Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಇಂಡಿ ಶಾಂತೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ನಡೆದ ಧರ್ಮಸಭೆ ಮತ್ತು ಸಾಮೂಹಿಕ ವಿವಾಹ ಉದಯರಶ್ಮಿ ದಿನಪತ್ರಿಕೆ ಇಂಡಿ: ಪೂಜ್ಯರು, ಹರ ಗುರುಚರಣರು, ಸಾವಿರಾರು ಜನರ ನಡುವೆ ನಡೆಯುವ ಮದುವೆ ಬಡವರ ಮದುವೆ ಅಲ್ಲ, ಇದು ಭಾಗ್ಯವಂತರ ಮದುವೆ ಎಂದು ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯರರು ಹೇಳಿದರು.ಪಟ್ಟಣದ ಸದ್ಗುರು ಶ್ರೀ ಶಾಂತೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಶ್ರೀ ಶಾಂತೇಶ್ವರ ಮತ್ತು ಹಿರೇ ಇಂಡಿ ಹನುಮಾನ ದೇವಸ್ಥಾನ ಸಮಿತಿ ಮತ್ತು ಶ್ರೀ ಶಾಂತೇಶ್ವರ ಸಹಕಾರ ಸೌಹಾರ್ಧ ಸಂಯುಕ್ತ ಆಶ್ರಯದಲ್ಲಿ ನಡೆದ ಧರ್ಮಸಭೆ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮದುವೆ ಇಂದು ಎಲ್ಲ ಸಮಾಜದವರ ಸಾಮಾನ್ಯ ಮತ್ತು ಬಡ ಕುಟುಂಬಗಳ ಜಲ್ವಂತ ಸಮಸ್ಯೆಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಮದುವೆ ಮಾಡುವದು ಕಷ್ಟ. ಹೀಗಾಗಿ ಕಲಿತಿರುವ ವಧು ವರರು ಯುವಕರು ಗೃಹಸ್ಥಾಶ್ರಮ ಪ್ರವೇಶಕ್ಕೆ ಸಾಮೂಹಿಕ ವಿವಾಹ ಸೂಕ್ತ ಎಂದರು.ಹತ್ತಳ್ಳಿಯ ಗುರುಪಾದೇಶ್ವರ ಶ್ರೀಗಳು ಮಾತನಾಡಿದರು.೧೨ ಜೊತೆಗಳು ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡಿದ್ದರು.ವೇದಿಕೆಯ ಮೇಲೆ ಗೋಳಸಾರದ ಅಭಿನವ ಪುಂಡಲಿಂಗ ಶ್ರೀಗಳು, ನಾಗಣಸೂರದ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಕೃಷಿ ಮಹಾವಿದ್ಯಾಲಯದಲ್ಲಿ ಖಾಲಿ ಇರುವ 2 ಗ್ರಂಥಾಲಯ ಸಹಾಯಕರ ಹುದ್ದೆಗೆ ತಾತ್ಕಾಲಿಕವಾಗಿ ಭರ್ತಿಮಾಡಿಕೊಳ್ಳಲುಅರ್ಜಿ ಆಹ್ವಾನಿಸಲಾಗಿದೆ.ಸದರಿ ಹುದ್ದೆಯು 179 ದಿನಗಳವರೆಗೆ ಅಥವಾ ಖಾಯಂ ಗ್ರಂಥಾಲಯ ಸಹಾಯಕರು ನೇಮಕಾತಿಗೊಂಡಲ್ಲಿ ಯಾವುದು ಮೊದಲು ಅಲ್ಲಿಯವರೆಗೆ ಇರುತ್ತದೆ. ಗ್ರಂಥಾಲಯ ವಿಜ್ಞಾನದಲ್ಲಿ ಪದವಿ ಪಡೆದ ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ದಾಖಲಾತಿಗಳೊಂದಿಗೆ ದಿನಾಂಕ: 20-12-2024ರಂದು ಬೆಳಿಗ್ಗೆ 11 ಘಂಟೆಗೆ ಕೃಷಿ ಮಹಾವಿದ್ಯಾಲಯದ ಸಂದರ್ಶನ ಕೊಠಡಿಗೆ ಹಾಜರಾಗಬಹುದು ಎಂದು ವಿಜಯಪುರ ಕೃಷಿ ಮಹಾವಿದ್ಯಾಲಯದ ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ನೋಂದಣಿಯಾದ ಲೇವಾದೇವಿ, ಗಿರವಿ ಹಾಗೂ ಹಣಕಾಸು ಸಂಸ್ಥೆಗಳು ಪರವಾನಿಗೆಯನ್ನು 2025ರ ಜನವರಿ 31ರೊಳಗಾಗಿ ನಿಗದಿತ ಶುಲ್ಕ ಪಾವತಿಸಿ ನವೀಕರಣಗೊಳಿಸಿಕೊಳ್ಳುವಂತೆ ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀಮತಿ ಎಸ್.ಕೆ.ಭಾಗ್ಯಶ್ರೀ ಅವರು ತಿಳಿಸಿದ್ದಾರೆ.2025ರ ಮಾರ್ಚ್ 31ಕ್ಕೆ ಮುಕ್ತಾಯಗೊಳ್ಳುತ್ತಿರುವ ಎಲ್ಲಾ ಹಣಕಾಸು ಸಂಸ್ಥೆಗಳು ಪರವಾನಿಗೆ ನವೀಕರಿಸಿಕೊಳ್ಳಬೇಕು. ನಿಗದಿತ ಅವಧಿಯಲ್ಲಿ ನವೀಕರಿಸದೇ ಇದ್ದಲ್ಲಿ ನಂತರ ಬಂದ ಅರ್ಜಿಗಳಿಗೆ ಕಾಯ್ದೆ 6(4) ರಲ್ಲಿ ನಿರ್ದಿಷ್ಟಪಡಿಸಲಾದ ದರದ ದುಪ್ಪಟ್ಟು ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ ಹಾಗೂ ಕಾಯ್ದೆ ಕಲಂ 7ಎ(2)ರ ಪ್ರಕಾರ ವ್ಯವಹಾರದಲ್ಲಿ ತೊಡಗಿಸಿ ಮೊತ್ತಕ್ಕೆ ಅನುಗುಣವಾಗಿ ಭದ್ರತಾ ಠೇವಣಿಯನ್ನು ಪಾವತಿಸಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು ವಿಜಯಪುರ-ಇಂಡಿ ಇವರ ಮೂಲಕ ನವೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂತ್ರಸ್ತರ ಹೋರಾಟ ಸಮಿತಿ ಬಾಗಲಕೋಟೆಯಲ್ಲಿ ನಡೆಸುತ್ತಿರುವ ಅಹೋರಾತ್ರಿ ದರಣಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದ ಎಂಎಲ್ಸಿ ಸುನೀಲಗೌಡ ಪಾಟೀಲ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಲು ವಿಜಯಪುರ ಮತ್ತು ಬಾಗಲಕೋಟೆ ಉಭಯ ಜಿಲ್ಲೆಗಳ ಶಾಸಕರು ಹಾಗೂ ಸಂಸದರು ಪಕ್ಷಾತೀತವಾಗಿ ಸರಕಾರದ ಗಮನ ಸೆಳೆಯುತ್ತೇವೆ ಎಂದು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ತಿಳಿಸಿದ್ದಾರೆ.ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಆಗ್ರಹಿಸಿ ಸಂತ್ರಸ್ತರ ಹೋರಾಟ ಸಮಿತಿ ಬಾಗಲಕೋಟೆಯಲ್ಲಿ ನಡೆಸುತ್ತಿರುವ ಅಹೋರಾತ್ರಿ ದರಣಿ/ಸರದಿ ಸತ್ಯಾಗ್ರಹದಲ್ಲಿ ಇಂದು ಸೋಮವಾರ ಪಾಲ್ಗೋಂಡು ಬೆಂಬಲ ಸೂಚಿಸಿ ಅವರು ಮಾತನಾಡಿದರು.ಆಲಮಟ್ಟಿ ಜಲಾಶಯದ ಎತ್ತರವನ್ನು 524.256 ಮೀಟರ್ ಎತ್ತರ ಮಾಡುವುದರಿಂದ ಈ ಯೋಜನೆ ಪೂರ್ಣಗೊಂಡರೆ ಉಭಯ ಜಿಲ್ಲೆಗಳಷ್ಟೇ ಅಲ್ಲ, ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳಿಗೂ ಅನುಕೂಲವಾಗಲಿದೆ. 