ಕೆಂಭಾವಿ:
ಭಾರತ ರತ್ನ, ಸಂವಿಧಾನ ಶಿಲ್ಪಿ, ಡಾ ಬಿ ಆರ್ ಅಂಬೇಡ್ಕರ್ ಅವರ ೬೮ನೇ ಮಹಾ ಪರಿನಿರ್ವಾಣ ದಿನವನ್ನು ಪಟ್ಟಣದ ಮಹಾನಾಯಕ ಅಂಬೇಡ್ಕರ್ ವೃತ್ತದಲ್ಲಿ ಆಚರಿಸಲಾಯಿತು. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜ್ಯೋತಿ ಬೆಳಗಿ ಗೌರವ ನಮನ ಸಲ್ಲಿಸಿ ಮಾತನಾಡಿದ ಕಂದಾಯ ನಿರೀಕ್ಷಕ ರಾಜಾಸಾಬ್ ಡಿಸೆಂಬರ್ 6, 1956 ರಂದು ಬಾಬಾಸಾಹೇಬ್ ಅಂಬೇಡ್ಕರ್ ಅವರು ದೇಹತ್ಯಾಗ ಮಾಡಿದ ದಿನದಂದು ಅವರ ಸ್ಮರಣೆಯೊಂದಿಗೆ ಶ್ರದ್ಧಾ ಭಕ್ತಿಯಿಂದ ಮಹಾ ಪರಿನಿರ್ವಾಣ ದಿನಾಚರಣೆಯನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ ಎಂದವರು, ರಾಷ್ಟ್ರದ ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡವ ನಿಟ್ಟಿನಲ್ಲಿ ವಿಶ್ವದ ಅತಿ ದೊಡ್ಡ ಲಿಖಿತ ಸಂವಿಧಾನವನ್ನು ರಚಿಸಿದ ಕೀರ್ತಿ ಇವರದು, ಅಂಬೇಡ್ಕರ್ ಅವರ ಚಿಂತನೆ ಆದರ್ಶಗಳು ನಮಗೆಲ್ಲಾ ಸ್ಪೂರ್ತಿ ಅವುಗಳನ್ನು ಪರಿಪಾಲಿಸುವ ಮೂಲಕ ದೇಶದ ಬಗ್ಗೆ ಅವರು ಕಂಡಿದ್ದ ಕನಸುಗಳನ್ನು ನನಸಾಗಿಸಲು ಎಲ್ಲರೂ ಶ್ರಮಿಸೋಣ ಎಂದು ಹೇಳಿದರು.
ಶಿವಶರಣಪ್ಪ ವಾಡಿ ಮಾತನಾಡಿ ಅಂಬೇಡ್ಕರರು ಓರ್ವ ಸಮಾಜ ಸುಧಾರಕರಾಗಿ, ಮಹಿಳೆಯರ, ದಲಿತರ, ಅಲ್ಪಸಂಖ್ಯಾತರ ಧ್ವನಿಯಾಗಿ ಅಸ್ಪೃಶ್ಯತೆ, ಅಸಮಾನತೆಯ ವಿರುದ್ಧ ಹೋರಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಮಾಡಿದ ಮಹಾನ್ ಮಾನವತಾವಾದಿ ಎಂದರು.
ಪ್ರಮುಖರಾದ ಹರಿಶ್ಚಂದ್ರ ಕಟ್ಟಿಮನಿ, ಶಿವಶಣಪ್ಪ ಮಾಳಳ್ಳಿಕರ್, ಲಾಲಪ್ಪ ಆಲ್ಹಾಳ, ಪಂಡಲಿಕ ಬಸರಿಗಿಡ, ಪರಶುರಾಮ್ ಬಳಬಟ್ಟಿ, ಅರುಣ್ ಚವಾಣ, ಪ್ರಕಾಶ್ ಬಗಲಿ, ಮುಜೆಜ್ ತಾಳಿಕೋಟಿ, ಭೀಮಣ್ಣ ದೊಡ್ಡಮನಿ, ಮರೆಪ್ಪ ಶಹಪುರ್, ಮೊನೇಶ್ ಮುಂಡಸ, ಕಾಶಿನಾಥಗೌಡ, ವಲಿಸಾಬ, ಮಲ್ಲಿಕಾರ್ಜುನ ಕರಡ್ಕಲ್, ಮಾಂತೇಶ ಮಾಳಳ್ಳಿಕರ್, ಬಸವಣ್ಣಪ್ಪ ಆರ್ ಮಾಳಳ್ಳಿಕರ್, ಅಂಬರೀಶ್ ಬೊಮ್ಮನಹಳ್ಳಿ, ಸುರೇಶ ಮಾಳಳ್ಳಿಕರ್, ಲಕ್ಷ್ಮಣ ಬಸರಿಗಿಡ, ಜೇಟ್ಟೆಪ್ಪ ಮುಷ್ಕಳ್ಳಿ, ಯಲಪ್ಪ ಬಾವಿಮನಿ, ಭೀಮಶಂಕರ್ ಸೋಮನಾಳಕರ,ರವಿಚಂದ್ರ ಹೇಮನೂರ,ಪರಶುರಾಮ್ ಮಾಳಳ್ಳಿಕರ್, ಮಲ್ಲಿಕಾರ್ಜುನ್ ಕಟ್ಟಿಮನಿ, ಲಕ್ಷ್ಮಣ ಭಾವಿಮನಿ, ಲಾಲಪ್ಪ ಮಾಳಳ್ಳಿಕರ್, ಪರಶುರಾಮ್ ಬಾಡ್ನಾಳ, ಸಿದ್ದು ಬಮ್ಮನಹಳ್ಳಿ,ಜುಮ್ಮಾಣ್ಣ ಕಟ್ಟಿಮನಿ ,ಪ್ರಕಾಶ್ ಮಾಳಳ್ಳಿಕರ್, ಪರಶುರಾಮ್ ಕಟ್ಟಿಮನಿ, ಕೃಷ್ಣ ಪತ್ಯೆಪುರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
