Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಏಡ್ಸ್ ಅತ್ಯಂತ ವಿನಾಶಕಾರಿ ಸಾಂಕ್ರಾಮಿಕ ರೋಗಳಲ್ಲಿ ಒಂದು. ಸೋಂಕಿನ ಅರಿವು ಮೂಡಿಸುವುದು, ಬರದಂತೆ ತಡೆಯುವದು, ರಕ್ಷಣೆ ಪಡೆಯಲು ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಏಡ್ಸ್ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳೂ ಹಾಗೂ ಸಿವಿಲ್ ನ್ಯಾಯಾಧೀಶರಾದ ಸಂಪತ್ತಕುಮಾರ ಬಳೂಲಗಿಡದ ಹೇಳಿದರು.ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಶಾ ಸೋಗಮಲ್ ಓಸ್ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಓಸ್ವಾಲ್ ಪ್ರಥಮ ದರ್ಜೆ ಕಾಲೇಜು ಹಾಗೂ ಇತರ ಎಲ್ಲ ಸರ್ಕಾರಿ ಇಲಾಖೆಗಳ ಸಂಯುಕ್ತ ಅಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮೊದಲ ಬಾರಿಗೆ ಏಡ್ಸ್ ಪ್ರಕರಣ ವರದಿಯಾದಾಗ ಅಂದಾಜು ೨೫ ಮಿಲಿಯನ್ ಜನ ಈ ಖಾಯಿಲೆಗೆ ತುತ್ತಾಗಿ ಪ್ರಾಣ ಕಳೆದುಕೊಂಡರು. ಹಾಗಾಗಿ ಈ ಗಂಭೀರ ಖಾಯಿಲೆಯ ಬಗ್ಗೆ ಅರಿವು ಮೂಡಿಸಲು ಡಿ.೧ ರಂದು ವಿಶ್ವ ಏಡ್ಸ್…

Read More

ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲರಿಂದ ಸಾರ್ವಜನಿಕರ ಕುಂದು-ಕೊರತೆ, ಆಲಿಕೆ | ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಗ್ರಾಮ ಮಟ್ಟದ ಜನರ ಜೀವನ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ ಆದ್ಯತೆ ಮೇಲೆ ಮೂಲಸೌಲಭ್ಯಗಳನ್ನು ಕಲ್ಪಿಸಲು ಕ್ರಮ ವಹಿಸುವಂತೆ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಸೋಮವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಗ್ರಾಮೀಣ ಭಾಗದ ಜನರು ಯಾವುದೇ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸಾಮಾಜಿಕ ಕಳಕಳಿಯೊಂದಿಗೆ ಜವಾಬ್ದಾರಿಯನ್ನು ನಿರ್ವಹಿಸಬೇಕು. ಗ್ರಾಮೀಣ ಭಾಗದಲ್ಲಿ ಸ್ವಚ್ಚತೆಗೆ ಪ್ರಥಮಾದ್ಯತೆ ನೀಡಬೇಕು. ಜಿಲ್ಲೆಯಾದ್ಯಂತ ಪೂರ್ಣ ಪ್ರಮಾಣದಲ್ಲಿ ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳನ್ನಾಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಚರಂಡಿಯ ನೀರು ಒಂದೆಡೆ ನಿಲ್ಲದೇ ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡಿ, ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವಂತೆ ಅವರು ಸೂಚಿಸಿದರು.ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಅವಿಭಕ್ತ ಕುಟುಂಬಗಳು ವಾಸಿಸುತ್ತಿದ್ದು, ಇಂತಹ…

Read More

ಇಂಡಿಯಲ್ಲಿ ವಿಧಾನಪರಿಷತ್ ಶಾಸಕ‌ ಸುನೀಲಗೌಡ ಪಾಟೀಲ ಆಗ್ರಹ ಉದಯರಶ್ಮಿ ದಿನಪತ್ರಿಕೆ ಇಂಡಿ: ಗ್ರಾ.ಪಂ‌ ಸದಸ್ಯರಿಗೆ ಗೌರವ ಧನ ಹೆಚ್ಚಿಸುವ ಜೊತೆಗೆ ಉಚಿತ ಬಸ ಪಾಸ್, ಟೋಲ್ ರಿಯಾಯಿತಿ, ಪೆನಷನ್ ಕುರಿತು ಸರಕಾರದ ಗಮನ ಸೆಳೆಯುವ ಕಾರ್ಯಮಾಡಿದ್ದೆನೆ. ಮಾಡಿದ್ದು, ಅದರಲ್ಲಿ ಗ್ರಾಮ ಪಂಚಾಯತ್ ಸದಸ್ಯರಿಗೆ ರೂ 5 ನೂರು ಪಡೆಯುತ್ತಿದ್ದು, ಇಂದು ಈ ಸದ್ಯ 2 ಸಾವಿರ ರೂಪಾಯಿ ಗೌರವ ಪಡೆಯುವಂತಹ ಮಹತ್ವದ ಕಾರ್ಯ ಮಾಡಿದ್ದೆವೆ ಎಂದು ವಿಧಾನ ಪರಿಷತ್ತು ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.ಪಟ್ಟಣದ ಗುರುಭವನದಲ್ಲಿ ಜಿ.ಪಂ ವಿಜಯಪುರ, ತಾಪಂ ಇಂಡಿ ಮತ್ತು ಪುರಸಭೆ ಇಂಡಿ ಮತ್ತು ವಿಜಯಪುರ ಮತ್ತು ಬಾಗಲಕೋಟ ವಿಧಾನ ಪರಿಷತ್ತು ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದಲ್ಲಿ ಸದಸ್ಯ ಸುನೀಲಗೌಡ ಪಾಟೀಲ ಇವರ ನೇತೃತ್ವದಲ್ಲಿ ನಡೆದ ಆಡಳಿತಾತ್ಮಕ ಅಹವಾಲು ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು.ದೇಶದ ಇತರೆ ರಾಜ್ಯಗಳಲ್ಲಿ ಸೇರಿದಂತೆ ಕೇರಳ ರಾಜ್ಯದಲ್ಲಿ ಗ್ರಾ.ಪಂ ಸಧ್ಯಕ್ಷರಿಗೆ ೧೩ ಸಾವಿರ ಉಪಾಧ್ಯಕ್ಷರಿಗೆ ೯ ಸಾವಿರ ಮತ್ತು ಗ್ರಾ.ಪಂ ಸದಸ್ಯರಿಗೆ ಏಳು ಸಾವಿರ ಸಂಬಳವಿದೆ ಎಂದರು.ಇತರೆ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಕೃಷಿ ಇಲಾಖೆಯಲ್ಲಿ ರೈತರಿಗೆ ಅನ್ಯಾಯ ಮಾಡುತ್ತಿದ್ದು ಜಿಲ್ಲೆಯಾದ್ಯಂತ ರೈತರಿಗೆ ಕಳಪೆ ಮಟ್ಟದ ತೊಗರಿ ಬೀಜಗಳನ್ನು ಕೊಟ್ಟಿದ್ದಾರೆ. ಈ ಬೀಜಗಳಿಂದ ಬೆಳೆಗಳು ಹಾಳಾಗಿ ಹೋಗಿವೆ. ಪ್ರತಿ ಎಕರೆಗೆ ರೂ.