ಯಕ್ರಮದ ಅಂಗವಾಗಿ ಶಾಲೆಯ ಪ್ರಾಚಾರ್ಯ ಡಾ. ಸೈಜು ನಾಯರ ಮತ್ತು ಶಾಲಾ ಆಡಳಿತಾಧಿಕಾರಿ ದೀಪಾ ಜಂಬೂರೆ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.10ನೇ ತರಗತಿ ವಿದ್ಯಾರ್ಥಿಗಳು ಕನಕದಾಸರ ಕೀರ್ತನೆಗಳನ್ನು ಹಾಡಿದರು.ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
