Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕೆಂಭಾವಿ: ಭಾರತ ರತ್ನ, ಸಂವಿಧಾನ ಶಿಲ್ಪಿ, ಡಾ ಬಿ ಆರ್ ಅಂಬೇಡ್ಕರ್ ಅವರ ೬೮ನೇ ಮಹಾ ಪರಿನಿರ್ವಾಣ ದಿನವನ್ನು ಪಟ್ಟಣದ ಮಹಾನಾಯಕ ಅಂಬೇಡ್ಕರ್ ವೃತ್ತದಲ್ಲಿ ಆಚರಿಸಲಾಯಿತು. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜ್ಯೋತಿ ಬೆಳಗಿ ಗೌರವ ನಮನ ಸಲ್ಲಿಸಿ ಮಾತನಾಡಿದ ಕಂದಾಯ ನಿರೀಕ್ಷಕ ರಾಜಾಸಾಬ್ ಡಿಸೆಂಬರ್ 6, 1956 ರಂದು ಬಾಬಾಸಾಹೇಬ್ ಅಂಬೇಡ್ಕರ್ ಅವರು ದೇಹತ್ಯಾಗ ಮಾಡಿದ ದಿನದಂದು ಅವರ ಸ್ಮರಣೆಯೊಂದಿಗೆ ಶ್ರದ್ಧಾ ಭಕ್ತಿಯಿಂದ ಮಹಾ ಪರಿನಿರ್ವಾಣ ದಿನಾಚರಣೆಯನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ ಎಂದವರು, ರಾಷ್ಟ್ರದ ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡವ ನಿಟ್ಟಿನಲ್ಲಿ ವಿಶ್ವದ ಅತಿ ದೊಡ್ಡ ಲಿಖಿತ ಸಂವಿಧಾನವನ್ನು ರಚಿಸಿದ ಕೀರ್ತಿ ಇವರದು, ಅಂಬೇಡ್ಕರ್ ಅವರ ಚಿಂತನೆ ಆದರ್ಶಗಳು ನಮಗೆಲ್ಲಾ ಸ್ಪೂರ್ತಿ ಅವುಗಳನ್ನು ಪರಿಪಾಲಿಸುವ ಮೂಲಕ ದೇಶದ ಬಗ್ಗೆ ಅವರು ಕಂಡಿದ್ದ ಕನಸುಗಳನ್ನು ನನಸಾಗಿಸಲು ಎಲ್ಲರೂ ಶ್ರಮಿಸೋಣ ಎಂದು ಹೇಳಿದರು. ಶಿವಶರಣಪ್ಪ ವಾಡಿ ಮಾತನಾಡಿ ಅಂಬೇಡ್ಕರರು ಓರ್ವ ಸಮಾಜ ಸುಧಾರಕರಾಗಿ, ಮಹಿಳೆಯರ, ದಲಿತರ, ಅಲ್ಪಸಂಖ್ಯಾತರ ಧ್ವನಿಯಾಗಿ ಅಸ್ಪೃಶ್ಯತೆ, ಅಸಮಾನತೆಯ ವಿರುದ್ಧ ಹೋರಾಡಿ…
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಭಾರತ ರತ್ನ, ಸಂವಿಧಾನ ಶಿಲ್ಪಿ, ಡಾ ಬಿ ಆರ್ ಅಂಬೇಡ್ಕರ್ ಅವರ ೬೮ನೇ ಮಹಾ ಪರಿನಿರ್ವಾಣ ದಿನವನ್ನು ಪಟ್ಟಣದ ಮಹಾನಾಯಕ ಅಂಬೇಡ್ಕರ್ ವೃತ್ತದಲ್ಲಿ ಆಚರಿಸಲಾಯಿತು. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜ್ಯೋತಿ ಬೆಳಗಿ ಗೌರವ ನಮನ ಸಲ್ಲಿಸಿ ಮಾತನಾಡಿದ ಕಂದಾಯ ನಿರೀಕ್ಷಕ ರಾಜಾಸಾಬ್ ಅವರು, ಡಾ.