೫೦ ಸಾವಿರ ಪರಿಹಾರವನ್ನು ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.ಈ ಕುರಿತು ಮಾಧ್ಯಮಕ್ಕೆ ಲಿಖಿತ ಮಾಹಿತಿ ನೀಡಿದ ರಾಜ್ಯ ಪ್ರ.ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ, ಜಿಲ್ಲಾ ಪ್ರ.ಕಾರ್ಯದರ್ಶಿ, ತಾಲೂಕಾಧ್ಯಕ್ಷ ಅಣ್ಣಯ್ಯ ಬಿದರಕುಂದಿ, ತಾಲೂಕು ಪ್ರಧಾನ ಕಾರ್ಯದರ್ಶಿ ವಾಯ್.ಎಲ್.ಬಿರಾದಾರ, ರೈತರಿಗಾಗಿ ಕೊಡುವ ಸ್ಪಿಂಕ್ಲರ್ ಪೈಪುಗಳು, ಕುಂಟೆ ಮುಂತಾದ ಸಾಮಗ್ರಿಗಳು ತುಂಬಾ ಕಳಪೆಮಟ್ಟದ್ದಾಗಿವೆ. ಜಿಲ್ಲೆಯ ಎಲ್ಲ ಶುಗರ್ಸ ಫ್ಯಾಕ್ಟರಿಗಳಲ್ಲಿ ತೂಕದಲ್ಲಿ ಮೋಸಲಾಗುತ್ತಿದೆ. ಸಂಘದಿಂದ ೨ವರ್ಷಗಳಿಂದಲೂ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮತ್ತು ವಕ್ಫ್ ಕಾಯ್ದೆಯನ್ನು ತುರ್ತಾಗಿ ರದ್ದುಪಡಿಸುವಂತೆ ಒತ್ತಾಯಿಸಿದ್ದಾರೆ

Read More

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆ ರಾಷ್ಟ್ರದ ಅತಿ ದೊಡ್ಡ ಸಂಘಟನೆ | ೨೫ ರಾಜ್ಯಗಳಲ್ಲಿ ಸಂಘದ ಮಾನ್ಯತೆ ಆಲಮಟ್ಟಿ: ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಫೆಡರೇಷನ್ (ಎಐಪಿಟಿಎಫ್) ನವದೆಹಲಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಧಾರವಾಡದ ಬಸವರಾಜ ಗುರಿಕಾರ ಹಾಗೂ ಕಾರ್ಯದರ್ಶಿಯಾಗಿ ಆಲಮಟ್ಟಿಯ ಚಂದ್ರಶೇಖರ ನುಗ್ಗಲಿ ಆಯ್ಕೆಯಾಗಿದ್ದಾರೆ.ಕಳೆದ ಎರಡು ದಿನಗಳಿಂದ ಕೇರಳದ ಎರ್ನಾಕುಲಂನಲ್ಲಿ ನಡೆದ ಚುನಾವಣೆಯ ಪ್ರಕ್ರಿಯೆ ಅಂತಿಮ ದಿನ ಸೊಮವಾರ ಆಯ್ಕೆಯಾದರು.ದೇಶದ ೨೩ ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರ ಸದಸ್ಯತ್ವ ಹೊಂದಿರುವ ಈ ಸಂಘಟನೆ ರಾಷ್ಟ್ರದಲ್ಲಿಯೇ ಅತಿ ದೊಡ್ಡ ಸಂಘಟನೆ. ದೇಶದ ೨೫ ರಾಜ್ಯಗಳ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಗಳು ಈ ಸಂಘದ ಮಾನ್ಯತೆ ಪಡೆದಿದ್ದು ವಿಶೇಷ.೧೮೭ ದೇಶಗಳ ಶಿಕ್ಷಕರ ಅಂತರಾಷ್ಟ್ರೀಯ ಶಿಕ್ಷಕರ ಸಂಘಟನೆಯಾಗಿರುವ “ಎಜುಕೇಶನ್ ಇಂಟರ್ ನ್ಯಾಶನಲ್’ ಜತೆ ಅಖಿಲ ಭಾರತ ಪ್ರಾಥಮಿಕಶಳ ಶಿಕ್ಷಕರ ಫೆಡರೇಷನ್ ಸಂಯೋಜನೆ ಹೊಂದಿದೆ.ಇಂತಹ ಮಹತ್ವದ ಸಂಘಟನೆಯ ಚುನಾವಣೆಯ ಮೂಲಕ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ಇದೇ ಮೊದಲ ಬಾರಿ. ಎರಡು ದಿನಗಳ ಕಾಲ ನಡೆದ ಚುನಾವಣೆಯಲ್ಲಿ…