16 ಲಕ್ಷ ಹೆಕ್ಟೆರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ. ಇದರಿಂದ ರೈತರ ಬಾಳು ಹಸನಾಗಲಿದೆ. ಎರಡೂ ಜಿಲ್ಲೆಗಳ 18 ಜನ ಶಾಸಕರು ಪಕ್ಷಾತೀತವಾಗಿ ಹೋರಾಟಕ್ಕೆ ಬೆಂಬಲ ನೀಡುತ್ತೇವೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಈ…
ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಶ್ಲಾಘನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಸಾಧ್ಯವಾದ ಕೆಲಸಗಳನ್ನು ಸಾಧ್ಯ ಮಾಡುವ ಮೂಲಕ ಸಚಿವ ಎಂ. ಬಿ. ಪಾಟೀಲ ಅವರು ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದಾರೆ ಎಂದು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.ಬಬಲೇಶ್ವರ ತಾಲೂಕಿನ ಕಾಖಂಡಕಿ ಬಳಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ವತಿಯಿಂದ ಅಂದಾಜು ರೂ.160 ಲಕ್ಷ ವೆಚ್ಚದ ಹೊಸ ಜಿನುಗು ಕೆರೆ(ಸೈಟ್- 3) ನಿರ್ಮಾಣ ಕಾಮಗಾರಿಗೆ ಇಂದು ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿದ ನಂತರ ಜಿಲ್ಲೆಗೆ ಮತ್ತಷ್ಟು ನೀರು ಹಂಚಿಕೆಯಾಗಲಿದ್ದು, ನೀರಾವರಿ ಕ್ಷೇತ್ರವೂ ವಿಸ್ತರಣೆಯಾಗಲಿದೆ. ನೀರಾವರಿ, ರಸ್ತೆ, ಗುಣಮಟ್ಟದ ವಿದ್ಯುತ್ ಪೂರೈಕೆ, ಶಿಕ್ಷಣ ಕ್ಶೇತ್ರದ ಸುಧಾರಣೆ ಮೂಲಕ ಎಂ. ಬಿ. ಪಾಟೀಲರು ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಜಿಲ್ಲೆಯ ಜನರ ಜೀವನಮಟ್ಟ ಮತ್ತಷ್ಟು ಸುಧಾರಿಸಲಿದ್ದು, ರೈತರು ಆರ್ಥಿಕವಾಗಿ ಹೆಚ್ಚು ಸದೃಢರಾಗಲಿದ್ದಾರೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಮುಖಂಡರಾದ ರಾಮನಗೌಡ ಪಾಟೀಲ,…
ಚಿಮ್ಮಡದಲ್ಲಿ ಸಣ್ಣ ಮತ್ತು ಮದ್ಯಮ ಉದ್ಯಮಿಗಳ ಶಿಬಿರ ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಉದ್ಯಮ ಸ್ಥಾಪನೆಗಾಗಿ ಸಾಲ ನೀಡಲು ಬ್ಯಾಂಕುಗಳೇ ಪೈಪೊಟಿಗಿಳಿದದ್ದು ಕೇಂದ್ರ ಸರಕಾರದ ಸಹಾಯಧನದೊಂದಿಗೆ ಸಾಲ ನೀಡಲು ನಮ್ಮ ಬ್ಯಾಂಕು ಮಹತ್ವದ ಹೆಜ್ಜೆ ಇರಿಸಿದೆ ಎಂದು ಕೆನರಾ ಬ್ಯಾಂಕ್ ಪ್ರಾದೇಶೀಕ ಮುಖ್ಯಸ್ಥೆ ಕೆ.ಆರ್. ಶೈಲಜಾ ಹೇಳಿದರು.