ಅಂಬೇಡ್ಕರ್ ಅವರ ಚಿಂತನೆ ಆದರ್ಶಗಳು ನಮಗೆಲ್ಲಾ ಸ್ಪೂರ್ತಿ. ಅವುಗಳನ್ನು ಪರಿಪಾಲಿಸುವ ಮೂಲಕ ದೇಶದ ಬಗ್ಗೆ ಅವರು ಕಂಡಿದ್ದ ಕನಸುಗಳನ್ನು ನನಸಾಗಿಸಲು ಎಲ್ಲರೂ ಶ್ರಮಿಸೋಣ ಎಂದು ಹೇಳಿದರು.ಶಿವಶರಣಪ್ಪ ವಾಡಿ ಮಾತನಾಡಿ, ಅಂಬೇಡ್ಕರರು ಓರ್ವ ಸಮಾಜ ಸುಧಾರಕರಾಗಿ, ಮಹಿಳೆಯರ, ದಲಿತರ, ಅಲ್ಪಸಂಖ್ಯಾತರ ಧ್ವನಿಯಾಗಿ ಅಸ್ಪೃಶ್ಯತೆ, ಅಸಮಾನತೆಯ ವಿರುದ್ಧ ಹೋರಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಮಾಡಿದ ಮಹಾನ್ ಮಾನವತಾವಾದಿ ಎಂದರು.ಪ್ರಮುಖರಾದ ಹರಿಶ್ಚಂದ್ರ ಕಟ್ಟಿಮನಿ, ಶಿವಶಣಪ್ಪ ಮಾಳಳ್ಳಿಕರ್, ಲಾಲಪ್ಪ ಆಲ್ಹಾಳ, ಪಂಡಲಿಕ ಬಸರಿಗಿಡ, ಪರಶುರಾಮ್ ಬಳಬಟ್ಟಿ, ಅರುಣ್ ಚವಾಣ, ಪ್ರಕಾಶ್ ಬಗಲಿ, ಮುಜೆಜ್ ತಾಳಿಕೋಟಿ, ಭೀಮಣ್ಣ ದೊಡ್ಡಮನಿ, ಮರೆಪ್ಪ ಶಹಪುರ್, ಮೊನೇಶ್ ಮುಂಡಸ, ಕಾಶಿನಾಥಗೌಡ,…
ವ್ಯವಸ್ಥಿತ ವ್ಯಾಪಾರ-ವಹಿವಾಟು ನಡೆಸಿ ನಗರ ಸೌಂದರ್ಯೀಕರಣಕ್ಕೆ ಸಹಕರಿಸಲು ಜಿಲ್ಲಾಧಿಕಾರಿ ಟಿ.ಭೂಬಾಲನ್ ಕರೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ನಗರದ ಸೌಂದರ್ಯಿಕರಣಕ್ಕೆ ಜಿಲ್ಲಾಡಳಿತ ಮುಂದಾಗಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರವೂ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಬೀದಿ-ಬದಿ ವ್ಯಾಪಾರಿಗಳು ನಿಗದಿತ ಸ್ಥಳಗಳಲ್ಲಿ ವ್ಯವಸ್ಥಿತ ಹಾಗೂ ಶಿಸ್ತುಬದ್ಧ ವ್ಯಾಪಾರ ಮಾಡುವುದು ಮತ್ತು ಎಲ್ಲೆಂದರಲ್ಲಿ ಕಸ ಚೆಲ್ಲದೇ ಕಸದ ಡಬ್ಬಿಯಲ್ಲಿ ಸಂಗ್ರಹಿಸಿ ತ್ಯಾಜ್ಯ ಸಂಗ್ರಹಣೆ ವಾಹನಕ್ಕೆ ನೀಡುವ ಮೂಲಕ ನಗರದ ಸೌಂದರ್ಯಿಕರಣಕ್ಕೆ ಕೈ ಜೋಡಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮನವಿ ಮಾಡಿಕೊಂಡಿದ್ದಾರೆ.ಶುಕ್ರವಾರ ನಗರದ ಜನತಾ ಬಜಾರ, ಎಂ.ಆರ್.ಹೋಟೆಲ್ ಹತ್ತಿರ, ಕೆ.ಎಸ್.ಆರ್.ಟಿ.