ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಿತ್ಯದ ಬದುಕಿಗೆ ಉತ್ತಮ ಸಂಸ್ಕಾರ ದೊರೆಯಲು ಪುರಾಣದಂತಹ ಆದರ್ಶ ಕಥೆಗಳು ಬಹಳಷ್ಟು ಅಗತ್ಯವಾಗಿವೆ ಎಂದು ಪ್ರಥಮ ದರ್ಜೆ ಗುತ್ತಿಗೇದಾರ ಶಂಕರಗೌಡ ಹೊಸಮನಿ ಹೇಳಿದರು.
ತಾಲೂಕಿನ ಯಂಕಂಚಿ ಗ್ರಾಮದ ಕುಂಟೋಜಿ ಹಿರೇಮಠದಲ್ಲಿ ಲಿಂ.ರುದ್ರಮುನಿ ಶಿವಾಚಾರ್ಯರ ೪೭ನೇ ಪುಣ್ಯಾರಾಧನೆ ನಿಮಿತ್ತ ಹಮ್ಮಿಕೊಂಡ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಾನವನ ಮಾನವೀಯ ಮೌಲ್ಯಗಳು ಅಭಿವೃದ್ಧಿಯಾಗಲು ಶರಣರ, ದಾರ್ಶನಿಕರ, ಸಂತರ ಪುಣ್ಯಕಥೆಗಳು ಅಗಾಧವಾಗಿ ಕಾರ್ಯನಿರ್ವಹಿಸುತ್ತವೆ. ಇಂತಹ ಕಥೆಗಳ ಸಾರ ಪ್ರತಿಯೊಬ್ಬರು ಆಲಿಸಿ ಮಾನವ ಜೀವನ ಸಾರ್ಥಕಗೊಳಿಸಿಕೊಳ್ಳಬೇಕು ಎಂದರು.
ಈ ವೇಳೆ ದಕ್ಷಿಣ ಸೋಲಾಪೂರದ ಮಾಳಕವಠೆ ಶ್ರೀಮಠದ ಡಾ.ಪಂಚಾಕ್ಷರಿ ಶಿವಾಚಾರ್ಯರು ಆಶೀರ್ವಚನ ನೀಡಿ, ಮಾಣವ ಜನ್ಮಕ್ಕೆ ಬಂದ ನಾವುಗಳೆಲ್ಲ ಮಹಾತ್ಮರು, ಶರಣ ಸತ್ಪುರಷರು ತೊರಿದ ದಾರಿ ಅನುಸರಿಸಬೇಕು. ಅವರು ಬದುಕಿನ ದಿನಗಳ ಬೆಳಕಿನಲ್ಲಿ ನಡೆದು ನಮ್ಮ ಜೀವನ ಪಾನವ ಮಾಡಿಕೊಳ್ಳಬೇಕು ಎಂದು ಹೇಳಿದರು.
ಬೆಳಗಿನ ಜಾವ ಅಭಿನವ ರುದ್ರಮುನಿ ಶಿವಾಚಾರ್ಯರ, ಚಿದಾನಂದ ಶಾಸ್ತ್ರಿಗಳ, ಸಂತೋಷ ಶಾಸ್ತ್ರಿಗಳ, ಶಂಭುಲಿಂಗ ಶಾಸ್ತ್ರಿಗಳು, ಶರಣಯ್ಯ ಶಾಸ್ತ್ರಿಗಳ, ಶಂಕರಯ್ಯ ಶಾಸ್ತ್ರಿಗಳ ನೇತೃತ್ವದಲ್ಲಿ ಮಹಾರುದ್ರ, ಗಣಹೋಮ, ಶಿವದೀಕ್ಷೆ ಹಾಗೂ ಅಯ್ಯಾಚಾರ ಕಾರ್ಯಕ್ರಮಗಳು ಜರುಗಿತು.
ಈ ವೇಳೆ ಯಂಕಂಚಿ ಶ್ರೀಮಠದ ಪೀಠಾಧಿಪತಿ ಅಭಿನವರ ರುದ್ರಮುನಿ ಶಿವಾಚಾರ್ಯರು, ಆಲಮೇಲ ಶ್ರೀಮಠದ ಚಂದ್ರಶೇಖರ ಶಿವಾಚಾರ್ಯರು, ಅರ್ಜುಣಗಿ ಶ್ರೀಮಠದ ಸಂಗನಬಸವ ಶಿವಾಚಾರ್ಯರು, ಕುಮಸಗಿ ಶ್ರೀಮಠದ ಶಿವಾನಂದ ಶಿವಾಚಾರ್ಯರು, ಶಂಕರಯ್ಯ ಶಾಸ್ತ್ರಿಗಳು, ನಿವೃತ್ತ ಸಿಪಿಆಯ್ ಚೌಕಿಮಠ, ಡಾ.ಪ್ರಭುಗೌಡ ಲಿಂಗದಳ್ಳಿ, ಮಲ್ಲಣ್ಣ ಸಾಲಿ, ತಾಂಬಾ ಗೊರನಾಳ ಸಾಹುಕಾರ ಸೇರಿದಂತೆ ಶ್ರೀಮಠದ ಭಕ್ತರು ಇದ್ದರು.