ಗ್ರಾಮದ ಸುಯೋಗ ಪೂಜಾರಿ ಉದ್ಯಮ ಕೇಂದ್ರ ಕಛೇರಿಯ ಸಬಾಭವನದಲ್ಲಿ ಆಯೋಜಿಸಲಾಗಿದ್ದ ಸಣ್ಣ ಮತ್ತು ಮದ್ಯಮ ಉದ್ಯಮಿಗಳ ಶಿಬಿರದ ಉದ್ಘಾಟಣೆ ನೆರವೇರಿಸಿ ಮಾತನಾಡಿದ ಅವರು ಕೃಷಿ ಕ್ಷೇತ್ರ ಅವಲಂಬಿತ ಉದ್ಯಮ ಸ್ಥಾಪಿಸಲು ನಮ್ಮ ಬ್ಯಾಂಕ ಬಯಸುತಿದ್ದು ಅದರೊಂದಿಗೆ ಗುತ್ತಿಗೆದಾರರಿಗೆ, ಆಸ್ಪತ್ರೆ ನಿರ್ಮಾಣಕ್ಕೆ, ಬೇಕರಿ ಉತ್ಪಣ್ಣ ತಯಾರಿಕೆಗೆ, ಹಾಲು ಮತ್ತು ಹಾಲಿನ ಉತ್ಪಣ್ಣಗಳ ತಯಾರಿಕಾ ಘಟಕ ಸೇರಿದಂತೆ ಹಲವಾರು ಬಗೆಯ ಉದ್ಯಮ ಸ್ಥಾಪಿಸಲು ಶೇ. ೩೫ ರಿಂದ ೫೦ ರ ವರೆಗೆ ಸಹಾಯಧನ ದೊಂದಿಗೆ ಸಾಲ ನೀಡಲು ನಮ್ಮ ಬ್ಯಾಂಕ್ ಸಿದ್ದವಿದ್ದು ಆಸಕ್ತರು ನಮ್ಮ ಶಾಖೆಯನ್ನು ಸಂಪರ್ಕಿಸಬೇಕೆಂದರು.ಕೆನರಾ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಸುನಿಲಕುಮಾರ ಮಾತನಾಡಿ ಬ್ಯಾಂಕನಿಂದ ಸಿಗುವ ವಿವಿಧ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಇತ್ತೀಚೆಗೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಬಸವರಾಜ ರಾವೂರ ಹಾಗೂ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಸಿದ್ದಣ್ಣ ಬೂದಿಹಾಳ ಅವರನ್ನು ಶನಿವಾರ ಪಟ್ಟಣದ ಅಕ್ಕಮಹಾದೇವಿ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ರಾವೂರ ಮಾತನಾಡಿ, ಸರ್ಕಾರಿ ನೌಕರರು ನನ್ನನ್ನು ನಂಬಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಅವರ ಅರುಣ ತೀರಿಸಲು ಬದ್ಧನಿದ್ದೇನೆ. ಅದರಂತೆ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ತಾಲೂಕಿನ ರೈತರ ಪರವಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ತಿಳಿಸಿದ ಅವರು ಅಕ್ಕಮಹಾದೇವಿ ಸೌಹಾರ್ದ ಸಂಘದವರು ಸದಾ ಸಾಮಾಜಿಕ ಕಾರ್ಯಗಳನ್ನು ಮಾಡುತ್ತ, ಒಳ್ಳೆಯದನ್ನು ಮಾಡುವ ಜನರನ್ನು ಗುರುತಿಸಿ ಸತ್ಕರಿಸುವ ಸತ್ಕಾರ್ಯ ಮಾಡುತ್ತಿರುವುದು, ಇನ್ನಷ್ಟು ಒಳ್ಳೆಯದನ್ನು ಮಾಡಲು ಅವರಿಗೆ ಪ್ರೇರೇಪಿಸುತ್ತದೆ ಎಂದರು.ವಕೀಲರ ಸಂಘದ ಅಧ್ಯಕ್ಷ ಸಿದ್ದಣ್ಣ ಬೂದಿಹಾಳ ಮಾತನಾಡಿ, ಇಂಡಿ ಪಟ್ಟಣದಲ್ಲಿ ನನ್ನ ಅವಧಿಯಲ್ಲಿಯೇ ಜಿಲ್ಲಾ ನ್ಯಾಯಾಲಯವನ್ನು ಕಟ್ಟಿಸಿ ಉದ್ಘಾಟ್ಟಿಸುವ ಕನಸು ಕಂಡಿದ್ದೇನೆ ಅದಕ್ಕೆ ಎಲ್ಲರ ಸಹಕಾರ ಅವಶ್ಯವಾಗಿದೆ.