ಸಿ. ಡಿಪೋ ಪಕ್ಕ, ಪ್ರವಾಸೋದ್ಯಮ ಮಂದಿರದ ಹಿಂದೆ, ಸೈನಿಕ ಶಾಲೆ ಜಿಮ್‌ಖಾನಾ ಕ್ಲಬ್ ಹಿಂದೆ ಹಾಗೂ ಆಹಾರ ಮಾರಾಟಕ್ಕೆ ಇಂಡಿ ರೋಡ ಕ್ರೀಡಾಂಗಣದ ಹತ್ತಿರ ಗುರುತಿಸಲಾಗಿರುವ ವೆಂಡಿಂಗ್ ಜೋನ್ ಜಾಗಗಳಿಗೆ ಭೇಟಿ ನೀಡಿ ಪರೀಶಿಲನೆ ನಡೆಸಿದರು.ವಿಜಯಪುರ ನಗರದಲ್ಲಿ ವಾಹನ ನಿಲುಗಡೆ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಮಹಾನಗರ ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಿ ಪರಿಹಾರ ಕೈಗೊಳ್ಳಲಾಗುವುದು…
ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಮಾಜಿ ವಿಧಾನ ಪರಿಷತ್ತು ಸದಸ್ಯರು, ಶಿಕ್ಷಣ ಬ್ರಹ್ಮ, ಜಿ. ಕೆ. ಪಾಟೀಲ ಅವರನ್ನು ಅವರ ಸ್ವಗೃಹದಲ್ಲಿ ಕಂಡು ಜನೆವರಿಯಲ್ಲಿ ಜರುಗುವ ತಿಕೋಟಾ ತಾಲೂಕ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಲು ವಿನಂತಿಸಲಾಯಿತು. ನಮ್ಮ ವಿನಂತಿಯನ್ನು ತಾಳ್ಮೆಯಿಂದ ಆಲಿಸಿದ ಶ್ರೀಯುತರು ಆರೋಗ್ಯ ಸರಿ ಇಲ್ಲದ ಮೂಲಕ ಅನಿವಾರ್ಯವಾಗಿ ಸರ್ವಾಧ್ಯಕ್ಷರಾಗಲು ಒಪ್ಪಿಗೆ ಸೂಚಿಸಲಿಲ್ಲ, ಬದಲಾಗಿ ತಾಲೂಕಿನಲ್ಲಿ ಯಾರೇ ಸರ್ವಧ್ಯಕ್ಷರಾಗಿ ಆಯ್ಕೆ ಆದರೂ ತಮ್ಮ ಸಮ್ಮತಿಯನ್ನು ಸೂಚಿಸಿ ಸಮ್ಮೇಳನದ ಯಶಸ್ಸಿಗೆ ತನು, ಮನ, ಧನಗಳಿಂದ ಸಂಪೂರ್ಣ ಸಹಕಾರ ನೀಡುವದಾಗಿ ತಿಳಿಸಿದರು.ತಾಲೂಕಿನ ಎಲ್ಲಾ ಜನರ ಅಭಿಪ್ರಾಯ ಪಡೆದು ಪ್ರಥಮ ಸಮ್ಮೇಳನ ಅರ್ಥಪೂರ್ಣವಾಗಿರುವಂತೆ ಮಾಡಿ ಎಂದು ಮಾರ್ಗದರ್ಶನ ಮಾಡಿದರು ಎಂದು ಕಸಾಪ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಸಂಘಟನಾ ಕಾರ್ಯದರ್ಶಿ ಬಾಬುರಾವ ಮಹಾರಾಜರು, ಸದಾಶಿವ ಮಂಗಸೂಳಿ, ನಿಕಟಪೂರ್ವ ಅಧ್ಯಕ್ಷ ಸೋಮಶೇಖರ್ ಜತ್ತಿ, ಡಾ. ಜಿ. ಎಸ್ ಬುಸಗೊಂಡ, ರಾನಗಟ್ಟಿ ಇದ್ದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಾದ್ಯಂತ ಅತಿ ಹೆಚ್ಚು ಪ್ರಮಾಣದಲ್ಲಿ ಈ ಬಾರಿ ತೊಗರಿ ಬೆಳೆಯನ್ನು