ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಮಾಜಿ ವಿಧಾನ ಪರಿಷತ್ತು ಸದಸ್ಯರು, ಶಿಕ್ಷಣ ಬ್ರಹ್ಮ, ಜಿ. ಕೆ. ಪಾಟೀಲ ಅವರನ್ನು ಅವರ ಸ್ವಗೃಹದಲ್ಲಿ ಕಂಡು ಜನೆವರಿಯಲ್ಲಿ ಜರುಗುವ ತಿಕೋಟಾ ತಾಲೂಕ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಲು ವಿನಂತಿಸಲಾಯಿತು. ನಮ್ಮ ವಿನಂತಿಯನ್ನು ತಾಳ್ಮೆಯಿಂದ ಆಲಿಸಿದ ಶ್ರೀಯುತರು ಆರೋಗ್ಯ ಸರಿ ಇಲ್ಲದ ಮೂಲಕ ಅನಿವಾರ್ಯವಾಗಿ ಸರ್ವಾಧ್ಯಕ್ಷರಾಗಲು ಒಪ್ಪಿಗೆ ಸೂಚಿಸಲಿಲ್ಲ, ಬದಲಾಗಿ ತಾಲೂಕಿನಲ್ಲಿ ಯಾರೇ ಸರ್ವಧ್ಯಕ್ಷರಾಗಿ ಆಯ್ಕೆ ಆದರೂ ತಮ್ಮ ಸಮ್ಮತಿಯನ್ನು ಸೂಚಿಸಿ ಸಮ್ಮೇಳನದ ಯಶಸ್ಸಿಗೆ ತನು, ಮನ, ಧನಗಳಿಂದ ಸಂಪೂರ್ಣ ಸಹಕಾರ ನೀಡುವದಾಗಿ ತಿಳಿಸಿದರು.
ತಾಲೂಕಿನ ಎಲ್ಲಾ ಜನರ ಅಭಿಪ್ರಾಯ ಪಡೆದು ಪ್ರಥಮ ಸಮ್ಮೇಳನ ಅರ್ಥಪೂರ್ಣವಾಗಿರುವಂತೆ ಮಾಡಿ ಎಂದು ಮಾರ್ಗದರ್ಶನ ಮಾಡಿದರು ಎಂದು ಕಸಾಪ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನಾ ಕಾರ್ಯದರ್ಶಿ ಬಾಬುರಾವ ಮಹಾರಾಜರು, ಸದಾಶಿವ ಮಂಗಸೂಳಿ, ನಿಕಟಪೂರ್ವ ಅಧ್ಯಕ್ಷ ಸೋಮಶೇಖರ್ ಜತ್ತಿ, ಡಾ. ಜಿ. ಎಸ್ ಬುಸಗೊಂಡ, ರಾನಗಟ್ಟಿ ಇದ್ದರು.

