ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಹಿಂದೆ ಕೂಡಲಸಂಗಮದಿಂದ ಸುಮಾರು ೭೦೦ಕಿ.ಮೀ ಪಾದಯಾತ್ರೆ ಮಾಡುವ ಮೂಲಕ ಬೆಂಗಳೂರಿನ ಫ್ರೀಡ್‌ಂಪಾರ್ಕ್ನಲ್ಲಿ ಧರಣಿ ನಡೆಸಿದ್ದಾರೆ. ನೆಪ ಮಾತ್ರ ಘೋಷಣೆ ಮಾಡಿ ಕೈ ತೊಳೆದುಕೊಂಡ ಘಟನೆ ನಡೆದಿದೆ ಎಂದು ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಬಸವ ಮಂಟಪದಲ್ಲಿ ಬೆಳಗಾವಿ ಚಲೋ ನಿಮಿತ್ಯ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿಗಾಗಿ ಸುವರ್ಣ ಸೌದಕ್ಕೆ ಮುತ್ತಿಗೆ ಹಾಕಲು ಸಮಾಜದ ಶ್ರೀಗಳ ನೇತೃತ್ವದಲ್ಲಿ ಡಿ.೧೦ರಂದು ನಡೆಯುವ ಹೋರಾಟಕ್ಕೆ ಸಿಂದಗಿ ತಾಲೂಕಿನಿಂದ ೧೦೦-೧೫೦ ಟ್ಯಾಕ್ಟರ್‌ಗಳು, ೨೦-೩೦ ವಾಹನಗಳನ್ನು ಸೇರಿದಂತೆ ಕಾರುಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಮಾಜದ ಬಂದುಗಳು ಸೇರಲಿದ್ದಾರೆ. ಅದಕ್ಕೆ ಈ ಹೋರಾಟ ಮಾಡು ಇಲ್ಲವೇ ಮಡಿ ಎನ್ನುವ ಘೋಷಣೆ ಮಾಡಿ ಶ್ರೀಗಳು ಶಪಥ ಮಾಡಿದ್ದು, ಅದಕ್ಕೆ ಈ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟಕ್ಕೆ ಬೆಂಬಲ ನೀಡೋಣ ಎಂದು ವಿನಂತಿಸಿದರು.
ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ಪಾಟೀಲ ಗುಂದಗಿ, ಮಾಜಿ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ ಮಾತನಾಡಿದರು.
ವೇದಿಕೆಯ ಮೇಲೆ ವ್ಹಿ.ಬಿ.ಕುರುಡೆ, ಸೋಮನಗೌಡ ಬಿರಾದಾರ, ಅಂಬಿಕಾ ಪಾಟೀಲ, ಪ್ರತಿಭಾ ಚಳ್ಳಗಿ, ಆನಂದ ಶಾಬಾದಿ ಇದ್ದರು. ಸಭೆಯಲ್ಲಿ ರವಿ ಬಿರಾದಾರ, ಗುರು ಬಸರಕೋಡ, ಸಂಗನಗೌಡ ಪಾಟೀಲ, ಶಿವರಾಜ ಪೊಲೀಸಪಾಟೀಲ, ಕಾಳಪ್ಪ ಬಗಲಿ, ಆರ್.ಡಿ.ದೇಸಾಯಿ, ಬಸು ಗುಗ್ಗರಿ ಸೇರಿದಂತೆ ಸಮಾಜದ ಅನೇಕ ಮುಖಂಡರಿದ್ದರು.