ರೈತರು ಬೆಳೆದಿದ್ದಾರೆ. ಮುಂಗಾರು ಮಳೆ ಹುಲಸಾಗಿ ಬಂದಿದ್ದರಿಂದಾಗಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿ ರೈತರು ತೊಗರೆ ಬೆಳೆಯನ್ನು ಬಿತ್ತನೆ ಮಾಡಿದ್ದಾರೆ. ಹೂ ಕಾಯಿ ಹಿಡಿಯುವ ಹಂತದಲ್ಲಿರುವಾಗ ವಿಪರೀತ ಮಂಜಿನ ವಾತಾವರಣದಿಂದ ತೊಗರಿಯ ಫಲಗಳು ಉದುರಿ ಬಿದ್ದು ಬರಡು ಕಟ್ಟಿಗೆಯಾಗಿ ನಿಂತಿವೆ. ಈಗಾಗಲೇ ಜಿಲ್ಲಾಧಿಕಾರಿಗಳು ಹಲವು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ವಿಷಯದ ಕುರಿತು ಬೆಳಗಾವಿ ಅಧಿವೇಶನದಲ್ಲಿ ದೇವರ ಹಿಪ್ಪರಗಿ ಶಾಸಕರಾದ ರಾಜುಗೌಡ ಪಾಟೀಲ್ ಅವರು ಸದನದ ಗಮನಕ್ಕೆ ತಂದಿರುವುದು ತೊಗರಿ ಬೆಳೆದ ರೈತರ ಮೊಗದಲ್ಲಿ ಆಶಾಭಾವ ಮೂಡಿಸಿದೆ. ಸರ್ಕಾರ ಈ ಕೂಡಲೇ ಶಾಶ್ವತ ಪರಿಹಾರಕ್ಕಾಗಿ ಸೂಕ್ತ ಬೆಂಬಲ ಬೆಲೆಯನ್ನು ಘೋಷಿಸಿ ಉತ್ತರ ಕರ್ನಾಟಕದ ಬರಗಾಲ ಪೀಡಿತ ತೊಗರಿ ಬೆಳೆ ಬೆಳೆಯುವ ರೈತರ ಹಿತ ಕಾಪಾಡಲು ಮುಂದಾಗಬೇಕಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವೂ ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತದೆ.ಈ ಸಂದರ್ಬದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ…
ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಸದಸ್ಯೆ ಡಾ.ಸುರೇಖಾ ಜಿ ರಾಠೋಡ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಆಧುನಿಕ ಸಮಾಜದಲ್ಲಿ ಗಂಡು ಮತ್ತು ಹೆಣ್ಣು ಇಬ್ಬರು ಸಮಾನರು, ಪ್ರಾಕೃತಿಕವಾಗಿ ಇಬ್ಬರು ಒಂದೇ ಎಂಬ ಭಾವನೆಯನ್ನು ವ್ಯಕ್ತಪಡಿಸುತ್ತಾ ಸುಸ್ಥಿರ ಸಮಾಜದ ಏಳಿಗೆಯಲ್ಲಿ ಗಂಡು ಮತ್ತು ಹೆಣ್ಣು ಇಬ್ಬರೂ ಸಮಾನವಾಗಿ ತಮ್ಮ ಪಾತ್ರಗಳನ್ನು ನಿರ್ವಹಿಸಿದಾಗ ಮಾತ್ರ ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಸದಸ್ಯೆ ಡಾ.ಸುರೇಖಾ ಜಿ ರಾಠೋಡ ಹೇಳಿದರು.