Read More

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆ ರಾಷ್ಟ್ರದ ಅತಿ ದೊಡ್ಡ ಸಂಘಟನೆ | ೨೫ ರಾಜ್ಯಗಳಲ್ಲಿ ಸಂಘದ ಮಾನ್ಯತೆ ಆಲಮಟ್ಟಿ: ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಫೆಡರೇಷನ್ (ಎಐಪಿಟಿಎಫ್) ನವದೆಹಲಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಧಾರವಾಡದ ಬಸವರಾಜ ಗುರಿಕಾರ ಹಾಗೂ ಕಾರ್ಯದರ್ಶಿಯಾಗಿ ಆಲಮಟ್ಟಿಯ ಚಂದ್ರಶೇಖರ ನುಗ್ಗಲಿ ಆಯ್ಕೆಯಾಗಿದ್ದಾರೆ.ಕಳೆದ ಎರಡು ದಿನಗಳಿಂದ ಕೇರಳದ ಎರ್ನಾಕುಲಂನಲ್ಲಿ ನಡೆದ ಚುನಾವಣೆಯ ಪ್ರಕ್ರಿಯೆ ಅಂತಿಮ ದಿನ ಸೊಮವಾರ ಆಯ್ಕೆಯಾದರು.ದೇಶದ ೨೩ ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರ ಸದಸ್ಯತ್ವ ಹೊಂದಿರುವ ಈ ಸಂಘಟನೆ ರಾಷ್ಟ್ರದಲ್ಲಿಯೇ ಅತಿ ದೊಡ್ಡ ಸಂಘಟನೆ. ದೇಶದ ೨೫ ರಾಜ್ಯಗಳ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಗಳು ಈ ಸಂಘದ ಮಾನ್ಯತೆ ಪಡೆದಿದ್ದು ವಿಶೇಷ.೧೮೭ ದೇಶಗಳ ಶಿಕ್ಷಕರ ಅಂತರಾಷ್ಟ್ರೀಯ ಶಿಕ್ಷಕರ ಸಂಘಟನೆಯಾಗಿರುವ “ಎಜುಕೇಶನ್ ಇಂಟರ್ ನ್ಯಾಶನಲ್’ ಜತೆ ಅಖಿಲ ಭಾರತ ಪ್ರಾಥಮಿಕಶಳ ಶಿಕ್ಷಕರ ಫೆಡರೇಷನ್ ಸಂಯೋಜನೆ ಹೊಂದಿದೆ.ಇಂತಹ ಮಹತ್ವದ ಸಂಘಟನೆಯ ಚುನಾವಣೆಯ ಮೂಲಕ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ಇದೇ ಮೊದಲ ಬಾರಿ. ಎರಡು ದಿನಗಳ ಕಾಲ ನಡೆದ ಚುನಾವಣೆಯಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ವರದಾನಿ ಲಕ್ಕಮ್ಮದೇವಿ ಪ್ರದಾನ ವೇದಿಕೆಇವಣಗಿ(ಬಸವನಬಾಗೇವಾಡಿ): ಕನ್ನಡ ಸಾಹಿತ್ಯಕ್ಕೆ ೨೫೦೦ ವಷ೯ಗಳ ಗಟ್ಟಿಯಾದ ಇತಿಹಾಸವಿದೆ. ವಚನ ಸಾಹಿತ್ಯದ ಮೂಲ ಕನ್ನಡ ಸಾಹಿತ್ಯ ಎಂದು ಜೆ.ಡಿ.ಎಸ್ ರಾಜ್ಯ ಉಪಾಧ್ಯಕ್ಷ ಮನಗೂಳಿಯ ಅಪ್ಪುಗೌಡ ಪಾಟೀಲ ಅಭಿಪ್ರಾಯಪಟ್ಟರು.