ಚಿಮ್ಮಡದಲ್ಲಿ ಸಣ್ಣ ಮತ್ತು ಮದ್ಯಮ ಉದ್ಯಮಿಗಳ ಶಿಬಿರ
ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಉದ್ಯಮ ಸ್ಥಾಪನೆಗಾಗಿ ಸಾಲ ನೀಡಲು ಬ್ಯಾಂಕುಗಳೇ ಪೈಪೊಟಿಗಿಳಿದದ್ದು ಕೇಂದ್ರ ಸರಕಾರದ ಸಹಾಯಧನದೊಂದಿಗೆ ಸಾಲ ನೀಡಲು ನಮ್ಮ ಬ್ಯಾಂಕು ಮಹತ್ವದ ಹೆಜ್ಜೆ ಇರಿಸಿದೆ ಎಂದು ಕೆನರಾ ಬ್ಯಾಂಕ್ ಪ್ರಾದೇಶೀಕ ಮುಖ್ಯಸ್ಥೆ ಕೆ.ಆರ್. ಶೈಲಜಾ ಹೇಳಿದರು.
ಗ್ರಾಮದ ಸುಯೋಗ ಪೂಜಾರಿ ಉದ್ಯಮ ಕೇಂದ್ರ ಕಛೇರಿಯ ಸಬಾಭವನದಲ್ಲಿ ಆಯೋಜಿಸಲಾಗಿದ್ದ ಸಣ್ಣ ಮತ್ತು ಮದ್ಯಮ ಉದ್ಯಮಿಗಳ ಶಿಬಿರದ ಉದ್ಘಾಟಣೆ ನೆರವೇರಿಸಿ ಮಾತನಾಡಿದ ಅವರು ಕೃಷಿ ಕ್ಷೇತ್ರ ಅವಲಂಬಿತ ಉದ್ಯಮ ಸ್ಥಾಪಿಸಲು ನಮ್ಮ ಬ್ಯಾಂಕ ಬಯಸುತಿದ್ದು ಅದರೊಂದಿಗೆ ಗುತ್ತಿಗೆದಾರರಿಗೆ, ಆಸ್ಪತ್ರೆ ನಿರ್ಮಾಣಕ್ಕೆ, ಬೇಕರಿ ಉತ್ಪಣ್ಣ ತಯಾರಿಕೆಗೆ, ಹಾಲು ಮತ್ತು ಹಾಲಿನ ಉತ್ಪಣ್ಣಗಳ ತಯಾರಿಕಾ ಘಟಕ ಸೇರಿದಂತೆ ಹಲವಾರು ಬಗೆಯ ಉದ್ಯಮ ಸ್ಥಾಪಿಸಲು ಶೇ. ೩೫ ರಿಂದ ೫೦ ರ ವರೆಗೆ ಸಹಾಯಧನ ದೊಂದಿಗೆ ಸಾಲ ನೀಡಲು ನಮ್ಮ ಬ್ಯಾಂಕ್ ಸಿದ್ದವಿದ್ದು ಆಸಕ್ತರು ನಮ್ಮ ಶಾಖೆಯನ್ನು ಸಂಪರ್ಕಿಸಬೇಕೆಂದರು.
ಕೆನರಾ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಸುನಿಲಕುಮಾರ ಮಾತನಾಡಿ ಬ್ಯಾಂಕನಿಂದ ಸಿಗುವ ವಿವಿಧ ಸಾಲ ಸೌಲಭ್ಯಗಳು, ಸಹಾಯಧನ ಹಾಗೂ ಸಾಲ ಪಡೆಯುವ ವಿಧಾನಗಳ ಕುರಿತು ಮಾಹಿತಿ ನೀಡಿದರು. ನಂತರ ನಡೆದ ಮುಖಾಮುಖಿ ಚರ್ಚೆಯಲ್ಲಿ ಗ್ರಾಹಕರು ತಮ್ಮ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು.
ಮಹಾಲಿಂಗಪುರ ಶಾಖೆಯ ಹಿರಿಯ ವ್ಯವಸ್ಥಾಪಕಿ ಉಮಾದೇವಿ, ರಬಕವಿ ಶಾಖೆಯ ಶಿವರಾಜ, ತೇರದಾಳ ಶಾಖೆಯ ಗಿರೀಶ, ಸಹಾಯಕ ವ್ಯವಸ್ಥಾಪಕ ಆನಂದ ಎಂ.ಕೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಸುಯೋಗಪೂಜಾರಿ ಉದ್ದಿಮೆಯ ಸಂಸ್ಥಾಪಕ ಪುಂಡಲಿಕಪ್ಪಾ ಪೂಜಾರಿ, ರಾಮಣ್ಣ ಮುಗಳಖೋಡ, ಆರ್.ಎಂ. ಬಗನಾಳ, ಇಲಾಹಿ ಜಮಖಂಡಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ನೆರೆಯ ಗ್ರಾಮ ಪಟ್ಟಣಗಳಿಂದ ಇನ್ನೂರಕ್ಕೂ ಅಧಿಕ ಜನ ಉದ್ಯಮಿಗಳು, ವ್ಯಾಪಾರಸ್ಥರು ಆಗಮಿಸಿದ್ದರು.
ಅತ್ಯತ್ತಮ ಗ್ರಾಹಕ ಪ್ರಶಸ್ತಿ
ಇದೇ ಸಂದರ್ಭದಲ್ಲಿ ಸುಯೋಗಪೂಜಾರಿ ಉದ್ದಿಮೆಯ ಸಂಸ್ಥಾಪಕ ಅಧ್ಯಕ್ಷ ನಿಂಗಣ್ಣ ಪೂಜಾರಿಯವರಿಗೆ ಕೆನರಾ ಬ್ಯಾಂಕ್ ಅತ್ಯತ್ತಮ ಗ್ರಾಹಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