ಜಿಲ್ಲೆಯ ಬಸವನ ಬಾಗೇವಾಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಶಕೋಶ (lQAC)ದಡಿಯಲ್ಲಿ ಪ್ರೇರಣ ಘಟಕ, ಮಹಿಳಾ ಘಟಕ ಮತ್ತು ಲೈಂಗಿಕ ಕಿರುಕುಳ ತಡೆ ಸಮಿತಿ ಗಳ ಸಹಯೋಗದೊಂದಿಗೆ ಡಿ.೭ರಂದು ನಡೆದ ಪ್ರೇರಣ ಘಟಕದ ಉದ್ಘಾಟನೆ ಮತ್ತು “ಲಿಂಗತ್ವದ ಅರಿವು ಮತ್ತು ಕಾನೂನು” ಎಂಬ ವಿಶೇಷ ಉಪನ್ಯಾಸವನ್ನು ಪ್ರೇರಣ ಘಟಕದ ಸಂಚಾಲಕಿ ಪ್ರೊ.ಮಮತ ಎನ್ ಹಾಗೂ ಮಹಿಳಾ ಘಟಕದ ಸಂಚಾಲಕಿ ಪ್ರೊ.ವಿಜಯಲಕ್ಷ್ಮಿ ರವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ…
ತಿಕೋಟಾ ನೂತನ ಮಹಾವಿದ್ಯಾಲಯಲ್ಲಿ ರಕ್ತದಾನ ಶಿಬಿರ ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಆರೋಗ್ಯವಂತರು ರಕ್ತದಾನ ಮಾಡುವುದರಿಂದ ದೇಹದ ಆರೋಗ್ಯ ಇನ್ನಷ್ಟು ಗಟ್ಟಿ ಮಾಡಿಕೊಳ್ಳಲು ತುಂಬಾ ಸಹಕಾರಿಯಾಗುತ್ತದೆ ಎಂದು ಬಿ.ಎಲ್.ಡಿ.ಇ. ಸಂಸ್ಥೆಯ ಬ್ಲಡ್ ಬ್ಯಾಂಕ್ ನಿರ್ದೇಶಕ ಡಾ.ಪ್ರಕಾಶ ಪಾಟೀಲ ಹೇಳಿದರು.ತಿಕೋಟಾ ಪಟ್ಟಣದ ಬಿ.ಎಲ್.ಡಿ.ಸಂಸ್ಥೆಯ ನೂತನ ಮಹಾವಿದ್ಯಾಲಯಲ್ಲಿ ಶ್ರೀ ಬಿ.ಎಮ್.ಪಾಟೀಲ ಆಸ್ಪತ್ರೆ ಹಾಗೂ ನೂತನ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ರಕ್ತದಾನ ಶಿಬಿರದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಅಪಘಾತ ಮತ್ತು ಇನ್ನಿತರ ತುರ್ತು ಸಂದರ್ಭದಲ್ಲಿ ರಕ್ತ ತೀರಾ ಅವಶ್ಯಕವಾಗಿರುತ್ತದೆ. ನಮ್ಮ ನಮ್ಮ ಮನೆಗಳಲ್ಲಿ ಯಾರಿಗಾದರೂ ರಕ್ತದ ಅವಶ್ಯಕತೆ ಬಿದ್ದಾಗ ರಕ್ತದಾನ ಶಿಬಿರಗಳ ಉಪಯೋಗ ತಿಳಿಯುತ್ತದೆ. ಹೀಗಾಗಿ ವರ್ಷದಲ್ಲಿ ಎರಡು, ಮೂರು ಬಾರಿ ರಕ್ತದಾನ ಮಾಡಿದರೆ ತುರ್ತು ಚಿಕಿತ್ಸಾ ಘಟಕಗಳಲ್ಲಿರುವ ಎಷ್ಟೋ ರೋಗಿಗಳಿಗೆ ಸಹಕಾರಿಯಾಗುವ ಮೂಲಕ ಒಂದಾದರೂ ಜೀವ ಉಳಿಸಿದಂತಾಗುತ್ತದೆ. ಪ್ರಸ್ತುತ ದಿನಗಳಲ್ಲಿ ಎಷ್ಟೋ ಜನ ದೇಹದ ರಕ್ತದಲ್ಲಿನ ಕೊಬ್ಬಿನಾಂಶ ಹೆಚ್ಚಾಗಿ ಹೃದಯಾಘಾತ ಹಾಗೂ ಇತರೆ ರೋಗಗಳಿಗೆ ತುತ್ತಾಗಿ ಮರಣ ಹೊಂದುವ ಸಾಧ್ಯತೆ ಹೆಚ್ಚಾಗಿರುತ್ತದೆ. ಶಿಬಿರಗಳಲ್ಲಿ ನಾವು ಕಡ್ಡಾಯವಾಗಿ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಹಿಂದೆ ಕೂಡಲಸಂಗಮದಿಂದ ಸುಮಾರು ೭೦೦ಕಿ.ಮೀ ಪಾದಯಾತ್ರೆ ಮಾಡುವ ಮೂಲಕ ಬೆಂಗಳೂರಿನ ಫ್ರೀಡ್‌ಂಪಾರ್ಕ್ನಲ್ಲಿ ಧರಣಿ ನಡೆಸಿದ್ದಾರೆ. ನೆಪ ಮಾತ್ರ ಘೋಷಣೆ ಮಾಡಿ ಕೈ ತೊಳೆದುಕೊಂಡ ಘಟನೆ ನಡೆದಿದೆ ಎಂದು ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ ಅಸಮಾಧಾನ ವ್ಯಕ್ತಪಡಿಸಿದರು.ಪಟ್ಟಣದ ಬಸವ ಮಂಟಪದಲ್ಲಿ ಬೆಳಗಾವಿ ಚಲೋ ನಿಮಿತ್ಯ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿಗಾಗಿ ಸುವರ್ಣ ಸೌದಕ್ಕೆ ಮುತ್ತಿಗೆ ಹಾಕಲು ಸಮಾಜದ ಶ್ರೀಗಳ ನೇತೃತ್ವದಲ್ಲಿ ಡಿ.೧೦ರಂದು ನಡೆಯುವ ಹೋರಾಟಕ್ಕೆ ಸಿಂದಗಿ ತಾಲೂಕಿನಿಂದ ೧೦೦-೧೫೦ ಟ್ಯಾಕ್ಟರ್‌ಗಳು, ೨೦-೩೦ ವಾಹನಗಳನ್ನು ಸೇರಿದಂತೆ ಕಾರುಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಮಾಜದ ಬಂದುಗಳು ಸೇರಲಿದ್ದಾರೆ. ಅದಕ್ಕೆ ಈ ಹೋರಾಟ ಮಾಡು ಇಲ್ಲವೇ ಮಡಿ ಎನ್ನುವ ಘೋಷಣೆ ಮಾಡಿ ಶ್ರೀಗಳು ಶಪಥ ಮಾಡಿದ್ದು, ಅದಕ್ಕೆ ಈ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟಕ್ಕೆ ಬೆಂಬಲ ನೀಡೋಣ ಎಂದು ವಿನಂತಿಸಿದರು.ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ಪಾಟೀಲ ಗುಂದಗಿ, ಮಾಜಿ ಲಿಂಬೆ…
ರೈತ ಮಿತ್ರ ಏಜೆನ್ಸಿ ಗ್ರುಪ್ ಉದ್ಘಾಟಿಸಿದ ಶಾಸಕ ಅಶೋಕ ಮನಗೂಳಿ ಅಭಿಮತ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವ್ಯಾಪಾರ-ವಹಿವಾಟು, ಏಜೆನ್ಸಿಗಳು ಏನೇ ಇರಲಿ ಸಂಘಟನಾತ್ಮಕ ಕಾರ್ಯ ಮಾಡುವುದರಿಂದ ಯಶಸ್ಸು ಕಾಣಲು ಸಾಧ್ಯ. ಒಗಟ್ಟಿನಲ್ಲಿ ಬಲವಿದೆ ಎಂಬ ಮಾತಿನಂತೆ ಎಂತಹ ಸಮಸ್ಯೆ ಬಂದರೂ ಬಗೆಹರಿಸುವ ಸಾಮರ್ಥ್ಯ ಸಂಘಟನಾತ್ಮಕ ಚಟುವಟಿಕೆಗಳಲ್ಲಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಸಿಂದಗಿ ಹೊರವಲಯದ ಚಿಕ್ಕ ಸಿಂದಗಿ ಬೈಪಾಸ್ ಹತ್ತಿರವಿರುವ ಲಕ್ಕಮ್ಮದೇವಿ ದೇವಸ್ಥಾನದ ಆವರಣದಲ್ಲಿ ರೈತ ಮಿತ್ರ ಏಜೆನ್ಸಿ ಗ್ರುಪ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಮಿಕರ ಅಭಾವದಿಂದಾಗಿ ಇಂದು ಎಲ್ಲ ಕಾರ್ಯಕ್ಕೂ ಯಂತ್ರಗಳನ್ನೇ ಅವಲಂಬಿಸುವುದು ಅನಿವಾರ್ಯವಾಗಿದೆ. ಕೃಷಿಗೆ ಪೂರಕವಾದ ಭಾವಿ ಕೃಷಿಹೊಂಡ, ಬದುವುಗಳನ್ನು ಹಾಕುವುದು, ಗಿಡಗಂಟಿಗಳನ್ನು ಸ್ವಚ್ಛಗೊಳಿಸುವುದು, ಭೂಮಿಯನ್ನು ಸಮತಟ್ಟುಗೊಳಿಸುವುದು ಈ ಮುಂತಾದ ಚಟುವಟಿಕೆಗಳಿಗೆ ಜೆಸಿಬಿಗಳು, ಹಿಟಾಚಿಗಳು ಲೇವಲಿಂಗ್ ಟ್ಯಾಕ್ಟರ್ಗಳು, ಟಿಪ್ಪರ್, ಡಂಪರ್ ಟ್ರಾಕ್ಟರುಗಳು ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ವಾಹನಗಳನ್ನು ಇಟ್ಟುಕೊಂಡು ಕೆಲಸ ಮಾಡುವ ಈ ರೈತ ಮಿತ್ರ ಏಜೆನ್ಸಿಯವರು ರೈತರಿಗೆ ಹೊರೆಯಾಗದಂತೆ, ಯಾವುದೇ ರೀತಿಯ ಮೋಸವಾಗದಂತೆ ಕೆಲಸಗಳನ್ನು…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಇತ್ತೀಚೆಗೆ ರಾಣೆಬೆನ್ನೂರಿನ ಕೆ.ಎಲ್.ಇ ಸಂಸ್ಥೆಯ ರಾಜರಾಜೇಶ್ವರಿ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಆಯೋಜಿಸಿದ್ದ ಖೋ-ಖೋ ತಂಡದ ಆಯ್ಕೆಯ ಪಂದ್ಯಾವಳಿಯಲ್ಲಿ ಸಿಂದಗಿ ನಗರದ ಶ್ರೀ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದ ಸಿದ್ದಮ್ಮ ಶಂಕರಗೌಡ ಬಿರಾದಾರ ಪಾಲ್ಗೊಂಡು ಉತ್ತಮ ಸಾಧನೆ ಮಾಡಿ ವಿಶ್ವವಿದ್ಯಾಲಯ ಬ್ಲೂ ಆಗಿ ಆಯ್ಕೆಯಾಗಿದ್ದಾರೆ.ವಿದ್ಯಾರ್ಥಿನಿಯ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯ ಶಿವಮಾಂತ ಪೂಜಾರಿ ಸೇರಿದಂತೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