…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಿತ್ಯದ ಬದುಕಿಗೆ ಉತ್ತಮ ಸಂಸ್ಕಾರ ದೊರೆಯಲು ಪುರಾಣದಂತಹ ಆದರ್ಶ ಕಥೆಗಳು ಬಹಳಷ್ಟು ಅಗತ್ಯವಾಗಿವೆ ಎಂದು ಪ್ರಥಮ ದರ್ಜೆ ಗುತ್ತಿಗೇದಾರ ಶಂಕರಗೌಡ ಹೊಸಮನಿ ಹೇಳಿದರು.ತಾಲೂಕಿನ ಯಂಕಂಚಿ ಗ್ರಾಮದ ಕುಂಟೋಜಿ ಹಿರೇಮಠದಲ್ಲಿ ಲಿಂ.ರುದ್ರಮುನಿ ಶಿವಾಚಾರ್ಯರ ೪೭ನೇ ಪುಣ್ಯಾರಾಧನೆ ನಿಮಿತ್ತ ಹಮ್ಮಿಕೊಂಡ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಮಾನವನ ಮಾನವೀಯ ಮೌಲ್ಯಗಳು ಅಭಿವೃದ್ಧಿಯಾಗಲು ಶರಣರ, ದಾರ್ಶನಿಕರ, ಸಂತರ ಪುಣ್ಯಕಥೆಗಳು ಅಗಾಧವಾಗಿ ಕಾರ್ಯನಿರ್ವಹಿಸುತ್ತವೆ. ಇಂತಹ ಕಥೆಗಳ ಸಾರ ಪ್ರತಿಯೊಬ್ಬರು ಆಲಿಸಿ ಮಾನವ ಜೀವನ ಸಾರ್ಥಕಗೊಳಿಸಿಕೊಳ್ಳಬೇಕು ಎಂದರು.ಈ ವೇಳೆ ದಕ್ಷಿಣ ಸೋಲಾಪೂರದ ಮಾಳಕವಠೆ ಶ್ರೀಮಠದ ಡಾ.ಪಂಚಾಕ್ಷರಿ ಶಿವಾಚಾರ್ಯರು ಆಶೀರ್ವಚನ ನೀಡಿ, ಮಾಣವ ಜನ್ಮಕ್ಕೆ ಬಂದ ನಾವುಗಳೆಲ್ಲ ಮಹಾತ್ಮರು, ಶರಣ ಸತ್ಪುರಷರು ತೊರಿದ ದಾರಿ ಅನುಸರಿಸಬೇಕು. ಅವರು ಬದುಕಿನ ದಿನಗಳ ಬೆಳಕಿನಲ್ಲಿ ನಡೆದು ನಮ್ಮ ಜೀವನ ಪಾನವ ಮಾಡಿಕೊಳ್ಳಬೇಕು ಎಂದು ಹೇಳಿದರು.ಬೆಳಗಿನ ಜಾವ ಅಭಿನವ ರುದ್ರಮುನಿ ಶಿವಾಚಾರ್ಯರ, ಚಿದಾನಂದ ಶಾಸ್ತ್ರಿಗಳ, ಸಂತೋಷ ಶಾಸ್ತ್ರಿಗಳ, ಶಂಭುಲಿಂಗ ಶಾಸ್ತ್ರಿಗಳು, ಶರಣಯ್ಯ ಶಾಸ್ತ್ರಿಗಳ, ಶಂಕರಯ್ಯ ಶಾಸ್ತ್ರಿಗಳ ನೇತೃತ್ವದಲ್ಲಿ ಮಹಾರುದ್ರ, ಗಣಹೋಮ, ಶಿವದೀಕ್ಷೆ ಹಾಗೂ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಯಾವುದೇ ಕೊರತೆಯಾಗದಂತೆ, ಮಾದರಿಯಾಗುವಂತೆ ಅರ್ಥಪೂರ್ಣವಾಗಿ ಆಚರಿಸೋಣ ಎಂದು ವಿಜಯಪುರ ಅನುಗ್ರಹ ಆಸ್ಪತ್ರೆಯ ಖ್ಯಾತ ನೇತ್ರತಜ್ಞ ಪ್ರಭುಗೌಡ ಲಿಂಗದಳ್ಳಿ(ಚಬನೂರ) ಹೇಳಿದರು.ಪಟ್ಟಣದ ಪ್ರವಾಸಿಮಂದಿರದಲ್ಲಿ ಶನಿವಾರ ಜರುಗಿದ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಸಮ್ಮೇಳನದಲ್ಲಿ ಪಕ್ಷಾತೀತವಾಗಿ ಹಾಗು ಜಾತ್ಯತೀತವಾಗಿ ಎಲ್ಲರೂ ಭಾಗವಹಿಸೋಣ. ನಿಮ್ಮೋಂದಿಗೆ ನಾವು ಇದ್ದೇವೆ ಯಾವುದೇ ಕಾರಣಕ್ಕೂ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು, ತಾಲ್ಲೂಕಾಧ್ಯಕ್ಷರು ಎದೆಗುಂದದೆ ಸಮ್ಮೇಳನದ ರೂಪುರೇಷೆಗಳನ್ನು ಸಿದ್ಧಪಡಿಸಲಿ ಎಂದರು.