ಸುಕ್ಷೇತ್ರ ಇವಣಗಿಯ ವರದಾನಿ ಲಕ್ಕಮ್ಮದೇವಿ ದೇವಸ್ಥಾನದ ಆವರಣದಲ್ಲಿ ಜರುಗಿದ ಬಸವನ ಬಾಗೇವಾಡಿ ೧೦ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಶರಣ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವೆಲ್ಲರೂ ಸೇರಿ ಕನ್ನಡ ನಾಡು-ನುಡಿಯನ್ನು ಉಳಿಸುವ ಕಾಯಕವನ್ನು ಪ್ರಾಮಾಣಿಕವಾಗಿ ಮಾಡೋಣ ಎಂದರು.ಸಾನಿದ್ಯ ವಹಿಸಿದ್ದ ಹೂವಿನ ಹಿಪ್ಪರಗಿ ಪತ್ರಿವನ ಮಠದ ಪೂಜ್ಯ ದ್ರಾಕ್ಷಾಯಣಿ ಮಾತಾಜಿ ಆಶೀರ್ವಚನ ನೀಡುತ್ತಾ ಬಸವಣ್ಣನವರು ನಡೆದಾಡಿದ ಪುಣ್ಯ ಪಾವನ ನೆಲವಿದು. ಈ ನೆಲದಲ್ಲಿ ಬದುಕಿದ ನಾವೇ ಧನ್ಯರು. ನುಡಿದಂತೆ ನಡೆದು ಹೋದ ಶರಣರು ನಮಗೆಲ್ಲ ಆದಶ೯ಪ್ರಾಯ ಎಂದರು.ಅಧ್ಯಕ್ಷತೆ ವಹಿಸಿದ್ದ ಶರಣ ಸಾಹಿತ್ಯ ಪರಿಷತ್ತಿ ತಾಲೂಕಾಧ್ಯಕ್ಷ ವಿ.ಬಿ.ಮತೂ೯ರ ಮಾತನಾಡಿ, ಶರಣರ ಆದಶ೯ವಿಚಾರಗಳು ನಮ್ಮೆಲ್ಲರ ಬದುಕಿಗೆ ಸ್ಪೂರ್ತಿಯಾಗಿದ್ದು. ಶರಣರ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.ಬಸವಾದಿ ಶರಣರ…

Read More

ಸಿದ್ದರಾಮ ಬಿರಾದಾರ. ಉದಯರಶ್ಮಿ ದಿನಪತ್ರಿಕೆ ವರದಾನಿ ಲಕ್ಕಮ್ಮದೇವಿ ಮುಖ್ಯವೇದಿಕೆಇವಣಗಿ(ಬಸವನಬಾಗೇವಾಡಿ): ನಾಡಿನ ಶಾಸನಗಳು ಮತ್ತು ಪ್ರಾಚೀನ ಗ್ರಂಥಗಳು ನಾಡಿನ ಹಿರಿಮೆ-ಗರಿಮೆ ಸಾರಿ ಹೇಳಿವೆ. ಕನ್ನಡ ಭಾಷೆಯ ಸೊಗಡು ಎಲ್ಲರನ್ನು ಮುದುಗೊಳಿಸುವ ಶಕ್ತಿ ಹೊಂದಿದೆ ಎಂದು ಬಸವನಬಾಗೇವಾಡಿ ತಾಲೂಕಿನ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ,ಸಾಹಿತಿ ಸಿದ್ದರಾಮ ಬಿರಾದಾರ ಹೇಳಿದರು.ತಾಲೂಕಿನ ಇವಣಗಿ ಗ್ರಾಮದ ವರದಾನಿ ಲಕ್ಕಮ್ಮದೇವಿ ದೇವಸ್ಥಾನದ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸೋಮವಾರ ಹಮ್ಮಿಕೊಂಡಿದ್ದ ಬಸವನಬಾಗೇವಾಡಿ ತಾಲೂಕಿನ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಾಚೀನ ಕಾಲದಿಂದಲೂ ಕನ್ನಡ ಭಾಷೆಯ ಸೊಗಡನ್ನು ನೋಡಿದಾಗ ಕನ್ನಡ ಭಾಷೆಯ ಬೆಡಗು ಅನುಪಮವಾಗಿದೆ. ೧೨ ನೇ ಶತಮಾನದಲ್ಲಿ ವಚನಕಾರರು ಸರಳ ಕನ್ನಡದಲ್ಲಿ ವಚನಗಳನ್ನು ರಚಿಸುವ ಮೂಲಕ ಕನ್ನಡವನ್ನು ಕಟ್ಟಿ ಕನ್ನಡವನ್ನು ಗಟ್ಟಿಗೊಳಿಸಿದ್ದಾರೆ. ಕನ್ನಡವನ್ನು ಸರಳ ಮಾಡಿ ಕೊರಳ ಹಾರವನ್ನಾಗಿಸಿ ಬೆರಳು ಕಚ್ಚುವಂತೆ ಮಾಡಿದ್ದು ನಿಜಕ್ಕೂ ಅದ್ಭುತ ಅಪೂರ್ವ-ಅಸ್ಮರಣೀಯ ಎಂದರು.