ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಕೃಷಿ ಇಲಾಖೆಯಲ್ಲಿ ರೈತರಿಗೆ ಅನ್ಯಾಯ ಮಾಡುತ್ತಿದ್ದು ಜಿಲ್ಲೆಯಾದ್ಯಂತ ರೈತರಿಗೆ ಕಳಪೆ ಮಟ್ಟದ ತೊಗರಿ ಬೀಜಗಳನ್ನು ಕೊಟ್ಟಿದ್ದಾರೆ. ಈ ಬೀಜಗಳಿಂದ ಬೆಳೆಗಳು ಹಾಳಾಗಿ ಹೋಗಿವೆ. ಪ್ರತಿ ಎಕರೆಗೆ ರೂ.೫೦ ಸಾವಿರ ಪರಿಹಾರವನ್ನು ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಈ ಕುರಿತು ಮಾಧ್ಯಮಕ್ಕೆ ಲಿಖಿತ ಮಾಹಿತಿ ನೀಡಿದ ರಾಜ್ಯ ಪ್ರ.ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ, ಜಿಲ್ಲಾ ಪ್ರ.ಕಾರ್ಯದರ್ಶಿ, ತಾಲೂಕಾಧ್ಯಕ್ಷ ಅಣ್ಣಯ್ಯ ಬಿದರಕುಂದಿ, ತಾಲೂಕು ಪ್ರಧಾನ ಕಾರ್ಯದರ್ಶಿ ವಾಯ್.ಎಲ್.ಬಿರಾದಾರ, ರೈತರಿಗಾಗಿ ಕೊಡುವ ಸ್ಪಿಂಕ್ಲರ್ ಪೈಪುಗಳು, ಕುಂಟೆ ಮುಂತಾದ ಸಾಮಗ್ರಿಗಳು ತುಂಬಾ ಕಳಪೆಮಟ್ಟದ್ದಾಗಿವೆ. ಜಿಲ್ಲೆಯ ಎಲ್ಲ ಶುಗರ್ಸ ಫ್ಯಾಕ್ಟರಿಗಳಲ್ಲಿ ತೂಕದಲ್ಲಿ ಮೋಸಲಾಗುತ್ತಿದೆ. ಸಂಘದಿಂದ ೨ವರ್ಷಗಳಿಂದಲೂ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮತ್ತು ವಕ್ಫ್ ಕಾಯ್ದೆಯನ್ನು ತುರ್ತಾಗಿ ರದ್ದುಪಡಿಸುವಂತೆ ಒತ್ತಾಯಿಸಿದ್ದಾರೆ