ಕಸಾಪ ಜಿಲ್ಲಾಧ್ಯಕ್ಷ ಹಾಸೀಂಪೀರ ವಾಲೀಕಾರ ಮಾತನಾಡಿ, ನಾಡು-ನುಡಿ. ನೆಲ-ಜಲ. ಸಂಸ್ಕೃತಿ – ಪರಂಪರೆ ಕುರಿತು ಗೋಷ್ಠಿಗಳನ್ನು ಏರ್ಪಡಿಸುತ್ತೇವೆ. ಸ್ಥಳೀಯರಿಗೆ ಪ್ರಾಧ್ಯಾನ್ಯತೆ ನೀಡುತ್ತೇವೆ. ತಾಲ್ಲೂಕಿನ ಎಲ್ಲ ಸ್ವಾಮೀಜಿಗಳು ಸಮ್ಮೇಳನದಲ್ಲಿ ಸಾನ್ನಿಧ್ಯ ವಹಿಸುತ್ತಾರೆ. ಎಲ್ಲರ ಸಹಕಾರ, ಸಲಹೆ ಅತ್ಯಗತ್ಯ ಎಂದು ಹೇಳಿದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಪಿ.ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ, ಇದೇ ಡಿಸೆಂಬರ್ ೨೭ ಶುಕ್ರವಾರ ದಂದು ದೇವರಹಿಪ್ಪರಗಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಗೌರವಾನ್ವಿತ ಮುಖಂಡರಿಗೆ ಹಾಗು ಹಿರಿಯರೊಂದಿಗೆ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಬೇಕಾಗಿದ್ದು ಹಾಗೂ ಪಡೆಯಬೇಕಾಗಿದ್ದು ಇಂದು ಅತೀ ಅಗತ್ಯವಾಗಿದೆ ಎಂದು ಬಾಲಗಾಂವ ಗುರುದೇವಾಶ್ರಮದ ಅಮೃತಾನಂದ ಶ್ರೀಗಳು ಹೇಳಿದರು.ತಾಲ್ಲೂಕಿನ ಮಣೂರ ಗ್ರಾಮದ ಶ್ರೀವೆಂಕಟೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವ ಅಂಗವಾಗಿ ಶುಕ್ರವಾರ ಜರುಗಿದ ಧರ್ಮಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಇಂದು ಯುವಜನತೆ ಪ್ಯಾಷನ್ ಹೆಸರಲ್ಲಿ ದಾರಿ ತಪ್ಪುತ್ತಿದೆ. ಹಣೆಗೆ ವಿಭೂತಿ, ಕುಂಕುಮ ಹಚ್ಚುವಂತ ನಮ್ಮ ಪರಂಪರೆ ಪ್ಯಾಷನ್ ಆಗಲಿ, ಇಂದು ನಾವು ಮಾಡುವ ನಮ್ಮ ಕಾರ್ಯಗಳಿಂದಲೇ ಪ್ರತಿಫಲ ಪಡೆಯುತ್ತಿದ್ದೇವೆ. ನಮ್ಮ ಅಗತ್ಯತೆಗಳಿಗೆ ಜಗದ ಪರಿಸರ ಮಲೀನಗೊಳಿಸಿ ಸ್ವಚ್ಛತೆಗಾಗಿ ಹೊಸ ಅವಿಷ್ಕಾರಗಳಿಗೆ ಅಣಿಯಾಗುತ್ತಿದ್ದೇವೆ. ನೆನಪಿರಲಿ ನಮ್ಮೇಲ್ಲ ರೋಗಗಳಗೆ ಶುದ್ಧಗಾಳಿಯೇ ಸಿದ್ಧ ಔಷಧ ಎಂದು ಮನುಷ್ಯನ ಮನಸ್ಥಿತಿಗಳ ಕುರಿತು ವಿವರಿಸಿ, ಸುಂದರ ಶಾಂತಿಮಯ ಜೀವನಕ್ಕಾಗಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಪೂಜೆ, ಧ್ಯಾನ, ತಪಗಳಂತಹ ಆಧ್ಯಾತ್ಮೀಕ ಆಚರಣೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.ವೀರಗೋಟ ಅಡವಿಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಮಾನವ ಮೂಲತಃ ಸ್ವಾರ್ಥಿ, ತನ್ನ ಉಳಿವಿಗಾಗಿ ಜಗವನ್ನೇ ದುರುಪಯೋಗ ಪಡಿಸಿಕೊಂಡು ಇಡೀ ಜೀವಿಸಂಕುಲದಲ್ಲಿ ಅತ್ಯಂತ ದುಃಖಿಯಾಗಿ ಕಾಣುತ್ತಿದ್ದಾನೆ…