೧೨ ನೇ ಶತಮಾನದಲ್ಲಿ ವಿಶ್ವಗುರು ಬಸವೇಶ್ವರರು ಮಾಡಿದ ಕ್ರಾಂತಿಯು ಯಾವುದೇ ಕ್ರಾಂತಿ ಮತ್ತು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಉಪ ಯೋಜನೆಯಡಿಯಲ್ಲಿ ಜಾನಪದ ಕಲಾ ಪ್ರಕಾರಗಳ ತರಬೇತಿ ಶಿಬಿರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.ಯುವಜನ ಮೇಳ ಹಾಗೂ ಯುವಜನೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಉತ್ತೇಜಿಸುವ ನಿಟ್ಟಿನಲ್ಲಿ ಯುವಜನರಿಗೆ ಕಲಾ ಪ್ರಕಾರಗಳ ತರಬೇತಿ ಶಿಬಿರವನ್ನು ೫೦ ಶಿಬಿರಾರ್ಥಿಗಳಿಗೆ ಡಿ.೧೦ರಿಂದ ೧೭ರವರೆಗೆ ೮ ದಿನಗಳ ಆಯೋಜಿಸಲಾಗಿದೆ.ಆಸಕ್ತ ಯುವಕ-ಯುವತಿಯರು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಜಯಪುರ ಕಚೇರಿ ಅರ್ಜಿ ಪಡೆದು, ದಿನಾಂಕ : ೦೮-೧೨-೨೦೨೪ರೊಳಗೆ ಸಲ್ಲಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ: ೦೮೩೫೨-೨೫೧೦೮೫, ಮೊ: ೮೭೯೨೧೮೫೧೪೧ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೇಂದ್ರ ಪುರಸ್ಕೃತ ಶಿಷ್ಯವೇತನ ಕಾರ್ಯಕ್ರಮದಡಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಇ-ಕೆವೈಸಿ ಬಯೋ ಮೆಟ್ರಿಕ್ ಮಾಡುವುದು ಕಡ್ಡಾಯವಾಗಿರುತ್ತದೆ.ಈಗಾಗಲೇ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಬಯೋಮೆಟ್ರಿಕ್ ಇ-ದೃಢೀಕರಣ ಮಾಡಲು ನಾಗರಿಕ ಸೇವಾ ಕೇಂದ್ರಗಳಾದ ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಇತರೆ ಸೇವಾ ಕೇಂದ್ರಗಳಲ್ಲಿ ಮತ್ತು ಸಹಾಯಕ ನಿರ್ದೇಶಕರು (ಗ್ರೇಡ್-೧) ಸಮಾಜ ಕಲ್ಯಾಣ ಇಲಾಖೆ ವಿಜಯಪುರ ಕಚೇರಿಯಲ್ಲಿ ವಿದ್ಯಾರ್ಥಿಗಳು ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಿದ ಪ್ರತಿ ಮತ್ತು ಆಧಾರ ಕಾರ್ಡ ಪ್ರತಿಯೊಂದಿಗೆ ಬಯೋಮೆಟ್ರಿಕ್ ಇ-ದೃಢೀಕರಣವನ್ನು ಉಚಿತವಾಗಿ ಮಾಡಿಕೊಂಡು ಶಿಷ್ಯವೇತನ ಪಡೆಯಲು ಸೂಚಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More